Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಬೆಳ್ಳಿ ಆಭರಣ ಕಪ್ಪಾಗಿದ್ದರೆ ಮನೆಯಲ್ಲೇ ಪಾಲಿಶ್ ಮಾಡಿ..! ಇಲ್ಲಿದೆ ಮನೆಮದ್ದು..!
ಭಾರತೀಯ ಮನೆಗಳಲ್ಲಿ ಚಿನ್ನ-ಬೆಳ್ಳಿ ಆಭರಣ ವಸ್ತುಗಳು ಇರುವುದು ಸಾಮಾನ್ಯ. ಕೆಲವೊಂದು ಮನೆಯಲ್ಲಿ ಇದರ ಹಿಂದೆ ಕೆಲವು ಸಂಪ್ರದಾಯಗಳು ಸಹ ಅಡಗಿವೆ. ಅಲ್ಲವೆ ಕೆಲವು ಮನೆಯಲ್ಲಿ ಬೆಳ್ಳಿ ವಸ್ತುಗಳು ಹೆಚ್ಚಾಗಿರುತ್ತವೆ. ಬೆಳ್ಳಿ ತಟ್ಟೆ, ಬೆಳ್ಳಿ ದೀಪದ ಕಂಬ, ಬೆಳ್ಳಿ ದೇವರ ಮೂರ್ತಿಗಳು ಹೀಗೆ ಹಲವು ವಸ್ತುಗಳ ನಾವು ನೋಡಬಹುದು.
ಇನ್ನು ಬೆಳ್ಳಿ ಆಭರಣಗಳನ್ನು ಸಹ ಹಾಕಿಕೊಳ್ಳುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಮಹಿಳೆಯರು ಕಾಲುಂಗುರ, ಕಾಲಿನ ಗೆಜ್ಜೆ ಚೈನ್, ಉಂಗುರ ಹೀಗೆ ಹತ್ತು ಹಲವು ರೀತಿಯ ಬೆಳ್ಳಿಯ ಆಭರಣ ಧರಿಸುತ್ತಾರೆ. ಆದರೆ ಬಂಗಾರದಂತೆ ಬೆಳ್ಳಿ ಬಹಳ ಕಾಲ ಬಾಳಿಕೆ ಬರುವುದಿಲ್ಲ. ಬಹುಬೇಗ ಬೆಳ್ಳಿ ಸವೆದು ಹೋಗುವುದು ಕಪ್ಪಾಗುವುದು ಸಾಮಾನ್ಯ.

ಕೆಲವರ ಪ್ರಕಾರ ಬೆಳ್ಳಿ ಕಪ್ಪಾದರೆ ಒಳ್ಳೆಯದು ಎನ್ನುತ್ತಾರೆ. ಆದರೆ ಬೆಳ್ಳಿ ನೈಸರ್ಗಿಕ ಕ್ರಿಯೆಗೆ ಒಳಗಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಕಪ್ಪಾದ ಬೆಳ್ಳಿ ವಸ್ತುಗಳನ್ನು ಪಾಲಿಶಿಂಗ್‌ಗೆ ಕೊಟ್ಟರೆ ಆತ ದುಬಾರಿ ಹಣ ಕೇಳುತ್ತಾನೆ. ಹೀಗಾಗಿ ಕೆಲವರು ಮನೆಯಲ್ಲೇ ಈ ವಸ್ತುಗಳ ಪಾಲಿಶ್ ಮಾಡಲು ಇಷ್ಟಪಡುತ್ತಾರೆ. ಹಬ್ಬ ಹರಿದಿನ, ಮದುವೆ, ಪೂಜೆ ಕಾರ್ಯಕ್ರಮಗಳು ಹತ್ತಿರ ಬಂದಾಗ ಮನೆಯಲ್ಲಿರುವ ಚಿನ್ನದ ಆಭರಣಗಳನ್ನು ಸ್ವಚ್ಛ ಮಾಡುತ್ತಾರೆ. ಹಾಗಾದ್ರೆ ಮನೆಯಲ್ಲೇ ಬೆಳ್ಳಿ ವಸ್ತುಗಳನ್ನು ಸ್ವಚ್ಛವಾಗಿ ಪಾಲಿಶ್ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೂತ್‌ಪೇಸ್ಟ್
ಬೆಳ್ಳಿಯ ವಸ್ತುಗಳು ಅಥವಾ ಆಭರಣಗಳನ್ನು ಹೊಳೆಯುವಂತೆ ಮಾಡಲು ಬಿಳಿ ಬಣ್ಣದ ಟೂತ್‌ಪೇಸ್ಟ್ ಅನ್ನು ಬಳಸಬಹುದು. ಆಭರಣಗಳು ಮತ್ತು ಪಾತ್ರೆಗಳ ಮೇಲೆ ಪೇಸ್ಟ್ ಅನ್ನು ಹಚ್ಚಿ ಮತ್ತು ನಂತರ ಅವುಗಳನ್ನು ಬ್ರಷ್‌ನಿಂದ ಸ್ವಚ್ಛಗೊಳಿಸಿ. ನಂತರ ಆ ವಸ್ತುಗಳನ್ನು ಬಿಸಿ ನೀರಿನಲ್ಲಿ ಅದ್ದಿ ಮತ್ತು ಸ್ವಲ್ಪ ಸಮಯದವರೆಗೆ ಹಾಗೆಯೆ ಇಡಿ. ನೀರಿನಿಂದ ತೆಗೆದ ನಂತರ ಮತ್ತೊಮ್ಮೆ ಬ್ರಷ್‌ನಿಂದ ಉಜ್ಜಿ ವಚ್ಛಗೊಳಿಸಿ, ಬಳಿಕ ನೀರಿನಿಂದ ತೊಳೆದು ಶುಬ್ರವಾದ ಬಟ್ಟೆಯಿಂದ ಒರೆಸಿಡಿ.
ನಿಂಬೆ ರಸ ಮತ್ತು ಉಪ್ಪು
ನಿಂಬೆಯ ರಸವನ್ನು ಹಿಡಿಕೊಂಡು ಅದಕ್ಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಅದರಿಂದ ಬೆಳ್ಳಿಯ ಪಾತ್ರೆಗಳು ಮತ್ತು ಆಭರಣಗಳನ್ನು ಸ್ವಚ್ಛಗೊಳಿಸಬಹುದು ಇದರಿಂದ ಕಪ್ಪು ಬಣ್ಣ ಕ್ಷಣದಲ್ಲಿ ಮರೆಯಾಗಲಿದೆ. ಇದಲ್ಲದೆ ಬಿಸಿನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಅಥವಾ ಎರಡು ನಿಂಬೆಹಣ್ಣಿನ ರಸವನ್ನು ಸೇರಿಸಿ. ಇದರ ನಂತರ ಎರಡು ಚಮಚ ಉಪ್ಪು ಸೇರಿಸಿ ಮತ್ತು ಬೆಳ್ಳಿಯ ಪಾತ್ರೆಗಳನ್ನು ಈ ನೀರಿನಲ್ಲಿ ಅದ್ದಿ ಮತ್ತು ಪಾತ್ರೆಗಳನ್ನು ಸ್ವಲ್ಪ ಸಮಯದವರೆಗೆ ಈ ನೀರಿನಲ್ಲಿ ಇರಿಸಿ. ಅವುಗಳನ್ನು ಹೊರತೆಗೆದು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ .
ಟೊಮೆಟೋ ಸಾಸ್
ತಿಂಡಿಗೆ ಬಳಸುವ ಟೊಮೆಟೋ ಸಾಸ್‌ನಿಂದಲೂ ಬೆಳ್ಳಿ ಆಭರಣಗಳ ಪಾಲಿಶ್ ಮಾಡಿ ಹೊಳೆಯುವಂತೆ ಮಾಡಬಹುದು. ಟೊಮೆಟೋ ಸಾಸ್ ಬೆಳ್ಳಿ ವಸ್ತುಗಳು ಮತ್ತು ಆಭರಣಗಳನ್ನು ಹೊಳೆಯುವಂತೆ ಮಾಡುತ್ತದೆ. ಬೆಳ್ಳಿಯ ಪಾತ್ರೆಗಳ ಮೇಲೆ ಟೊಮೆಟೋ ಸಾಸ್ ಅನ್ನು ಹಚ್ಚಿ ಮತ್ತು ಅರ್ಧ ಘಂಟೆಯವರೆಗೆ ಹಾಗೆಯೇ ಇರಿಸಿ ನಂತರ ಮೃದುವಾದ ಬ್ರಷ್‌ನಿಂದ ಅದನ್ನು ಸ್ವಚ್ಛಗೊಳಿಸಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒಣ ಬಟ್ಟೆಯಿಂದ ಒರೆಸಿ.
ವಿನೆಗರ್
ವಿನೆಗರ್ ಕೇವಲ ಅಡುಗೆಯ ಕೆಲಸಕ್ಕೆ ಮಾತ್ರವಲ್ಲ ಹಲವು ವಸ್ತುಗಳ ಸ್ವಚ್ಛಗೊಳಿಸಲು ಸಹ ನೆರವಾಗುತ್ತದೆ. ಬೆಳ್ಳಿಯ ಆಭರಣಗಳು ಅಥವಾ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಹ ವಿನೆಗರ್ ಅನ್ನು ಬಳಸಬಹುದು. ಒಂದು ಬಟ್ಟಲಿನಲ್ಲಿ ವಿನೆಗರ್ ತೆಗೆದುಕೊಂಡು ಅದಕ್ಕೆ ಸವಲ್ಪ ಉಪ್ಪು ಸೇರಿಸಬೇಕು. ಈ ಮಿಶ್ರಣವನ್ನು ಚೆನ್ನಾಗಿ ಕಲಸಿ ನಂತರ ಮಿಶ್ರಣದಲ್ಲಿ ಬೆಳ್ಳಿ ಅಥವಾ ಆಭರಣವನ್ನು ಅದ್ದಿ ಇಡಬೇಕು. ಸುಮಾರು 20 ರಿಂದ 25 ನಿಮಿಷಗಳ ನಂತರ ಬೆಳ್ಳಿ ವಸ್ತು ತೆಗೆದು ಬಿಸಿ ನೀರಿನಿಂದ ತೊಳೆಯಬೇಕು. ನಂತರ ಒಣ ಬಟ್ಟೆಯಿಂದ ಒರೆಸಬೇಕು.



Click it and Unblock the Notifications