Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ ವಸ್ತುಗಳನ್ನು ಕಿಚನ್‌ನಲ್ಲಿ ಹಾಕಿದರೆ ಒಂದು ಜಿರಳೆಯೂ ಉಳಿಯಲ್ಲ!
ಕಿಚನ್‌ನಲ್ಲಿ ಒಂದು ಜಿರಳೆ ಬಂದರೆ ಸಾಕು ಕೆಲವು ದಿನಗಳಲ್ಲಿಯೇ ಅಡುಗೆ ಮನೆ ಪೂರ್ತಿ ಜಿರಳೆ ಓಡಾಡುವುದು ನೋಡುವಾಗಲೇ ಹೇಸಿಗೆಯಾಗುತ್ತದೆ. ಜಿರಳೆ ಸಾಯಿಸುವ ಕೀಟ ನಾಶಕ ತಂದು ಸಿಂಪಡಿಸಿದರೂ ಅಷ್ಟು ಪರಿಣಾಮಕಾರಿಯಲ್ಲ, ಆದ್ರೆ ನೀವು ಕೆಲವೊಂದು ಮನೆಮದ್ದು ಪ್ರಯತ್ನ ಮಾಡಿದರೆ ಪರಿಣಾಮಕಾರಿಯಾಗಿ ಜಿರಳೆಗಳ ಕಾಟ ತಡೆಗಟ್ಟಬಹುದು. ಬನ್ನಿ ಜಿರಳೆ ತಡೆಗಟ್ಟಲು ಏನ ಮಾಡಬೇಕು ಎಂದು ನೋಡೋಣ ಬನ್ನಿ:

ಮೊದಲು ಮಾಡಬೇಕಾದ ಕಾರ್ಯವೆಂದರೆ
- ಅಡುಗೆ ಮನೆಯಲ್ಲಿರುವ ವಸ್ತುಗಳನ್ನು, ಡಬ್ಬಗಳನ್ನು ತಗೆದು ಬಿಸಿಲಿನಲ್ಲಿಟ್ಟು ಅಡುಗೆ ಮನೆಯನ್ನು ಸ್ವಚ್ಛಗೊಳಿಸಬೇಕು
- ಜಿರಳೆ ಬರುವಂಥ ರಂಧ್ರಗಳಿದ್ದರೆ ಅವುಗಳನ್ನು ಮುಚ್ಚಿ, ಇಲ್ಲದಿದ್ದರೆ ಅಂಥ ಜಾಗದಲ್ಲಿ ಜಿರಳೆ ಮೊಟ್ಟೆ ಇಡುತ್ತದೆ
- ಪೈಪ್‌ನಲ್ಲಿ ಲೀಕೇಜ್ ಇದ್ದರೆ ಅದನ್ನು ಬದಲಾಯಿಸಿ
ಜಿರಳೆ ಓಡಿಸಲು ಮನೆಮದ್ದು
ಬೋರಿಕ್ ಆಮ್ಲ
ಇದು ಪರಿಣಾಮಕಾರಿಯಾದ ಜಿರಳೆ ಓಡಿಸುವ ವಿಧಾವಾಗಿದೆ. ನೀವು ಬೋರಿಕ್ ಪುಡಿಯನ್ನು ಅಡುಗೆ ಮನೆಯ ಮೂಲೆ-ಮೂಲೆಗೆ ಹಾಕಿ, ಆದರೆ ಬೋರಿಕ್ ಪುಡಿ ನೀರು ತಾಗಿ ಒದ್ದೆಯಾಗಬಾರದು, ನೀರು ತಾಗಿದರೆ ಜಿರಳೆ ಸಾಯುವುದಿಲ್ಲ. ಅಲ್ಲದೆ ಮಕ್ಕಳು, ಬೆಕ್ಕು, ನಾಯಿ ಇವುಗಳಿಗೆ ಸಿಗುವಂತೆ ಬೋರಿಕ್ ಪುಡಿ ಹಾಕಬೇಡಿ. ಮೂಲೆಗಳಲ್ಲಿ ಹಾಕಿ, ಅಲ್ಲದೆ ಅಡುಗೆ ಪಾತ್ರೆಗಳು ಹಾಗೂ ಆಹಾರಗಳನ್ನು ತಾಗಿಸಬೇಡಿ.
ಅಡುಗೆ ಸೋಡಾ
ಇದು ಕೂಡ ಜಿರಳೆ ಓಡಿಸಲು ಅಡುಗೆ ಸೋಡಾ ಪರಿಣಾಮಕಾರಿಯಾಗಿದೆ. ನೀವು ಸಕ್ಕರೆ ಮತ್ತು ಅಡುಗೆ ಸೋಡಾ ಮಿಕ್ಸ್ ಮಾಡಿ ಹಾಕಿ, ಸಕ್ಕರೆ ಜಿರಳೆಯನ್ನು ಆಕರ್ಷಿಸುತ್ತದೆ, ಅಡುಗೆ ಸೋಡಾ ಜಿರಳೆಯನ್ನು ಕೊಲ್ಲುತ್ತದೆ, ಅಡುಗೆ ಸೋಡಾ ಮತ್ತು ಸಕ್ಕರೆಯನ್ನು ಮೂಲೆ ಮೂಲೆಯಲ್ಲಿ ಸಿಂಪಡಿಸಿದರೆ ಸಾಕು.
ಕಹಿಬೇವು
ಇದನ್ನು ನೀವು ಬಳಸಿದರೆ ಜಿರಳೆಗಳನ್ನು ಓಡಿಸಬಹುದು, ಕಹಿಬೇವಿನೆಣ್ಣೆ ಅಥವಾ ಕಹಿಬೇವಿನ ಎಲೆ ಪುಡಿ ಬಳಸಬಹುದು. ಇದನ್ನು ಬಳಸಿದರೆ ಯಾವುದೇ ಭಯವೂ ಇಲ್ಲ, ಮಕ್ಕಳಿರುವ ಮನೆಗಳಲ್ಲಿ ಇಂಥ ವಸ್ತುಗಳನ್ನು ಬಳಸಿದರೆ ಸುರಕ್ಷಿತ. ಕಹಿಬೇವಿನ ಎಣ್ಣೆಯನ್ನು ಸ್ಪ್ರೇ ಮಾಡಿದರೂ ಸಾಕು.
ಪುದೀನಾ ಎಣ್ಣೆ
ಪುದೀನಾ ಎಣ್ಣೆ ಕೂಡ ಜಿರಳೆ ಓಡಿಸಲು ಸಹಕಾರಿಯಾಗಿದೆ. ಪುದೀನಾಯೆಣ್ಣೆಯನ್ನು ಉಪ್ಪು ನೀರಿನಲ್ಲಿ ಮಿಕ್ಸ್ ಮಾಡಿ ಸ್ಪ್ರೇ ಮಾಡಿದರೆ ಜಿರಳೆ ಕಾಟ ಕಡಿಮೆಯಾಗುವುದು.
ಪಲಾವ್ ಎಲೆ
ಪಲಾವ್ ಎಲೆ ಪುಡಿ ಮಾಡಿ ಕಬೋರ್ಡ್‌ನಲ್ಲಿ, ಡಬ್ಬಗಳನ್ನು ಇಡುವ ಜಾಗದಲ್ಲಿ ಇಡಿ. ಇದರ ವಾಸನೆ ಜಿರಳೆಗಳಿಗೆ ಇಷ್ಟವಾಗುವುದಿಲ್ಲ, ಓಡಿ ಹೋಗುತ್ತೆ.
ಕಾಳು ಮೆಣಸು, ಈರುಳ್ಳಿ, ಬೆಳ್ಳುಳ್ಳಿ
ಕಾಳು ಮೆಣಸು ಪುಡಿ ಮಾಡಿ, ಈರುಳ್ಳಿ ಪೇಸ್ಟ್ ಮಾಡಿ, ಬೆಳುಳ್ಳಿ ಪೇಸ್ಟ್ ಮಾಡಿ ನಂತರ ಈ ಎಲ್ಲಾ ಮಿಶ್ರಣ ಒಂದು ಲೀಟರ್ ನೀರಿಗೆ ಹಾಕಿ ಅಡುಗೆ ಮನೆಯಲ್ಲಿ ಸ್ಪ್ರೇ ಮಾಡಿ, ವಾರದಲ್ಲಿ ಎರಡರಿಂದ ಮೂರು ಬಾರಿ ಸ್ಪ್ರೇ ಮಾಡಿದರೆ ಜಿರಳೆ ಸಂಪೂರ್ಣ ದೂರಾಗುವುದು.
ಸೌತೆಕಾಯಿ
ನೀವು ಸೌತೆಯನ್ನು ಕಟ್ ಮಾಡಿ ಚಿಕ್ಕ ಟಿನ್ ಡಬ್ಬದಲ್ಲಿ ಹಾಕಿಡಿ, ಇದೆರಡು ಮಿಕ್ಸ್ ಆದಾಗ ಉಂಟಾಗುವ ವಾಸನೆ ಜಿರಳೆ ಇಷ್ಟವಾಗಲ್ಲ, ಅಡುಗೆ ಮನೆಯಲ್ಲಿದ್ದ ಜಿರಳೆ ಓಡಿ ಹೋಗುತ್ತೆ.



Click it and Unblock the Notifications
