Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮನೆಯ ಅಹ್ಲಾದಕರ ವಾತಾವರಣಕ್ಕಾಗಿ ಗಿಡಗಳನ್ನು ಬೆಳೆಸುವುದು ಹೇಗೆ?
ನಿಮ್ಮ ಮನೆಯ ಕೈತೋಟದ ಜೊತೆಗೆ ನೀವು ಮನೆಯ ಒಳ ಭಾಗದಲ್ಲಿ ಸಹ ಗಿಡಗಳನ್ನು ಬೆಳೆಯಬಹುದು. ಅಧ್ಯಯನಗಳಲ್ಲಿ ಕಂಡು ಬಂದಿರುವಂತೆ ಇವು ಮನಸ್ಸು ಮತ್ತು ದೇಹವನ್ನು ಪ್ರಶಾಂತಗೊಳಿಸುತ್ತವೆಯಂತೆ.
ಜೊತೆಗೆ ಇವು ಮನೆಯ ಒಳಭಾಗದಲ್ಲಿರುವ ಗಾಳಿಯನ್ನು ಸ್ವಚ್ಛಗೊಳಿಸುತ್ತವೆ. ಮನೆಯ ಒಳಭಾಗದಲ್ಲಿ ಗಿಡಗಳನ್ನು ಬೆಳೆಯಲು ಕೆಲವೊಂದು ಉತ್ತಮ ಸಲಹೆಗಳು ಇವೆ. ಅವುಗಳನ್ನು ನಾವು ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.
ಒಳಾಂಗಣದಲ್ಲಿ ಬೆಳೆಯುವ ಗಿಡಗಳು ನಾವು ಖುಷಿಯಾಗಿರಲು ಸಹಕರಿಸುತ್ತವೆ. ಅವುಗಳು ನಮ್ಮ ಕೋಣೆಯಲ್ಲಿರುವ ವಿಷಾನಿಲಗಳನ್ನು ಶೋಧಿಸಿ ಹೊರ ಹಾಕುತ್ತವೆ. ಮನೆಯ ಒಳಭಾಗದಲ್ಲಿ ಗಿಡಗಳನ್ನು ಬೆಳೆಯುವುದು ತುಂಬಾ ಸುಲಭ. ಇದಕ್ಕೆ ನೀರು ಹಾಕುವುದು, ಉಷ್ಣಾಂಶವನ್ನು ಕಾಪಾಡುವುದು, ಗೊಬ್ಬರ ಹಾಕುವುದು, ಕುಂಡ ಬದಲಿಸುವುದು ಮತ್ತು ಎಲೆಗಳನ್ನು ಕತ್ತರಿಸುವುದು ಇತ್ಯಾದಿ ಅತ್ಯಾವಶ್ಯಕ. ಬನ್ನಿ ಬೋಲ್ಡ್ ಸ್ಕೈ ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಮನೆಯ ಒಳಾಂಗಣದಲ್ಲಿ ಗಿಡಗಳನ್ನು ಬೆಳೆಯಲು ಸಲಹೆಗಳು ಮುಂದೆ ಓದಿ.
ಒಳಾಂಗಣದಲ್ಲಿ ಬೆಳೆಯುವ ಗಿಡಗಳಿಗೆ ಬೆಳಕು

ಮನೆಯ ಒಳಾಂಗಣದಲ್ಲಿ ಬೆಳೆಯುವ ಗಿಡಗಳಿಗೆ ಹೆಚ್ಚಿನ ಸೂರ್ಯನ ಬೆಳಕು ಬೀಳುವುದಿಲ್ಲ. ಅವುಗಳ ಬಣ್ಣ ಇದರಿಂದ ಕುಂದುತ್ತದೆ ಮತ್ತು ಅವು ಅಕ್ಕ ಪಕ್ಕ ಇರುವ ಬೆಳಕಿನೆಡೆಗೆ ಚಾಚಲು ಆರಂಭಿಸುತ್ತವೆ. ಇದರಿಂದ ಅವುಗಳು ದುರ್ಬಲವಾಗಬಹುದು ಅಥವಾ ಹೂವು ಬಿಡದೆ ಇರಬಹುದು. ಇದನ್ನು ನೀವು ಗಮನಿಸಿದರೆ, ಮೊದಲು ಅದನ್ನು ಬೆಳಕಿನಲ್ಲಿಡಿ.
ನೀರು ಹಾಕುವುದು
ಮನೆಯ ಒಳಾಂಗಣದಲ್ಲಿ ಬೆಳೆಯುವ ಗಿಡಗಳು ವಿಭಿನ್ನವಾದ ಗುಣಗಳನ್ನು ಹೊಂದಿರುತ್ತವೆ. ಒಂದು ವೇಳೆ ಈ ಗಿಡಗಳಿಗೆ ನೀರು ಹೆಚ್ಚಾದಲ್ಲಿ ಹಾಳಾಗುತ್ತವೆ. ಒಮ್ಮೆ ಈ ಗಿಡಗಳು ಹಾಳಾದರೆ ಅವು ಮತ್ತೆ ಬೆಳೆಯುವುದು ಮತ್ತು ಎಂದಿನಂತೆ ಆಗುವುದು ಕಷ್ಟ. ಬಹುಪಯೋಗಿ ಲಿಂಬೆಯನ್ನು ಕೈತೋಟದಲ್ಲಿ ಬೆಳೆಸುವುದು ಹೇಗೆ?
ಗಿಡಗಳಿಗೆ ಆರ್ದ್ರತೆ
ಬಹುತೇಕ ಎಲ್ಲಾ ಗಿಡಗಳು ಬೆಳೆಯಲು ಆರ್ದ್ರತೆಯ ಅವಶ್ಯಕತೆ ಇರುತ್ತವೆ. ಯಾವಾಗ ಅವುಗಳ ಸುತ್ತ ಮುತ್ತ ಒಣಗುವಿಕೆ ಆರಂಭವಾಗುತ್ತದೆಯೋ, ಆಗ ಅವುಗಳು ತಮ್ಮಲ್ಲಿರುವ ತೇವಾಂಶವನ್ನು ಕಳೆದುಕೊಳ್ಳುತ್ತವೆ. ಯಾವಾಗ ಗಿಡಗಳು ತಮಗೆ ಬೇಕಾದ ತೇವಾಂಶವನ್ನು ಪಡೆಯುವುದಿಲ್ಲವೋ, ಆಗ ಅವುಗಳ ಎಲೆಗಳು ಒಣಗುತ್ತವೆ ಮತ್ತು ಬಣ್ಣಗುಂದುತ್ತವೆ. ಹೂವಿನ ಮೊಗ್ಗುಗಳು ಕಂದು ಬಣ್ಣಕ್ಕೆ ತಿರುಗಿ ಒಣಗಿ ಕೆಳಗೆ ಬೀಳುತ್ತವೆ. ನಿಮ್ಮ ಬಾಲ್ಕನಿಯ ಆಂದಕ್ಕಾಗಿ ಸೊಗಸಿನ ಹೂವಿನ ಗಿಡಗಳು
ಗಿಡಗಳಿಗೆ ಉಷ್ಣಾಂಶ
ಮನೆಯ ಒಳಾಂಗಣದಲ್ಲಿ ಬೆಳೆಯುವ ಗಿಡಗಳಿಗೆ ಉಷ್ಣಾಂಶವು ಸಹ ಅಗತ್ಯ. ಅವುಗಳಿಗೆ 18 ರಿಂದ 20 ಡಿಗ್ರಿ ಉಷ್ಣಾಂಶವು ಅಗತ್ಯವಾಗಿ ಬೇಕಾಗುತ್ತವೆ. ಗರಿಷ್ಠ 32 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶವನ್ನು ಒಳಾಂಗಣದಲ್ಲಿ ಬೆಳೆಯುವ ಗಿಡಗಳು ತಡೆಯುತ್ತವೆ.



Click it and Unblock the Notifications


