Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ನಿತ್ಯ ಬೆಳಗ್ಗೆ ಬೆಂಡೆಕಾಯಿ ನೀರು ಕುಡಿದರೆ ಏನಾಗುತ್ತೆ ಗೊತ್ತಾ? ಹೀಗೆ ಮಾಡಿ ನೋಡಿ!
ಹಸಿರು ತರಕಾರಿಗಳು ನಮ್ಮ ದೇಹಕ್ಕೆ ಎಷ್ಟು ಮುಖ್ಯ ಅನ್ನೋದನ್ನು ತಿಳಿದಿದ್ದೇವೆ. ಅದ್ರಲ್ಲೂ ತರಕಾರಿಗಳಲ್ಲಿ ಸಿಗುವಂತಹ ಕೆಲವು ವಿಟಮಿನ್‌ಗಳು ಬೇರೆ ಯಾವುದೇ ಧಾನ್ಯಗಳಲ್ಲಿಯೂ, ಆಹಾರಗಳಲ್ಲಿಯೂ ಸಿಗೋದಿಲ್ಲ. ಹಾಗೆ ಈ ಹಸಿರು ತರಕಾರಿಗಳು ನಮ್ಮ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಾಯ ಮಾಡಲಿವೆ. ಇನ್ನು ಈ ತರಕಾರಿಗಳಿಂದ ಹಲವು ರೀತಿ ಖಾದ್ಯ ಮಾಡಿ ಸವಿಯುವುದಕ್ಕೂ ಹಸಿಯಾಗಿ ಸೇವಿಸುವುದು ಕೂಡ ಉತ್ತಮ ಅಭ್ಯಾಸ ಆಗಿರಲಿದೆ.
ಅದ್ರಲ್ಲೂ ನಾವಿಂದು ಹಸಿಯಾಗಿ ಬೆಂಡೆಕಾಯಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರೆಲ್ಲೂ ಈ ಬೆಂಡೆಕಾಯಿಯನ್ನು ಹೆಚ್ಚಿ ಅದನ್ನು ನೀರು ಹಾಕಿ ನೆನೆಸಿಟ್ಟು ಬಳಿಕ ಈ ನೀರನ್ನು ಸೇವಿಸುವುದರಿಂದ ಎಷ್ಟೊಂದು ಲಾಭದಾಯಕವಿದೆ ಎಂಬುದನ್ನು ತಿಳಿದುಕೊಳ್ಳೋಣ. ಈ ಬೆಂಡೆಕಾಯಿಯ ನೀರನ್ನು ಕುಡಿದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ

ಬೆಂಡೆಕಾಯಿಯಲ್ಲಿನ ವಿಟಮಿನ್ ಎ, ಇ, ಬಿ, ಅಮೈನೋ ಆಮ್ಲಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಅಂಶಗಳು ಬಹಳ ಪ್ರಯೋಜನಕಾರಿಯಾಗಲಿದೆ.
ಬೆಂಡೆಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಇನ್ಸುಲಿನ್‌ನಂತಹ ವಸ್ತುಗಳನ್ನು ಒಳಗೊಂಡಿದೆ, ಇದು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಹಾಗಾದ್ರೆ ಬೆಂಡೆಕಾಯಿಯನ್ನು ಕತ್ತರಿಸಿಕೊಂಡು ಅದಕ್ಕೆ ನೀರಿ ಹಾಕಿ ಮಾರನೆ ದಿನ ಈ ನೀರು ಕುಡಿಯುವುದರಿಂದ ಆಗುವ ಲಾಭವೇನು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಂಡೆ ಕಾಯಿಯಲ್ಲಿ ಕ್ವೆರೆಸಿಟೀನ್ ಹಾಗೂ ಫ್ಲೇವನಾಯ್ಡ್ಸ್‌ಗಳೆಂಬ ಆ್ಯಂಟಿ ಆಕ್ಸಿಡೆಂಟ್‌ಗಳಿವೆ ಇದು ದೇಹದ ಆಕ್ಸಿಡೇಟೀವ್ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡಲಿದೆ. ಹಾಗೆ ಇದರಿಂದಾಗಿ ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಕೂಡ ನೀವು ನಿಯಂತ್ರಣದಲ್ಲಿಡಬಹುದು. ವಿಟಮಿನ್ ಸಿ ಹೆಚ್ಚಾಗಿರುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಹಾಗೆ ನಿಮ್ಮ ದೇಹವು ಬ್ಯಾಕ್ಟೀರಿಯಲ್ ಇನ್ಫೆಕ್ಷನ್‌ಗೆ ಒಳಗಾಗಿದ್ದರೆ ಈ ನೀರು ಪರಿಹಾರ ನೀಡಲಿದೆ. ಹೆಚ್ಚಾಗಿ ನಿಮ್ಮ ದೇಹ ತಂಪಾಗಿಡಲು ಇದು ಸಹಕಾರಿಯಾಗಲಿದೆ.
ತೂಕ ಇಳಿಕೆಗೂ ಕೂಡ ಬೆಂಡೆಕಾಯಿ ನೀರು ನಿಮಗೆ ಸಹಕಾರಿಯಾಗಲಿದೆ. ಇದರಲ್ಲಿನ ಫೈಬರ್ ಅಂಶವು ನಿಮ್ಮ ಜೀರ್ಣಕ್ರಿಯೆಗೆ ಬಹಳ ಉತ್ತಮವಾಗಿರಲಿದೆ. ಇದು ನಿಮ್ಮ ಮೂಳೆಗಳ ಬೆಳವಣಿಗೆಗೆ ಕೂಡ ಸಹಕಾರಿಯಾಗುವ ಅಂಶಗಳ ಹೊಂದಿದೆ.
ಬೆಂಡೆಕಾಯಿ ನೀರು ಮಾಡಿಕೊಳ್ಳುವುದು ಹೇಗೆ?
ಮೊದಲು 4ರಿಂದ 5 ಬೆಂಡೆಕಾಯಿ ತೆಗೆದುಕೊಂಡು ಅದನ್ನು ತೊಳೆದು ಬಳಿಕ ಪಲ್ಯಕ್ಕೆ ಹೆಚ್ಚಿಕೊಳ್ಳುವಂತೆ ಹೆಚ್ಚಿಕೊಳ್ಳಿ. ಅನಂತರ ಅನ್ನು ಒಂದು ಬೌಲ್‌ಗೆ ಹಾಕಿಕೊಂಡು ಮುಳುಗುವಷ್ಟು ನೀರು ಹಾಕಿ ಸಣ್ಣ ಪ್ಲೇಟ್ ಮುಚ್ಚಿ ಇಡಿ. ಇಡೀ ರಾತ್ರಿ ಇಟ್ಟು ಮಾರನೆ ದಿನ ಬೆಳಗ್ಗೆ ಅದನ್ನು ಕುಡಿಯಬೇಕು. ಮಾರನೆ ದಿನ ಬಳಗ್ಗೆ ಒಂದು ಜರಡಿಯಲ್ಲಿ ಈ ಎಲ್ಲಾ ನೀರನ್ನು ಹಾಕಿ ಬೆಂಡೆಕಾಯಿ ಬೇರೆ ಮಾಡಿ ಬರಿ ನೀರು ತೆಗೆದುಕೊಳ್ಳಿ.
ಈ ನೀರು ನೋಳೆಯಾಗಿರುವುದರಿಂದ ಕುಡಿಯಲು ಸ್ವಲ್ಪ ಹಿಂಜರಿಕೆ ಬರಬಹುದು. ಆದ್ರೆ ಒಂದೆರಡು ದಿನ ಸೇವಿಸಿದ ಬಳಿಕ ಅಭ್ಯಾಸವಾಗುತ್ತದೆ. ಈ ನೀರು ವಾಸನೆ ಇರುವುದಿಲ್ಲ ಹಾಗೆ ರುಚಿಯೂ ಇರುವುದಿಲ್ಲ. ಹಾಗೆಂದ ಮಾತ್ರಕ್ಕೆ ಇದಕ್ಕೆ ಜೇನು ತುಪ್ಪ, ಸಕ್ಕರೆ, ಬೆಲ್ಲ ಸೇರಿಸಿ ಕುಡಿಯಬೇಡಿ. ಇನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಬಹಳ ಉತ್ತಮ ಫಲತಾಂಶ ಪಡೆಯಲು ಸಹಕಾರಿಯಾಗಲಿದೆ.
ಹಾಗೆ ಹೆಚ್ಚಿಗೆ ನೀರು ಕೂಡ ಕುಡಿಯಬೇಡಿ. ಸುಮಾರು 4ರಿಂದ 5 ಬೆಂಡೆಕಾಯಿ ಕತ್ತರಿಸಿ ಅದರ ನೀರು ಕುಡಿದರೆ ಸಾಕಾಗುತ್ತದೆ. ಹಾಗೆ ಖಾಲಿ ಹೊಟ್ಟೆಗೆ ಕುಡಿಯುವುದು ಬಹಳ ಉತ್ತಮ. ಮಕ್ಕಳಿಗಾದರೆ ಕಡಿಮೆ ಪ್ರಮಾಣದಲ್ಲಿ ಈ ನೀರು ನೀಡಬಹುದು. ನಿತ್ಯ ಬೆಳಗ್ಗೆ ಅಭ್ಯಾಸ ಮಾಡಿಕೊಂಡರೆ ಆರೋಗ್ಯದಲ್ಲಿ ಬದಲಾವಣೆ ನೋಡಬಹುದು.



Click it and Unblock the Notifications