Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾಡಿಗೆ ಮನೆಗೆ ಹೋಗುವಾಗ ಯಾವ ದಿನ ಹೋಗಬೇಕು, ಹಾಲು ಉಕ್ಕಿಸಬಾರದು ಏಕೆ?
ನನ್ನದೇ ಆದ ಮನೆ ಇರಬೇಕೆಂಬುವುದು ಪ್ರತಿಯೊಬ್ಬರ ಕನಸು, ಆದರೆ ಬಹುತೇಕರಿಗೆ ಆ ಕಾಲ ಹೊಂದಿ ಬಂದಿರುವುದಿಲ್ಲ. ಇನ್ನು ಕೆಲವರಿಗೆ ಸ್ವಂತ ಮನೆ ಇರುತ್ತದೆ. ಆದರೆ ಕೆಲಸದ ಕಾರಣಕ್ಕೆ ಬೇರೆ ಊರಿಗೆ ಹೋದಾಗ ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತದೆ.
ಮನೆ ಸ್ವಂತದ್ದಾಗಿರಲಿ, ಬಾಡಿಗೆಯದ್ದೇ ಆಗರಲಿ ನಾವು ಇರುವ ಮನೆಯಲ್ಲಿ ನೆಮ್ಮದಿ ಇರಬೇಕು, ಸಂತೋಷ ಇರಬೇಕೆಂದು ಬಯಸುತ್ತೇವೆ. ಕೆಲವರಿಗೆ ಬಾಡಿಗೆ ಮನೆಗೆ ಬಂದ ಅದೃಷ್ಟ ಖುಲಾಯಿಸುತ್ತದೆ, ನಂತರ ಅವರು ಸ್ವಂತ ಮನೆ ಖರೀದಿಸುವಷ್ಟು ಸ್ಥಿತಿವಂತರಾದರೂ ಇದ್ದಂಥ ಬಾಡಿಗೆ ಮನೆ ಬಿಡುವ ಮನಸ್ಸು ಮಾಡಿರಲ್ಲ, ಹಾಗಾಗಿ ಬಾಡಿಗೆ ಮನೆ ನಮಗೆ ಅದೃಷ್ಟಕರ, ಸ್ವಂತ ನಮಗೆ ಅದೃಷ್ಟವನ್ನು ತರುತ್ತದೆ ಎಂದು ಭಾವಿಸುವುದು ತಪ್ಪು.

ಆದರೆ ಸ್ವಂತ ಮನೆಗೆ ಹೋಗುವ ಕ್ರಮ ಬೇರೆ ಇರುತ್ತದೆ, ಬಾಡಿಗೆ ಮನೆಗೆ ಹೋಗುವ ಕ್ರಮ ಬೇರೆ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಸ್ವಂತ ಮನೆಗೆ ಹೋಗುವಾಗ ಹಾಲುಕ್ಕಿಸಿ ಹೋಗುತ್ತೇವೆ ಅಲ್ವಾ? ಆದರೆ ಬಾಡಿಗೆ ಮನೆಗೆ ಹೋಗುವಾಗ ಹಾಲುಕ್ಕಿಸಬಾರದಂತೆ! ಇಂಥ ನಂಬಿಕೆಗಳ ಬಗ್ಗೆ ಕಣ್ಣಾಡಿಸೋಣ ಬನ್ನಿ:
ಯಾವ ಸಮಯದಲ್ಲಿ ಬಾಡಿಗೆ ಮನೆಗೆ ಹೋಗುವುದು ಬಾಡಿಗೆದಾರರಿಗೆ ಸೂಕ್ತ
ಬಾಡಿಗೆ ಮನೆಗೆ ಆಷಾಢ, ಶ್ರಾವಣ, ಭಾದ್ರಪದ ಮಾಸದಲ್ಲಿ ಹೋದರೆ ಒಳ್ಳೆಯದು, ಆದರೆ ಸಾಕಷ್ಟು ಮನೆ ಮಾಲೀಕರು ಈ ಸಮಯದಲ್ಲಿ ಮನೆ ಬಾಡಿಗೆಗೆ ಕೊಡಲ್ಲ. ಈ ಸಮಯದಲ್ಲಿ ಮನೆ ಬಾಡಿಗೆಗೆ ಕೊಡುವುದು ಅವರಿಗೆ ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ. ಆದರೆ ಮನೆ ಬಾಡಿಗೆಗೆ ಹೋಗುವಾಗ ಈ ಸಮಯದಲ್ಲಿ ಹೋದರೆ ನಮಗೆ ಸ್ವಂತ ಮನೆಯ ಅದೃಷ್ಟ ಬೇಗನೆ ಒಲಿಯುತ್ತದೆ ಎಂಬುವುದು ನಂಬಿಕೆ.
ಈ ದಿನಾಂಕಗಳಲ್ಲಿ ಬಾಡಿಗೆ ಮನೆ ಮಾಡಿದರೆ ಒಳ್ಳೆಯದು
ಪಾಡ್ಯ, ಪಂಚಮಿ, ಬಿದಿಗೆ, ತದಿಗೆ,ಸಪ್ತಮಿ, ದಶಮಿ, ಏಕಾದಶಿ, ದ್ವಾದಶಿ ಇಂಥ ದಿನಗಳಲ್ಲಿ ಮನೆ ಬಾಡಿಗೆಗೆ ಹೋಗುವುದು ಸೂಕ್ತ ಎಂದು ಶಾಸ್ತ್ರ ಹೇಳುತ್ತದೆ. ಈ ದಿನಗಳಲ್ಲಿ ಹೋದರೆ ನಮಗೆ ಶ್ರೇಯಸ್ಸು ಉಂಟಾಗುವುದು, ನಾವು ಬೇಗನೆ ಸ್ವಂತ ಮನೆ ಮಾಡುವಂತಾಗುವುದು ಎಂದು ಹೇಳಲಾಗುವುದು.
ಬಾಡಿಗೆ ಮನೆಗೆ ಹೋಗಲು ಶುಕ್ರವಾರ ಅತ್ಯಂತ ಶುಭ ದಿನವಾಗಿದೆ. ಈ ದಿನ ಹೋದರೆ ಬಾಡಿಕೆ ಮನೆಯಲ್ಲಿದ್ದರೂ ಹಣದ ಕೊರತೆ ಉಂಟಾಗಲ್ಲ ಎಂದು ಹೇಳಲಾಗುವುದು.
ಯಾವ ದಿನಾಂಕಗಳಲ್ಲಿ ಬಾಡಿಗೆ ಮನೆಗೆ ಹೋಗಬಾರದು?
ಸೋಮವಾರ, ಮಂಗಳವಾರದ ದಿನ ಬಾಡಿಗೆ ಮನೆಗೆ ಹೋಗಬಾರದು ಎಂದು ಹೇಳಲಾಗುವುದು, ಹಾಗಾಗಿ ಬಾಡಿಗೆ ಮನೆಗೆ ಹೋಗುವಾಗ ಈ ದಿನಗಳಂದು ಅಡ್ವಾನ್ಸ್ ಕೊಡುವುದು ಕೂಡ ಮಾಡಬೇಡಿ.
ಹಾಲು ಉಕ್ಕಿಸಬೇಡಿ
ಸಾಮಾನ್ಯವಾಗಿ ನಾವು ಇರಲು ಒಂದು ಮನೆಗೆ ಹೋದಾಗ ಹಾಲು ಉಕ್ಕಿಸುತ್ತೇವೆ, ಆದರೆ ಆ ರೀತಿ ಹಾಲು ಉಕ್ಕಿಸಿದರೆ ಅದರ ಫಲ ಆ ಮನೆಯ ಮಾಲೀಕರಿಗೆ ಹೋಗುತ್ತೆ, ನಿಮಗೆ ಹಾಲು ಉಕ್ಕಿಸುವ ಅದೃಷ್ಟವಿದ್ದರೆ ಅದು ನಷ್ಟವಾಗಬಹುದು ಹಾಗಾಗಿ ಬಾಡಿಗೆ ಮನೆಗೆ ಹೋಗುವಾಗ ಹಾಲು ಉಕ್ಕಿಸಬಾರದು.
ಬಾಡಿಗೆ ಮನೆಗೆ ಹೋಗುವಾಗ ಮನೆಯ ಹೆಬ್ಬಾಗಿಲಿನ ದಿಕ್ಕು ನೋಡಬೇಕು
ಬಾಡಿಗೆ ಮನೆಗೆ ಹೋಗುವಾಗ ಈ ಅಂಶವನ್ನು ಪ್ರಮುಖವಾಗಿ ಗಮನಿಸಬೇಕು. ಮನೆಯ ದಿಕ್ಕು ತುಂಬಾ ಮುಖ್ಯವಾಗಿರುತ್ತದೆ. ಬಾಡಿಗೆಗೆ ಮನೆ ನೀಡುವಾಗ ಕೆಲವರು ವಾಸ್ತುಪ್ರಕಾರ ಕಟ್ಟಿರುವುದಿಲ್ಲ, ಜಾಗವನ್ನು ಅಡ್ಜೆಸ್ಟ್ ಮಾಡಿ ಕಟ್ಟಿದವರೂ ಇದ್ದಾರೆ. ಅಂಥ ಮನೆಗಳಲ್ಲಿ ಅಡುಗೆ ಕೋಣೆ, ಬಾತ್‌ರೂಂ ಇವೆಲ್ಲಾ ವಾಸ್ತು ಪ್ರಕಾರ ಇರಲ್ಲ ಅಂಥ ಮನೆಗೆ ಬಾಡಿಗೆಗೆ ಹೋಗದಿರುವುದು ಒಳ್ಳೆಯದು. ನೀವು ವಾಸ್ತು ಟಿಪ್ಸ್‌ನಲ್ಲಿ ನಂಬಿಕೆ ಇದ್ದರೆ ಈ ಎಲ್ಲಾ ಅಂಶ ಗಮನಿಸುವುದು ಒಳ್ಳೆಯದು.



Click it and Unblock the Notifications
