Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ದೋಸೆ ಕಲ್ಲಿನಿಂದ ದೋಸೆ ಮೇಲಕ್ಕೇಳುತ್ತಿಲ್ಲ ಎಂದಾದರೆ ಈ ಟಿಪ್ಸ್ ಟ್ರೈ ಮಾಡಿದರೆ ಪರ್ಫೆಕ್ಟ್ ದೋಸೆ ರೆಡಿ
ದೋಸೆ ಮಾಡುವಾಗ ಕೆಲವೊಮ್ಮೆ ದೋಸೆ ಕಲ್ಲಿಂದ ಮೇಲೆ ಏಳಲ್ಲ, ದೋಸೆ ಕಲ್ಲಿಗೆ ಅಂಟಿ ಹಿಡಿಯುತ್ತದೆ, ಈ ರೀತಿಯಾದಾಗ ದೋಸೆಯ ಶೇಪ್ ಹಾಳಾಗುವುದು ಅಲ್ಲದೆ ದೋಸೆಯನ್ನು ಸರ್ವ್ ಮಾಡಲು ಸಾಧ್ಯವಾಗಲ್ಲ, ಹಾಗಾಗಿ ದೋಸೆ ಕಲ್ಲಿನಿಂದ ದೋಸೆ ಮೇಲೆ ಏಳಲು ದೋಸೆ ಕಲ್ಲನ್ನು ಹೇಗೆ ಹದ ಮಾಡಬೇಕು ಎಂದು ನೋಡೋಣ ಬನ್ನಿ:

ಈರುಳ್ಳಿ ಬಳಕೆ
ಹೋಟೆಲ್‌ಗಳಲ್ಲಿ ಈ ಟ್ರಿಕ್ಸ್ ಬಳಸುತ್ತಾರೆ, ಈರುಳ್ಳಿಯನ್ನು ಕಲ್ಲಿಗೆ ಹಾಕಿ ಉಜ್ಜಿ ನಂತರ ದೋಸೆ ಹುಟ್ಟು ಕಾವಲಿಗೆ ಹಾಕಿದಾಗ ದೋಸೆ ಚೆನ್ನಾಗಿ ಎದ್ದು ಬರುತ್ತದೆ. ಇಷ್ಟು ಮಾಡಿಯೂ ದೋಸೆ ಕಲ್ಲಿನಿಂದ ದೋಸೆ ಮೇಲಕ್ಕೆ ಬರ್ತಾ ಇಲ್ಲ, ಕಲ್ಲಿಗೆ ಅಂಟಿಕೊಳ್ಳುತ್ತದೆ ಎಂದಾದರೆ ಈ ವಿಧಾನ ಟ್ರೈ ಮಾಡಿ ನೋಡಿ ಖಂಡಿತ ದೋಸೆ ಕಲ್ಲು ಸರಿಯಾಗುತ್ತೆ.
ದೋಸೆ ಕಲ್ಲಿಗೆ ಗಂಜಿ ನೀರು ಹಾಕಿ
ದೋಸೆ ಕಲ್ಲಿಗೆ ಗಂಜಿನೀರು ಹಾಕಿಕುದಿಸಿ, ನೀರು ಕುದಿ ಬರುವಾಗ ಸ್ವಲ್ಪ ಈರುಳ್ಳಿ ಕೂಡ ಕತ್ತರಿಸಿ ಹಾಕಿ, ಗಂಜಿ ನೀರು ಚೆನ್ನಾಗಿ ಕುದಿ ಬಂದು ನೀರಿನಂಶ ಆವಿಯಾಗಿ ಗಂಜಿದೋಸೆ ರೀತಿ ಒಣಗಲು ಆರಂಬಿಸುತ್ತದೆ ಅಷ್ಟು ಹೊತ್ತು ಕುದಿಸಬೇಕು, ನಂತರ ಸ್ಟೌವ್ ಆಫ್ ಮಾಡಿ ತಣ್ಣಗಾಗಲು ಬಿಡಿ, ನಂತರ ಬರಿ ನೀರಿನಲ್ಲಿ ತೊಳೆಯಿರಿ, ಬಳಿಕ ಕಲ್ಲು ಬಿಸಿ ಮಾಡಿ ಎಣ್ಣೆ ಹಾಕಿ ಈರುಳ್ಳಿ ಉಜ್ಜಿ ನಂತರ ದೋಸೆ ಹಿಟ್ಟು ಹಾಕಿನೋಡಿ ದೋಸೆ ಸೂಪರ್ ಆಗಿ ಬರುತ್ತದೆ.
ದೋಸೆ ಕಲ್ಲಿಗೆ ಎಣ್ಣೆ ಮತ್ತು ಈರುಳ್ಳಿ ಹಾಕಿ
ದೋಸೆ ಕಲ್ಲು ಹದ ಮಾಡುವ ಹದ ಮಾಡುವ ಮತ್ತೊಂದು ವಿಧಾನವೆಂದರೆ ದೋಸೆ ಕಲ್ಲಿಗೆ ಎಣ್ಣೆ ಹಾಕಿ, ಅದರಲ್ಲಿ ಸ್ವಲ್ಪ ಈರುಳ್ಳಿ ಹಾಕಿ ಈರುಳ್ಳಿ ಮೆತ್ತಗಾಗುವವರೆಗೆ ಫ್ರೈಮಾಡಿ ನಂತರ ಈರುಳ್ಳಿ ತೆಗೆಯಿರಿ, ಎಣ್ಣೆಯನ್ನು ಒಂದು ಬೌಲ್‌ಗೆ ಸುರಿಯಿರಿ. ನಂತರ ದೋಸೆ ಹಾಕುವಾಗ ಇದೇ ಎಣ್ಣೆ ಬೇಕಾದರೆ ಬಳಸಬಹುದು.
ಈ ರೀತಿ ಮಾಡಿದರೆ ದೋಸೆ ಕಲ್ಲಿನಿಂದ ದೋಸೆ ಚೆನ್ನಾಗಿ ಮೇಲಕ್ಕೆ ಏಳುತ್ತೆ.
ಈ ಟ್ರಿಕ್ಸ್ ದೋಸೆ ಕಲ್ಲು ಅಥವಾ ನಾನ್‌ಸ್ಟಿಕ್ ತವಾಗೆ ಆದರೂ ವರ್ಕ್ ಆಗುತ್ತೆ.
ದೋಸೆ ಕಲ್ಲಿನಿಂದ ದೋಸೆ ಮೇಲಕ್ಕೆ ಬರದಿರಲು ಕಾರಣವೇನು?
ಎಣ್ಣೆ ಹಾಕಲು ಸ್ಪೂನ್ ಬಳಸುತ್ತಿದ್ದರೆ: ಕೆಲವರು ದೋಸೆ ಕಲ್ಲಿಗೆ ಸ್ಪೂನ್‌ನಿಂದ ಎಣ್ಣೆ ಹಾಕಿ ಸ್ಪೂನ್‌ನಿಂದಲೇ ಹರಡುತ್ತಾರೆ, ಹೀಗೆ ಮಾಡಿದರೆ ದೋಸೆ ಮೇಲಕ್ಕೆ ಏಳುವುದಿಲ್ಲ, ತೆಗೆಯುವುದಕ್ಕೆ ಹೋದಾಗ ಕಲ್ಲಿಗೆ ಅಂಟಿ ಶೇಪ್ ಹಾಳಾಗುವುದು.
ದೋಸ ಕಲ್ಲಿನಲ್ಲಿ ಆಮ್ಲೆಟ್ ಮಾಡುವುದು ಅಥವಾ ಚಪಾತಿ, ಪರಾಟ ಅಂತ ಮಾಡುವುದು ಮಾಡಿದರೆ ದೋಸೆ ಕಲ್ಲಿನಿಂದ ದೋಸೆ ಮೇಲೆ ಬರಲ್ಲ.
ಎಣ್ಣೆ ಹಾಕಲು ಬಾಳೆಯ ಎಲೆಯ ಚಿಕ್ಕ ದಂಟು ಅಥವಾ ಬ್ರೆಷ್ ಸಿಗುತ್ತೆ ಅದನ್ನ ಬಳಸಬಹುದು.
ದೋಸೆಗೆ ಯಾವ ತವಾ ಟೇಸ್ಟ್ ಕೊಡುತ್ತೆ
ನೀವು ದೋಸೆಯನ್ನು ಕಲ್ಲಿನಿಂದ ಮಾಡಿದ ದೋಸೆ ಕಲ್ಲು ಬಳಸಬಹುದು
ಕಬ್ಬಿಣದಿಂದ ಮಾಡಿದ ದೋಸೆ ಕಲ್ಲು ಬಳಸಬಹುದು
ಇಂಥ ದೋಸೆ ಕಲ್ಲಿನಲ್ಲಿ ಮಾಡಿದರೆ ದೋಸೆ ತಂಬಾ ಟೇಸ್ಟ್ ಆಗಿರುತ್ತೆ
ಅದೇ ಇತ್ತೀಚೆಗೆ ಬಹುತೇಕರು ನಾನ್‌ಸ್ಟಿಕ್ ತವಾದಲ್ಲಿ ಮಾಡುತ್ತಾರೆ. ನಾನ್‌ಸ್ಟಿಕ್ ತವಾಗಿಂತ ಕಲ್ಲಿನ ತವಾ ಬಳಸಿದರೆ ದೋಸೆಯ ರುಚಿ ಇನ್ನೂ ಸೂಪರ್ ಆಗಿರುತ್ತೆ ಅಲ್ವಾ? ದೋಸೆ ಕಲ್ಲನ್ನು ಹೊಸದು ತಂದಾಗಲೂ ಗಂಜಿನೀರು ಹಾಕಿ ಕುದಿಸಿ ಹದ ಮಾಡಬೇಕು. ಈ ರೀತಿ 3-4 ದಿನ ಮಾಡಿದರೆ ಕಲ್ಲು ದೋಸೆ ಮಾಡುವ ಹದಕ್ಕೆ ಬರುವುದು.



Click it and Unblock the Notifications
