Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ ಅಂಶ ಗಮನಿಸಿದರೆ ಕುಕ್ಕರ್ ಸಿಡಿಯುವುದನ್ನು ತಡೆಗಟ್ಟಬಹುದು
ಕೆಲವೊಮ್ಮೆ ಬ್ರ್ಯಾಂಡೆಡ್ ಕುಕ್ಕರ್ ಕೂಡ ಸಿಡಿದು ಅಡುಗೆ ಮನೆ ಅಲ್ಲೋಲ ಕಲ್ಲೋಲವಾಗುತ್ತದೆ. ಸಾಕಷ್ಟು ಬಾರಿ ಕುಕ್ಕರ್ ಬ್ಲಾಸ್ಟ್‌ಗೆ ಆ ಕುಕ್ಕರ್ ಗುಣಮಟ್ಟ ಕಾರಣವಾಗಿರುವುದಿಲ್ಲ, ನಾವು ಮಾಡುವ ಮಿಸ್ಟೇಕ್ಸ್ ಕಾರಣವಾಗಿರುತ್ತದೆ. ಹಾಗಾಗಿ ನೀವು ಕುಕ್ಕರ್ ಬಳಸುವಾಗ ಈ ಅಂಶಗಳನ್ನು ಗಮನಿಸಿದರೆ ಒಳ್ಳೆಯದು"

ತುಂಬಾ ಕಡಿಮೆ ನೀರು ಹಾಕುವುದು: ಪ್ರೆಷರ್ ಕುಕ್ಕರ್‌ನಲ್ಲಿ ಆಹಾರ ಬೇಯಿಸುವಾಗ ಬೇಯಲು ಅಗ್ಯತವಿರುವಷ್ಟು ನೀರು ಹಾಕಬೇಕು, ನೀರು ತುಂಬಾ ಕಡಿಮೆಯಾದರೆ ವಿಶಲ್ ಬರಲ್ಲ, ಆಹಾರ ಸೀದು ಹೋಗುತ್ತದೆ
ಅದರಂತೆ ನೀರು ತುಂಬಾನೇ ಹಾಕಬಾರದು: ನೀರು ತುಂಬಾ ಕೂಡ ಹಾಕಬಾರದು, ಹೆಚ್ಚು ನೀರು ಹಾಕಿದಾಗ ಕುಕ್ಕರ್ ಒಳಗಡೆ ಪ್ರೆಷರ್ ಕ್ರಿಯೇಟ್ ಆಗಿ ಕುಕ್ಕರ್ ಬ್ಲಾಸ್ಟ್ ಆಗುವುದು.
ಅಲ್ಲದೆ ತುಂಬಾ ಆಹಾರ ಹಾಕಬೇಡಿ
ಈಗ 4 ಗ್ಲಾಸ್ ಅಕ್ಕಿ ಹಾಕಿ ಅನ್ನ ಮಾಡಬಹುದಾದ ಕುಕ್ಕರ್‌ಗೆ ನೀವು ಒಂದು ಲೋಟ ಹೆಚ್ಚು ಅಕ್ಕಿ ಸೇರಿಸಿದರೆ ತೊಂದರೆಯಿಲ್ಲ ಎಂದು ಹಾಕಲು ಹೋಗಬೇಡಿ. ನೀವು ಯಾವಾಗಲೂ ಕುಕ್ಕರ್ ತುಂಬಾ ಆಹಾರ ಹಾಕುವ ಬದಲಿಗೆ 1/3 ಭಾಗದಷ್ಟು ಮಾತ್ರ ಆ ರ ಹಾಕುವುದು ಒಳ್ಳೆಯದು. ಆಹಾರ ತುಂಬಾ ಹಾಕಿದರೆ ಕೂಡ ಅದು ಬೆಂದು ಬಂದಾಗ ಮತ್ತಷ್ಟು ಹೆಚ್ಚಾಗುವುದು, ಇದರಿಂದ ಕೂಡ ಪ್ರೆಷರ್ ಕ್ರಿಯೇಟ್ ಆಗಿ ಕುಕ್ಕರ್ ಬ್ಲಾಸ್ಟ್ ಆಗುವುದು.
ಪ್ರೆಷರ್ ಕುಕ್ಕರ್ ಸರಿಯಾಗಿ ಬಳಸುತ್ತಿದ್ದೀರಾ ಎಂಬುವುದು ಕೂಡ ಗಮನಿಸಬೇಕು?
ನೀವು ಕಕ್ಕರ್‌ನ ಮುಚ್ಚಳ ಸರಿಯಾಗಿ ಹಾಕಬೇಕು, ಅಲ್ಲದೆ ಅದರ ವಿಶಲ್ ಕೂಡ ಸರಿಯಾಗಿ ಹಾಕಬೇಕು, ಕೆಲವೊಮ್ಮೆ ವಿಶಲ್‌ನೊಳಗೆ ಆಹಾರದ ಕಣಗಳು ಉಳಿದಿದ್ದರೆ ಅದರಿಂದ ಆವಿ ಹೊರ ಬರಲು ಕಷ್ಟವಾಗಿ ಕುಕ್ಕರ್ ಬ್ಲಾಸ್ಟ್ ಆಗಬಹುದು.
ಕುಕ್ಕರ್‌ನ ತಟ್ಟಿ ವಿಶಲ್ ಬರುವಂತೆ ಮಾಡಿ:
ವಿಶಲ್ ಹೊರ ಬರದಿದ್ದರೆ ನೀವು ತಟ್ಟಿ ವಿಶಲ್ ಬರುವಂತೆ ಮಾಡಬೇಡಿ. ಈ ರೀತಿ ವಿಶಲ್ ಬರುವವರೆಗೆ ಕಾಯಬೇಕು, ನೀವು ತಟ್ಟಿ ವಿಶಲ್ ಭರಿಸಿದರೆ ಸರಿಯಾಗಿ ಆಗದಿದ್ದರೆ ಆಹಾರ ಬೇಯುವ ರೀತಿಯಲ್ಲಿ ವ್ಯತ್ಯಾಸ ಉಂಟಾಗುವುದು.
ಅದನ್ನು ತೊಳೆಯುವಾಗ ಅಥವಾ ಸ್ಟೋರ್ ಮಾಡುವಾಗ ಗಮನಹರಿಸಬೇಕು: ಕುಕ್ಕರ್‌ನ ತೊಳೆಯುವಾಗ ಅದರ ರಬ್ಬರ್, ವಿಶಲ್ ಎಲ್ಲಾ ತೆಗೆದು ತೊಳೆದು ಇಡಬೇಕು.
ಕುಕ್ಕರ್‌ನಲ್ಲಿ ಹೆಚ್ಚು ನೀರು ಹಾಕಿದಾಗ ನೀವು ಒಂದು ಚಿಕ್ಕ ಸ್ಪೂನ್ ಹಾಕಿಟ್ಟರೆ ಒಳ್ಳೆಯದು
ಕುಕ್ಕರ್‌ನಲ್ಲಿ ನೀವು ಸ್ವಲ್ಪ ನೀರು ಹೆಚ್ಚು ಹಾಕಿದಾಗ ಒಂದು ಚಿಕ್ಕ ಸ್ಪೂನ್ ಹಾಕಿಡಿ, ಇದು ನೀರು ತುಂಬಾ ಹೊರ ಚೆಲ್ಲುವುದನ್ನು ತಡೆಗಟ್ಟಲು ಸಹಕಾರಿ.
ಕುಕ್ಕರ್ ಬ್ಲಾಸ್ಟ್ ಜೀವಕ್ಕೆ ಕೂಡ ಅಪಾಯ ಉಂಟು ಮಾಡಬಹುದು, ಹಾಗಾಗಿ ಕುಕ್ಕರ್‌ನ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು, ಕುಕ್ಕರ್ ತುಂಬಾ ಹಳೆಯದಾಗಿದ್ದರೆ ಅದನ್ನು ಬಳಸುವುದು ಕೂಡ ಸುರಕ್ಷಿತವಲ್ಲ, ಅದನ್ನು ಬದಲಾಯಿಸಿ, ಆದಷ್ಟೂ ಒಳ್ಳೆಯ ಕಂಪನಿಯ ಕುಕ್ಕರ್ ಬಳಸುವುದು ತುಂಬಾನೇ ಸುರಕ್ಷಿತ.
ಇನ್ನು ಕುಕ್ಕರ್‌ನಿಂದ ನೀರು ಹೊರ ಚೆಲ್ಲದಿರಲು ಅದರ ರಬ್ಬರ್ ಆಗಾಗ ಬದಲಾಯಿಸುತ್ತಾ ಇರಿ. ಇನ್ನು ಆವಿ ಸರಿಯಾಗಿ ಹೋಗದೆ ಇರುವ ಕುಕ್ಕರ್ ಬದಲಾಯಿಸುವುದು ಸೂಕ್ತ.



Click it and Unblock the Notifications
