ಚಳಿಗಾಲದಲ್ಲೂ ಬೆಳೆಸಬಹುದಾದ 6 ರಸಭರಿತ ಹಣ್ಣುಗಳು

By Super

ಚಳಿಗಾಲವೆಂದರೆ ಕೈ ತೋಟದಲ್ಲಿ ಸಂಪೂರ್ಣ ಹೂವು ಅರಳುವ ಸಮಯ. ಇದರ ಜೊತೆಗೆ ವಿವಿಧ ಹಣ್ಣುಗಳು ತರಾವರಿ ತರಕಾರಿಗಳನ್ನು ಬೆಳೆಸಬಹುದಾದ ಸಮಯ ಇದು. ಈ ಚಳಿಗಾಲದಲ್ಲಿ ಹಣ್ಣುಗಳು ಆರೋಗ್ಯಕರ ಬೆಳೆಯುತ್ತವೆ ಹಾಗೆಯೇ ನಿಮ್ಮ ಕೈ ತೋಟದಲ್ಲಿ ಈ ಹಣ್ಣುಗಳನ್ನು ನೀವು ಬೆಳೆಸಬಹುದು.

ರಸವತ್ತಾದ ಕಿತ್ತಳೆ ಹಣ್ಣುಗಳಿಂದ ಹಿಡಿದು ರುಚಿಕರವಾದ ಕೆಂಪು ಸೇಬುಗಳ ವರೆಗೆ ಈ ಚಳಿಗಾಲದಲ್ಲಿ ನೀವು ರುಚಿಕರವಾದ ಮತ್ತು ಆರೋಗ್ಯಕರ ಹಣ್ಣುಗಳನ್ನು ಬೆಳೆಸಿ ಅವುಗಳ ರಸ ಸವಿಯಬಹುದು! ಈ ಬಾರಿ ಚಳಿಗಾಲದ ಎಂದು ಅತ್ಯುತ್ತಮ ಲಾಭವೆಂದರೆ ಈ ಎಲ್ಲಾ ಹಣ್ಣುಗಳನ್ನು ನೀವು ನಿಮ್ಮ ತೋಟದಲ್ಲಿಯೇ ಸುಲಭವಾಗಿ ಬೆಳೆಸಬಹುದು!

ಮರಗಳು ಮತ್ತು ಸಸ್ಯಗಳು ಸಂಪೂರ್ಣವಾಗಿ ಅರಳುವ ಚಳಿಗಾಲದ ಸಮಯವನ್ನು ತೋಟಗಾರಿಕೆಯಲ್ಲಿ ಪ್ರೀತಿಯಿರುವ ಅನೇಕ ಗೃಹಿಣಿಯರು ಮತ್ತು ಉದ್ಯೋಗಸ್ಥ ಮಹಿಳೆಯರು ಇಷ್ಟಪಡುತ್ತಾರೆ. ನೀವು ಚಳಿಗಾಲದಲ್ಲಿ ಹಣ್ಣುಗಳನ್ನು ನಿಮ್ಮ ತೋಟಗಳಲ್ಲಿ ಬೆಳೆಸಲು ಯೋಜನೆ ಹಾಕಿದ್ದರೆ ನೀವು ಖಂಡಿತವಾಗಿಯೂ ಅನುಸರಿಸಬೇಕಾದ ಕೆಲವು ತೋಟಗಾರಿಕೆ ಸಲಹೆಗಳು ಇಲ್ಲಿವೆ.ಈ ಚಳಿಗಾಲದ ನಿಮ್ಮ ತೋಟದಲ್ಲಿ ಬೆಳೆಯಬಹುದಾದಂತಹ ಉತ್ತಮ ಹಣ್ಣುಗಳ ಬಗ್ಗೆ ತಿಳಿಯಲು ಇಲ್ಲಿ ಓದಿ.

ದ್ರಾಕ್ಷಿ


ನಿಮ್ಮ ನೆಚ್ಚಿನ ರಸವತ್ತಾದ ದ್ರಾಕ್ಷಿ ಹಣ್ಣು ಚಳಿಗಾಲದಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತವೆ ಎಂದು ನಿಮಗೆ ತಿಳಿದಿದೆಯೇ? ನೀವು ದ್ರಾಕ್ಷಿ ಬೆಳೆಯುವ ಬೃಹತ್ ದ್ರಾಕ್ಷಿತೋಟಗಳನ್ನು ಕಂಡಿರಬಹುದು. ಅವುಗಳನ್ನು ಬೃಹತ್ ಎಸ್ಟೇಟ್ ಗಳಲ್ಲಿ ಬೆಳೆಸಲಾಗುತ್ತದೆ. ಆದರೆ ಇದೀಗ ನೀವು ಸುಲಭವಾಗಿ ನಿಮ್ಮ ತೋಟದಲ್ಲಿ ಅವುಗಳನ್ನು ಬೆಳೆಸಬಹುದು. ಇವು ಅಲಂಕಾರಿಕ ವಸ್ತುವಂತೆ ಕಾಣುತ್ತವೆ. ಮತ್ತು ನೀವು ನಿಮ್ಮ ಮನೆಯಲ್ಲಿ ಲತೆಯ (ಬಳ್ಳಿ) ಆಕೃತಿಯಲ್ಲಿ ಇವುಗಳನ್ನು ಬೆಳೆಸಬಹುದು. ನೀವು ಉತ್ತಮ ಫಲಿತಾಂಶಗಳನ್ನು ಕಾಣಲು ಈ ಹಣ್ಣಿನ ಸಸ್ಯಗಳಿಗೆ ಉತ್ತಮ ಗಾಳಿಯನ್ನು ಒದಗಿಸಬೇಕು. ಕೈತೋಟದಲ್ಲಿ ಪಪ್ಪಾಯಿಯ ಗಿಡವನ್ನು ನೆಡುವ ಸುಲಭ ಹ೦ತಗಳು

ನಿಂಬೆಹಣ್ಣುಗಳು


ತೋಟದಲ್ಲಿ ಒಂದು ನಿಂಬೆ ಮರವಿದ್ದರೆ ಅದನ್ನು ನೋಡುವುದೇ ಕಣ್ಣುಗಳಿಗೆ ಔತಣ! ಒಂದು ನಿಂಬೆ ಗಿಡವನ್ನು ಬೆಳೆಸುವುದು ಬೇಸರದ ಸಂಗತಿಯಲ್ಲ, ಮತ್ತು ಇದಕ್ಕಾಗಿ ನಿಮ್ಮ ಹೆಚ್ಚಿನ ಸಮಯವನ್ನೂ ಮೀಸಲಿಡಬೇಕಿಲ್ಲ. ಆದರೆ ಒಂದು ನಿಂಬೆ ಮರ ಬೆಳೆಯಲು ವಿಸ್ತಾರವಾದ ಜಾಗದ ಅಗತ್ಯವಿದೆ. ನಿಮ್ಮ ನಿಂಬೆ ಮರಕ್ಕೆ ಚಳಿಗಾಲದಲ್ಲಿ ಹಿಮ ಅಥವಾ ಅಧಿಕ ಶೀತಲ ವಾತಾವರಣ ತೊಂದರೆ ಕೊಡದಂತೆ ನೋಡಿಕೊಳ್ಳಿ. ಈ ವಾತಾವರಣದಿಂದ ಗಿಡಗಳು ವೇಗವಾಗಿ ಹಾಳಾಗುತ್ತವೆ. ನೀವು ಒಳಾಂಗಣದಲ್ಲಿಯೂ ನಿಂಬೆ ಮರಗಳನ್ನು ಬೆಳೆಯಬಹುದು. ಆದರೆ, ಮೊದಲು ನೀವು ನಿಂಬೆ ಮರವನ್ನು ಬೆಳೆಯುವ ವಿಧಾನಗಳನ್ನು ವಿವರವಾಗಿ ಅಧ್ಯಯನ ಮಾಡುವ ಅಗತ್ಯವಿದೆ!

ಪಪ್ಪಾಯಿ


ಪಪ್ಪಾಯಿ ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲಿ ಒಂದು. ಇದು ವಿಟಮಿನ್ ಎ ಯ ದೊಡ್ಡ ಮೂಲವಾಗಿದೆ. ಪಪ್ಪಾಯಿ ಮರ ಉಳಿದ ಎಲ್ಲಾ ಹಣ್ಣಿನ ಮರಗಳಿಗಿಂತ ಅತ್ಯಂತ ವೇಗವಾಗಿ ಬೆಳೆಯುತ್ತದೆ. ಉತ್ತಮವಾಗಿ ಪಪ್ಪಾಯಿ ಬೆಳೆಸುವುದು ಅತ್ಯಂತ ಸುಲಭ ಹಾಗೂ ಅದರ ಆರೈಕೆಗೂ ಸಹ ನಿಮ್ಮ ಸಮಯ ಹೆಚ್ಚು ಮೀಸಲಾಗಿಡಬೇಕಾಗಿಲ್ಲ. ಈ ಹಣ್ಣು ಚಳಿಗಾಲದಲ್ಲಿ ಬೆಳೆಸಬಹುದಾದರೂ ಇದರ ಬೆಳವಣಿಗೆಗೆಯ ಸಂದರ್ಭದಲ್ಲಿ ಉತ್ತಮ ಸೂರ್ಯನ ಬೆಳಕು ಹಾಗೂ ನೀರಿನ ಅಗತ್ಯವಿದೆ. ಆದ್ದರಿಂದ ನೀವು ನಿಮ್ಮ ನಿಮ್ಮ ಮನೆಯ ಹಿಂಭಾಗದಲ್ಲಿ ಅಥವಾ ತೋಟದಲ್ಲಿ ಪಪ್ಪಾಯಿ ಮರ ಬೆಳೆಸಲು ಯೋಚಿಸಿದ್ದರೆ, ಹೇರಳವಾಗಿ ಸೂರ್ಯನ ಬೆಳಕು ಲಭ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಸಿಹಿ ಕಿತ್ತಳೆ


ನೀವು ಸಿಹಿ ಕಿತ್ತಳೆ ಹಣ್ಣಿನ ಪ್ರೇಮಿಯಾಗಿದ್ದರೆ, ನಿಜವಾದ ರುಚಿಕರವಾದ, ರಸವತ್ತಾದ ಕಿತ್ತಳೆ ಹಣ್ಣುಗಳನ್ನು ಆಸ್ವಾದಿಸಲು ಇದು ಈ ವರ್ಷದ ಸರಿಯಾದ ಸಮಯ. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ಸರಿಯಾದ ಮಣ್ಣಿನ ಮಿಶ್ರಣ ಮತ್ತು ನೀರನ್ನು ಒದಗಿಸುವುದು. ಇದರ ಉತ್ತಮ ಬೆಳವಣಿಗೆಗೆ ಗೊಬ್ಬರವನ್ನೂ ಸೇರಿಸಿ. ಸರಿಯಾಗಿ ಈ ವಿಧಾನವನ್ನು ಅನುಸರಿಸಿದರೆ ನಿಮ್ಮ ತೋಟದಲ್ಲಿ ಒಂದು ಸುಂದರ ಕಿತ್ತಳೆ ಮರವನ್ನು ಬೆಳೆಸಲು ಸಾಧ್ಯ.

ದಾಳಿಂಬೆ


ದಾಳಿಂಬೆ ಅತ್ಯಂತ ಆರೋಗ್ಯಕರ ಹಣ್ಣು. ಆದರೆ ಮನೆಯಲ್ಲಿ ಒಂದು ದಾಳಿಂಬೆ ಮರವನ್ನು ಬೆಳೆಸುವುದು ಅಷ್ಟು ಸುಲಭದ ಸಂಗತಿಯಲ್ಲ. ನೀವು ಸಾಕಷ್ಟು ಸಮಯ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿದ್ದರೆ, ಒಮ್ಮೆ ಈ ಗಿಡವನ್ನು ಬೆಳೆಸಲು ಪ್ರಯತ್ನಿಸಬಹುದು! ದಾಳಿಂಬೆ ಮರಗಳಿಗೆ ಅತ್ಯಂತ ಎಚ್ಚರಿಕೆ ಮತ್ತು ಗಮನ ಅಗತ್ಯ. ಚಳಿಗಾಲದಲ್ಲಿ ಕೋಮಲ ಹೂಗಳ ರಕ್ಷಣೆ ಹೇಗೆ

ಸ್ಟ್ರಾಬೆರಿ


ಸಾಮಾನ್ಯವಾಗಿ ನಾವೆಲ್ಲರೂ ಸ್ಟ್ರಾಬೆರಿಯನ್ನು ಇಷ್ಟಪಡುತ್ತೇವೆ. ಸಾಮಾನ್ಯವಲ್ಲದ ಈ ಹಣ್ಣು ಎಲ್ಲಾ ಸಮಯದಲ್ಲಿಯೂ ಹತ್ತಿರದ ಅಂಗಡಿ ಅಥವಾ ಮಾರುಕಟ್ಟೆಯಲ್ಲಿ ದೊರೆಯುವುದು ಕಷ್ಟ. ಹಾಗಿರುವಾಗ ನಿಮ್ಮ ಮನೆಯಲ್ಲಿಯೇ ಈ ಸ್ಟ್ರಾಬೆರಿ ಹಣ್ಣುಗಳನ್ನು ಬೆಳೆಸಲು ಏಕೆ ಪ್ರಯತ್ನಿಸಬಾರದು? ಇದರ ಆರೋಗ್ಯಕರ ಬೆಳವಣಿಗೆಗೆ ಶೀತ ಹವಾಮಾನದ ಅಗತ್ಯವಿದೆ. ಆದ್ದರಿಂದ ಇಂತಹ ವಾತಾವರಣ ಹಾಗೂ ಸ್ಥಳ ನಿಮ್ಮಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಜೊತೆಗೆ ಸ್ಟ್ರಾಬೆರಿ ಹಣ್ಣುಗಳು ಬೆಳೆಯಲು ಸೂರ್ಯನ ಶಾಖದ ಅಗತ್ಯವಿದೆ. ಈ ಸಾಮಾನ್ಯವಾದ ವಿಧಾನಗಳ ಮೂಲಕ ನಿಮಗಿಷ್ಟವಾದ ಹಣ್ಣುಗಳನ್ನು ನಿಮ್ಮ ಪುಟ್ಟ ತೋಟಗಳಲ್ಲಿಯೂ ಬೆಳೆಸಬಹುದು.

Story first published: Tuesday, November 4, 2014, 23:03 [IST]
X
Desktop Bottom Promotion