Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರು ಸುಲಭವಾಗಿ ಹಣ ಉಳಿಸೋದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ!
ಹಣ ಮಾಡಬೇಕು, ಮನೆಗೆ ವಸ್ತುಗಳ ಖರೀದಿ ಮಾಡಬೇಕು ಎಂಬುದು ಎಲ್ಲರ ಆಸೆಯಾಗಿರುತ್ತೆ. ಅದ್ರಲ್ಲೂ ಗೃಹಿಣಿಯರಿಗೆ ಹಲವು ಆಸೆಗಳಿದ್ದರೂ ಹಣಕಾಸಿನ ಸಮಸ್ಯೆಯಿಂದ ಯಾವಾಗಲು ಇಕ್ಕಟ್ಟಿಗೆ ಸಿಲುಕಿರುತ್ತಾರೆ. ಆದರೆ ಹೇಗಾದರು ಮಾಡಿ ಒಂದಿಷ್ಟು ಹಣ ಕೂಡಿಡುವ ಅಭ್ಯಾಸ ಅವರು ಬೆಳೆಸಿಕೊಂಡಿರುತ್ತಾರೆ. ಇನ್ನು ಮನೆಯಲ್ಲಿ ಅವರೂ ಸಹ ಹೊರಗಡೆ ದುಡಿಯುತ್ತಿದ್ದರೂ ಸಹ ಹಣ ಉಳಿಸಲು ಕಷ್ಟಪಡುತ್ತಾರೆ.
ಆದರೆ ಪುರುಷರಿಗಿಂತ ಮಹಿಳೆಯರು ಹಣ ಕೂಡಿಡುವ ಹಾಗೂ ಮಿತ ವ್ಯಯ ಮಾಡುವ ಗುಣ ಹೊಂದಿರುತ್ತಾರೆ, ಆದರೂ ಆಗಾಗ ಅವರಲ್ಲಿ ಹಣಕಾಸಿನ ಸಮಸ್ಯೆ ಕಾಡುತ್ತಲೇ ಇರುತ್ತದೆ. ನಾವಿಂದು ಒಬ್ಬ ಮಹಿಳೆ ಸ್ವಂತ ಗುರಿ ಸಾಧಿಸಲು ಹಾಗೂ ಹಣ ಮಿತ ವ್ಯಯ ಮಾಡಿ ಒಂದಿಷ್ಟು ಹಣ ಉಳಿಸುವುದು ಹೇಗೆ ಎಂಬುದನ್ನು ನೋಡೋಣ.

ಹಣಕಾಸಿನ ಗುರಿಗಳ ನಿಗದಿ ಮಾಡಿ
ಶ್ರೀಮಂತ ಮಹಿಳೆಯರು ಸ್ಪಷ್ಟ ಮತ್ತು ಮುಂದೆ ಏನು ಮಾಡಬೇಕು ಎಂಬ ಕುರಿತು ನಿರ್ದಿಷ್ಟು ಗುರಿಯನ್ನು ಹೊಂದಿರುತ್ತಾರೆ. ಅದರ ಅನುಸಾರವಾಗಿ ಅವರು ಹಣಕಾಸಿನ ಖರ್ಚು ಎಂಬುದನ್ನು ಅಂದಾಜು ಮಾಡುತ್ತಾರೆ. ಆದರೆ ನಾವು ಯಾವುದೇ ವಿಚಾರವನ್ನು ಪೂರ್ವ ಯೋಜನೆ ಇಲ್ಲದೆ ಮಾಡಲು ಹೋದಾಗ ಅದು ಹೆಚ್ಚುವರಿ ಖರ್ಚಿಗೆ ಕಾರಣವಾಗಲಿದೆ.
ಹಣವನ್ನು ಡಬ್ಬಿಯಲ್ಲಿ ಹಾಕಬೇಡಿ
ಬಹಳಷ್ಟು ಮಂದಿ ಮಹಿಳೆಯರು ಹಣವನ್ನು ಡಬ್ಬಿಯಲ್ಲು ಹಾಕುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದ್ರೆ ಈ ರೀತಿ ಹಣವನ್ನು ಡಬ್ಬಿಯಲ್ಲಿ ಹಾಕಬಾರದಂತೆ, ಏಕೆಂದರೆ ನೀವು ಸುಲಭವಾಗಿ ಈ ಹಣವಿರುವ ಕಡೆ ನೀವು ತಲುಪಬಹುದು ಇದು ಖರ್ಚಿಗೆ ಕಾರಣವಾಗುತ್ತದೆ.
ನಿಯಮಿತವಾಗಿ ಉಳಿತಾಯ ಮತ್ತು ಹೂಡಿಕೆ
ಶ್ರೀಮಂತ ಮಹಿಳೆಯರು ಅವರ ಉಳಿತಾಯದ ಹಣವನ್ನು ವ್ಯಯ ಮಾಡದೆ ಅದನ್ನು ಹೂಡಿಕೆ ಮಾಡಿರುತ್ತಾರೆ. ಅಂದರೆ ಬ್ಯಾಂಕ್‌ಗಳ ಮೂಲಕ, ವಿಮೆ ಮೂಲಕ ಒಂದು ಹಂತದ ಉಳಿತಾಯಕ್ಕಾಗಿ ಆ ಹಣ ವಿನಿಯೋಗಿಸುತ್ತಾರೆ. ಆದರೆ ಬಹುಪಾಲು ಮಹಿಳೆಯರು ಈ ಹಣವನ್ನು ಮನೆಯಲ್ಲೇ ತೆಗೆದಿಡುತ್ತಾರೆ. ಕಷ್ಟಕಾಲಕ್ಕೆ ತಕ್ಷಣ ಹಣ ಬೇಕು ಎಂಬ ಭಾವನೆಯಲ್ಲಿ ಅವರು ಹಣವನ್ನು ಮನೆಯಲ್ಲಿ ಇಡಲು ಮುಂದಾಗುತ್ತಾರೆ. ಆದರೆ ಈ ಹಣ ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ವಿನಿಯೋಗವಾಗುತ್ತದೆ.
ಖರ್ಚಿನ ಲೆಕ್ಕ ಬರೆದಿಡಿ
ಮನೆ ಖರ್ಚಿನ ಪ್ರತಿಯೊಂದು ಲೆಕ್ಕವನ್ನು ಬರೆದಿಡುವುದು ಉಳಿತಾಯ ಮಾಡುವವರ ಲಕ್ಷಣವಂತೆ. ಈ ರೀತಿ ಮಾಡೋದ್ರಿಂದ ನಿಮ್ಮ ಖರ್ಚಿನ ಮೇಲೆ ಹಿಡಿತ ಸಾಧಿಸಬಹುದಂತೆ. ಎಲ್ಲಾ ಖರ್ಚುಗಳಿಗೆ ಎಷ್ಟು ಹಣ ವ್ಯಯವಾಗುತ್ತಿದೆ ಎಂಬುದು ತಿಳಿಯಲಿದೆ ಇದು ನಿಮ್ಮ ಉಳಿತಾಯದ ಮೇಲೆ ಗಮನ ಹರಿಸಲು ಸಹಕಾರಿಯಾಗಲಿದೆ.
ಸಾಲವನ್ನು ಮಾಡದಿರುವುದು/ ಸಾಲ ನೀಡದಿರುವುದು
ಶ್ರೀಮಂತ ಮಹಿಳೆ ಎಂದಿಗೂ ಸಾಲದ ಹಿಂದೆ ಬೀಳುವುದಿಲ್ಲವಂತೆ. ಕೆಲವು ಬಾರಿ ನಾವು ಪಡೆಯುವ ಸಾಲವೇ ನಮ್ಮ ಉಳಿತಾಯಕ್ಕೆ ಕೊಡಲಿ ಪೆಟ್ಟು ಕೊಡಲಿದೆ. ಏಕೆಂದರೆ ಒಮ್ಮೆ ಸಾಲ ಪಡೆದ ಬಳಿಕ ನಿಮ್ಮ ಹಣ ಸಾಲ ಮರುಪಾವತಿಗೆ ಹೋಗುತ್ತದೆ. ಇದರಿಂದ ಮನೆ ನಿರ್ವಹಣೆ ಕಷ್ಟವಾಗಲಿದೆ.
ಇದರ ಜೊತೆ ನೀವು ಒಂದಿಷ್ಟು ಹಣವನ್ನು ಉಳಿತಾಯ ಮಾಡಿದ್ದರೆ ಅದನ್ನು ಎಂದಿಗೂ ಸಾಲ ನೀಡಬಾರದಂತೆ. ಏಕೆಂದರೆ ಸಾಲ ನೀಡಿದ ಹಣ ವಾಪಾಸು ಬಂದಾಗ ಆ ಹಣದಿಂದ ನಿಮಗೆ ಬೇರೆ ಖರ್ಚು ಮಾಡಬೇಕಾದ ಅನಿವಾರ್ಯತೆ ಬರಬಹುದು, ಹೀಗಾಗಿ ಯಾರಿಗೂ ಸಾಲವಾಗಿ ನಿಮ್ಮ ಉಳಿತಾಯದ ಹಣ ನೀಡಬಾರದಂತೆ. ಅಥವಾ ಆ ಹಣವನ್ನು ಬಡ್ಡಿ ವ್ಯವಹಾರದಂತಹ ವ್ಯವಹಾರಕ್ಕೆ ಎಂದಿಗೂ ಬಳಸಬಾರದು. ಅದೊಂದು ಉಳಿತಾಯದ ಹಣವನ್ನಾಗಿ ಮಾಡಿ ನಿಮ್ಮಲ್ಲೇ ಉಳಿಯುವಂತೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮಲ್ಲಿ ಸ್ವಲ್ಪ ಹಣ ಉಳಿತಾಯ ಮಾಡಬಹುದು. ಇದು ಕಷ್ಟದ ಕಾಲದಲ್ಲಿ ನಿಮ್ಮ ನೆರವಿಗೆ ಬರಬಹುದು.



Click it and Unblock the Notifications