Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೇಸಿಗೆಯಲ್ಲಿ ಹೆಚ್ಚುವುದು ಹಾವು ಕಾಟ, ಇವುಗಳು ಮನೆ ಸುತ್ತ ಬರದಂತೆ ತಡೆಗಟ್ಟುವುದು ಹೇಗೆ?
ಬೇಸಿಗೆ ಬರುತ್ತಿದ್ದಂತೆ ನೀವು ಗಮನಿಸಿರಬಹುದು ಹಾವುಗಳ ಕಾಟ ಹೆಚ್ಚು, ಅದರಲ್ಲೂ ತೋಟದ ಮನೆಗಳಲ್ಲಿ ಈ ಭಯ ಅಧಿಕ, ಏಕೆಂದರೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ತಂಪಾದ ಸ್ಥಳಗಳನ್ನು ಹುಡುಕಿ ಹಾವುಗಳು ಮನೆ ಸಮೀಪಕ್ಕೆ ಬರುತ್ತದೆ.
ಹಾಗಾಗಿಯೇ ನೀವು ಬೇಸಿಗೆಯಲ್ಲಿ ಹಲವು ಕಡೆಗಳಲ್ಲಿ ಹಾವು ಬಂದ ಸುದ್ದಿ, ಅದನ್ನು ಹಿಡಿದು ಕಾಡಿಗೆ ಬಿಟ್ಟ ಸುದ್ದಿ ಕೇಳುತ್ತೇವೆ. ಅಲ್ಲದೆ ಫಬ್ರವರಿ -ಮಾರ್ಚ್ ತಿಂಗಳು ಹಾವುಗಳು ಮೊಟ್ಟೆ ಹಾಕುವ ಸಮಯ. ತಂಪಾದ ಸ್ಥಳಕ್ಕೆ ಹೋಗಿ ಅವುಗಳನ್ನು ಮೊಟ್ಟೆಯನ್ನು ಹಾಕುವುದು. ಹೀಗಾಗಿ ಈ ಸಮಯದಲ್ಲಿ ನೀವು ಹಾವುಗಳ ಬಗ್ಗೆ ತುಂಬಾನೇ ಎಚ್ಚರವಹಿಸಬೇಕು.

ಆದ್ದರಿಂದ ಬೇಸಿಗೆಯಲ್ಲಿ ನೀವು ಈ ರೀತಿ ಜಾಗ್ರತೆವಹಿಸಿ
- ನೀವು ಮನೆಯ ಕಿಟಕಿಗಳನ್ನು ತೆರೆದು ಮಲಗಬೇಡಿ, ಕಿಟಕಿಗಳನ್ನು ತೆರೆದಿಡುವುದರಿಂದ ಅದರ ಮೂಲಕ ಮನೆಯೊಳಗಡೆ ಬರುವುದು ಆದ್ದರಿಂದ ಈ ಬಗ್ಗೆ ಜಾಗ್ರತೆ.
- ಇನ್ನು ರಾತ್ರಿ ಸಮಯದಲ್ಲಿ ಓಡಾಡುವಾಗ ಜಾಗ್ರತೆ, ಲೈಟ್ ಹಾಕಿ ಅಥವಾ ಟಾರ್ಚ್ ಹಾಕಿ ಓಡಾಡಿ.
- ಇನ್ನು ಬೈಕ್ ಅಥವಾ ಕಾರು ಹತ್ತುವ ಮುನ್ನ ಪರಿಶೀಲಿಸಿ, ಅದರಲ್ಲಿ ಸುತ್ತುಕೊಂಡು ಹಾವು ಮಲಗಿರುವ ಸಾಧ್ಯತೆ ಇದೆ.
- ಬೈಕ್ ಹೆಲ್ಮೆಟ್ ಹಾಗೆಯೇ ಹಾಕುವ ಮುನ್ನ ಅದನ್ನು ಪರಿಶೀಲಿಸಿ ಹಾಕಿ, ಇಲ್ಲದಿದ್ದರೆ ಅಪಾಯ.
- ಶೂಗಳನ್ನು ಹಾಕುವಾಗ ಕೂಡ ಜಾಗ್ರತೆ.
- ಗಾಡಿಗಳನ್ನು ಹುಲ್ಲು, ಕಾಡು ಇರುವ ಕಡೆ ನಿಲ್ಲಿಸಬೇಡಿ.
ಈ ಹಾವುಗಳನ್ನು ಮನೆ ಬಳಿ ಬಾರದಂತೆ ತಡೆಗಟ್ಟಲು ಕೆಲ ಉಪಾಯಗಳು
ಮನೆ ಸುತ್ತ ಮುತ್ತು ಇಲಿ, ಹೆಗ್ಗಣ, ಪಕ್ಷಿ, ಕಪ್ಪೆಗಳು ಇವುಗಳು ಇರದಂತೆ ನೋಡಿಕೊಳ್ಳಿ
ಹಾವು ಆಹಾರ ಅರಿಸಿ ಮನೆ ಬಳಿಗೆ ಬರುತ್ತದೆ, ನಾವು ಆಹಾರವನ್ನು ಅಲ್ಲಲ್ಲಿ ಚೆಲ್ಲುವುದರಿಂದ ಇಲಿ, ಹೆಗ್ಗಣಗಳ ಕಾಡ ಹೆಚ್ಚುವುದು, ಅಲ್ಲದೆ ಪಕ್ಷಿಗಳು ಗೂಡು ಕಟ್ಟಿ ಮೊಟ್ಟೆ ಹಾಕುವುದು, ಕಪ್ಪೆಗಳ ಸಂಖ್ಯೆ ಹೆಚ್ಚುವುದು. ಇವುಗಳನ್ನು ತಿನ್ನಲು ಹಾವು ಬರುತ್ತದೆ, ಆದ್ದರಿಂದ ಇವುಗಳು ನಿಮ್ಮ ಸುತ್ತಮುತ್ತ ಇರದಂತೆ ಜಾಗ್ರತೆವಹಿಸಿ. ಅಲ್ಲದೆ ಪಕ್ಷಿಗಳನ್ನು ನೀವು ಸಾಕಿದ್ದರೆ ಹಾವುಗಳು ಬರದಂತೆ ಕೀಟ ನಾಶಕಗಳನ್ನು ಸಿಂಪಡಿಸಬೇಕು.
ಮನೆ ಸುತ್ತ ಮುತ್ತದ ತೋಟದ ಬಗ್ಗೆ ಜಾಗ್ರತೆವಹಿಸಿ
ಮನೆ ಸುತ್ತಮುತ್ತ ಗುಂಡಿ, ಪೊಟರೆ, ಗುಜರಿ ಸಾಮಾನುಗಳು ಇವುಗಳಿದ್ದರೆ ಗುಜರಿ ವಸ್ತುಗಳನ್ನು ಹೊರಹಾಕಿ, ಅಲ್ಲದೆ ಕೆಲವೊಂದು ಹಾವು ಬರದಂತೆ ತಡೆಯುವ ಸಸ್ಯಗಳಿದೆ ಅವುಗಳನ್ನು ನೆಡಿ. ನರ್ವೀಸ ಗಿಡ, ಲೆಮನ್‌ಗ್ರಾಸ್ ಈ ಬಗೆಯ ಗಿಡಗಳು ಮನೆ ಸಮೀಪದ ಇದ್ದರೆ ಅವುಗಳ ವಾಸನೆಗೆ ಹಾವುಗಳು ಬರುವುದಿಲ್ಲ.
ಸಾಕು ಪ್ರಾಣಿಗಳು
ಮನೆಯಲ್ಲಿ ಹಾವು, ಬೆಕ್ಕು ಇವುಗಳು ಮನೆಯಲ್ಲಿದ್ದರೆ ಅವುಗಳು ಕೂಡ ಹಾವು ಬರುವುದನ್ನು ತಡೆಗಟ್ಟಲು ಸಹಕಾರಿ.
ಹೊಗೆ ಹಾಕಿ
ಹೊಗೆ ವಾಸನೆ ಹಾವುಗಳಿಗೆ ಇಷ್ಟವಿಲ್ಲ, ಆದ್ದರಿಂದ ಮನೆ ಸಮೀಪ ಬೆಂಕಿ ಹಾಕಿ, ಹೀಗೆ ಮಾಡುವುದರಿಂದ ಹಾವುಗಳು ಮನೆ ಸಮೀಪ ಬರುವುದನ್ನು ತಡೆಗಟ್ಟಬಹುದು.
ಈ ಬಗೆಯ ಕೀಟ ನಾಶಕ ಬಳಸಿ
ನೆಫ್ತಲೇನ್
ಇದರ ವಾಸನೆಗೆ ಕೂಡ ಹಾವುಗಳು ಬರುವುದಿಲ್ಲ, ಹಾಗಾಗಿ ನೀವು ಇದನ್ನು ಮನೆ ಕಿಟಕಿ ಬಳಿ, ಮನೆಯ ಮೂಲೆ ಮೂಲೆಗೆ ಹಾಕಿಡಿ, ಅದೇ ಮನೆಯಲ್ಲಿ ಮಕ್ಕಳಿದ್ದರೆ ಇವುಗಳನ್ನು ಬಾಯಿಗೆ ಹಾಕಬಹುದು, ಆದ್ದರಿಂದ ಎಚ್ಚರಿಕೆಯಿಂದ ಬಳಸಿ.
ಸಲ್ಫರ್
ಸಲ್ಫರ್ ಪೌಡರ್ ಕೂಡ ಹಾವುಗಳನ್ನು ಮನೆಯೊಳಗಡೆ ಬರದಂತೆ ತಡೆಗಟ್ಟುವುದು. ಇದನ್ನು ಮನೆ ಸುತ್ತ ಹಾಕುವಾಗ ಪ್ರಾಣಿಗಳು ತಿನ್ನದಂತೆ ಎಚ್ಚರವಹಿಸಿ, ಪೊಟರೆಯೊಳಗೆ ಹಾಕಿ.
ಬೆಳ್ಳುಳ್ಳಿ ಮತ್ತು ಈರುಳ್ಳಿ
ಬೆಳ್ಳುಳ್ಳಿ, ಈರುಳ್ಳಿ, ಕಲ್ಲುಪ್ಪು ಮಿಕ್ಸ್ ಮಾಡಿ ಅದನ್ನು ಮನೆಸುತ್ತ ಹಾಕಿ. ಇವುಗಳ ವಾಸನೆಗೂ ಮನೆ ಸಮೀಪ ಹಾವು ಬರಲ್ಲ.
ವಿನೆಗರ್
ವಿನೆಗರ್ ಕೂಡ ಹಾವು ಬಾರದಂತೆ ತಡೆಗಟ್ಟಲು ಸಹಕಾರಿ.
ನಿಂಬೆಹಣ್ಣು
ನೀಬು ಕಾಳು ಮೆಣಸಿನ ಪುಡಿ ಹಾಗೂ ನಿಂಬೆರಸ ಮಿಕ್ಸ್ ಮಾಡಿ ನಿಮ್ಮ ಮನೆಯ ಸುತ್ತ ಮುತ್ತ ಸ್ಪ್ರೇ ಮಾಡಿ ಹೀಗೆ ಮಾಡುವುದರಿಂದ ಹಾವು ಮನೆಯೊಳಗಡೆ ಬರುವುದನ್ನು ತಡೆಗಟ್ಟಬಹುದು.



Click it and Unblock the Notifications
