Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಅವಘಡ ತಪ್ಪಿಸುವುದು ಹೇಗೆ? ನಮಗೆ ಎಲೆಕ್ಟ್ರಿಷಿಯನ್ ನೀಡಿದ ಸಲಹೆಗಳಿವು
ನಾವು ಹೇಗೆ ಜೀವನ ಸಾಗಿಸಬೇಕೆಂದರೆ ನಾವು ಹುಟ್ಟಿದಾಗ ನಮ್ಮ ತಾಯಿ ಸಂತೋಷ ಪಡಬೇಕು, ಸಾಧನೆ ಮಾಡುತ್ತಾ ನಾವು ಬೆಳೆಯುತ್ತಿರಬೇಕಾದರೆ ತಂದೆ ನಮ್ಮ ಬಗ್ಗೆ ಹೆಮ್ಮೆ ಪಡಬೇಕು, ನಾವು ಸತ್ತಾಗ ವೈರಿಯೂ ಕೂಡ ನಮ್ಮನ್ನು ನೋಡಿ ಕಣ್ಣೀರಿಡಬೇಕು.
ಆಗ ಮಾತ್ರ ನಮ್ಮ ಬದುಕು ಸಾರ್ಥಕ ಎಂದು ಹೇಳಿದ್ದ ಉಡುಪಿಯ ಅಶ್ವಿನಿ ಸಾವು ನೋಡಿ ಅವರ ಬಗ್ಗೆ ಪರಿಚಯವೇ ಇಲ್ಲದವರು ಕೂಡ ಅಯ್ಯೋ ಈ ರೀತಿಯಾಗಬಾರದಿತ್ತು ಎಂದು ಹೇಳುತ್ತಿದ್ದಾರೆ. ಮನೆಯಲ್ಲಿ ನಡೆದ ಅಗ್ನಿ ದುರಂತಕ್ಕೆ ಅಶ್ವಿನಿ ಹಾಗೂ ಅವರ ಪತಿ ರಮಾನಂದ ಶೆಟ್ಟಿ ಇಬ್ಬರು ಸಾವನ್ನಪ್ಪಿದ್ದಾರೆ, ಅವರ ಮಕ್ಕಳು ತಂದೆ-ತಾಯಿ ಕಳೆದುಕೊಂಡು ತಬ್ಬಲಿಯಾಗಿದ್ದಾರೆ.

ಅವರು ಬಾಳುತ್ತಿದ್ದ ಮನೆ ಅದು ಮನೆಯಲ್ಲಿ ಅರಮನೆ, ಆ ಮನೆಯಲ್ಲಿ ದುಬಾರಿ ಬಲೆಬಾಳುವ ವಸ್ತುಗಳಿದ್ದೆವು, ಆ ಮನೆ ನೋಡುತ್ತಿದ್ದರೆ ಅದರ ಅಂದ ಕಣ್ಮನ ಸೆಳೆಯುವಂತಿದೆ, ಅಂಥ ಐಷಾರಾಮಿ ಮನೆಯಲ್ಲಿದ್ದ ಈ ದಂಪತಿಗೆ ಅದೇ ಐಷಾರಾಮಿ ಸೌಲಭ್ಯವೇ ಸಾವಾಗಿರುವುದು ವಿಪರ್ಯಾಸವೇ ಸರಿ. ಮನೆಯಲ್ಲಿನ ಅತಿ ಭದ್ರತೆಯೇ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಶಾರ್ಟ್ ಸರ್ಕ್ಯೂಟ್ ತಡೆಗಟ್ಟುವುದು ಹೇಗೆ?
ಶಾರ್ಟ್ ಸರ್ಕ್ಯೂಟ್ ತಡೆಗಟ್ಟಲು ಮೊದಲು ನೀವು ಅದೇನು ಎಂದು ತಿಳಿಯಬೇಕು, ವೈರಿಂಗ್ ಸರಿಯಿಲ್ಲದಿದ್ದರೆ ಅಥವಾ ಓವರ್‌ಲೋಡಿಂಗ್ ಉಂಟಾದಾಗ ಶಾರ್ಟ್‌ಸರ್ಕ್ಯೂಟ್ ಉಂಟಾಗುವುದು.
ಶಾರ್ಟ್ ಸರ್ಕ್ಯೂಟ್ ತಡೆಗಟ್ಟಲು ಏನು ಮಾಡಬೇಕು?
ನೀವು ಬಳಸದೆ ಇರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಅನ್‌ಪ್ಲಗ್ ಮಾಡಿ, ಕೆಲವೊಂದು ವಸ್ತುಗಳು ಅಗ್ಯತವಿಲ್ಲದೆ ಪವರ್ ಯೂಸ್ ಮಾಡುತ್ತಾ ಇರುತ್ತದೆ, ಉದಾಹರಣೆಗೆ ಲೈಟ್ ಅವಶ್ಯಕತೆ ಇಲ್ಲದಿದ್ದರೂ ಉರಿಯುತ್ತಲೇ ಇರುವುದು, ಟಿವಿ ಆನ್‌ನಲ್ಲೇ ಇರುವುದು ಹೀಗೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳು ಸುಮ್ಮನೆ ಆನ್‌ನಲ್ಲಿರುತ್ತದೆ, ಓವರ್‌ಲೋಡ್‌ನಿಂದಾಗಿ ಶಾರ್ಟ್‌ಸರ್ಕ್ಯೂಟ್ ಆಗುತ್ತೆ.
ಫ್ಯೂಸ್ ಹಾಕಿ
ಕರೆಂಟ್ ಲೋಡ್ ಒಂದು ನಿರ್ಧಿಷ್ಟ ಮಟ್ಟಕ್ಕಿಂತ ಹೆಚ್ಚಾದಾಗ ಅಟೋಮ್ಯಾಟಿಕ್ ಆಗಿ ಕರೆಂಟ್ ಹೋಗುವ ಫ್ಯೂಸ್ ಇರುತ್ತದೆ, ಅದನ್ನು ಮನೆಯಲ್ಲಿ ಅಳವಡಿಸಿ.
ಮ್ಯಾಗ್ನೆಟೋ ಟರ್ಮಿನಲ್ ಸ್ವಿಚ್
ಅಲ್ಲದೆ ಕರೆಂಟ್ ಓವರ್‌ಲೋಡ್ ಆದಾಗ ಟ್ರಿಪ್ ಆಗುವ ಫ್ಯೂಸ್ ಅಂತೆಯೂ ಸ್ವಿಚ್‌ಗಳಿವೆ, ಅದನ್ನು ಬಳಸಿದರೆ ಕರೆಂಟ್ ಓವರ್‌ಲೋಡ್ ಆದಾಗ ಇದು ಕರೆಂಟ್ ಸಪ್ಲೈ ತಡೆಹಿಡಿಯುತ್ತದೆ. ಇದರಿಂದ ಕೂಡ ಸಾರ್ಟ್ ಸರ್ಕ್ಯೂಟ್ ತಡೆಗಟ್ಟಬಹುದು.
ಉಡುಪಿಯ ಅಷ್ಟೊಂದು ಐಷಾರಾಮಿ ಮನೆಯಲ್ಲಿ ಶಾರ್ಟ್‌ಸರ್ಕ್ಯೂಟ್ ಆಗಿದೆ ಎಂದಾಗ ಎಂಥವರಿಗೂ ಅಚ್ಚರಿಯಾಗುತ್ತೆ, ಎಷ್ಟೇ ಐಷಾರಾಮಿ ಮನೆಯಾಗಿರಲಿ ಚಿಕ್ಕ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ ಉಂಟಾಗಬಹುದು, ಕೆಲವೊಮ್ಮೆ ನಾವು ಮನೆಯನ್ನು ಯಾವುದಾದರೂ ಕಂಟ್ರಾಕ್ಟರ್‌ಗೆ ಅಥವಾ ಬಿಲ್ಡರ್‌ಗೆ ಕೊಡುತ್ತೇವೆ, ಆದರೆ ಅವರು ಅವರ ಲಾಭಕ್ಕಾಗಿ ಕೆಲವೊಂದು ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರೆ ನಮಗೆ ಗೊತ್ತಾಗುವುದೂ ಇಲ್ಲ. ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಅಂಥದ್ದೆಲ್ಲಾ ಆದಾಗ ಮಾತ್ರ ನಾವು ಅದರ ಬಗ್ಗೆ ಯೋಚಿಸುತ್ತೇವೆ. ಹಾಗಾಗಿ ನೀವು ನಿಮ್ಮ ಮನೆ ಕಟ್ಟಿಸುವಾಗ ಶಾರ್ಟ್ ಸರ್ಕ್ಯೂಟ್ ಉಂಟಾಗದಿರಲು ಏನೆಲ್ಲಾ ವ್ಯವಸ್ಥೆ ಇದೆ ಎಂದು ಕೇಳಲೇಬೇಕು.
ಶಾರ್ಟ್ ಸರ್ಕ್ಯೂಟ್ ಆಗುವುದು ತಡೆಗಟ್ಟುವುದು ಹೇಗೆ ಎಂದು ಈ ಕ್ಷೇತ್ರದಲ್ಲಿ ಅನುಭವವಿರುವ ಎಲೆಕ್ಟ್ರಿಷಿಯನ್ ರತನ್ ಅವರ ಬಳಿ ಕೇಳಿದಾಗ ಅವರು ನೀಡಿದ ಸಲಹೆಗಳು:
ಶಾರ್ಟ್ ಸರ್ಕ್ಯೂಟ್ ಆಗುವುದು ತಡೆಗಟ್ಟುವುದು ಹೇಗೆ?
ಇಎಲ್‌ಸಿವಿ ಹಾಕಬೇಕು: ಇದರ ಪ್ರಯೋಜನವೇನು?
ಎರ್ಥಿಂಗ್ ಲೀಕ್ ಕೂಡಲೇ ಕರೆಂಟ್ ಆಫ್ ಆಗುತ್ತದೆ, ಓವರ್ ಲೋಟ್ ಆದರೂ ಆಫ್ ಆಗುತ್ತೆ. ಆರ್ ಸಿಸಿವಿ ಕೂಡ ಶಾರ್ಟ್‌ಸರ್ಕ್ಯೂಟ್ ಆಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಎಸಿ ವೈರ್ ಗೇಜ್ ಕಮ್ಮಿ ಇರಬಾರದು, ಈ ಬಗ್ಗೆ ಎಲ್ಲಾ ಎಚ್ಚರಿಕೆವಹಿಸಿದರೆ ಶಾರ್ಟ್‌ಸರ್ಕ್ಯೂಟ್ ಆಗುವುದನ್ನು ತಡೆಗಟ್ಟಬಹುದು.
ಎಸಿ ಹಾಕಿದ ಮೇಲೆ ಪರ್ಫ್ಯೂಮ್ ಸ್ಪ್ರೇ ಹಾಕಲೇಬಾರದು.
ಸ್ಪ್ರೇ ಹಾಕಿ ಎಸಿ ರೂಮ್‌ಗೆ ಹೋಗಬಹುದು, ಆ ರೂಮ್‌ನೊಳಗೆ ಇದ್ದಾಗ ಮಾಡಬಾರದು. ಈ ತಪ್ಪು ನಾವೆಲ್ಲಾ ಮಾಡುತ್ತೇವೆ, ಮನೆಯಲ್ಲಿ ಆಗಲಿ ಅಥವಾ ಟ್ರಿಪ್, ಮೀಟಿಂಗ್ ಅಂತ ಹೋಟೆಲ್‌ನಲ್ಲಿ ಉಳಿದುಕೊಂಡಾಗ ಎಸಿ ಆನ್‌ನಲ್ಲಿರುತ್ತದೆ, ನಾವು ರೆಡಿಯಾಗುವಾಗ ಪರ್ಫ್ಯೂಮ್ ಬಳಸುತ್ತೇವೆ, ಆದರೆ ಎಸಿ ಆನ್‌ನಲ್ಲಿದ್ದಾಗ ಪರ್ಫ್ಯೂಮ್ ಬಳಸುವುದು ಸೂಕ್ತವಲ್ಲ ಎಂಬುವುದು ನುರಿತ ಎಲೆಕ್ಟ್ರಿಷಿಯನ್ ಸಲಹೆಯಾಗಿದೆ.



Click it and Unblock the Notifications
