Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತಲೆ ದಿಂಬು ವಾಷಿಂಗ್ ಮೆಷಿನ್‌ನಲ್ಲಿ ತೊಳೆಯಬಹುದೇ? ಇಲ್ಲಿದೆ ಕೆಲ ವಾಷಿಂಗ್ ಟಿಪ್ಸ್
ತಲೆ ದಿಂಬು ಸ್ವಚ್ಛ ಮಾಡುತ್ತೇವೆ, ಆದರೆ ತಲೆದಿಂಬು ತೊಳೆಯುತ್ತೀವಾ? ಕೆಲವರು ತಲೆದಿಂಬು ವರ್ಷಗಟ್ಟಲೆ ಬಳಸುತ್ತಾರೆ, ಅದರ ಕವರ್ ಮಾತ್ರ ಸ್ವಚ್ಛಗೊಳಿಸಿದರೆ ಸಾಕು ಎಂದು ಬಾವಿಸುತ್ತೇವೆ. ಆದರೆ ದಿಂಬು ಕೂಡ ವರ್ಷಕ್ಕೆರಡು ಬಾರಿಯಾದರೂ ತೊಳೆಯಬೇಕು. ಆದರೆ ತಲೆದಿಂಬು ತೊಳೆಯುವುದು ಹೇಗೆ? ವಾಷಿಂಗ್ ಮೆಷಿನ್‌ನಲ್ಲಿ ತೊಳೆಯಬಹುದೇ? ದಿಂಬು ತೊಳೆಯಲು ಯಾವ ವಾಂಶಿಂಗ್ ಮೆಷಿನ್ ಒಳ್ಳೆಯದು ಎಂದು ನೋಡೋಣ ಬನ್ನಿ:

ತಲೆದಿಂಬಿನ ಮಲೇಬಲ್ ಓದಿ
ತಲೆದಿಂಬಿನ ಮೇಲೆ ಬರೆದಿರುತ್ತದೆ ಹ್ಯಾಂಡ್‌ವಾಶ್ ಓನ್ಲಿ, ಮೆಷಿನ್ ವಾಶ್ ಓನ್ಲಿ ಎಂದು ಬರೆದಿರುತ್ತದೆ, ಅದನ್ನುಓದಿ, ಅದರಂತೆ ವಾಶ್ ಮಾಡಬೇಕು.
ಬರಿ ದಿಂಬು ವಾಷಿಂಗ್ ಮೆಷಿನ್‌ನಲ್ಲಿ ಹಾಕಬೇಡಿ
ತೊಳೆಯಲಿರುವ ಇತರ ಬಟ್ಟೆಗಳ ಜೊತೆಗೆ ವಾಷಿಂಗ್ ಮೆಷಿನ್‌ನಲ್ಲಿ ಹಾಕಿ, ಹಾಕುವ ಮೊದಲು ಏನಾದರೂ ಕಲೆಯಿದ್ದರೆ ಕೆಲ ಹೋಗುವ ಲಿಕ್ವಿಡ್ ಹಾಕಿ ಬ್ರೆಷ್‌ನಲ್ಲಿ ಸ್ಕ್ರಬ್ ಮಾಡಿ ನಂತರ ವಾಷಿಂಗ್ ಮೆಷಿನ್‌ನಲ್ಲಿ ಹಾಕಿ, ಬರಿ ದಿಂಬು ಹಾಕಿದರೆ ದಿಂಬು ತುಂಬಾ ಮುದ್ದೆಯಾಗಬಹುದು, ಆದರೆ ಬಟ್ಟೆ ಜೊತೆ ಹಾಕಿದರೆ ಚೆನ್ನಾಗಿ ವಾಶ್ ಆಗಿ ಬರುತ್ತದೆ.
ಡ್ರಮ್‌ಗೆ ವಾಶಿಂಗ್ ಲಿಕ್ವಿಡ್ ಅಥವಾ ಪೌಡರ್ ಹಾಕಿ
ನೀವು ವಾಶ್ ಮಾಡಲು ಬಳಸುವ ಪೌಡರ್ ಹಾಕಿ, ಬ್ಲೀಚಿಂಗ್ ಬಳಸಬೇಡಿ.
ನಿಮಗೆ ದಿಂಬು ಏನಾಗಬಹುದು ಎಂಬ ಆತಂಕವಿದ್ದರೆ ಒಂದು ಬಟ್ಟೆ ಸುತ್ತಿ ಹಾಕಿ ವಾಶ್ ಮಾಡಿ
ನಂತರ ತೆಗೆದು ಬಿಸಿಲಿನಲ್ಲಿ ಒಣಗಿಸಿ, ಡ್ರೈಯರ್ ಇದ್ದರೆ ಅದರಲ್ಲಿಯೂ ಒಣಗಿಸಬಹುದು. ಅದರೊಳಗಿರುವ ಸ್ಪಾಂಜ್ ಚೆನ್ನಾಗಿ ಒಣಗಬೇಕು, ಇಲ್ಲದಿದ್ದರೆ ದಿಂಬು ದುರ್ವಾಸನೆ ಬೀರುವುದು, ಹೀಗಾಗಿ ಮೋಡವಿರುವಾಗ ಒಗೆಯಲು ಹಾಕಬೇಡಿ. ಒಳ್ಳೆ ಬಿಸಿಲಿರುವ ದಿನ ಒಗೆದು ಒಣಗಿಸಬೇಕು.
ಯಾವ ವಾಷಿಂಗ್ ಮೆಷಿನ್ ಒಳ್ಳೆಯದು?
ದಿಂಬು ಒಗೆಯಲು ಫ್ರೆಂಟ್ ಲೋಡ್ ವಾಷಿಂಗ್ ಮೆಷಿನ್ ಒಳ್ಳೆಯದು.ಟಾಪ್ ಲೋಡ್‌ನಲ್ಲಿ ದಿಂಬು ಹಾಳಾಗುವ ಛಾನ್ಸ್ ಇದೆ, ಆದರೆ ಫ್ರಂಟ್ ಲೋಡ್‌ನಲ್ಲಿ ದಿಂಬು ಹಾಳಾಗಲ್ಲ.
ದಿಂಬು ಸ್ವಚ್ಛವಾಗಿಡಬೇಕು
ದಿಂಬು ಯಾವಾಗಲು ಸ್ವಚ್ಛವಾಗಿರಬೇಕು, ಇಲ್ಲದಿದ್ದರೆ ತ್ವಚೆ ಅಲರ್ಜಿ, ಮೊಡವೆ ಈ ಬಗೆಯ ಸಮಸ್ಯೆ ಉಂಟಾಗುವುದು.
ಇನ್ನು ಬೇರೆಯವರು ಮಲಗಿದ ತಲೆದಿಂಬು ಬಳಸುವಾಗ ದಿಂಬಿನ ಕಲರ್ ಬದಲಾಯಿಸಿ ನಂತರ ಬಳಸಿ.
ಎಣ್ಣೆಯ ಜಿಡ್ಡಿನಂಶವಿರುವ ತಲೆದಿಂಬು ದುರ್ವಾಸನೆ ಬೀರುವುದು
ಕೆಲವರು ತಲೆಗೆ ಹಾಕಿದ ಎಣ್ಣೆಯಲ್ಲಿಯೇ ಮಲಗುತ್ತಾರೆ. ಹೀಗೆ ಮಲಗುವಾಗ ತಲೆ ದಿಂಬಿಗೆ ಜಿಡ್ಡನಂಶ ಹಿಡಿಯುತ್ತೆ, ನೀವು ತಲೆಗೆ ಎಣ್ಣೆ ಹಾಕಿ ಮಲಗುವವರಾದರೆ ಆಗಾಗ ತೊಳೆಯಬೇಕಾಗುತ್ತೆ. ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಬೇಕು.



Click it and Unblock the Notifications
