Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಲಾಲ್‌ಬಾಗ್ ಪುಷ್ಪಪ್ರದರ್ಶನದಲ್ಲಿ ಮನಸೆಳೆದ ತರೇಹವಾರಿ ಹೂವುಗಳು
ಎಂದಿನಂತೆ ಈ ಬಾರಿಯೂ ಕೂಡ ಲಾಲ್‌ಬಾಗ್ ನ ಪುಷ್ಪ ಪ್ರದರ್ಶನ ಮನಸೆಳೆಯುವ ನೋಟವಾಗಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ದೇಶದ ಹಲವಾರು ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಈ ಪ್ರಖ್ಯಾತ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಎಂದಿನಂತೆ ಈ ಬಾರಿಯೂ ಅಸಂಖ್ಯ ಸಂಖ್ಯೆಯಲ್ಲಿ ಜನರು ಹೂಗಳ ಪ್ರದರ್ಶನವನ್ನು ಕಣ್ತುಂಬಿಕೊಂಡು ತಮ್ಮನ್ನು ಪುಳಕಿತಗೊಳಿಸುತ್ತಿದ್ದಾರೆ. ಪ್ರದರ್ಶನದ ಕೆಲವೊಂದು ಅತಿ ಸುಂದರ ನೋಟಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೀಡುತ್ತಿದ್ದು ಇತ್ತ ಕಡೆ ನೋಟ ಹರಿಸಿ.

ಪಾನ್ಸಿ
ಸುಂದರವಾದ ಪಾನ್ಸಿ ಹೂಗಳು ಲಾಲ್‌ಬಾಗ್ ಪ್ರದರ್ಶನದಲ್ಲಿ

ಮಾರಿಗೋಲ್ಡ್
ಪುಷ್ಪಪ್ರದರ್ಶನದ ಅಂದವನ್ನು ಹೆಚ್ಚಿಸಿದ ಮಾರಿಗೋಲ್ಡ್.

ಪೆಟ್ಯುನಿಯಾಸ್
ಸುಂದರವಾದ ಪೆಟ್ಯೂನಿಯಸ್ ಪುಷ್ಪ ಪ್ರದರ್ಶನದಲ್ಲಿ.

ಕೋರಲ್ ದಾಹ್ಲಿಯಾ
ಕೋರಲ್ ದಾಹ್ಲಿಯಾದ ಅಂದ ಕೂಡ ಪ್ರದರ್ಶನದ ಒಂದು ಭಾಗವಾಗಿದೆ.

ಆರೆಂಜ್ ದಾಹ್ಲಿಯಾ
ಆರೆಂಜ್ ದಾಹ್ಲಿಯಾ ಕೂಡ ಪುಷ್ಪೋದ್ಯಾನದಲ್ಲಿ ಹೆಚ್ಚಿನವರನ್ನು ಆಕರ್ಷಿಸಿದೆ.

ಮೈಸೂರು ಅರಮನೆ ಅಲಂಕಾರ
ಮೈಸೂರು ಅರಮನೆಯ ಆಕೃತಿಯಲ್ಲಿ ಪುಷ್ಪಗಳಿಂದ ತಯಾರಾದ ಸುಂದರ ರಚನೆ

ಹಳದಿ ದಾಸವಾಳ ಮತ್ತು ಮಾರಿಗೋಲ್ಡ್
ಹಳದಿ ದಾಸವಾಳ ಮತ್ತು ಮಾರಿಗೋಲ್ಡ್‌ನ ಸುಂದರ ನೋಟ

ನೇರಳೆ ಹೂವುಗಳು
ಕಣ್ಮನವನ್ನು ಆಕರ್ಷಿಸುವ ನೇರಳೆ ಹೂವುಗಳ ಸುಂದರ ನೋಟ

ಬಣ್ಣಬಣ್ಣದ ಹೂವುಗಳು
ಕಣ್ಣಿಗೆ ಮುದವನ್ನು ನೀಡುವ ಸುಂದರ ಹೂವುಗಳ ಅಲಂಕಾರ ಇದೋ ಇಲ್ಲಿ

ಸುಂದರ ಹೂವುಗಳ ನೋಟ
ಈ ಚಿತ್ರದಲ್ಲಿ ನಿಮ್ಮ ಚಿತ್ತವನ್ನಾಕರ್ಷಿಸುವ ಸುಂದರ ಹೂವುಗಳ ಸೊಬಗನ್ನು ನೋಡಬಹುದು

ಪಿಂಕ್ ದಾಹ್ಲಿಯಾ
ದಾಹ್ಲಿಯಾ ಹೂವುಗಳು ವಿಭಿನ್ನ ಬಣ್ಣದಲ್ಲಿ ಬರುತ್ತವೆ. ಅದರಲ್ಲಿ ಈ ಪಿಂಕ್ ದಾಹ್ಲಿಯಾ ಕೂಡ ಒಂದು.

ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳು
ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳ ನೋಟ ಅತ್ಯದ್ಭುತವಾಗಿದೆ.

ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳ ಚಿತ್ತಾರ
ಈ ಹೂವುಗಳ ಅಸದಳ ನೋಟ ಕಣ್ಣಿಗೆ ಮುದವನ್ನು ನೀಡಿದ್ದಂತೂ ಸುಳ್ಳಲ್ಲ.

ಲಿಲ್ಲಿ ಹೂವುಗಳು
ಲಿಲ್ಲಿ ಹೂವುಗಳ ಸೊಬಗಂತೂ ನಿಜಕ್ಕೂ ಅತ್ಯದ್ಭುತವಾಗಿತ್ತು.



Click it and Unblock the Notifications
