Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಬೆಳ್ಳಿಯ ಆಭರಣ ಹೀಗೆ ತೊಳೆದರೆ ಫಳ ಫಳ ಹೊಳೆಯುತ್ತೆ, ಬೆಳ್ಳಿಯ ಶೈನಿಂಗ್ ಹೋಗಲ್ಲ
ಚಿನ್ನವಿಲ್ಲದೆ ಇರುವ ಮನೆ ಇರಬಹುದು, ಆದರೆ ಬೆಳ್ಳಿ ಇಲ್ಲದೆ ಇರುವ ಮನೆ ಇರುವುದು ತುಂಬಾನೇ ವಿರಳ, ಏಕೆಂದರೆ ನಮ್ಮ ಭಾರತೀಯ ಹೆಣ್ಮಕ್ಕಲು ಚಿನ್ನದ ಬದಲು ಬೆಳ್ಳಿಯನ್ನು ಹೆಚ್ಚಾಗಿ ಬಳಸುತ್ತಾರೆ. ಪುಟ್ಟ ಮಗು ಜನಿಸಿದಾಗ ಅದಕ್ಕೆ ಬೆಳ್ಳಿಯ ಗಜ್ಜೆ, ಬೆಳ್ಳಿಯ ಕಡಗ ಹಾಕಿ ಕೊಟ್ಟು ಸಂಭ್ರಮಿಸುತ್ತೇವೆ. ಇನ್ನು ಕಾಲುಂಗುರ ಹೆಚ್ಚಿನವರು ಬೆಳ್ಳಿ ಬಳಸುತ್ತಾರೆ.
ಅದರ ಜೊತೆಗೆ ಇತ್ತೀಚೆಗೆ ಬೆಳ್ಳಿಯ ಫ್ಯಾಷನ್ ಜ್ಯೂವೆಲರಿಗಳು ಸಿಗುತ್ತಿದೆ. ಕಿವಿಯೋಲೆ, ನೆಕ್ಲೆಸ್ ಅಂತ ಆಕರ್ಷಕ ಆಭರಣಗಳು ದೊರೆಯುತ್ತದೆ. ಈ ಜ್ಯೂವೆಲರಿಯನ್ನು ತಂದು ಸ್ವಲ್ಪ ದಿನ ಬಳಸಿದಾಗ ಅದರ ಬಣ್ಣ ಸ್ವಲ್ಪ ಕಪ್ಪಾಗುವುದು. ಬೆಳ್ಳಿಯ ಆಭರಣ ಸದಾ ಫಳ ಫಳ ಹೊಳೆಯಲು ಇಲ್ಲಿದೆ ಟಿಪ್ಸ್:

ಬೆಳ್ಳಿ ಆಭರಣ ತೊಳೆಯಲು ಟಿಪ್ಸ್
ಬಿಸಿ ನೀರಿನಲ್ಲಿ ಸ್ವಲ್ಪ ಪಾಲಿಷಿಂಗ್ ಕ್ರೀಮ್ ಹಾಕಿ ಅದರಲ್ಲಿ ಬೆಳ್ಳಿಯ ಆಭರಣ ಹಾಕಿಡಿ, ನಂತರ ಬಟ್ಟೆಯಿಂದ ಮೆಲ್ಲನೆ ಒರೆಸಿ, ನಂತರ ಆಭರಣದ ಮೇಲ್ಭಾಗ ಕ್ರೀಮ್ ಹಚ್ಚಿ ಒದ್ದೆ ಬಟ್ಟೆ ಅಥವಾ ಸ್ಪಾಂಜ್‌ನಿಂದ ಒರೆಸಿ
ನಂತರ ಬೆಳ್ಳಿಯ ಆಭರಣವನ್ನು ಮತ್ತೆ ಬಿಸಿ ನೀರಿನಲ್ಲಿ ಹಾಕಿಟ್ಟು ನಂತರ ತೆಗೆದು ಒಣ ಬಟ್ಟೆಯಿಂದ ಒರೆಸಿ, ಒಣಗಿಸಿ ಬಳಿಕ ಮೆದುವಾದ ಬಟ್ಟೆಯಲ್ಲಿ ಸುತ್ತಿ ಡಬ್ಬದಲ್ಲಿ ಹಾಕಿಡಿ, ಹೀಗೆ ಮಾಡಿಟ್ಟರೆ ನೀವು ಆ ಆಭರಣಗಳನ್ನು ಬಳಸುವಾಗ ಆ ಆಭರಣ ಫಳ ಫಳ ಹೊಳೆಯುವುದು.
ಪಾಲಿಷ್ ಕ್ರೀಮ್ ಇಲ್ಲದಿದ್ದರೆ ಈ ಟ್ರಿಕ್ ಬಳಸಿ
ನೀವು ಸ್ವಲ್ಪ ನೀರಿಗೆ ಬೇಕಿಂಗ್ ಸೋಡ ಹಾಕಿ ಪೇಸ್ಟ್ ರೀತಿ ಮಾಡಬೇಕು, ನಂತರ ಅದನ್ನು ಬೆಳ್ಳಿಯ ಆಭರಣದ ಮೇಲೆ ಹಚ್ಚಿ ಒಣಗಲು ಬಿಡಿ, ನಂತರ ಸ್ವಲ್ಪ ನೀರು ಹಾಕಿ ಬ್ರೆಷ್‌ನಿಂದ ತಿಕ್ಕಿ ತೊಳೆದು ನಂತರ ಬಿಸಿ ನೀರಿನಲ್ಲಿ ತೊಳೆದು ಒರೆಸಿ ಇಡಿ.
ಮತ್ತೊಂದು ವಿಧಾನವೆಂದರೆ ನೀವು ಸ್ವಲ್ಪ ನೀರಿಗೆ ಒಂದು ಚಮಚ ವಿನೆಗರ್ ಹಾಕಿ, ಅದಕ್ಕೆ ಒಂದು ಚಮಚ ಬೇಕಿಂಗ್ ಸೋಡಾ ಹಾಕಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ, ಬೆಳ್ಳಿಯ ಆಭರಣ ಫಳ ಫಳ ಹೊಳೆಯುವುದು.
ಇನ್ನು ಬೆಳ್ಳಿಯ ಆಭರಣ ಬೇಗನೆ ಕಪ್ಪಾಗದಂತೆ ತಡೆಗಟ್ಟುವುದು ಹೇಗೆ?
ಬೆಳ್ಳಿಯ ಆಭರಣ ಪಾತ್ರೆ ತೊಳೆಯುವಾಗ, ಸ್ನಾನ ಮಾಡುವಾಗ ಅಥವಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜುವಾಗ ಬಿಚ್ಚಿಟ್ಟರೆ ಒಳ್ಳೆಯದು.
ಬೆಳ್ಳಿಯ ಆಭರಣ ತುಂಬಾ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಕಾಯಬೇಡಿ
ಬೆಳ್ಳಿಯ ಆಭರಣ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿದರೆ ಕೂಡಲೇ ಸ್ವಚ್ಛ ಮಾಡಿ.
ಟೂತ್ ಪೇಸ್ಟ್ ಕೂಡ ಹಾಕಿ ತೊಳೆಯಬಹುದು
ನೀವು ಟೂತ್ ಪೇಸ್ಟ್ ಬ್ರೆಷ್‌ಗೆ ಟೂತ್ ಪೇಸ್ಟ್ ಹಾಕಿ ತಿಕ್ಕಿದರೆ ಬೆಳ್ಳಿಯ ಆಭರಣ ಶೈನಿಂಗ್‌ನಿಂದ ಕೂಡಿರುತ್ತದೆ.
ಅಂಟ್ವಾಳಕಾಯಿ
ಅಂಟ್ವಾಳ ಕಾಯಿ ಸಿಕ್ಕರೆ ಅದನ್ನು ಜಜ್ಜಿ ಸ್ವಲ್ಪ ನೀರು ಹಾಕಿ ನೊರೆ ನೊರೆ ಮಾಡಿ ಅದರಲ್ಲಿ ಬೆಳ್ಳಿಯ ಆಭರಣ ಹಾಕಿ ನಂತರ ಬ್ರೆಷ್ ನಿಂದ ತಿಕ್ಕಿದರೆ ಬೆಳ್ಳಿಯ ಆಭರಣದ ಹೊಳಪು ಹೆಚ್ಚಾಗುವುದು.
ಆಭರಣವನ್ನು ತುಂಬಾನೇ ತಿಕ್ಕಿ ತೊಳೆಯಬೇಡಿ
ಆಭರಣ ಬೆಳ್ಳಗಾಗಿಸಲು ತುಂಬಾ ತಿಕ್ಕಿ ತೊಳೆಯಬೇಡಿ, ಅದರ ಶೈನಿಂಗ್ ಹೋಗುತ್ತೆ, ಹಾಗಾಗಿ ತುಂಬಾನೇ ತಿಕ್ಕಿ ತೊಳೆಯಬೇಡಿ.
ಬೆಳ್ಳಿಯ ಆಭರಣಗಳಲ್ಲಿ 3 ವಿಧಗಳು
ಶುದ್ಧ ಬೆಳ್ಳುಳ್ಳಿ: 99.9% ಬೆಳ್ಳಿ ಇದರಲ್ಲಿ ಇರುತ್ತದೆ, ಆದರೆ ಆಭರಣ, ಬೆಳ್ಳಿ ಸಾಧನಗಳನ್ನು ಮಾಡಲು ಇದನ್ನು ಬಳಸುವುದಿಲ್ಲ.
ಸ್ಟೆರ್ಲಿಂಗ್ ಬೆಳ್ಳಿ: 7.5% ಬಳಸಿ ಬೆಳ್ಳಿಯ ಆಭರಣಗಳನ್ನು ಬಳಸಲಾಗುವುದು. ಈ ಬೆಳ್ಳಿಯ ಆಭರಣಗಳು ಗಟ್ಟಿಯಾಗಿರುತ್ತದೆ ಅಲ್ಲದೆ ತುಂಬಾನೇ ಬಾಳಿಕೆ ಬರುತ್ತದೆ.
ಸ್ವಿಲ್ಪರ್ ಕೋಟಿಂಗ್: ಕೆಲವೊಂದು ವಸ್ತುಗಳಿಗೆ ಬೆಳ್ಳಿಯ ಲೇಪನ ಮಾಡುತ್ತಾರೆ, ಇದನ್ನು ಕೋಟಿಂಗ್ ಅಂತಾರೆ.



Click it and Unblock the Notifications