Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಾಶಿಂಗ್ ಮೆಷಿನ್‌ನಲ್ಲಿ ಕೊಳೆ ಹೋಗ್ತಾ ಇಲ್ಲ ಅಂತ ಹೇಳಬೇಡಿ, ಇದನ್ನು ಹಾಕಿ ನೋಡಿ ಬಟ್ಟೆ ಹೊಸದರಂತೆ ಆಗುತ್ತೆ
ವಾಶಿಂಗ್ ಮೆಷಿನ್‌ನಲ್ಲಿ ತುಂಬಾ ಕೊಳೆಯಿರುವ ಬಟ್ಟೆ ಹಾಕಿದರೆ ಸರಿಯಾಗಿ ಕ್ಲೀನ್ ಆಗಲ್ಲ, ಶರ್ಟ್‌ನ ಕಾಲರ್ ಕ್ಲೀನ್ ಆಗಲ್ಲ, ಮಕ್ಕಳ ಯೂನಿಫಾರಂ ಸರಿಯಾಗಿ ಕ್ಲೀನ್ ಆಗಲ್ಲ ಎಂದು ಕಂಪ್ಲೇಂಟ್ ಮಾಡ್ತಾ ಇರ್ತಾರೆ, ಆದರೆ ನೀವು ಎಂಥದ್ದೇ ಕೊಳೆಯಾಗಿದ್ದರೂ ಈ ಸಿಂಪಲ್ ಟ್ರಿಕ್ಸ್ ಬಳಸಿದರೆ ಸಾಕು, ಕೊಳೆ ಸಂಪೂರ್ಣವಾಗಿ ಹೋಗುತ್ತದೆ.
ಇದಂತೂ ಸೂಪರ್ ಹಾಕಿ ವರ್ಕ್ ಆಗುತ್ತೆ
ಒಂದು ಚಮಚ ENO ಪುಡಿ, 1 ಚಮಚ ಅಡುಗೆ ಸೋಡಾವನ್ನು ನೀವು ವಾಶಿಂಗ್ ಮೆಷಿನ್‌ಗೆ ಹಾಕಿ ನಂತರ ಮಾಮೂಲಿ ಬಳಸುವ ಲಿಕ್ವಿಡ್ ಅಥವಾ ಡಿಟರ್ಜೆಂಟ್ ಹಾಕಿದರೆ ಕೊಳೆ ತುಂಬಾ ಚೆನ್ನಾಗಿ ಹೋಗುತ್ತದೆ. ಈ ಟೆಕ್ನಿಕ್ ಲೈಟ್ ಕಲರ್ ಬಟ್ಟೆಗೆ ತುಂಬಾನೇ ವರ್ಕ್ ಆಗಿರುತ್ತದೆ.

ಬ್ಲೀಚ್ ಬಳಸುವುದು
ನೀವು ಡಿಟರ್ಜೆಂಟ್ ಹಾಕಿ ಹಾಗಂತ ತುಂಬಾನೇ ಡಿಟರ್ಜೆಂಟ್ ಹಾಕಬೇಡಿ ನಂತರ ಬ್ಲೀಚ್ ಹಾಕಿ ವಾಶ್ ಮಾಡಿ
ಈ ವಿಧಾನ ಬಿಳಿ ಬಟ್ಟೆಗೆ ಆದರೆ ತುಂಬಾನೇ ಚೆನ್ನಾಗಿ ವರ್ಕ್ ಆಗುತ್ತೆ, ಬಟ್ಟೆಯ ಕಲೆ ಅಥವಾ ಕೊಳೆಯಿದ್ದರೆ ಸಂಪೂರ್ಣ ಹೋಗುತ್ತೆ. ಕಲೆಯಿದ್ದರೆ ನೀವು ಬ್ಲೀಚ್ (ಬಟ್ಟೆಯ ಕಲೆ ಹೋಗುವ ಬ್ಲೀಚ್) ಹಾಕಿ ಸ್ವಲ್ಪ ಹೊತ್ತು ಬಿಟ್ಟು ಸ್ಕ್ರಬ್ ಮಾಡಿ ನಂತರ ವಾಶಿಂಗ್ ಮೆಷಿನ್‌ಗೆ ಹಾಕಿ ವಾಶ್ ಮಾಡಿ.
ಸೋಡಾ ಮತ್ತು ವಿನೆಗರ್
ನೀವು ವಾಶಿಂಗ್ ಮೆಷಿನ್‌ಗೆ ಬೇಕಿಂಗ್ ಸೋಡಾ ಹಾಕಿ, ಒಂದು ಮುಚ್ಚಳ ವಿನೆಗರ್ ಹಾಕಿ ನಂತರ ಡಿಟರ್ಜೆಂಟ್ ಅಥವಾ ಲಿಕ್ವಿಡ್ ವಾಶ್ ಹಾಕಿ ನಂತರ ವಾಶ್ ಮಾಡಿದರೆ ಕೊಳೆ ಚೆನ್ನಾಗಿ ಹೋಗುವುದು ಮಾತ್ರವಲ್ಲ ಈ ಜಿಡ್ಡಿನಂಶ ಹೋಗುತ್ತೆ.
ಆದರೆ ಈ ವಿಧಾನ ಎಲ್ಲಾ ಬಟ್ಟೆಗಳಿಗೆ ಆಗಲ್ಲ
- ಕಲರ್ ಬಟ್ಟೆಗೆ ಹಾಕಿದರೆ ಕಲರ್ ಡಿಮ್ ಆಗುವ ಸಾಧ್ಯತೆ ಇದೆ.
- ಸರಿಯಾದ ವಾಶಿಂಗ್ ಸೈಕಲ್ ಬಳಸಿ
- ಸರಿಯಾದ ವಾಟರ್ ಟೆಂಪರೇಚರ್ ಬಳಸಿ
- ಬಟ್ಟೆ ಫ್ಯಾಬ್ರಿಕ್ ಸಾಫ್ಟ್ನರ್ ಬಳಸಿದರೆ ಇನ್ನೂ ಒಳ್ಳೆಯದು.
- ಕೊಳೆ ತುಂಬಾ ಇರುವ, ಕೊಳೆ ಕಡಿಮೆ ಇರುವ ಬಟ್ಟೆ ಜೊತೆಗೆ ಹಾಕಬೇಡಿ.
- ಇನ್ನೂ ಬಟ್ಟೆ ತೊಳೆದ ಮೇಲೆ ವಾಶಿಂಗ್ ಮೆಷಿನ್‌ನಲ್ಲಿಯೇ ಬಟ್ಟೆ ತುಂಬಾ ಹೊತ್ತು ಬಿಡಬೇಡಿ
- ಬಟ್ಟೆ ತೆಗೆದ ಬಳಿಕ ಮೆಷಿನ್ ಒರೆಸಿ.
ವಾಶಿಂಗ್ ಮೆಷಿನ್ ಡ್ರಮ್ ತುಂಬಾ ಬಟ್ಟೆ ತುಂಬಬಾರದು
ಚಿಕ್ಕ ಡ್ರಮ್ ಆದರೆ 1/3 ರಷ್ಟು ಮಾತ್ರ ಬಟ್ಟೆ ತುಂಬಿ
ಮೀಡಿಯಮ್ ಲೋಡ್‌ಗೆ 1/2 ಡ್ರಮ್ ಮಾತ್ರ ಬಟ್ಟೆ ತುಂಬಿ
ಲಾರ್ಜ್ ಲೋಡ್‌ಗೆ 3/4 ಡ್ರಮ್ ಬಟ್ಟೆ ತುಂಬಬಹುದು.
ಬಟ್ಟೆ ಒಗೆದ ತಕ್ಷಣ ತೆಗೆದು ಡ್ರಮ್ ಸ್ವಚ್ಛ ಮಾಡಿ
ಹೀಗೆ ಡ್ರಮ್ ಕ್ಲೀನ್ ಮಾಡುವುದರಿಂದ ಬಟ್ಟೆ ಕೂಡ ಸ್ವಚ್ಛವಾಗುವುದು. ಅಲ್ಲದೆ ವಾಶಿಂಗ್ ಮೆಷಿನ್ ತುಂಬಾ ಸಮಯ ಬಾಳಿಕೆ ಬರುತ್ತದೆ.
ಇನ್ನು ವಾಶಿಂಗ್ ಮೆಷಿನ್ ನೀವು ಪ್ರತಿ 30 ವಾಶ್‌ಗೆ ಡ್ರಮ್ ಸ್ವಚ್ಛ ಮಾಡುವುದು ಒಳ್ಳೆಯದು. ಡ್ರಮ್ ವಾಶ್‌ಗೆ ಪೌಡರ್ ಸಿಗುತ್ತೆ ಅದನ್ನು ಬಳಸಿ ವಾಶ್ ಮಾಡಬಹುದು. ಅಲ್ಲದೆ ಪ್ರತಿ ಬಾರಿ ವಾಶ್ ಆದ ಬಳಿಕ ಅದರ ಡ್ರಮ್ ಮಾತ್ರವಲ್ಲ ರಬ್ಬರ್ ಕೂಡ ಒರೆಸಬೇಕು.
ಇನ್ನು ಯಾವುದೇ ಬಟ್ಟೆ ವಾಶಿಂಗ್ ಮೆಷಿನ್‌ಗೆ ಹಾಕುವ ಮುನ್ನ ನೀವು ಬಟ್ಟೆ ಲೇಬಲ್ ಓದಿ ಅದಕ್ಕೆ ಸೂಟ್ ಆಗುವ ವಾಶಿಂಗ್ ಸೈಕ್ಲಿಂಗ್‌ಗೆ ಹಾಕಿ. ಜೀನ್ಸ್, ಕಾಟನ್, ಫ್ಯಾಬ್ರಿಕ್ ಎಲ್ಲಾ ಜೊತೆಗೆ ಹಾಕಬೇಡಿ.
ಇನ್ನು ಲಿಕ್ವಿಡ್ ಜೊತೆ ಸಾಫ್ಟ್ ಫ್ಯಾಬ್ರಿಕ್ ಅನ್ನು ನೀವು ಹೊಸ ಹಾಗೂ ಕಾಟನ್ ಬಟ್ಟೆಗೆ ಬಳಸಲೇಬೇಕು.



Click it and Unblock the Notifications
