Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹೊಸ ಅರಿಯುವ ಕಲ್ಲು ಅಥವಾ ಹುಳಿ ಹಾಕಿದ ಕಲ್ಲನ್ನು ಹೀಗೆ ಕ್ಲೀನ್ ಮಾಡಬೇಕು
ಅರಿಯುವ ಕಲ್ಲು ಮನೆಗೆ ತರತ್ತೇವೆ, ಆದರೆ ಈಗೀನ ಜನರೇಷನ್ ಅವರಿಗೆ ಅದನ್ನು ಹೇಗೆ ಕ್ಲೀನ್ ಮಾಡಬೇಕು ಎಂಬುವುದು ಗೊತ್ತಿರುವುದಿಲ್ಲ, ಈಗ ಹಳೆಕಾಲದ ಆಹಾರ ಪದ್ದತಿ ಟ್ರೆಂಡ್ ಆಗುತ್ತಿದೆ, ಅಲ್ಲದ ಶುಂಠಿ, ಬೆಳ್ಳುಳ್ಳಿ, ಕಾಳು ಮೆಣಸು ಮುಂತಾದ ಆಹಾರ ಸಾಮಗ್ರಿ ಮಿಕ್ಸಿಯಲ್ಲಿ ಪುಡಿ ಮಾಡುವುದಕ್ಕಿಂತ ಇದರಲ್ಲಿ ಕುಟ್ಟಿ ಪುಡಿ ಮಾಡಿದರೆ ಅಡುಗೆಯ ರುಚಿ ಹೆಚ್ಚು, ಇನ್ನು ಕುಟ್ಟಿ ಮಾಡುವ ಚಟ್ನಿ ಇವೆಲ್ಲದಕ್ಕೂ ಈ ಕಲ್ಲು ಬೆಸ್ಟ್.ನೀವು ಮನೆಗೆ ಕಲ್ಲು ತಂದಾಗ ಈ ರೀತಿ ಕ್ಲೀನ್ ಮಾಡಿದ ಬಳಿಕವಷ್ಟೇ ಬಳಸಲು ಪ್ರಾರಂಭಿಸಿ:

ಸ್ಟೆಪ್ 1 : ಬಿಸಿ ನೀರು ಹಾಕಿ ತೊಳೆಯಿರಿ
ನೀವು ಮನೆಗೆ ಕಲ್ಲು ತಂದಾಗ ಮೊದಲು ಬಿಸಿ ನೀರು ಹಾಕಿ ತೊಳೆಯಬೇಕು. ಬಿಸಿ ನೀರು ಹಾಕಿ 2 ನಿಮಿಷ ಬಿಟ್ಟು ತೆಂಗಿನ ನಾರಿನಿಂದ ತಕ್ಕಿ ತೊಳೆಯಿರಿ. ನಂತರ ಮತ್ತೊಮ್ಮೆ ಬಿಸಿ ನೀರು ಹಾಕಿ ತೊಳೆಯಿರಿ. ನಂತರ ಕಲ್ಲನ್ನು ಒಣಗಿಸಬೇಕು.
ಸ್ಟೆಪ್ 2: ಅಕ್ಕಿ
ನಂತರ ಅಕ್ಕಿ ಹಾಕಿ ಕುಟ್ಟಿ ರಬ್ ಮಾಡಿ, ಅಕ್ಕಿಯನ್ನು ಕಲ್ಲಿನಲ್ಲಿ ಹಾಕ ಅರಿಯುವ ಕಲ್ಲಿನ ಉಜ್ಜಿ, ಹೀಗೆ ಅಕ್ಕಿ ಕುಟ್ಟಿ ಪುಡಿ ಮಾಡುವುದರಿಂದ ಕಲ್ಲಿನಲ್ಲಿರುವ ಚಿಕ್ಕ-ಚಿಕ್ಕ ಕಣಗಳು ದೂರಾಗುವುದು. ಅಲ್ಲದೆ ಹೊಸ ಕಲ್ಲಿನಲ್ಲಿ ಒಂದು ರೀತಿಯ ವಾಸನೆ ಇರುತ್ತದೆ, ಆ ವಾಸನೆ ಕೂಡ ಈ ರೀತಿ ಕಲ್ಲಿನಲ್ಲಿ ಅಕ್ಕಿ ಹಾಕಿ ಪುಡಿ ಮಾಡುವುದರಿಂದ ದೂರಾಗುವುದು.
ಸ್ಟೆಪ್ 3
ಸ್ವಲ್ಪ ಅಕ್ಕಿ ಹಾಕಿ ಪೇಸ್ಟ್ ಮಾಡಿ
ನೀವು ಅಕ್ಕಿಗೆ ಸ್ವಲ್ಪ ನೀರು ಹಾಕಿ ಅಕ್ಕಿಯನ್ನು ರುಬ್ಬಿ, ಅಕ್ಕ ಪೇಸ್ಟ್ ಮಾಡಿ ತೊಳೆಯಿರಿ. ಅಕ್ಕಿ ಪೇಸ್ಟ್ ಅನ್ನು ಕಲ್ಲಿನ ತುಂಬಾ ಹರಡಿ, ಕಲ್ಲಿಗೆ ತುಂಬಾ ಹಚ್ಚಿ ನಂತರ ನೀರು ಹಾಕ ತೊಳೆಯಿರಿ.
ಸ್ಟೆಪ್ 4
ನಂತರ ಕಲ್ಲು ತೊಳೆದು ಬಟ್ಟೆಯಿಂದ ಒರೆಸಿ
ಈಗ ಕಲ್ಲನ್ನು ನೀರು ಹಾಕಿ ತೊಳೆದ ಬಳಿಕ ಕಾಟನ್ ಬಟ್ಟೆಯಿಂದ ಚೆನ್ನಾಗಿ ಒರೆಸಿ, ನಂತರ ಒಣಗಿಸಿ.
ಸ್ಟೆಪ್ 5
ಅರಿಶಿಣ ಹಾಕಿ ತಿಕ್ಕಿ ತೊಳೆಯಿರಿ
ನೀವು ಒಂದು ಬೌಲ್‌ಗೆ ಅರಿಶಿಣ ಹಾಕಿ, ಅದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಕಲ್ಲಿಗೆ ತಿಕ್ಕಿ. ನೀವು ಕಲ್ಲನ್ನು ಇಡೀ ಕಲ್ಲಿಗೆ ತಿಕ್ಕಿ 10 ನಿಮಿಷ ಬಿಡಿ. ನಂತರ ತೊಳೆದು ತೆಗೆದರೆ ಕಲ್ಲು ಬಳಸಲು ರೆಡಿ.
ಕಲ್ಲನ್ನು ಹೊಸದಾಗಿ ಮನೆಗೆ ತಂದಾಗ ಈ ರೀತಿ ಸ್ವಚ್ಛಗೊಳಿಸಲೇಬೇಕು. ಇಲ್ಲದಿದ್ದರೆ ಆ ಕಲ್ಲಿನಲ್ಲಿ ಆಹಾರ ಜಜ್ಜಿದಾಗ ಆ ಆಹಾರದಲ್ಲಿ ಕಲ್ಲಿನ ವಾಸನೆ ಇರುತ್ತದೆ,ಅಲ್ಲದೆ ಚಿಕ್ಕ ಕಲ್ಲಿನ ಕಣಗಳು ಹೊಟ್ಟೆ ಸೇರಬಹುದು ಹಾಗಾಗಿ ಜಾಗ್ರತೆವಹಿಸಿ.
ಕಲ್ಲಿಗೆ ಹುಳಿ ಹಾಕಿದಾಗ ಕೂಡ ಈ ರೀತಿ ಮಾಡಬಹುದು
ಕಲ್ಲಿಗೆ ಹುಳಿ ಹಾಕಿದಾಗ ಕೂಡ ಕಲ್ಲಿನಲ್ಲಿ ಚಿಕ್ಕ-ಚಿಕ್ಕ ಕಲ್ಲಿನ ತುಣಕುಗಳಿರುತ್ತದೆ, ಆವಾಗ ಕೂಡ ನೀವು ಕಲ್ಲನ್ನು ಹೀಗೆ ಸ್ವಚ್ಚಗೊಳಿಸಬೇಕು.
ಏನೇ ಮಿಕ್ಸಿ, ಗ್ರೈಂಡರ್ ಬಂದರೂ ಕಲ್ಲಿನಲ್ಲಿ ಅರಿದು ಮಾಡುವ ಅಡುಗೆಯ ರುಚಿ ನಿಮಗೆ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆಯಿಂದ ದೊರೆಯಲು ಸಾಧ್ಯವೇ ಇಲ್ಲ, ಹಾಗಾಗಿ ಕೆಲವರು ಕಲ್ಲಿನಿಂದಲೇ ಮಸಾಲೆ ಅರಿದು ಮಾಡಲು ಇಷ್ಟಪಡುತ್ತಾರೆ. ಅಲ್ಲದೆ ಕಲ್ಲಿನಿಂದ ರುಬ್ಬಿದ ಮಸಾಲೆಯ ರುಚಿಯೇ ಬೇರೆ ಅಲ್ವಾ, ಇದನ್ನು ನೀವು ಕೂಡ ಒಪ್ಪುತ್ತೀರಿ ತಾನೆ?
ಅಂದ ಹಾಗೆ ನೀವು ಈಗಲೂ ಅಡುಗೆಗೆ ಇಂಥ ಕಲ್ಲು ಬಳಸುತ್ತಿದ್ದೀರಾ?



Click it and Unblock the Notifications
