Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಮನೆಗೆ ಪದೇ ಪದೇ ಬೆಕ್ಕು ಬಂದರೆ ಏನರ್ಥ.? ಬೇರೆ ಬೆಕ್ಕುಗಳು ಬರದಂತೆ ತಡೆಯುವುದು ಹೇಗೆ?
ಹಲವರು ಮನೆಯಲ್ಲಿ ನಾಯಿ, ಬೆಕ್ಕು ಸಾಕುತ್ತಾರೆ. ಆದ್ರೆ ಕೆಲವರು ಮನೆಯಲ್ಲಿ ಯಾವುದೇ ಪ್ರಾಣಿ ಸಾಕಲು ಇಷ್ಟಪಡುವುದಿಲ್ಲ. ಇನ್ನು ಹಲವರ ಮನೆಗೆ ಎಲ್ಲಿಂದಲೋ ಬಂದು ಪ್ರಾಣಿಗಳು ಸೇರಿಕೊಳ್ಳುತ್ತವೆ. ಬೆಕ್ಕು, ನಾಯಿಗಳು ಬಂದು ಮನೆಗೆ ಸೇರಿಕೊಳ್ಳುತ್ತವೆ. ಈ ರೀತಿ ಮನೆಗೆ ಬಂದು ಯಾವುದಾದರು ಪ್ರಾಣಿ ಸೇರಿಕೊಂಡರೆ ಒಳ್ಳೆಯದು ಎನ್ನಲಾಗುತ್ತದೆ. ಆದ್ರೆ ಕೆಲವೊಮ್ಮೆ ಇವು ನಿಮ್ಮ ಮನೆಗೆ ಬಂದು ಸೇರಿಕೊಂಡರೆ ಮತ್ತ ವಾಪಾಸು ಹೋಗದೆ ನಿಮಗೆ ಸಮಸ್ಯೆ ಸಹ ತರುವುದುಂಟು.
ಹಾಗೆ ಮನೆಗೆ ಬಂದು ಸೇರುವ ಈ ಪ್ರಾಣಿಗಳು ಕೆಲವೊಮ್ಮೆ ಅದೃಷ್ಟ ಸಹ ತಂದು ಬಿಡುತ್ತದೆ, ಮತ್ತೆ ಕೆಲವೊಮ್ಮೆ ಸಮಸ್ಯೆ ತರುತ್ತವೆ. ಆದ್ರೆ ಈ ಬೆಕ್ಕುಗಳು ಮನೆಗೆ ಬಂದು ಸೇರಿ ಅವುಗಳ ಉಪಟಳ ಹದ್ದು ಮೀರುತ್ತದೆ. ಪಕ್ಕದ ಮೆಯ ಬೆಕ್ಕು ಅಥವಾ ಊರಿನಲ್ಲಿರುವ ಬೆಕ್ಕು ಮನೆಯೊಳಗೆ ಬರಲು ಆರಂಭಿಸುತ್ತದೆ. ಒಮ್ಮೆ ಈ ಬೆಕ್ಕಿಗೆ ಆಹಾರ ಸಿಕ್ಕರೆ ಮತ್ತೆ ಮತ್ತೆ ನಿಮ್ಮ ಮನೆಗೆ ದಾಳಿ ಮಾಡುತ್ತಿರುತ್ತವೆ.

ಈ ರೀತಿ ಬೇರೆ ಮನೆಯ ಬೆಕ್ಕುಗಳು ನಿಮ್ಮ ಮನೆಗೆ ಬರಲು ಆರಂಭಿಸಿ ಮನೆಯಲ್ಲಿ ಆಹಾರಗಳ ತಿನ್ನುವುದು, ಹಾಲು ಕುಡಿಯುವುದು, ಪಾತ್ರೆಗಳ ಬೀಳಿಸುವುದು ಇಲ್ಲವೆ ಮೂತ್ರ ಮಾಡುವುದು ಮಾಡುತ್ತಿರುತ್ತವೆ. ಹಾಗಾದ್ರೆ ಈ ಬೆಕ್ಕುಗಳ ಬರುವುದು ಶುಭವೇ ಅಥವಾ ಅಶುಭವೇ ಎಂಬುದನ್ನು ನಾವಿಂದು ತಿಳಿಯೋಣ. ಹಾಗೆ ಅವುಗಳು ಮನೆಯೊಳಗೆ ಬಾರದಂತೆ ತಡೆಯುವುದು ಹೇಗೆ ಎಂಬುದನ್ನು ಸಹ ತಿಳಿದುಕೊಳ್ಳೋಣ.
ನಿಮ್ಮ ಮನೆಯಲ್ಲಿ ಬೆಕ್ಕು ಮೂತ್ರ ವಿಸರ್ಜಿಸಿದರೆ, ಅದನ್ನು ತುಂಬಾ ಅಶುಭಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇದರ ಬೆನ್ನಲ್ಲೇ ಮನೆಯಲ್ಲಿ ಅಹಿತಕರ ಘಟನೆಗಳು ನಡೆಯಲಿವೆ ಎಂದು ಹೇಳಲಾಗುತ್ತದೆ. ಬೆಕ್ಕು ಮನೆಗೆ ಆಗಾಗ್ಗೆ ಭೇಟಿ ನೀಡುವುದು ಒಳ್ಳೆಯದಲ್ಲ. ಆದರೆ, ಬೆಕ್ಕು ದುಷ್ಟ ಶಕ್ತಿಗಳಿಂದ ವ್ಯಕ್ತಿಯನ್ನು ರಕ್ಷಿಸುತ್ತದೆ ಎಂಬ ನಂಬಿಕೆಯೂ ಇದೆ. ಬೆಕ್ಕನ್ನು ಲಕ್ಷ್ಮಿ ದೇವಿಯ ಸಹೋದರಿ ಅಲಕ್ಷ್ಮಿಯ ವಾಹನ ಎಂದು ವಿವರಿಸಲಾಗಿದೆ. ಅಲಕ್ಷ್ಮಿಯು ಬಡತನದ ಅಧಿದೇವತೆ, ಅಂದರೆ ಎಲ್ಲಿ ಬಡತನವಿದೆಯೋ ಅಲ್ಲಿ ಅಲಕ್ಷ್ಮಿ ನೆಲೆಸುತ್ತಾಳೆ. ಆದರೆ ಈ ಬೆಕ್ಕುಗಳಿಂದ ಮನೆಗೆ ಒಳಿತು ಸಹ ಇದೆ.
ನಿಮ್ಮ ಮನೆಯಲ್ಲಿ ಆಹಾರ ಧಾನ್ಯಗಳನ್ನು ಇಲಿಗಳು ಹಾಳು ಮಾಡುತ್ತಿದ್ದರೆ, ಇಲಿಗಳ ಕಾಟ ಹೆಚ್ಚಾಗಿದ್ದರೆ ಒಂದು ಬೆಕ್ಕು ಸಾಕಿದರೆ ಸಾಕಾಗುತ್ತದೆ. ಆ ಇಲಿಗಳು ಮನೆಬಿಟ್ಟು ಹೋಗಿರುತ್ತವೆ. ಬೆಕ್ಕು ನಿಮ್ಮ ಮನೆಯಲ್ಲಿ ಶಿಶುಗಳಿಗೆ ಜನ್ಮ ನೀಡಿದ್ದರೆ, ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ ಅಥವಾ ಒಳ್ಳೆಯ ಸುದ್ದಿ ಬರಲಿದೆ ಎಂದರ್ಥ. ಹಾಗಾದ್ರೆ ಬೇರೆ ಮನೆಯ ಬೆಕ್ಕು ನಿಮ್ಮ ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದು ಹೇಗೆ?
ಮನೆಯಲ್ಲಿ ಆಹಾರ ಸಿಗದಂತೆ ಇಡಿ
ಬೆಕ್ಕುಗಳು ಬೇರೆ ಮನೆಗೆ ತೆರಳುವುದೇ ಆಹಾರ ಹುಡುಕಿಕೊಂಡು ಹೀಗಾಗಿ ನಿಮ್ಮ ಮನೆಯಲ್ಲಿ ಸುಲಭವಾಗಿ ಅವುಗಳಿಗೆ ಯಾವುದೇ ಆಹಾರ ಸಿಗುವಂತೆ ಇಡಬೇಡಿ. ಒಮ್ಮೆ ಅವುಗಳಿಗೆ ನಿಮ್ಮ ಮನೆಯಲ್ಲಿ ಏನಾದರು ತಿನ್ನಲು ಸಿಕ್ಕರೆ ಪದೇ ಪದೇ ಬಂದೇ ಬರುತ್ತವೆ.
ಬರುವ ಜಾಗ ಗುರುತು ಮಾಡಿ
ಬೆಕ್ಕುಗಳು ಸಾಮಾನ್ಯವಾಗಿ ನಾವು ನೀವು ಓಡಾಡುವ ಜಾಗದಿಂದ ಮನೆಯೊಳಗೆ ಬರುವುದಿಲ್ಲ. ಎಲ್ಲಿಯಾದರು ಕಳ್ಳದಾರಿ ಹುಡುಕಿರುತ್ತವೆ. ಹೀಗಾಗಿ ಆ ದಾರಿ ಯಾವುದು ಎಂದು ಪತ್ತೆ ಮಾಡಿ ಅದನ್ನು ಮುಚ್ಚಿ ಬಿಡಿ ಇಲ್ಲವೆ ಬೆಕ್ಕು ಬರಲು ಸಾಧ್ಯವಾಗದಂತೆ ಅಲ್ಲಿ ಏನಾದರು ಅಡ್ಡಲಾಗಿ ಇಡಿ. ಹಾಗೆ ರಾತ್ರಿ ಮಲಗುವಾಗ ಎಲ್ಲಾ ಬಾಗಿಲು ಕಿಟಕಿಯನ್ನು ಮುಚ್ಚಿಟ್ಟು ಮಲಗಿ.



Click it and Unblock the Notifications
