Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಈ ರೀತಿ ಚಕ್ರ ಹೊಂದಿರುವ ಸ್ಪೂನ್ ಮನೆಯಲ್ಲಿ ಇದ್ಯಾ..? ಇದರ ಬಳಕೆ ಏನ್ ಗೊತ್ತಾ?
ನಮ್ಮ ಮನೆಯಲ್ಲಿ ಕೆಲವೊಂದು ವಸ್ತುಗಳು ಹಲವು ವರ್ಷಗಳಿಂದ ಇದ್ದರೂ ಆ ವಸ್ತು ಏಕಿದೆ ಎಂಬುದು ತಿಳಿದಿರುವುದಿಲ್ಲ. ಗೃಹಿಣಿಯರಿಗೆ ಈ ಕುರಿತು ಅರಿವಿದ್ದರು ಉಳಿದ ಸದಸ್ಯರಿಗೆ ಇದೊಂದು ದೊಡ್ಡ ಕುತೂಹಲಕಾರಿ ವಸ್ತುವಾಣಿ ಕಾಣಿಸುತ್ತಿರುತ್ತೆ. ಈಗ ಗೃಹಿಣಿಯರ ಕೆಲಸ ಕಡಿಮೆ ಮಾಡುವಂತಹ ಹತ್ತಾರು ವಸ್ತುಗಳು, ಸಾಧನಗಳು ಈಗ ಮಾರುಕಟ್ಟೆಗೆ ಬಂದಿವೆ. ಆದ್ರೆ ಇಂತಹ ಕೆಲವು ವಸ್ತುಗಳಿ ಈಗಲೂ ಆನ್‌ಲೈನ್‌ನಲ್ಲಿ ಕೆಲವರ ಅಚ್ಚರಿಗೆ ಕಾರಣವಾಗುತ್ತಿವೆ.
ನಾವಿಂದು ಹೇಳುತ್ತಿರುವುದು ಕೂಡ ಇಂತಹದೊಂದು ಅಡುಗೆ ಮನೆಯ ವಸ್ತು. ನಿಮ್ಮ ಮನೆಯಲ್ಲಿ ಒಂದು ಕಡೆ ಸ್ಪೂನ್ ಹಾಗೂ ಇನ್ನೊಂದು ಬದಿಯಲ್ಲಿ ಚಕ್ರದಂತಹ ರಚನೆ ಹೊಂದಿರುವ ವಸ್ತು ಇರಬಹುದು. ಈ ವಸ್ತು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ಚಮಚದ ಬುಡದಲ್ಲಿ ಒಂದು ಸಣ್ಣ ಚಕ್ರದ ಮಾದರಿಯ ಒಂದು ರಚನೆ ಇರುವುದು ನೋಡಬಹುದು.

ಈ ಮೇಲಿನ ಚಿತ್ರದಲ್ಲಿರುವ ಈ ವಸ್ತು ನಿಮ್ಮ ಮನೆಯಲ್ಲೂ ಇರಬಹುದು. ಆದ್ರೆ ಇದನ್ನು ಏಕೆ ಬಳಸುತ್ತಾರೆ ಎಂಬುದು ನಿಮಗೆ ಗೊತ್ತಿದ್ಯಾ? ಈ ಸ್ಪೂನ್ ಹಾಗೂ ಚಕ್ರದ ರಚನೆಯು ಹಲವು ಕಾರ್ಯಗಳಲ್ಲಿ ಕೆಲಸಕ್ಕೆ ಬರುತ್ತದೆ. ಆದ್ರೆ ಇದನ್ನು ಬಹಳ ಕಡಿಮೆ ಸಮಯ ಬಳಸುವುದರಿಂದ ಈ ವಸ್ತು ಹಲವರಿಗೆ ಇದರ ಬಗ್ಗೆ ತಿಳಿಯುವುದಿಲ್ಲ. ಹೀಗಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಚರ್ಚೆಯೊಂದು ಹೊರಬಿದ್ದಿದೆ.
ಟ್ವಿಟರ್ ಹಾಗೂ ಕ್ವಾರದಲ್ಲಿ ಈ ಫೋಟೋಗಳ ಹಂಚಿಕೊಳ್ಳಲಾಗಿದ್ದು ಈ ವಸ್ತು ಬಳಕೆ ಕುರಿತು ಚರ್ಚೆ ನಡೆದಿದೆ. ಕೆಲವರು ಈ ರೀತಿ ವಸ್ತು ನಮ್ಮ ಮನೆಯಲ್ಲೂ ಇದೆ ಆದ್ರೆ ಯಾವ ಕೆಲಸಕ್ಕೆ ಬರುತ್ತೆ ಅನ್ನೋದು ಮಾತ್ರ ನಮಗೂ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಮತ್ತೆ ಕೆಲವರು ನಾವು ಈ ರೀತಿಯ ವಸ್ತುವನ್ನೇ ನೋಡಿಲ್ಲವೆಂದು ಈ ರೀತಿ ಸ್ಪೂನ್‌ನ ಕೆಳಗೆ ಚಕ್ರವಿರುವುದು ಏಕೆ ಎಂಬ ಪ್ರಶ್ನೆಗೆ ತಲೆ ಕೆಡಿಸಿಕೊಂಡಿದ್ದಾರೆ.
ಹಾಗೆ ನೊಡೋದಾದ್ರ ಈ ರೀತಿಯ ಸ್ಪೂನ್ ಅನ್ನು ಏಕೆ ಬಳಸುತ್ತಾರೆ ಎಂಬುದನ್ನು ಬಳಕೆದಾರರೊಬ್ಬರು ಉತ್ತರಿಸಿದ್ದಾರೆ. ಅವರ ಪ್ರಕಾರ ಈ ಚಕ್ರದಿಂದ ಕೂಡಿದ ಸ್ಪೂನ್ ಆಹಾರ ಸೇವನೆಗೆ ಬಳಕೆಯಾಗುವುದಿಲ್ಲವಂತೆ. ಇದನ್ನು ಕೆಲವು ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆಯಂತೆ. ಕರ್ಜಿಕಾಯಿ, ಸಮೋಸಾ, ಶಂಕರಪಾಳಿ ಹೀಗೆ ಇನ್ನಿತರ ಸಿಹಿ ಖಾದ್ಯ ಸೇರಿ ಅಡುಗೆಯ ವೇಳೆ ಬಳಕೆಯಾಗುತ್ತದೆ ಎಂದಿದ್ದಾರೆ.
ಮತ್ತೊಬ್ಬರು ಇದು ಪಿಜ್ಜಾ ಕತ್ತರಿಸಲು ಬಳಸುವಂತಹ ಸ್ಪೂನ್ ಎಂದಿದ್ದಾರೆ. ಆದ್ರೆ ಕೆಲವರಿಗೆ ಈ ಚಕ್ರದ ಉಪಯೋಗ ಏನಿರಬಹುದು ಎಂಬುದು ಭಾರೀ ಕುತೂಹಲ ಕೆರಳಿಸಿದೆ. ಆದ್ರೆ ಈ ವಸ್ತುವನ್ನು ಶಂಕರಪಾಳಿ ಮಾಡುವಾಗ ಹಿಟ್ಟು ಕತ್ತರಿಸಿಕೊಳ್ಳಲು ಬಳಸುತ್ತಾರೆ. ಹಾಗೆ ಯಾವುದಾದರು ಹಿಟ್ಟನ್ನು ಹದ ಮಾಡುವಾಗ ಪರೋಟ ಮಾಡುವಾಗ, ಸಮೋಸಾ ಮಾಡುವಾಗ ಹಿಟ್ಟು ಕತ್ತರಿಸಿಕೊಳ್ಳುವಾಗ ಇದನ್ನು ಬಳಸುತ್ತಾರೆ.
ಆದ್ರೆ ಖಂಡಿತ ಈ ವಸ್ತುವನ್ನು ಹಿಟ್ಟನ್ನು ಕತ್ತರಿಸುವ ಸಲುವಾಗಿ ಬಳಸಲಾಗುತ್ತದೆ. ಆದ್ರೆ ಕೆಲವೊಮ್ಮೆ ಇದು ಸ್ಪೂನ್‌ನ ಹಿಂಭಾಗದಲ್ಲಿಯೇ ಚಕ್ರ ನೀಡಲಾಗಿರುತ್ತದೆ. ಈ ಸ್ಪೂನ್ ಬೇರೆ ಯಾವುದೇ ಕಲಸಗಳಿಗೂ ಬಳಸಲಾಗುವುದಿಲ್ಲ, ಮತ್ತೆ ಈ ಚಕ್ರದಂತಹ ಮಾದರಿಯ ವಸ್ತು ಕೂಡ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅಪರೂಪಕ್ಕೆ ಕೆಲವರು ಈ ರೀತಿಯ ವಸ್ತುವನ್ನು ಬಳಸುವುದು ನಾವು ನೋಡಬಹುದು.



Click it and Unblock the Notifications