ಮನೆಯ ಕೈತೋಟದಲ್ಲಿ ಸಿಹಿ ಗೆಣಸನ್ನು ಬೆಳೆಸುವುದು ಹೇಗೆ?

ಯಾವಾಗ ನೀವು ಸಾವಯವ ಕೈತೋಟದ ಬಗ್ಗೆ ಆಲೋಚಿಸುತ್ತೀರೋ, ಆಗ ನಿಮ್ಮ ಕಣ್ಣ ಮುಂದೆ ವೈವಿಧ್ಯಮಯವಾದ ತರಕಾರಿಗಳು, ಹೂವುಗಳು ಮತ್ತು ಗಿಡಗಳು ಹಾದು ಹೋಗುತ್ತವೆ. ಮೇಲಾಗಿ ನೀವು ನಗರದಲ್ಲಿ ವಾಸಿಸುತ್ತಿರುವುದರಿಂದಾಗಿ, ನಿಮ್ಮ ಮನೆಯ ಸುತ್ತ ಇರುವ ಕಾಲಿ ಜಾಗದಲ್ಲಿ ನೀವು ಗಿಡಗಳನ್ನು ಬೆಳೆಸಬಹುದು. ಇದರಲ್ಲಿ ನಿಮ್ಮ ದಿನನಿತ್ಯದ ಬಳಕೆಗೆ ಬೇಕಾಗುವ ಹಲವಾರು ತರಕಾರಿಗಳನ್ನು ಸಹ ನೀವು ಕಡಿಮೆ ಸಮಯದಲ್ಲಿ ಬೆಳೆದುಕೊಳ್ಳಬಹುದು. ಇವುಗಳನ್ನೆಲ್ಲ ಬೆಳೆಯುವ ಮೊದಲು ನಿಮಗೆ ಯಾವ ಬಗೆಯ ಕೈತೋಟ ಬೇಕೆಂಬುದನ್ನು ಮೊದಲು ನಿರ್ಧರಿಸಿಕೊಳ್ಳಿ.

ಒಂದು ವೇಳೆ ನಿಮಗೆ ತರಕಾರಿ ಕೈತೋಟ ಬೇಕಾದಲ್ಲಿ ಸಿಹಿ ಗೆಣಸನ್ನು ಸಹ ಅದರಲ್ಲಿ ಬೆಳೆಯಬಹುದು. ಇದರ ಜೊತೆಗೆ ಆಲೂಗಡ್ಡೆಗಳನು, ಸಿಹಿ ಗೆಣಸುಗಳನ್ನು ಮತ್ತು ಮಾಮೂಲಿ ಗೆಣಸನ್ನು ಸಹ ಬೆಳೆಯಬಹುದು. ಆಲೂಗಡ್ಡೆಗಳನ್ನು ವಿವಿಧ ಬಗೆಯ ಆಹಾರ ತಯಾರಿಸಲು ಬಳಸುತ್ತೇವೆ. ಹಾಗಾಗಿ ಈ ಆಲೂಗಡ್ಡೆಯ ವೈವಿಧ್ಯಮಯ ಬಗೆಗಳನ್ನು ಮನೆಯ ಕೈತೋಟದಲ್ಲಿ ಬೆಳೆಯುವುದರಿಂದ ನಿಮ್ಮ ಮನೆಯ ಅಡುಗೆಯ ಅಗತ್ಯತೆಗಳನ್ನು ನೀವೇ ಪೂರೈಸಿಕೊಳ್ಳಬಹುದು. ಸೊ೦ಪಾಗಿ ಬೆಳೆಯುತ್ತಿರುವ ಗಿಡ ಅನಿರೀಕ್ಷಿತವಾಗಿ ಬಾಡಿ ಹೋಗುವುದೇಕೆ?

Grow Sweet Potatoes In Your Garden

ಆದರೆ ಈ ಸಿಹಿ ಗೆಣಸನ್ನು ಮನೆಯಲ್ಲಿ ಹೇಗೆ ಬೆಳೆಯಬೇಕೆಂಬುದು ನಿಮ್ಮ ಸಂಶಯವಾಗಿದ್ದರೆ? ನಾವು ಈ ಮುಂದೆ ಅದಕ್ಕಾಗಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದ್ದೇವೆ ಓದಿಕೊಳ್ಳಿ. ಅವುಗಳನ್ನು ಬೆಳೆದು ಅವುಗಳ ಪ್ರಯೋಜನವನ್ನು ಪಡೆಯಿರಿ. ಇದನ್ನು ನಿಮ್ಮ ಮಕ್ಕಳು ಸಹ ಇಷ್ಟಪಡುತ್ತಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಬನ್ನಿ ಅದನ್ನು ಬೆಳೆಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ನೆಡುವ ಮೊದಲು
ಮೊದಲು ಚೆನ್ನಾಗಿ ಮಾಗಿದ ಸಿಹಿ ಗೆಣಸನ್ನು ಕತ್ತರಿಸಿಕೊಳ್ಳಿ. ಅದನ್ನು ಒಂದು ಕುಂಡದಲ್ಲಿಟ್ಟು, ಅದರ ಮೇಲೆ ತೇವಾಂಶವಿರುವ ಮಣ್ಣನ್ನು ಹಾಕಿಡಿ. ಕೆಲವೊಂದು ದಿನಗಳ ನಂತರ ಇದು ಎಲೆಗಳನ್ನು ಬಿಡುತ್ತದೆ. ಈಗ ಇದನ್ನು ನಿಮಗೆ ಬೇಕಾದ ಸ್ಥಳದಲ್ಲಿ ನೆಡಿ.

ಮಣ್ಣು
ಸಿಹಿ ಗೆಣಸನ್ನು ಬೆಳೆಯಲು ನಿಮಗೆ ಆಮ್ಲಗಳಿಂದ ಕೂಡಿದ ಮಣ್ಣಿನ ಅವಶ್ಯಕತೆ ಇರುತ್ತದೆ. ಆಗ ಈ ಗೆಣಸು ಚೆನ್ನಾಗಿ ಬೆಳೆಯುತ್ತದೆ. ಇದರಲ್ಲಿ pH ಪ್ರಮಾಣವು 5.0- 6.5 ರಷ್ಟು ಇದ್ದರೆ ಒಳ್ಳೆಯದು. ಮನೆಯಲ್ಲೇ ಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು

ಉಷ್ಣಾಂಶ
ಇದು ಗೆಣಸನ್ನು ಬೆಳೆಯಲು ಹೋದಾಗ ತುಂಬಾ ಅವಶ್ಯಕವಾದ ಅಂಶವಾಗಿದೆ. ಮಂಜು ಇಲ್ಲದ ತಿಂಗಳುಗಳಲ್ಲಿ ಗೆಣಸು ಚೆನ್ನಾಗಿ ಬೆಳೆಯುತ್ತದೆ. ಹಾಗಾಗಿ ಇದನ್ನು ಬೇಸಿಗೆಯಲ್ಲಿ ಬೆಳೆಯಿರಿ.

ಸೂರ್ಯನ ಬೆಳಕು
ಸೂರ್ಯನ ಬೆಳಕು ಸಹ ಸಿಹಿ ಗೆಣಸನ್ನು ಬೆಳೆಯಲು ತುಂಬಾ ಅವಶ್ಯಕ. ಹಾಗಾಗಿ ಇದನ್ನು ಸೂರ್ಯನ ಬೆಳಕು ಚೆನ್ನಾಗಿ ಬೀಳುವ ಕಡೆ ಮಾತ್ರ ಬೆಳೆಯಿರಿ. ಒಂದು ವೇಳೆ ಇದನ್ನು ಮನೆಯ ಒಳಗೆ ಬೆಳೆಯುವಂತಿದ್ದಲ್ಲಿ, ಇದನ್ನು ಆಗಾಗ ಬಿಸಿಲಿನಲ್ಲಿಡುವುದನ್ನು ಮರೆಯಬೇಡಿ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಗೊಬ್ಬರದ ಬಳಕೆ ಹೇಗಿರಬೇಕು?

ಸ್ಥಳಾವಕಾಶವನ್ನು ಬಿಡಿ

ಸಿಹಿಗೆಣಸುಗಳು ಬೆಳೆಯಲು ಸ್ಥಳಾವಕಾಶದ ಅಗತ್ಯವಿದೆ. ಹಾಗಾಗಿ ಗಿಡದಿಂದ ಗಿಡಕ್ಕೆ 12-18" ಜಾಗ ಬಿಡಿ. ಎಲೆಗಳು ಮತ್ತು ಕೋಂಬೆಗಳಿಗು ಸಹ ಜಾಗ ಬೇಕಾಗುತ್ತದೆ. ಇದರ ಎಲೆಗಳು ನೋಡಲು ಸುಂದರವಾಗಿರುತ್ತವೆ. ಆದರೂ ಇದನ್ನು ಕೈತೋಟದಲ್ಲಿ ಬೆಳೆಯುವಾಗ ಕೆಲವೊಂದು ಜಾಗರೂಕತೆಗಳನ್ನು ವಹಿಸಬೇಕಾಗುತ್ತದೆ. ಈ ಸಸಿಯ ಅಕ್ಕ ಪಕ್ಕ ಕಳೆಗಳು ಬೆಳೆಯದಂತೆ ನೋಡಿಕೊಳ್ಳಿ. ಜೊತೆಗೆ ಈ ಗಿಡಕ್ಕೆ ನೀರು ಅತ್ಯಾವಶ್ಯಕವಾದರು ಫಸಲು ಬರುವ 3-4 ವಾರಗಳ ಮುನ್ನ ನೀರನ್ನು ಹಾಕುವುದನ್ನು ನಿಲ್ಲಿಸಿ. ಇದಕ್ಕೆ ಕೊಕ್ಕೆ ಹುಳುಗಳ ಕಾಟ ಇರುತ್ತದೆ. ಜೊತೆಗೆ ಇಲಿಗಳು ಸಹ ಈ ಕಾಯಿಗಳನ್ನು ತಿನ್ನಲು ಮಣ್ಣನ್ನು ಸಡಿಲ ಮಾಡಿಬಿಡುತ್ತವೆ. ಹಾಗಾಗಿ ಇವುಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಿ. ಅಗತ್ಯವಾದರೆ ಕೀಟನಾಶಕಗಳನ್ನು ಬಳಸಿ. ಆಗ ನೋಡಿ ನಿಮ್ಮ ಮನೆಯಲ್ಲಿ ನೀವೇ ಬೆಳೆದ ಗೆಣಸನ್ನು ಸೇವಿಸಬಹುದು.

Story first published: Friday, February 27, 2015, 23:16 [IST]
X
Desktop Bottom Promotion