ಚಳಿಗಾಲಕ್ಕೆ ಬೇಲಿ ತೋಟಗಾರಿಕೆಯ ವಿಧಾನಗಳು

By Hemanth P

ತೋಟಗಾರಿಕೆ ಮಾಡುವುದರಿಂದ ನೀವು ಕೆಲವೊಂದು ಸೃಜನಾತ್ಮಕ ಯೋಜನೆಗಳನ್ನು ಹಾಕಿಕೊಂಡು ಆ ಪ್ರದೇಶವನ್ನು ತುಂಬಾ ಸುಂದರ ಮತ್ತು ಆಕರ್ಷಕವಾಗಿಸಬಹುದು. ಚಳಿಗಾಲದಲ್ಲಿ ನಿಮ್ಮ ತೋಟ ತುಂಬಾ ವಿಶೇಷವಾಗಿ ಕಾಣುವಂತಾಗಲು ಕೆಲವೊಂದು ವಿನೂತನ ಪರಿಕಲ್ಪನೆಗಳಿವೆ. ಬೇಲಿ ತೋಟಗಾರಿಕೆ ಇದರಲ್ಲಿ ಒಂದಾಗಿದೆ. ಬೇಲಿಯಿಂದಾಗಿ ನಿಮ್ಮ ತೋಟವನ್ನು ಮತ್ತೊಂದು ಪ್ರದೇಶದಿಂದ ಬೇರ್ಪಡಿಸಬಹುದು. ಬೇಲಿ ತೋಟಗಾರಿಕೆಯು ನಿಮ್ಮ ತೋಟಕ್ಕೆ ಹೊಸ ಮೆರಗಿನೊಂದಿಗೆ ಅದನ್ನು ಮೃದುಗೊಳಿಸಲು ಮತ್ತು ರೂಪ ಬದಲಾಯಿಸಲು ನೆರವಾಗಲಿದೆ. ನಿಮ್ಮ ಭೂದೃಶ್ಯ ವಿನ್ಯಾಸದ ಯೋಜನೆಗೆ ನೀವು ಸ್ವಲ್ಪ ಸಮಯ ಮತ್ತು ಶ್ರಮ ವಹಿಸಿದರೆ ಆಗ ಬೇಲಿ ತೋಟಗಾರಿಕೆಯನ್ನು ತುಂಬಾ ಆಕರ್ಷಕವಾಗಿಸಬಹುದು. ತೋಟಗಾರಿಕೆಯನ್ನು ವಿನ್ಯಾಸಗೊಳಿಸಲು ಬಯಸುವವರಿಗೆ ಬೇಲಿ ತೋಟಗಾರಿಕೆ ತುಂಬಾ ಜನಪ್ರಿಯ ಆಯ್ಕೆ.

ಬೇಲಿ ತೋಟಗಾರಿಕೆಯು ಭೂದೃಶ್ಯದ ಸೌಂದರ್ಯವನ್ನು ನಿಮ್ಮ ಬೇಲಿಗಳ ತನಕ ವಿಸ್ತರಿಸುತ್ತದೆ. ನಿಮ್ಮ ತೋಟಗಾರಿಕೆಗೆ ಒಂದು ಮಿತಿಯ ಜಾಗ ಮಾತ್ರವಿದ್ದರೆ ಆಗ ನಿಮ್ಮ ಭೂದೃಶ್ಯಕ್ಕೆ ಒಂದು ಬೇಲಿ ಅಳವಡಿಸಿ. ಇದು ನಿಮ್ಮ ತೋಟಗಾರಿಕೆಯನ್ನು ತುಂಬಾ ಸುಂದರ ಮತ್ತು ಆಕರ್ಷಕವಾಗಿಸುತ್ತದೆ. ಬೇಲಿ ತೋಟಗಾರಿಕೆಯ ಮತ್ತೊಂದು ಉಪಯೋಗವೆಂದರೆ ಇದು ನಿಮ್ಮ ಬೇಲಿಯನ್ನು ತುಂಬಾ ಉತ್ಪನ್ನಕರ ರೀತಿಯಲ್ಲಿ ಬಳಸಿ ತೋಟಗಾರಿಕೆಯ ಜಾಗವನ್ನು ಉಳಿಸುತ್ತದೆ.

Fence Gardening Ideas For Winter

ಚಳಿಗಾಲದಲ್ಲಿ ನೀವು ಮಾಡಬಹುದಾದ ಬೇಲಿ ತೋಟಗಾರಿಕೆಯ ಕೆಲವೊಂದು ವಿಧಾನಗಳು ಇಲ್ಲಿವೆ. ಇದರಲ್ಲಿ ನಿಮ್ಮ ತೋಟಗಾರಿಕೆಯ ಜಾಗವನ್ನು ಅನುಸರಿಸಿ ಯಾವುದು ಸರಿಹೊಂದುತ್ತದೆ ಅದನ್ನು ಆಯ್ಕೆ ಮಾಡಬಹುದು.

ಮರದ ಬೇಲಿ
ಮರದ ಬೇಲಿ ಹಾಕುವುದು ಬೇಲಿ ತೋಟಗಾರಿಕೆಯ ಅತ್ಯಂತ ಸಾಮಾನ್ಯ ಮತ್ತು ಸಾಂಪ್ರದಾಯಿಕ ವಿಧಾನ. ಇದು ತುಂಬಾ ಅಗ್ಗ ಮತ್ತು ಸರಳವಾಗಿರುವ ಕಾರಣ ಇದು ಚಳಿಗಾಲದ ತೋಟಗಾರಿಕೆಯ ಫೇವರಿಟ್ ಟಿಪ್ಸ್. ನಿಮಗೆ ಹಿಂಭಾಗದಲ್ಲಿ ಅರಣ್ಯ ಮಾಡಬೇಕೆಂದಿದ್ದರೆ ಮರದ ಬೇಲಿ ಒಳ್ಳೆಯ ಆಯ್ಕೆ.

ಚೈನ್ ಲಿಂಕ್ ಫೆನ್ಸಿಂಗ್
ವೆಚ್ಚ ಮತ್ತು ಶ್ರಮವನ್ನು ಪರಿಗಣಿಸಿದರೆ ಚೈನ್ ಲಿಂಕ್ ಫೆನ್ಸಿಂಗ್ ಒಂದು ಅತ್ಯುತ್ತಮ ಆಯ್ಕೆ. ಇದರಿಂದ ನಿಮ್ಮ ಬೇಲಿ ತೋಟಗಾರಿಕೆ ತುಂಬಾ ವಿಶೇಷ ಹಾಗೂ ಆಕರ್ಷಕವಾಗಿ ಕಾಣಿಸುತ್ತದೆ. ಚಳಿಗಾಲದ ಪುಷ್ಪ ಸಸ್ಯಗಳನ್ನು ವಿಸ್ತರಿಸಲು ಚೈನ್ ಲಿಂಕ್ ಫೆನ್ಸಿಂಗ್ ನ್ನು ಒಂದು ಅತ್ಯುತ್ತಮ ಚಳಿಗಾಲದ ತೋಟಗಾರಿಕೆ ಟಿಪ್ಸ್ ಎಂದು ಪರಿಗಣಿಸಲಾಗಿದೆ.

ಗೂಟದ ಶೈಲಿಯ ಬೇಲಿ
ತೋಟಗಾರಿಕೆ ಇಷ್ಟಪಡುವವರಿಗೆ ಗೂಟದ ಶೈಲಿಯ ಬೇಲಿ ಎಲ್ಲಾ ಸಮಯದಲ್ಲೂ ಫೇವರಿಟ್. ಬಿಳಿ ಗೂಟದ ಬೇಲಿ ಕಾಟೆಜ್ ಶೈಲಿ ಯ ಮನೆ ಹೊಂದಿರುವ ತೋಟಗಳಿಗೆ ತುಂಬಾ ಚೆನ್ನಾಗಿ ಕಾಣುತ್ತದೆ. ಗೂಟದ ಶೈಲಿಯ ಬೇಲಿಯ ಸಮೀಪ ಚಳಿಗಾಲದಲ್ಲಿ ಅರಳುವ ಹೂಗಳ ಗಿಡಗಳನ್ನು ನೆಡುವುದು ಚಳಿಗಾಲದ ತೋಟಗಾರಿಕೆಯ ಜನಪ್ರಿಯ ಟಿಪ್ಸ್.

ಪಿವಿಸಿ ವಿನೈಲ್ ಬೇಲಿ
ಪಿವಿಸಿ ವಿನೈಲ್ ಬೇಲಿಯು ಬೇಲಿ ತೋಟಗಾರಿಕೆಯಲ್ಲಿ ಇತ್ತೀಚೆಗೆ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಒಳ್ಳೆಯ ಶೈಲಿಯ ತೋಟಗಾರಿಕೆ ಇಷ್ಟಪಡುವವರು ಅದರ ದೀರ್ಘ ಬಾಳಿಕೆ ಮತ್ತು ಬಾಳಿಕೆ ಬಯಸುತ್ತಾರೆ. ಇದರ ನಿರ್ವಹಣೆ ದುಬಾರಿಯಲ್ಲ ಮತ್ತು ತೋಟದೊಳಗೆ ನಿಮ್ಮ ಸಾಕುಪ್ರಾಣಿ ನುಗ್ಗದಂತೆ ತಡೆಯಬಹುದು.

ಗಿಡಗಳ ಬೇಲಿ
ನಿಮ್ಮ ತೋಟದಲ್ಲಿ ಹಸಿರು ಕಾಣಿಸಬೇಕೆಂದಾದರೆ ಆಗ ನಿಮಗೆ ಗಿಡಗಳ ಬೇಲಿ ಅತ್ಯುತ್ತಮ ಆಯ್ಕೆ. ಇದರಿಂದ ನಿಮ್ಮ ತೋಟಕ್ಕೆ ಪ್ರಾಕೃತಿಕ ಮೆರಗು ಸಿಗುತ್ತದೆ. ಚಳಿಗಾಲದ ಕೆಲವೊಂದು ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವುದು ಬೇಲಿ ತೋಟಗಾರಿಕೆಗೆ ಚಳಿಗಾಲದ ತೋಟಗಾರಿಕೆಯ ಒಳ್ಳೆಯ ಟಿಪ್ಸ್

ಬಿದಿರಿನ ಬೇಲಿ
ಬಿದಿರಿನ ಬೇಲಿಯನ್ನು ತೋಟಗಾರಿಕೆ ಇಷ್ಟಪಡುವ ಪ್ರತಿಯೊಬ್ಬರು ಬಳಸುತ್ತಾರೆ. ಹೆಚ್ಚಿನ ಸುರಕ್ಷತೆಯ ಸಮಸ್ಯೆಯಿಲ್ಲದಿದ್ದರೆ ಇದು ಸೂಕ್ತ. ದೊಡ್ಡ ಬಿದಿರುವ ಇದ್ದರೆ ಅದನ್ನು ಅಡ್ಡವಾಗಿ ಕಟ್ಟಿ ಅದರಲ್ಲಿ ಕೆಲವೊಂದು ಸಣ್ಣ ಸಸ್ಯಗಳನ್ನು ನೆಡಬಹುದು.

ಲೋಹದ ಬೇಲಿ
ದೊಡ್ಡ ಮರಗಳನ್ನು ಆವರಿಸುವಂತಹ ಸಂಪೂರ್ಣ ಬೇಲಿಯ ಬಗ್ಗೆ ನೀವು ಚಿಂತಿಸುತ್ತಿದ್ದರೆ ಆಗ ನೀವು ಲೋಹದ ಬೇಲಿಯನ್ನು ಪರಿಶೀಲಿಸಬಹುದು. ಲೋಹದ ಬೇಲಿಗಳು ತುಂಬಾ ದೀರ್ಘ ಬಾಳಿಕೆ ಬರುತ್ತದೆ ಮತ್ತು ಬಲಿಷ್ಠವಾಗಿರುತ್ತದೆ. ಲೋಹದ ಬೇಲಿಗಳ ಬಾಳಿಕೆ ಮತ್ತು ಅದನ್ನು ನಿರ್ವಹಿಸುವುದು ಸುಲಭವಾಗಿರುವ ಕಾರಣ ಇದು ಬೇಲಿ ತೋಟಗಾರಿಕೆಗೆ ಒಳ್ಳೆಯ ಆಯ್ಕೆ.

ಕೋಳಿ ತಂತಿ ಬೇಲಿ
ಬೇಲಿ ತೋಟಗಾರಿಕೆಗೆ ತುಂಬಾ ಒಳ್ಳೆಯ ಆಯ್ಕೆಯನ್ನು ಹುಡುಕುತ್ತಿದ್ದರೆ ಆಗ ನಿಮಗೆ ಕೋಳಿ ತಂತಿ ಬೇಲಿ ತುಂಬಾ ಒಳ್ಳೆಯ ಆಯ್ಕೆ. ಕೋಳಿ ತಂತಿ ಬೇಲಿಯು ವಿಭಿನ್ನ ಉದ್ದ ಹಾಗೂ ವಿವಿಧ ಗಾತ್ರದೊಂದಿಗೆ ಬರುತ್ತದೆ. ಇದರಿಂದ ನಿಮಗೆ ಇಷ್ಟಬಂದಂತೆ ಬೇಲಿ ತಯಾರಿಸಬಹುದು.

ಅಲ್ಯೂಮಿನಿಯಂ ಬೇಲಿ
ಅಲ್ಯೂಮಿನಿಯಂ ಬೇಲಿ ಕಡಿಮೆ ಖರ್ಚಿನಿಂದಾಗಿ ಇಂದು ಹೆಚ್ಚು ಜನಪ್ರಿಯವಾಗುತ್ತಿದೆ. ಬೇಲಿಯ ಬದಿಯಲ್ಲಿ ನೀವು ಚಳಿಗಾಲದ ಸ್ನೇಹಿ ಗಿಡಗಳನ್ನು ಬೆಳೆಸಬಹುದು. ದೊಡ್ಡ ಗಾತ್ರದ ಮರಗಳನ್ನು ಬೇಲಿಯ ಸುತ್ತ ಬೆಳೆಸುವುದು ಚಳಿಗಾಲದ ತೋಟಗಾರಿಕೆಗೆ ಒಳ್ಳೆಯ ಟಿಪ್ಸ್.

Story first published: Sunday, December 15, 2013, 2:05 [IST]
X
Desktop Bottom Promotion