Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಲಾಂಡ್ರಿ ಸುಲಭವಾಗಿಸುವ ವಿಧಾನಗಳು
ಲಾಂಡ್ರಿ ಎನ್ನುವುದು ನಿಮಗೆ ಸರಳ ಶಬ್ದವಾಗಿ ಕಾಣಿಸಬಹುದು. ಆದಾಗ್ಯೂ ನೀವಾಗಿಯೇ ಲಾಂಡ್ರಿ ಮಾಡುತ್ತಿದ್ದರೆ ಈ ಸರಳ ಶಬ್ದವು ಎಷ್ಟು ಆವರಿಸಿದೆ ಎಂದು ನಿಮಗೆ ತಿಳಿದಿರಬಹುದು. ಇದರಲ್ಲಿ ನೆನೆಸಲು ಹಾಕುವುದು, ಒಗೆಯುವುದು, ಒಣಗಿಸುವುದು ಮತ್ತು ಮುಂದಿನ ಸುತ್ತಿಗೆ ಅದನ್ನು ತಯಾರುಗೊಳಿಸುವುದು ಒಳಗೊಂಡಿದೆ.
ನಿಮ್ಮ ಮನೆಯಲ್ಲಿ ಬೆಳೆಯುತ್ತಿರುವ ಮಕ್ಕಳಿದ್ದರೆ ಆಗ ನಿಮ್ಮ ಕೆಲಸ ಮತ್ತಷ್ಟು ಕಠಿಣವಾಗಿ ಹಲವಾರು ರೀತಿಯ ಕಲೆಗಳನ್ನು ಬಟ್ಟೆಗಳಿಂದ ತೆಗೆಯಬೇಕಾಗುತ್ತದೆ. ನೀವು ವೃತ್ತಿಪರ ಲಾಂಡ್ರಿಯವರಿಗೆ ಬಟ್ಟೆಯನ್ನು ನೀಡಬಹುದು. ಆದರೆ ಇದರ ಖರ್ಚು ತುಂಬಾ ಬರುತ್ತದೆ.

ಕೆಲವೊಂದು ಸರಳ ವಿಧಾನಗಳನ್ನು ಪಾಲಿಸಿ ಲಾಂಡ್ರಿಯನ್ನು ಸುಲಭಗೊಳಿಬಾರದೇಕೇ ಮತ್ತು ಲಾಂಡ್ರಿ ವೆಚ್ಚವನ್ನು ಉಳಿಸಬಹುದಲ್ಲವೇ? ಈ ಕೆಲಸಕ್ಕೆ ನೀವು ಸೂಕ್ತ ಸಮಯ ನೀಡಬೇಕಾಗುತ್ತದೆ. ಆದರೆ ಒಮ್ಮೆ ಪೂರ್ಣಗೊಂಡ ಬಳಿಕ ನಿಮಗೆ ಹೆಮ್ಮೆಯೆನಿಸಬಹುದು ಮತ್ತು ಮೂಟೆಗಟ್ಟಲೆ ಬಟ್ಟೆಗಳನ್ನು ಸ್ವಚ್ಛ ಮತ್ತು ಕೊಳೆರಹಿತವಾಗಿ ಮಾಡಬಹುದು.
ಇನ್ನಷ್ಟು ಲೇಖನಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾತ್ ರೂಂನಲ್ಲಿ ಅವಶ್ಯಕವಾಗಿ ಇರಬೇಕಾದ ವಸ್ತುಗಳು
ಈ ಕಠಿಣ ಕೆಲಸವನ್ನು ನಿಭಾಯಿಸಲು ಹಲವಾರು ವಿಧಾನಗಳಿವೆ ಮತ್ತು ನಿಮ್ಮ ಅಗತ್ಯತೆಗೆ ತಕ್ಕಂತೆ ಅತ್ಯುತ್ತಮ ವಿಧಾನದಲ್ಲಿ ಈ ಕೆಲಸ ಮಾಡಬಹುದು. ಇಲ್ಲಿ ನಿಮಗೆ ಹೇಳಲು ಹೊರಟಿರುವುದು ಯಾವುದೇ ರಾಕೆಟ್ ವಿಜ್ಞಾನವಲ್ಲ. ಲಾಂಡ್ರಿ ತುಂಬಾ ಸರಳ ಹಾಗೂ ಪರಿಣಾಮಕಾರಿಯಾಗಿ ಮಾಡಲು ಕೆಲವೊಂದು ಮೂಲ ವಿಧಾನಗಳಿವೆ. ಪರಿಣಾಮಕಾರಿಯಲ್ಲದ ಸರಳ ವಿಧಾನಗಳನ್ನು ಪಾಲಿಸಿ ಪ್ರಯೋಜನವೇನು?
ವಾಷಿಂಗ್ ಮೆಷಿನ್
ಲಾಂಡ್ರಿಗೆ ವಾಷಿಂಗ್ ಮೆಷಿನ್ ಬಳಸುವುದು ಉತ್ತಮ ವಿಧಾನ. ಇದು ಕೇವಲ ಸಮಯ ಉಳಿಸುವುದು ಮಾತ್ರವಲ್ಲದೆ ಒತ್ತಡ ಮತ್ತು ಸಮಸ್ಯೆ ದೂರ ಮಾಡುತ್ತದೆ. ಹಲವಾರು ಬಗೆಯ ವಾಷಿಂಗ್ ಮೆಷಿನ್ ಗಳು ಲಭ್ಯವಿದೆ. ಉದಾಹರಣೆಗೆ ಟಾಪ್ ಲೋಡ್, ಫ್ರಂಟ್ ಲೋಡ್, ಆಟೋಮೆಟಿಕ್, ಸೆಮಿ-ಆಟೋಮೆಟಿಕ್, ಸಿಂಗಲ್ ಟ್ಯೂಬ್ ಮತ್ತು ಟ್ವಿನ್ ಟ್ಯೂಬ್
ಲೇಬಲ್ ಓದಿ
ಬಟ್ಟೆಗಳಲ್ಲಿ ಇರುವ ಸಣ್ಣ ಟ್ಯಾಗ್ ನ್ನು ಯಾವಾಗಲೂ ಕಡೆಗಣಿಸಬೇಡಿ. ಅಮೂಲ್ಯವಾಗಿರುವ ನಿಮ್ಮ ಬಟ್ಟೆಯ ಬಗ್ಗೆ ಇದರಲ್ಲಿ ಮಹತ್ವದ ಮಾಹಿತಿಯಿರುತ್ತದೆ. ಇದನ್ನು ಒಮ್ಮೆ ನೋಡಲೇಬೇಕಾಗುತ್ತದೆ. ಯಾಕೆಂದರೆ ಅದರಲ್ಲಿರುವ ಒಗೆಯುವ ಸಲಹೆಗಳಿಂದ ಕೆಟ್ಟ ನೀರಿನ ತಾಪಮಾನ ಅಥವಾ ಡಿಟರ್ಜೆಂಟ್ ನಿಮ್ಮ ಬಟ್ಟೆಗಳಿಗೆ ಹಾನಿ ಉಂಟು ಮಾಡುವುದನ್ನು ತಡೆಯಬಹುದು.
ವಿಭಾಗಿಸಿ
ರಾಶಿಗಟ್ಟಲೆ ಬಟ್ಟೆಯಲ್ಲಿ ವಿವಿಧ ರೀತಿಯ ಬಟ್ಟೆಗಳಿರುತ್ತದೆ. ಅದರಲ್ಲಿ ಬಣ್ಣ, ಬಟ್ಟೆಯ ಗುಣಮಟ್ಟ ಮತ್ತು ಅದರ ವಿಧಾನಗಳಿರುತ್ತದೆ. ಸುಲಭವಾಗಿ ಲಾಂಡ್ರಿ ಮಾಡಲು ನೀವು ಬಟ್ಟೆಗಳನ್ನು ವಿಭಾಗಿಸುವುದು ತುಂಬಾ ಮುಖ್ಯ. ಇಲ್ಲಿ ಅತೀ ಮುಖ್ಯವೆಂದರೆ ಬಣ್ಣದ ಬಟ್ಟೆಗಳಿಂದ ಬಿಳಿ ಬಟ್ಟೆಗಳನ್ನು ಬೇರ್ಪಡಿಸಬೇಕು ಮತ್ತು ಗಾಢ ಬಣ್ಣದ ಬಟ್ಟೆಗಳನ್ನು ತಿಳಿ ಗಾಢ ಬಣ್ಣದ ಬಟ್ಟೆಗಳಿಂದ ಬೇರ್ಪಡಿಸಿ. ಸೂಕ್ಷ್ಮ ಬಟ್ಟೆಗಳಿಗೆ ಭಿನ್ನ ಒಗೆತ ಬೇಕಾಗುತ್ತದೆ.
ಕೊಳೆಗಳು
ಮಕ್ಕಳಿದ್ದರೆ ಆಗ ಬಟ್ಟೆಗಳಲ್ಲಿರುವ ಕೊಳೆ ತೆಗೆಯುವುದು ತುಂಬಾ ಕಠಿಣ ಕೆಲಸ. ಲಾಂಡ್ರಿ ಸರಳವಾಗಿಸಲು ಕೊಳೆ ತೆಗೆಯುವ ಕೆಲವೊಂದು ವಸ್ತುಗಳ ಪಟ್ಟಿ ಮಾಡಿ, ಕೊಳೆ ತೆಗೆಯುವ ಮೂಲ ವಸ್ತುಗಳಾದ ವಿನೇಗರ್, ಅಡುಗೆ ಸೋಡಾ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಕೊಳೆ ತೆಗೆಯುವ ಉತ್ಪನ್ನಗಳನ್ನು ಬಳಸಿ. ಹಲವಾರು ವೆಬ್ ಸೈಟ್ ಗಳು ಕೊಳೆ ತೆಗೆಯಲು ನಿಮಗೆ ಟಿಪ್ಸ್ ಮತ್ತು ಪರಿಹಾರ ನೀಡುತ್ತದೆ.
ಡಿಟರ್ಜೆಂಟ್
ಬಟ್ಟೆಗಳಿಗೆ ಲಿಕ್ವಿಡ್ ಡಿಟರ್ಜೆಂಟ್ ಬಳಸುವುದು ತುಂಬಾ ಒಳ್ಳೆಯ ವಿಧಾನವೆಂದು ಸಾಬೀತಾಗಿದೆ. ಯಾಕೆಂದರೆ ಇದರಿಂದ ಬಟ್ಟೆಯಲ್ಲಿ ಡಿಟರ್ಜೆಂಟ್ ನ ಅಂಶ ಉಳಿಯುವುದು ತಪ್ಪುತ್ತದೆ. ಲಾಂಡ್ರಿಗೆ ಒಳ್ಳೆಯ ವಿಧಾನವೆಂದರೆ ನಿಮ್ಮ ಬಟ್ಟೆಯ ರಾಶಿಯನ್ನು ಪರಿಗಣಿಸಿ ಅದಕ್ಕೆ ತಕ್ಕಂತೆ ಡಿಟರ್ಜೆಂಟ್ ಬಳಸಿ. ಹೆಚ್ಚಿನ ಡಿಟರ್ಜೆಂಟ್ ಹಾಕಿದರೆ ಅದು ಒಳ್ಳೆಯ ರೀತಿ ಬಟ್ಟೆ ಶುಚಿಗೊಳಿಸದು.
ಒಣಗಿಸುವುದು ಮತ್ತು ಇಸ್ತ್ರಿ
ಅಂತಿಮ ಹಂತದಲ್ಲಿ ಸಾಲಾಗಿ ಒಣಗಲು ಹಾಕುವುದು ಒಳ್ಳೆಯ ವಿಧಾನ. ಇದು ಕೇವಲ ಶಕ್ತಿಯನ್ನು ಉಳಿಸುವುದು ಮಾತ್ರವಲ್ಲದೆ ನಿಮ್ಮ ಬಟ್ಟೆಗಳು ತಾಜಾತನ ಪಡೆಯಲು ನೆರವಾಗುತ್ತದೆ. ಬಟ್ಟೆಗಳು ಮತ್ತೆ ಕೂಡ ಕಳೆಗುಂದಿದಂತಿದ್ದರೆ ಆಗ ನೀವು ಇಸ್ತ್ರಿ ಹಾಕಿ. ಈ ಹಂತದಲ್ಲಿ ಇಸ್ತ್ರಿ ಹಾಕುವುದು ಸುಲಭವಾಗಲಿದೆ. ಯಾಕೆಂದರೆ ಬಟ್ಟೆಗಳಿಗೆ ಸ್ಟೀಮ್ ಅಥವಾ ಸ್ಪ್ರೇ ಬೇಕಾಗಿರುವುದಿಲ್ಲ.
ಸ್ವಲ್ಪ ಪರಿಶ್ರಮ ಮತ್ತು ಬಟ್ಟೆ ಒಗೆಯುವ ಕೆಲವೊಂದು ಮೂಲ ಕ್ರಮಗಳನ್ನು ಪಾಲಿಸಿದರೆ ಆಗ ಲಾಂಡ್ರಿಯ ಒತ್ತಡ ಕಡಿಮೆ ಮಾಡಬಹುದು. ನಿಮ್ಮ ದೈನಂದಿನ ಅಗತ್ಯತೆಗೆ ತಕ್ಕಂತೆ ನೀವು ನಿಮ್ಮದೇ ಆದ ವಿಧಾನಗಳನ್ನು ಮಾಡಿಕೊಂಡು ಲಾಂಡ್ರಿ ಸುಲಭವಾಗಿಸಬಹುದು.



Click it and Unblock the Notifications











