Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಎರಡು ಉಪಾಯ ಮಾಡಿದ್ರೆ ಬೆನ್ನು ನೋವು-ಮೂಳೆ ನೋವು ಥಟ್ ಅಂತ ಮಾಯವಾಗುತ್ತೆ!
ಇತ್ತೀಚಿಗೆ ಬೆನ್ನು ನೋವು ಹಾಗೆ ಮೂಳೆ ನೋವಿನಂತಹ ಅನಾರೋಗ್ಯ ಸಮಸ್ಯೆಗಳು ಎಲ್ಲರನ್ನು ಕಾಡುತ್ತವೆ. ಕಚೇರಿ ಕೆಲಸ, ಕೃಷಿ ಕೆಲಸ ಹೀಗೆ ಯಾವುದೇ ಕೆಲಸ ಮಾಡುತ್ತಿದ್ದರೂ ಕೂಡ ಅವರಿಗೆ ಈ ಬೆನ್ನು ನೋವು, ಹಾಗೆ ಮೂಳೆ ನೋವಿನ ಸಮಸ್ಯೆಗಳು ಇರುವುದು ನೋಡಬಹುದು. ಆದ್ರೆ ಹಲವರು ಆಸ್ಪತ್ರೆಯ ಔಷಧಿಗಳ ಬಳಸಿದರೂ ಕೂಡ ಕಡಿಮೆಯಾಗದೆ ಹಳ್ಳಿ ಔಷಧಿಗಳನ್ನು ಸಹ ಬಳಸುವುದು ನೋಡಬಹುದು.
ಹಾಗೆ ಬೆನ್ನು ನೋವು ಮೂಳೆ ನೋವಿದ್ದರೆ ಮನೆಯಲ್ಲಿ ಕೆಲಸ ಮಾಡುವುದು ಸಹ ಕಷ್ಟವಾಗುತ್ತೆ. ಹಾಗೆ ಗೃಹಿಣಿಯರು ಸಹ ನೋವು ಅನುಭವಿಸುವುದು ನೋಡಬಹುದು. ಆದ್ರೆ ಮನೆಯಲ್ಲಿಯೇ ಈ ನೋವುಗಳಿಗೆ ಮದ್ದು ಮಾಡಿಕೊಳ್ಳಬಹುದು. ನಾವಿಂದು ಮನೆಯಲ್ಲಿ ಈ ನೋವುಗಳ ಶಮನ ಮಾಡುವಂತಹ ಹಾಲಿನ ಮಿಶ್ರಣ ಮಾಡಿ ಕುಡಿಯುವ ಕುರಿತು ತಿಳಿಯೋಣ.

ಹಾಲು ಹಾಗೂ ಜೇನು ತುಪ್ಪ ಬಳಸಿ ಮಾಡುವಂತಹ ಈ ಮಿಶ್ರಣವು ನಿಮ್ಮ ಬೆನ್ನು ನೋವಿಗೆ ಪರಿಹಾರ ನೀಡಲಿದೆ. ಇದಕ್ಕೆ ಹೆಚ್ಚು ವಸ್ತುಗಳು ಹಾಗೆ ಕಡಿಮೆ ಸಮಯದಲ್ಲಿ ಮಾಡಿಕೊಳ್ಳಬಹುದು. ಹಾಗಾದ್ರೆ ಬೆನ್ನು ನೋವು, ಮೂಳೆ ನೋವು ನಿವಾರಿಸುವ ಎರಡು ರೀತಿಯ ಮಿಶ್ರಣವನ್ನು ನಾವಿಂದು ತಿಳಿದುಕೊಳ್ಳೋಣ.
ಬೆನ್ನುನೋವಿಗೆ ಸುಲಭ ಪರಿಹಾರದ ಔಷಧಿ ಮಾಡಲು ಬೇಕಾಗುವ ವಸ್ತುಗಳು
ಹಾಲು- ಒಂದು ಗ್ಲಾಸ್
ಜೇನು ತುಪ್ಪ- ಒಂದು ಚಮಚ
ಅರಶಿಣ
ಮೊದಲು ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ಅನಂತರ ಹಾಲು ಸ್ವಲ್ಪ ತಣ್ಣಗಾಗಲು ಬಿಟ್ಟು ಅದಕ್ಕೆ 1 ಸ್ಪೂನ್ ಜೇನು ತುಪ್ಪ ಹಾಕಿಕೊಳ್ಳಿ. ಹಾಗೆ ಅರಶಿಣ ಕೂಡ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಜೇನು ತುಪ್ಪ ಹಾಕಿರುವ ಕಾರಣ ಸಿಹಿಗೆ ಪ್ರತ್ಯೇಕವಾಗಿ ಸಕ್ಕರೆ ಹಾಕೋದು ಬೇಡ. ಹಾಗೆ ಮಿಕ್ಸ್ ಮಾಡಿಕೊಂಡು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಕುಡಿದು ಮಲಗಿ.
ಹೀಗೆ ವಾರದಲ್ಲಿ ಕನಿಷ್ಠ 5 ಬಾರಿಯಾದರು ನಿತ್ಯ ಈ ರೀತಿ ಹಾಲು ಸೇವಿಸಿದರೆ ನಿಮ್ಮ ಮೂಳೆ ನೋವಿನ ಸಮಸ್ಯೆ ನಿವಾರಣೆಯಾಗಲಿದೆ. ಹಾಗೆ ಹಾಲಿನ ಕ್ಯಾಲ್ಸಿಯಂ ಅಂಶವು ನಿಮ್ಮ ಮೂಳೆಯ ಬೆಳವಣಿಗೆಗೆ ಸಹಕಾರಿಯಾಗಿದ್ದು, ಮಿತವಾಗಿ ಹಾಲು ಸೇವಿಸುವುದು ಉತ್ತಮ.
ಬೆಳ್ಳುಳ್ಳಿ ಎಣ್ಣೆ ಔಷಧಿ
ಬೆಳ್ಳುಳ್ಳಿಯಲ್ಲಿನ ಆರೋಗ್ಯಕರ ಅಂಶವು ನಮಗೆ ಬಹಳ ಪ್ರಯೋಜನಕಾರಿ ಈಗ ಬೆಳ್ಳುಳ್ಳಿ ಎಣ್ಣೆಯನ್ನು ಬಳಸಿಕೊಂಡು ನೋವು ನಿವಾರಿಸಿಕೊಳ್ಳುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೊದಲು ಒಂದು ಗಡ್ಡೆ ಬೆಳ್ಳುಳ್ಳಿಯನ್ನು ಬಿಡಿಸಿ ಇಟ್ಟುಕೊಳ್ಳಿ. ಅನಂತರ ಒಲೆ ಮೇಲೆ ಒಂದು ಸಣ್ಣ ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ಜಜ್ಜಿಕೊಂಡಿರುವ ಬೆಳ್ಳುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. ಒಗ್ಗರಣೆ ಮಾಡಿದಂತೆಯೇ ಮಾಡಿಕೊಳ್ಳಿ. ಇದು ಕೆಂಪಾಗುವವರೆಗೂ ಫ್ರೈ ಮಾಡಿಕೊಳ್ಳಿ. ಅನಂತರ ಬೆಳ್ಳುಳ್ಳಿ ಎಣ್ಣೆಯನ್ನು ಮಾತ್ರವೇ ಜರಡಿಯಲ್ಲಿ ತೆಗೆದು ಇಟ್ಟುಕೊಳ್ಳಿ. ಬೆಳ್ಳುಳ್ಳಿಯನ್ನು ಎಸೆಯಿರಿ.
ಈಗ ಈ ಎಣ್ಣೆಯನ್ನು ನಿತ್ಯ ನೋವು ಇರುವ ಕಡೆ ಹಚ್ಚಿಕೊಳ್ಳಬೇಕು. ಅದ್ರಲ್ಲೂ ನಿತ್ಯ ಸ್ವಲ್ಪ ಬಿಸಿ ಮಾಡಿಕೊಳ್ಳುತ್ತಾ ಈ ಎಣ್ಣೆಯನ್ನು ಹಚ್ಚಿಕೊಳ್ಳಬೇಕು, ಹೀಗೆ ನಿತ್ಯ ಹಚ್ಚಿದರೆ ಕೆಲವೇ ದಿನದಲ್ಲಿ ನಿಮ್ಮ ಬೆನ್ನು ನೋವು ನಿವಾರಣೆಯಾಗಲಿದೆ.
ನಿಮಗೂ ಕೂಡ ಬೆನ್ನು ನೋವು ಇಲ್ಲವೆ ಮೂಳೆ ನೋವು ಕಾಣಿಸಿಕೊಂಡಿದ್ದರೆ ಮನೆಯಲ್ಲಿ ಈ ಎರಡು ಪರಿಹಾರ ಮಾಡಿ ನೋಡಿ, ನಿಮ್ಮಲ್ಲಿ ನೋವು ನಿವಾರಣೆಯಾಗಲಿದೆ. ಹಾಗೆ ಯಾವುದೇ ಕೆಲಸವನ್ನಾದರು ನೀವು ಸರಳವಾಗಿ ಸುಲಭವಾಗಿ ಮಾಡಿ ಮುಗಿಸಬಹುದು. ನೀವು ಬಹಳ ಸಮಯದಿಂದ ಬೆನ್ನು ನೋವಿಗೆ ಒಳಗಾಗಿದ್ದರೆ ಈ ಎರಡು ಉಪಾಯ ಮನೆಯಲ್ಲಿ ಮಾಡಿ ನೋಡಿ. ಸರಳ ಉಪಾಯದಿಂದ ನಿಮ್ಮ ನೋವು ಸಹ ನಿವಾರಣೆಯಾಗಬಹುದು.



Click it and Unblock the Notifications
