Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಈ ಒಂದು ಸಿಂಪಲ್ ಟಿಪ್ಸ್ ಸಾಕು ವಾಶಿಂಗ್ ಮೆಷಿನ್ ಇಲ್ಲದಿದ್ದರೂ ಬೆಡ್‌ಶೀಟ್ ಶ್ರಮವಿಲ್ಲದೆ ಸ್ವಚ್ಛಗೊಳಿಸಬಹುದು
ಬೆಡ್‌ಶೀಟ್ ಕೈಯಲ್ಲಿಯೇ ವಾಶ್ ಮಾಡುವುದು ಅಂದರೆ ಅದು ಅಷ್ಟು ಸುಲಭದ ಕೆಲಸವಲ್ಲ, ಸ್ವಲ್ಪ ಶ್ರಮದ ಕೆಲಸವೇ ಸರಿ. ವಾಶಿಂಗ್ ಮೆಷಿನ್‌ನಲ್ಲಿ ಹಾಕಿದರೆ ಬೆಡ್‌ಶೀಟ್ , ಬ್ಲಾಂಕೆಟ್ ಎಲ್ಲಾ ತುಂಬಾನೇ ಸುಲಭವಾಗಿ ಒಗೆಯಬಹುದು, ಆದರೆ ಎಲ್ಲಾ ಬೆಡ್‌ಶೀಟ್ ವಾಷಿಂಗ್ ಮೆಷಿನ್‌ನಲ್ಲಿ ಹಾಕಲು ಸಾಧ್ಯವಾಗಲ್ಲ, ದಪ್ಪ ಬೆಡ್‌ಶೀಟ್ ಆದರೆ 6 ಕೆಜಿ, 8 ಕೆಜಿ ವಾಷಿಂಗ್ ಮೆಷಿನ್‌ನಲ್ಲಿ ಒಗೆಯುವುದು ಕಷ್ಟ, ಆವಾಗ ಕೈಯಲ್ಲಿಯೇ ಒಗೆಯಬೇಕಾಗುತ್ತದೆ.

ನೀರಿನಲ್ಲಿ ಸ್ವಲ್ಪ ಹೊತ್ತು ಮುಳುಗಿಸಿಟ್ಟು ನಂತರ ತೆಗೆದರೆ ಬೆಡ್‌ಶೀಟ್, ಬ್ಲಾಂಕೆಟ್ ಕ್ಲೀನ್ ಆಗಿರಬೇಕು ಎಂದು ಬಯಸುತ್ತೇವೆ, ಆದರೆ ಪ್ರಾಕ್ಟಿಕಲ್‌ನಲ್ಲಿ ಅದು ಸಾಧ್ಯವೇ ಎಂದು ಕೇಳುವುದಾದರೆ ಸಾಧ್ಯ, ನೀವು ಬಕೆಟ್‌ನಲ್ಲಿ ಈ ವಸ್ತುಗಳನ್ನು ಹಾಕಿ ನಂತರ ಬೆಡ್‌ಶೀಟ್ ಹಾಕಿ ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ಬೆಡ್‌ಶೀಟ್ ಕ್ಲೀನ್ ಆಗಿರುತ್ತದೆ.
ನೀವು ಮೊದಲು ಈ ಮಿಶ್ರಣ ತಯಾರಿಸಿ
ನೀವು ಬಕೆಟ್‌ಗೆ 4-5 ಚಮಚ ಸೋಪು ಪುಡಿ, ಒಂದು ಚಮಚ ಉಪ್ಪು ಪುಡಿ, ಡಿಶ್ ವಾಶ್ (ವಿಮ್) 4 ಚಮಚ), 1 ಚಮಚ ಅಡುಗೆ , ನಂತರ ಒಂದು ಶ್ಯಾಂಪೂ ಕೂಡ ಹಾಕಿ.
ಈಗ ಈ ಎಲ್ಲಾ ಮಿಶ್ರಣ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಸ್ವಲ್ಪ ವಿನೆಗರ್ ಕೂಡ ಸೇರಿಸಿ ಮಿಕ್ಸ್ ಮಾಡಿ.
ಈಗ ಆ ಡಬ್‌ಗೆ ಅರ್ಧದಷ್ಟು ನೀರು ತುಂಬಿ, ಕೈಯಿಂದಲೇ ಮಿಕ್ಸ್ ಮಾಡಿ, ಬಕೆಟ್‌ನಲ್ಲಿ ಈ ಮಿಶ್ರಣ ಬೆರೆತು ನೊರೆ ನೊರೆ ಬರುತ್ತದೆ, ಆವಾಗ ಬೆಡ್‌ಶೀಟ್ ಇದರಲ್ಲಿ ನೆನೆಹಾಕಿ ಒಂದು ಗಂಟೆ ಬಿಡಿ.
ನಂತರ ತೆಗೆದರೆ ಕೊಳೆಯಲ್ಲಾ ಬಿಟ್ಟುಕೊಂಡಿರುತ್ತದೆ
ನೀವು ಬೇಕಿದ್ದರೆ ಕಾಲಿಂದಲೇ ಮೆಟ್ಟಬಹುದು, ಹೀಗೆ ಮಾಡಿದರೆ ಕೊಳೆ ಇನ್ನಷ್ಟು ಚೆನ್ನಾಗಿ ಹೋಗುತ್ತದೆ.
ನಂತರ ನೀರು ಬದಲಾಯಿಸಿ ಜಾಲಿಸಿ ಬೆಡ್ ಶೀಟ್ ನೀರು ಹೋಗಲು ಸ್ವಲ್ಪ ಹೊತ್ತು ಇಡಿ, ನಂತರ ಒಣ ಹಾಕಿ. ನಿಮ್ಮ ಬೆಡ್ ಶೀಟ್ ಕೊಳೆಯೆಲ್ಲಾ ಹೋಗಿ ಸ್ವಚ್ಛವಾಗಿರುತ್ತದೆ.
ಇತರ ಸಲಹೆ
ನೀವು ಈ ಮಿಶ್ರಣದಲ್ಲಿ ಉಪ್ಪು ಸೇರಿಸಿರುವುದರಿಂದ ಬೆಡ್‌ಶೀಟ್ ಕಲರ್ ಬಿಡಲ್ಲ.
ವಿನೆಗರ್ ಹಾಕಿದರೆ ಬ್ಯಾಕ್ಟಿರಿಯಾ, ಸೋಂಕಾಣುಗಳಿದ್ದರೆ ಅದು ನಾಶವಾಗುತ್ತೆ
ನೀವು ವಿಮ್ ಲಿಕ್ವಿಡ್ ಬದಲಿಗೆ ಸ್ವಲ್ಪ ನಿಂಬೆರಸ ಸೇರಿಸಬಹುದು.
ಶ್ಯಾಂಪೂ ಎಲ್ಲಾ ಬಳಸಿರುವುದರಿಂದ ಬೆಡ್‌ಶೀಟ್ ಒಗೆದ ಮೇಲೆ ಘಮ್ ಎನ್ನುವ ಸುವಾಸನೆಯೊಂದಿಗೆ ತುಂಬಾನೇ ಚೆನ್ನಾಗಿರುತ್ತದೆ.
ಈ ಒಂದು ಸಿಂಪಲ್ ಟಿಪ್ಸ್ ಬಳಸಿ ನೋಡಿ
ವಾಶಿಂಗ್ ಮೆಷಿನ್ ಇಲ್ಲದಿದ್ದರೂ ಈ ಟ್ರಿಕ್ಸ್ ಬಳಸಿದರೆ ನೀವು ಸುಲಭದಲ್ಲಿ ಬೆಡ್‌ಶೀಟ್ ತೊಳೆಯಬಹುದು. ಬೆಡ್‌ಶೀಟ್ ಒಗೆಯುವುದಕ್ಕೆ ಇದೆ ಎಂಬ ಟೆನ್ಷನ್ ಇರಲ್ಲ, ಟ್ರೈ ಮಾಡಿ ನಮಗೆ ಕಮೆಂಟ್ ಮಾಡಿ.
ಇನ್ನು ಎಲ್ಲಾ ಬಗೆಯ ಬೆಡ್‌ಶೀಟ್‌ನೀವು ಮೆಷಿನ್‌ನಲ್ಲಿ ಹಾಕಲು ಸಾಧ್ಯವಿಲ್ಲ, ಅದರಲ್ಲಿ ಹ್ಯಾಂಡ್‌ವಾಶ್ ಓನ್ಲಿ ಎಂದು ಬರೆದಿರುತ್ತದೆ. ಅಂಥ ಬೆಡ್‌ಶೀಟ್ ಹ್ಯಾಂಡ್‌ವಾಶ್ ಮಾಡಬೇಕು, ಆವಾಗ ಈ ಟಿಪ್ಸ್ ಬಳಸಿ ನೋಡಿ ಬೆಡ್‌ಶೀಟ್ ತೊಳೆಯುವುದು ತುಂಬಾ ಶ್ರಮದ ಕೆಲಸ ಎಂದನಿಸುವುದೇ ಇಲ್ಲ.



Click it and Unblock the Notifications
