Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಜಾಗವಿಲ್ಲ ಎನ್ನುವವರು ಕೂಡ ಸುಲಭವಾಗಿ ಪಾಲಾಕ್ ಬೆಳೆಯಬಹುದು ನೋಡಿ
ಒಂದು ಕಟ್ಟು ಪಾಲಾಕ್ ಸೊಪ್ಪಿಗೆ 10-20 ರುಪಾಯಿ ತಗೋತ್ತಾರೆ, ಅದನ್ನು ಮನೆಗೆ ತಂದು ನೋಡಿದರೆ ಬರೀ ಪಾಲಾಕ್ ಮಾತ್ರ ಇರಲ್ಲ, ಜೊತೆಗೆ ಇತರ ಸ್ವಲ್ಪ ಕಾಡು ಸೊಪ್ಪುಗಳೂ ಇರುತ್ತದೆ, ಅವುಗಳೆನ್ನೆಲ್ಲಾ ಬಿಡಿಸಿದಾಗ ಒಂದು ಮುಷ್ಠಿಯಷ್ಟು ಸೊಪ್ಪು ಸಿಗಬಹುದು, ಒಬ್ಬರಿಗೂ ಸಾಕಾಗುವುದಿಲ್ಲ ಅಲ್ವಾ? ನೀವು ಮನಸ್ಸು ಮಾಡಿದರೆ ಪಾಲಾಕ್ ಸೊಪ್ಪನ್ನು ಮನೆಯಲ್ಲೇ ಬೆಳೆಸಬಹುದು.

ಅಯ್ಯೋ ಟೌನ್‌ನಲ್ಲಿದ್ದೇವೆ, ಮನೆ ಮುಂದೆ ಗಿಡ ಹಾಕಲು ಸ್ಥಳನೇ ಇಲ್ವಲ್ಲಾ ಎಂದೆಲ್ಲಾ ಯೋಚಿಸಿಬೇಡಿ, ಚಿಕ್ಕ ಪಾತ್ರೆ ಅಥವಾ ಹೂವಿನ ಕುಂಡ, ಒಡೆದು ಹೋದ ಪ್ಲಾಸ್ಟಿಕ್ ಬಕೆಟ್‌ಗಳಲ್ಲೂ ಮಣ್ಣು ತುಂಬಿ ಬೆಳೆಸಬಹುದು. ಇನ್ನು ಹಳ್ಳಿ ಪ್ರದೇಶದಲ್ಲಿ ಭೂಮಿಯಿದ್ದರೂ ಮಳೆ ಹೆಚ್ಚು ಕಡಿಮೆಯಾದಾಗ ಅದು ನೀವು ಬೆಳೆದ ಬೆಳೆಯ ಮೇಲೆ ಪರಿಣಾಮ ಬೀರುವುದು. ಅದೇ ಹೂ ಕುಂಡದಲ್ಲಿ ನಿಮ್ಮ ಅವಶ್ಯಕತೆಗೆ ಬೆಳೆಸಿದರೆ ಅದರ ಆರೈಕೆ ಮಾಡುವುದು ಸುಲಭವಾಗುವುದು. ನೀವೇ ಮನೆಯಲ್ಲಿ ಬೆಳೆಸಲಾರಂಭಿಸಿದರೆ ನಿಮ್ಮ ಅವಶ್ಯಕತೆಗಿರುವ ಪಾಲಾಕ್ ಸಿಗುವುದು, ಹಣವೂ ಮಿಕ್ಕುತ್ತೆ, ಆರ್ಗಾನಿಕ್ ಪಾಲಾಕ್ ಆಗಿರುವುದರಿಂದ ರುಚಿಯೂ ಬೊಂಬಾಟ್.
ಪಾಲಾಕ್ ಬೆಳೆಯಲು ಎಂಥ ಹೂ ಕುಂಡ ಅಥವಾ ಪಾತ್ರೆ ಆಯ್ಕೆ ಮಾಡಬೇಕು?
ಪಾಲಾಕ್ ಬೇರುಗಳು ಆಳವಾಗಿ ಬಿಡುವುದು, ಆದರೆ ಹೂಕುಂಡ ಅಥವಾ ಪ್ಲಾಸ್ಟಿಕ್ ಡಬ್ಬದ ಉದ್ದ ಮತ್ತು ಅಗಲ 10 ಇಂಚು ಇದ್ದರೆ ಒಳ್ಳೆಯದು. ಅದರ ತಳದಲ್ಲಿ ನೀರು ಹೋಗಲು ರಂಧ್ರವಿರಬೇಕು.
* ಯಾವ ಬಗೆಯ ಕುಂಡ ಬಳಸಬೇಕು ಎಂದು ಮೊದಲೇ ನಿರ್ಧರಿಸಿ, ಇತ್ತಕಡೆಯಿಂದ -ಅತ್ತಕಡೆ ಇಡುವುದಾದರೆ ನೀವು ಸ್ವಲ್ಪ ಭಾರ ಕಡಿಮೆಯಾದ ಡಬ್ಬ ಬಳಸುವುದು ಒಳ್ಳೆಯದು, ಇಲ್ಲದಿದ್ದರೆ ಮಣ್ಣು ತುಂಬಿದಾಗ ಎತ್ತಿಡಲು ಕಷ್ಟವಾಗುವುದು.
ತುಂಬಾ ಸೆಕೆ ಅಥವಾ ತುಂಬಾ ತಂಪಾದ ಪ್ರದೇಶದಲ್ಲಿ ಬೆಳೆಯುವುದಿಲ್ಲ
ನಮ್ಮ ಕರ್ನಾಟದ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕೆಲವು ಸ್ವಲ್ಪ ಉಷ್ಣಾಂಶ ಅಧಿಕವಿರುತ್ತದೆ, ಸ್ವಲ್ಪ ಬಿಸಿಲು ಕಡಿಮೆ ಬೀಳುವ ಕಡೆ ಇಟ್ಟರೆ ಬೆಳೆಯುವುದು.
ಯಾವ ಮಣ್ಣು ಬಳಸಬೇಕು?
ನೀವು ಕುಂಡಕ್ಕೆ ಸಡಿಲವಾದ, ಫಲವತ್ತತೆಯ ಮಣ್ಣು ತುಂಬೇಲು. ನಂತರ ಒಂದು ಇಂಚು ದೂರದಲ್ಲಿ ಗುಂಡಿ ಮಾಡಿ, ಎರಡರಡು ಬೀಜ ಹಾಕಿ, ಮಣ್ಣು ಮುಚ್ಚಿ, ಇರುವೆ ತಿನ್ನದಂತೆ ಇರುವ ನಿಯಂತ್ರಣಕ್ಕೆ ಪುಡಿ ಸ್ವಲ್ಪ ಮೇಲೆ ಉದುರಿಸಿ.
* 8-10 ದಿನಗಳಲ್ಲಿ ಮೊಳಕೆ ಬರುತ್ತದೆ, ಎರಡು ದಿನಕ್ಕೊಮ್ಮೆ ನೀರು ಹಾಕಿದರೆ ಸಾಕು, ನೀರು ಮಿತಿಯಲ್ಲಿ ಹಾಕಿ. ಇನ್ನೊಂದು 10 ದಿನದಲ್ಲಿ ಪಾಲಾಕ್ ರೆಡಿ. ಒಂದು ನಾಲ್ಕು ಕುಂಡವಿದ್ದರೆ ಒಂದರಲ್ಲಿ ಮೊಳಕೆ ಬರುವಾಗ ಮತ್ತೊಂದರಲ್ಲಿ ಬೀಜ ಹಾಕಬೇಕು, ಈ ರೀತಿ ಮಾಡಿದರೆ ತಿಂಗಳಲ್ಲಿ ನಾಲ್ಕು ವಾರವೂ ವಾರದಲ್ಲಿ ಎರಡು ಬಾರಿ ಪಾಲಾಕ್ ಮಾಡಬಹುದು.



Click it and Unblock the Notifications
