Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬರ್ನರ್‌ಗೆ ಹಿಡಿದ ಜಿಡ್ಡು ತೆಗೆಯಲು ಇಲ್ಲದೆ ಸುಲಭದ ಪ್ಲಾನ್..!
ಅಡುಗೆ ಮನೆ ಎಂದರೆ ಅಲ್ಲೊಂದಿಷ್ಟು ಪಾತ್ರೆಗಳು ವಸ್ತುಗಳು ಯಾವಾಗಲು ಕರಿ ಹಿಡಿದಿರುವುದು, ಎಣ್ಣೆ ಹಿಡಿದ ಜಿಡ್ಡು ಹಿಡಿದುಕೊಂಡಿರುತ್ತವೆ. ಇದು ಎಲ್ಲರ ಮನೆಯ ಅಡುಗೆ ಮನೆಯ ಸರ್ವೇ ಸಾಮಾನ್ಯ ಸಂಗತಿ. ಆದ್ರೆ ಇದನ್ನು ತೊಳೆದು ಬಿಳಿಯಾಗಿಸುವುದೇ ದೊಡ್ಡ ಸವಾಲು, ಅದರಲ್ಲಿನ ಜಿಡ್ಡು ಬಿಡಿಸುವುದು ಎಂತವರಿಗೂ ಕಷ್ಟದ ಕೆಲಸ.
ಆದ್ರೆ ಈ ಜಿಡ್ಡು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಆಯಿಲ್‌ಗಳು, ಸೋಪುಗಳು, ಪುಡಿಗಳು ಬಂದಿವೆ. ಕೆಲವೊಂದು ಪರಿಣಾಮಕಾರಿ ಕೆಲಸ ಮಾಡಿದರೂ ಮತ್ತೆ ಕೆಲವು ದುಬಾರಿಯಾಗಿವೆ. ಹೀಗಾಗಿ ಅಡುಗೆ ಮನೆಯಲ್ಲಿ ಕ್ಲೀನಿಂಗ್ ಈಗ ದುಬಾರಿಯ ಜೊತೆಗೆ ಕಷ್ಟಕರವೂ ಆಗಿದೆ.

ಅದರಲ್ಲೂ ಎಣ್ಣೆ ಜಿಡ್ಡಿನ ತವಗಳು, ಕಾವಲಿ, ಪಾತ್ರೆ, ಚಮಚ, ಕ್ಲೀನ್ ಮಾಡುವುದು ಸಾಹಸ ಮಾಡಿದ್ದಂತೆ. ಅದರ ಜೊತೆ ಗ್ಯಾಸ್ ಬರ್ನರ್‌ಗಳು ಸಹ ಬಹಳ ಕಾಲ ಹಾಗೆಯೇ ಇಟ್ಟರೆ ಅದರ ಮೇಲೆ ಕಲೆಗಳಾಗುತ್ತವೆ. ಒಲೆ ಮೇಲೆ ಇಟ್ಟು ಮಾಡುವ ಎಲ್ಲಾ ಖಾದ್ಯಗಳು ಬರ್ನರ್ ಮೇಲೆ ಬೀಳುವುದರಿಂದ ಅದರಲ್ಲಿ ಬಿಡಿಸಲಾಗದ ಕಲೆಗಳಾಗುತ್ತವೆ.
ಅದರಲ್ಲೂ ಬರ್ನರ್ ಮೇಲೆ ಉಂಟಾಗುವ ಜಿಡ್ಡು ಬಿಡಿಸಲು ಕಷ್ಟವಾಗುತ್ತದೆ. ಜೊತೆಗೆ ಈ ಜಿಡ್ಡಿನಿಂದ ಒಲೆ ಉರಿಯುವುದಕ್ಕೂ ಅಡೆತಡೆಯಾಗುತ್ತದೆ. ಬರ್ನರ್ ಕಪ್ಪಾಗಿ ಅದರಲ್ಲಿ ಎಣ್ಣೆಯ ಜಿಡ್ಡು ಹಿಡಿಯುವುದರಿಂದಾಗಿ ಸರಿಯಾಗಿ ಬೆಂಕಿ ಉರಿಯುವುದಿಲ್ಲ. ಬರ್ನರ್‌ನಲ್ಲಿರುವ ಸಣ್ಣ ಸಣ್ಣ ತೂತುಗಳು ಮುಚ್ಚಿಕೊಳ್ಳುತ್ತವೆ. ಆದರೆ ಇದನ್ನು ಸ್ವಚ್ಛ ಮಾಡುವುದು ಎಲ್ಲಿಲ್ಲದ ಹಿಂಸೆಯಾಗಿದೆ.
ಹಾಗಾದ್ರೆ ನಾವಿಂದು ಮನೆಯಲ್ಲಿ ಸುಲಭವಾಗಿ ಈ ಜಿಡ್ಡು ಹಿಡಿದಿರುವ ಬರ್ನರ್ ಅನ್ನು ಸ್ವಚ್ಛ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಮೊದಲು ಒಂದು ಬೌಲ್‌ನಲ್ಲಿ ಬಿಸಿ ನೀರು ಹಾಕಿಕೊಳ್ಳಿ. ಅದಕ್ಕೆ ಅರ್ಧ ನಿಂಬೆ ಹಣ್ಣನ್ನು ಹಿಂಡಿಕೊಳ್ಳಿ. ಬಳಿಕ ಇದಕ್ಕೆ ಒಂದು ಇನೋ ಪ್ಯಾಕ್ (ಅಸಿಡಿಟಿಗೆ ನೀರಿಗೆ ಮಿಕ್ಸ್ ಮಾಡಿ ಕುಡಿಯುವ ಪದಾರ್ಥ) ಹಾಕಿ. ಆ ನೀರಿನಲ್ಲಿ ಈ ಬರ್ನರ್ ಅನ್ನು 2 ಗಂಟೆಗಳ ಕಾಲ ಅದ್ದಿ ಇಡ ಬೇಕು.
ಇನ್ನೊಂದು ಕಡೆ ಮತ್ತೊಂದು ಬೌಲ್‌ನಲ್ಲಿ ಬಿಸಿ ನೀರು ತೆಗೆದುಕೊಂಡು ಅದಕ್ಕೆ ಅಡುಗೆ ಸೋಡಾ, ವಿನೆಗರ್ ಹಾಕಿ ಅದರೊಳಗೆ ಒಂದು ಬರ್ನರ್ ಹಾಕಿಡಿ. ಈ ಎರಡೂ ವಿಧಾನದಲ್ಲಿ ಬರ್ನರ್ ಅನ್ನು ಸ್ವಚ್ಛ ಮಾಡಬಹುದು. ಎರಡು ವಿಧಾನದಲ್ಲು ಈ ಬರ್ನರ್ ಅನ್ನು 2 ಗಂಟೆಗೂ ಹೆಚ್ಚು ಕಾಲ ನೆನೆಸಿಡಬೇಕು.
ಬಳಿಕ ಈಗ ಪಾತ್ರೆ ಉಜ್ಜುವ ಯಾವುದಾದರು ಲಿಕ್ವಿಡ್ ತೆಗೆದುಕೊಂಡು ಒಂದು ಹಲ್ಲುಜ್ಜುವ ಬ್ರೆಶ್ ಹಚ್ಚಿ ಅದರಿಂದ ಬರ್ನರ್ ಅನ್ನು ಉಜ್ಜಬೇಕು. ಬ್ರೆಶ್ ನಿಂದ ಉಜ್ಜುವುದರಿಂದ ಸುಲಭವಾಗಿ ಇದರ ಮೇಲಿನ ಕಲೆಗಳನ್ನು ತೆಗೆಯಬಹುದು. ಇದು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಲಿಕ್ವಿಡ್‌ಗಳು, ಪುಡಿಗಳಿಗಿಂತಲೂ ಸುಲಭವಾಗಿ, ಪರಿಣಾಮಕಾರಿಯಾಗಿ ಸ್ವಚ್ಛ ಮಾಡಬಹುದು.
ಈ ಎರಡು ಮಾರ್ಗವಲ್ಲದೆ ಇನ್ನು ಕೆಲವು ಮಾರ್ಗದಿಂದ ಈ ಬರ್ನರ್‌ಗಳ ಸ್ವಚ್ಛ ಮಾಡಬಹುದು. ಇನ್ನೊಂದು ಸುಲಭದ ಮಾರ್ಗವೆಂದರೆ ಒಂದು ಬೌಲ್‌ನಲ್ಲಿ ಸ್ವಲ್ಪ ನೀರು ಹಾಕಿ ಅದಕ್ಕೆ ಬಟ್ಟೆ ತೊಳೆಯಲು ಬಳಸುವ ಪುಡಿ ಹಾಕಿ, ಬೇಕಿಂಗ್ ಸೋಡಾ ಹಾಗೂ ವೆನಿಗರ್ ಹಾಗೂ ಗೋಲಿ ಗಾತ್ರದ ಹುಣಸೆ ಹುಳಿ ಹಾಕಿ ಅದರಲ್ಲಿ ಬರ್ನರ್ ಅನ್ನು ಅದ್ದಿ ಇಡಬೇಕು. ಇದನ್ನೂ ಕೂಡ 2 ಗಂಟೆಗಳ ಕಾಲ ನೆನೆಸಿಡಬೇಕು. ಬಳಿಕ ಬರ್ನರ್ ತೆಗೆದು ಅದನ್ನು ಯಾವುದಾದರು ಲಿಕ್ವಿಡ್, ಸೋಪು ಬಳಸಿ ಚೆನ್ನಾಗಿ ತೊಳೆದರೆ ಅದರಲ್ಲಿರುವ ಜಿಡ್ಡು ಬಿಟ್ಟುಕೊಳ್ಳುತ್ತದೆ.



Click it and Unblock the Notifications
