ಗಿಡಗಳನ್ನು ಶಿಲೀಂಧ್ರಗಳಿಂದ ರಕ್ಷಿಸಿ

By Poornima Heggade

ನೀವು ಹೂದೋಟ ಮಾಡುವ ಆಸಕ್ತಿ ಹೊಂದಿದವರಾದರೆ ನಿಮ್ಮ ಶತ್ರುಗಳ ಪಟ್ಟಿಯಲ್ಲಿ ಶಿಲಿಂಧ್ರಗಳು ಬಹಳ ಮುಖ್ಯ ವಾಗಿವಾಗಿರುತ್ತವೆ. ಶಿಲಿಂಧ್ರ ಎಲ್ಲಾ ಕಡೆ ತುಂಬಿಕೊಂಡು ಸಮಸ್ಯೆಗಳ ನಡುವೆ ನೀವಿದ್ದಾಗ ಅದರಿಂದ ಹೊರಬರುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಲು ಆರಂಭವಾಗುತ್ತದೆ. ಯಾವುದೇ ಗಿಡ ಶಿಲಿಂಧ್ರಗಳಿಂದ ಸುರಕ್ಷಿತವಲ್ಲ. ಅದು ಹೂವಿನ ಗಿಡಗಳೇ ಆಗಿರಲಿ, ಸೌಂದರ್ಯಕ್ಕೆ ಇಟ್ಟ ಗಿಡಗಳೇ ಆಗಿರಲಿ ಎಲ್ಲವನ್ನೂ ಸರಿಯಾಗಿ ಗಮನವಿಟ್ಟು ನೋಡಿಕೊಳ್ಳುವುದು ಅಗತ್ಯ. ಒಂದು ಗಿಡದ ಮೇಲೆ ಇರುವ ಶಿಲಿಂಧ್ರ ಬೇರೊಂದು ಗಿಡಕ್ಕೆ ಹರಡಲೇ ಬೇಂಕೆಂಬ ನಿಯಮವಿಲ್ಲ.

ನಿಮ್ಮ ಗಿಡಗಳು ಶಿಲಿಂಧ್ರಗಳಿಂದ ಪ್ರಭಾವಿತವಾಗಿವೆಯೇ ಎಂದು ನೊಡಬೇಕಾದರೆ ನೀವು ಕೆಲವೊಂದು ಚಟುವಟಿಕೆಗಳನ್ನು ಮಾಡಬೇಕಾಗುತ್ತದೆ. ಬೂದು ಅಥವಾ ಬಿಳಿ ಬಣ್ಣದ ಹುಡಿ ಕಂಡು ಬಂದರೆ ನೀವು ಹೆಚ್ಚಿನ ಕಾಳಜಿ ವಹಿಸಬೇಕೆಂದು ಅರ್ಥ. ಶಿಲೀಂಧ್ರಗಳ ದಾಳಿ ಹೆಚ್ಚಾದರೆ ಮೊದಲಿಗೆ ಎಲೆಗಳು ಹಳದಿ ಬಣ್ಣಕ್ಕೆ ಬದಲಾಗುತ್ತವೆ. ಇಂತಹ ಸಮಸ್ಯೆಗಳಿಂದ ಹೊರಬರಬೇಕಾದರೆ ಹೂದೋಟ ಮಾಡುವವರ ಕೆಲವು ಸಲಹೆಗಳು ಬಹಳ ಮುಖ್ಯ. ನೀವು ಗಿಡಗಳನ್ನು ಪ್ರೀತಿಸುವವರಾದರೆ ಇಂತಹ ಸಮಸ್ಯೆಗಳು ಎದುರಾದರೆ ಕಾಳಜಿಯಾಗುವುದು ಬಹಳ ಸಹಜ. ಹೀಗಾಗಿ ಸಮಸ್ಯೆ ಎದುರಾಗುವ ಮುನ್ನ ಕಾಳಜಿ ವಹಿಸುವುದು ಬಹಳ ಅಗತ್ಯ. ಕಾಳಜಿ ಹೇಗೆ ವಹಿಸಬೇಕು ಎಂಬ ಬಗ್ಗೆ ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.

Getting rid of fungi in vegetable gardens

1. ಕ್ರಿಮಿನಾಶಕಗಳು: ಶಿಲಿಂಧ್ರಗಳಿಂದ ದೂರವಿರಬೇಕಾದರೆ ಕ್ರಿಮಿನಾಶಕಗಳ ಸಿಂಪಡನೆ ಬಹಳ ಮುಖ್ಯ. ತರಕಾರಿ ಗಿಡಗಳ ಮೇಲಿನ ಶಿಲಿಂಧ್ರಗಳು ತರಕಾರಿಗಳ ತಾಜಾತನಕ್ಕೆ ಮಾರಕ. ಅದನ್ನು ಹೋಗಲಾಡಿಸಲು ಕ್ರಿಮಿನಾಶಕಗಳ ಸಿಂಪಡನೆ ಬಹಳ ಅಗತ್ಯ. ಒಂದು ಚಮಚದಷ್ಟು ಸೋಪಿನ ಹುಡಿ ಮತ್ತು ಒಂದು ಜಗ್ ನೀರು ತೆಗೆದುಕೊಳ್ಳಿ ಇದನ್ನು ನಿಮ್ಮ ಗಿಡಗಳ ಮೇಲೆ ಸಿಂಪಡನೆ ಮಾಡಿ.

2. ಗಾರ್ಲಿಕ್ ಮಾಜಿಕ್: ಗಾರ್ಲಿಕ್ ನಲ್ಲಿ ಇರುವ ವಿಶೇಷತೆಗಳು ಅಪಾರ. ಹಾಗೂ ಗಾರ್ಡನ್ ಆರೋಗ್ಯದಲ್ಲಿ ಇದರ ಉಪಯೋಗ ಮತ್ತೂ ಹೆಚ್ಚು. ಗಾರ್ಲಿಕ್ ಅನ್ನು ಶಿಲೀಧ್ರ ನಿವಾರಕವಾಗಿಯೂ ಬಳಸಬಹುದು. ಗಾರ್ಲಿಕ್ ಬಲ್ಬ್ಸ್ ಮತ್ತು ನೀರನ್ನು ಬೆರೆಸಿ ಇದನ್ನು ಗಿಡಗಳ ಮೇಲೆ ಸಿಂಪಡನೆ ಮಾಡಿ. ಅಚ್ಚರಿಯ ಪರಿಣಾಮ ನೀವು ನೋಡುತ್ತೀರಿ. ತರಕಾರಿ ಗಿಡಗಳಿಗೆ ಈ ಔಷಧ ಬಹಳ ಸೂಕ್ತ.

3. ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾವೂ ಶಿಲೀಂಧ್ರ ನಿವಾರಕವಾಗಿ ಬಹಳ ಉತ್ತಮ ಕಾರ್ಯ ಮಾಡುತ್ತದೆ. ಹೆಚ್ಚು ಪ್ರಮಾಣದ ನೀರು, ಸ್ವಲ್ಪ ಬೇಕಿಂಗ್ ಪೌಡರ್ ಮತ್ತು ಪಾತ್ರೆ ತೊಳೆಯುವ ಮಾರ್ಜಕವನ್ನು ಬಳಸಿ ಕಲಕಿ. ಇದು ಬಹಳ ಸುಲಭವಾದ ಹೂದೋಟ ನಿರ್ವಹಣಾ ಯೋಜನೆ. ವಾರಕ್ಕೊಮ್ಮೆ ಇದನ್ನು ಮಾಡಿದರೆ ಶಿಲೀಂಧ್ರಗಳಿಂದ ದೂರವಿರಬಹುದು.

4. ಬಹಳ ಉತ್ತಮ ಮಿಶ್ರಣ: ಹೆಚ್ಚಿನ ಜನರಿಗೆ ತಿಳಿದಿರದ ಆದರೆ ಆಷ್ಟೇ ಪರಿಣಾಮಕಾರಿಯಾದ ಒಂದು ಮಿಶ್ರಣ ಹೂದೋಟಕ್ಕೆ ಬಳಸಬಹುದು. ಅದೆಂದರೆ ಗಾರ್ಲಿಕ್ ಮತ್ತು ಕಾಳುಮೆಣಸಿನ ಹುಡಿ. ಗಾರ್ಲಿಕ್, ಮಾರ್ಜಕ, ನೀರು ಮತ್ತು ಕಾಳುಮೆಣಸಿನ ಹುಡಿ ಉತ್ತಮ ಔಷಧ. ಇದನ್ನು ನಿಯಮಿತವಾಗಿ ಸಿಂಪಡನೆ ಮಾಡಿದಿರೆಂದರೆ ಹೂದೋಟ ಬಹಳ ಆರೋಗ್ಯಕರವಾಗಿರುತ್ತದೆ.

5. ಸಲ್ಫರ್ : ಶಿಲಿಂಧ್ರಗಳಿಂದ ಮುಕ್ತಿ ಹೊಂದಲು ಸಲ್ಫರ್ ಉತ್ಪನ್ನಗಳೂ ಬಹಳ ಮುಖ್ಯ ಪಾತ್ರವಹಿಸುತ್ತವೆ. ಆದರೆ ನೀವಿದನ್ನು ನಿಯಂತ್ರಕವನ್ನಾಗಿ ಬಳಸಬೇಕು. ಒಮ್ಮೆ ಶಿಲೀಂಧ್ರಗಳ ದಾಳಿ ಆದಮೇಲೆ ಬಳಸಿದರೆ ಪರಿಣಾಮ ಕಡಿಮೆ ಇರುತ್ತದೆ. ಇನ್ನೊಂದು ಮುಖ್ಯ ಅಂಶವೆಂದರೆ ಸಲ್ಫರ್ ಸಿಂಪಡನೆ ಮಾಡುವಾಗ ಉಷ್ಣತೆ 90 ಫ್ಯಾರನ್ ಹೀಟ್ ಗಿಂತ ಜಾಸ್ತಿ ಇರಬಾರದು.

6. ಎಣ್ಣೆ ಚಿಕಿತ್ಸೆ: ಎಣ್ಣೆ ಸಿಂಪಡನೆ ಮಾಡುವ ಮೂಲಕವೂ ಶಿಲೀಂಧ್ರಗಳನ್ನು ನಿಯಂತ್ರಣ ಮಾಡಬಹುದು. ಬೇವಿನೆಣ್ಣೆ ಅಥವಾ ಜೊಜೊಬಾ ಎಣ್ಣೆ ಸೂಕ್ತ. ಆದರೆ ಇದನ್ನು ಕೂಡ ಹೆಚ್ಚಿನ ಉಷ್ಣತೆಯಲ್ಲಿ ಲೇಪಿಸಬಾರದು ಅಥವಾ ಸಿಂಪಡನೆ ಮಾಡಬಾರದು.

ನೀವು ಒಬ್ಬ ಆಸಕ್ತ ಹೂದೋಟ ಪ್ರೇಮಿಯಾದರೆ ನಿಮ್ಮ ಗಿಡಗಳು ಹಾಳಾಗುವುದು ನಿಮಗೆ ಬಹಳ ನೋವಾಗುತ್ತದೆ. ಹಸಿರು ನಿಮ್ಮ ಉಸಿರಾಗಿರುತ್ತದೆ. ನಿಮ್ಮ ಪ್ರೀತಿಯ ಹೂಗಿಡಗಳಿಗೂ ಜೀವವಿದೆ. ಅದನ್ನು ಕಾಪಾಡುವುದು ನಿಮ್ಮ ಕರ್ತವ್ಯ ಎಂಬುದನ್ನು ಮರೆಯದಿರಿ.

Story first published: Wednesday, January 1, 2014, 2:02 [IST]
X
Desktop Bottom Promotion