Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ಗ್ರೀನ್ ಅಲರ್ಟ್! ನಿಮ್ಮ ಬಾಲ್ಕನಿ ಸ್ವರ್ಗ ಆಗಬೇಕೆ? ಈ ಟಾಪ್ ಕ್ಲೈಂಬರ್ ಸಸ್ಯ ನೆಡಿ
'ಹಸಿರೇ ಉಸಿರು..' ಹಸಿರು ಯಾರಿಗೆ ಇಷ್ಟವಿಲ್ಲ ಹೇಳಿ. ಅದರಂತೆ, ಎಲ್ಲರೂ ತಮ್ಮ ಮನೆಯ ಬಾಲ್ಕನಿ ಮತ್ತು ಉದ್ಯಾನವನ್ನು ಹಸಿರಿನಿಂದ ಸುಂದರಗೊಳಿಸಲು ಇಷ್ಟಪಡುತ್ತೇವೆ. ಹೌದು, ಮನೆ ಮುಂದೆ ಅಥವಾ ಹಿಂದೆ ಪುಟ್ಟ ಜಾಗ ಇದ್ದರೆ ಮಹಿಳೆಯರು ಸಸ್ಯ ಸಮ್ಮೇಳನ (plants) ನಡೆಸುತ್ತಾರೆ. ಮಲೆನಾಡು ಕರಾವಳಿಗಳಲ್ಲಿ ಭಾಗದಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಹೂವು, ಹಣ್ಣು, ಔಷಧ, ಅಡುಗೆ, ಅಲಂಕಾರ ಹೀಗೆ ವಿವಿಧ ಉಪಯುಕ್ತ ಸಸ್ಯ ಬೆಳೆಸುತ್ತಾರೆ. ಮನೆಯ ಸುತ್ತಲೂ ಸೊಗಸಾದ ಸಸ್ಯ ವನ ಕಟ್ಟುತ್ತಾರೆ. ನೀವು ಈ ರೀತಿ ಪ್ಲಾನ್ ಹೊಂದಿದ್ದರೆ, ಈ ಸಸ್ಯಗಳಿಂದ ಬಾಲ್ಕನಿ (balcony) ಮತ್ತು ಉದ್ಯಾನವನ್ನು (garden) ಸಿಂಗರಿಸಿ.
ಹೂವುಗಳು ಮತ್ತು ಸಸ್ಯಗಳು ಮನೆಯ ಸೌಂದರ್ಯವನ್ನು ಮಾತ್ರ ಹೆಚ್ಚಿಸುವುದಿಲ್ಲ. ಬದಲಾಗಿ, ನಮ್ಮಲ್ಲಿ ಸಕಾರಾತ್ಮಕ ಭಾವನೆಗಳನ್ನು (ವೈಬ್) ಸಹ ಮೂಡಿಸುತ್ತವೆ. ಮನಸ್ಸಿಗೆ ಶಾಂತಿ ನೀಡುತ್ತವೆ. ಬಾಲ್ಕನಿ ಮತ್ತು ಉದ್ಯಾನದ ಸೌಂದರ್ಯ ದುಪ್ಪಟ್ಟು ಮಾಡಲು ಪ್ರಮುಖ ಪಾತ್ರವಹಿಸುತ್ತವೆ. ನೀವು ಸಹ ಗಿಡಗಳನ್ನು ನೆಡಲು ಬಯಸಿದರೆ, ಕೆಲವು ಸುಂದರವಾದ ಬಳ್ಳಿ ಗಿಡಗಳನ್ನು ನೆಡಬಹುದು. ಅಂದರೆ, ಕ್ಲೈಂಬರ್ ಸಸ್ಯಗಳನ್ನು ಆಯ್ಕೆ ಮಾಡಬಹುದು. ಈ ಗಿಡಗಳಿಂದ ನಿಮ್ಮ ಮನೆಗೆ ಆಕರ್ಷಕ ಲುಕ್ ನೀಡಬಹುದು. ಕಡಿಮೆ ನೀರು ಬಯಸುವ ಗಿಡಗಳ ಪಾಲನೆ ಬಹಳ ಸುಲಭ. ವಾರಕ್ಕೊಮ್ಮೆ ನೀರು ಹಾಕಿದರೂ ಸಾಕು. ಬರಗಾಲದಲ್ಲೂ ಸಣ್ಣ ಪ್ರಮಾಣದ ನೀರಿನಲ್ಲಿ ಹಚ್ಚ ಹಸಿರಾಗಿ ಕಂಗೊಳಿಸುತ್ತವೆ.

ಅಪರಾಜಿತ ಸಸ್ಯ ಅಥವಾ ನೀಲಿ ಹೂವು
ನೀವು ಅಪರಾಜಿತ (Aprajita) ಸಸ್ಯ ನೆಡಬಹುದು. ಇದನ್ನು ನೀಲಿ ಹೂವು, ಅಪರಾಜಿತ ಹೂವು ಅಥವಾ ಶಂಖ ಪುಷ್ಪ ಎಂದು ಕರೆಯಲಾಗುತ್ತದೆ. ದೈನಂದಿನ ಪೂಜಾ ವಿಧಿಗಳಲ್ಲಿ ಈ ಹೂವು ಬಳಸಲಾಗುತ್ತದೆ. ನೀಲಿ ಹೂವುಗಳನ್ನು ಹೊಂದಿರುವ ಈ ಸಸ್ಯವು ನೋಡಲು ತುಂಬಾ ಸುಂದರವಾಗಿದೆ. ನೀವು ಈ ಗಿಡವನ್ನು ಬಾಲ್ಕನಿಯಲ್ಲಿಯೂ ನೆಡಬಹುದು. ಇದರ ಔಷಧೀಯ ಗುಣಗಳು ಈ ಸಸ್ಯವನ್ನು ತುಂಬಾ ವಿಶೇಷವಾಗಿಸಿದೆ.
ಮನಿ ಪ್ಲಾಂಟ್
ಮನಿ ಪ್ಲಾಂಟ್ (Money plant) ಅನ್ನು ಅತ್ಯಂತ ಶುಭ ತರುವಂತಹ ಗಿಡ. ನಿಮ್ಮ ಮನೆಯ ಬಾಲ್ಕನಿಯಲ್ಲಿ ಮನಿ ಪ್ಲಾಂಟ್ ನೆಡಬಹುದು. ಈ ಸಸ್ಯದ ಬಳ್ಳಿ ಕೂಡ ತುಂಬಾ ಸುಂದರವಾಗಿದೆ. ಈ ಸಸ್ಯವನ್ನು ಪಾಲನೆ ಅಥವಾ ನೋಡಿಕೊಳ್ಳುವುದು ತುಂಬಾ ಕಷ್ಟವಲ್ಲ. ನೀವು ಅದನ್ನು ಒಂದು ಕುಂಡದಲ್ಲಿ ನೆಟ್ಟು ಬಾಲ್ಕನಿಯನ್ನು ಅಲಂಕರಿಸಬಹುದು. ಕೇವಲ ಮನೆಯಲ್ಲಿ ಮಾತ್ರವಲ್ಲ, ನೀವು ಕೆಲಸ ಮಾಡುವಂತಹ ಕಚೇರಿಯಲ್ಲಿ ಸಹ ಇಡಬಹುದು.
ಬೋಗನ್‌ವಿಲ್ಲಾ ಗಿಡ
ಬೋಗನ್‌ವಿಲ್ಲಾ ಗಿಡ (Bougainvillea) ಅಥವಾ ಸಸ್ಯವು ತುಂಬಾ ಸುಂದರವಾಗಿದೆ. ಇದು ಹಲವು ಬಣ್ಣಗಳಲ್ಲಿ ಬರುತ್ತದೆ. ನೀವು ಈ ಗಿಡವನ್ನು ಮನೆಯ ಗೇಟ್ ಬಳಿ ಮತ್ತು ಗೋಡೆಗಳ ಬದಿಗಳಲ್ಲಿ ನೆಡಬಹುದು. ನೀವು ಅದನ್ನು ಕುಂಡದಲ್ಲಿ ನೆಡಲು ಬಯಸಿದರೆ, ದೊಡ್ಡ ಕುಂಡವನ್ನು ಬಳಸಿ. ಇನ್ನು ಗುಲಾಬಿ ಬಣ್ಣದ ಹೂವುಗಳನ್ನು ಬಿಡುವ ಬೋಗನ್‌ವಿಲ್ಲಾ ಗಿಡಗಳು ಹೆಚ್ಚು ಸುಂದರವಾಗಿ ಕಾಣುತ್ತವೆ.
ಮಧುಮಾಲತಿ ಸಸ್ಯ
ಮಧುಮಾಲತಿ (ಕಾಂಬ್ರೆಟಮ್ ಇಂಡಿಕಂ) ಕೂಡ ತುಂಬಾ ಸೊಗಸಾಗಿ ಬಳ್ಳಿ ಅಥವಾ ಸಸ್ಯ. ಇದರ ಹೂವುಗಳು ಒಟ್ಟಿಗೆ ಅರಳುತ್ತವೆ. ಈ ಗುಲಾಬಿ ಮತ್ತು ಬಿಳಿ ಬಣ್ಣದ ಹೂವುಗಳು ತುಂಬಾ ಸುಂದರವಾಗಿ ಕಾಣುತ್ತವೆ. ನಿಮ್ಮ ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಈ ಹೂವುಗಳ ಸುವಾಸನೆ ತುಂಬಾ ಚೆನ್ನಾಗಿದೆ. ಪ್ರಮುಖ ವಿಷಯವೆಂದರೆ, ಈ (Madhumalti) ಸಸ್ಯವು ಸುಲಭವಾಗಿ ಬೆಳೆಯುತ್ತದೆ.
ಒಟ್ಟಾರೆ, ಇವು ತಮ್ಮ ಬಳ್ಳಿಗಳ ಮೂಲಕ ಹೆಚ್ಚು ಹರಡುತ್ತವೆ. ಜೊತೆಗೆ ತುಂಬಾ ಸುಂದರವಾಗಿ ಕಾಣುತ್ತವೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಇವುಗಳನ್ನು ಬೆಳೆಸಬಹುದು. ಇವು ನಿಮ್ಮ ಮನೆಗೆ ಆಕರ್ಷಕ ಲುಕ್ ನೀಡುವುದು ಮತ್ತು ಮನೆಯ ಸೌಂದರ್ಯವನ್ನು ಹೆಚ್ಚಿಸುವುದು ಖಚಿತ.



Click it and Unblock the Notifications