Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹೊಸ ವರ್ಷದಲ್ಲಿ ಮನೆಯಲ್ಲಿರಬಾರದ ನಕರಾತ್ಮಕ ವಸ್ತುಗಳಿವು, ಇಂದೇ ಹೊರಹಾಕಿ
ಇನ್ನೇನು ಹೊಸ ವರ್ಷಕ್ಕೆ ಕೆಲ ದಿನಗಳಷ್ಟೇ ಬಾಕಿಯಿದೆ. ಡಿಸೆಂಬರ್ 31 ನಂತರ ಹೊಸ ಕ್ಯಾಲೆಂಡರ್ ಗೋಡೆಯನ್ನು ಅಲಂಕರಿಸಲಿದೆ. ಹೊಸ ವರ್ಷ ಸ್ವಾಗತಿಸಲು ಇಡೀ ಜಗತ್ತು ಸಿದ್ಧವಾಗಿದೆ. ಹೊಸ ವರ್ಷವನ್ನು ಹೇಗೆ ಬರಮಾಡಿಕೊಳ್ಳಬೇಕು ಎಂಬುವುದರ ಬಗ್ಗೆ ಸಿದ್ದತೆ ಮಾಡಿಕೊಂಡಿರಬೇಕು ಅಲ್ವಾ? ಮನೆಯನ್ನು ಹೊಸ ವರ್ಷಕ್ಕೆ ಸಿದ್ಧ ಮಾಡಿದ್ದೀರಾ? ಮನೆ ಸಿದ್ಧ ಪಡಿಸುವುದು ಮನೆಯಲ್ಲಿರುವ ನಕರಾತ್ಮಕ ಶಕ್ತಿ ಹೊರ ಹಾಕುವುದು, ಪಾಸಿಟಿವ್ ವೈಬ್ಸ್ ತುಂಬಿಸುವುದು, ಹೇಗೆ?

ಶಾಸ್ತ್ರವು ನಾವು ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಅದು ನಮ್ಮ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ ಎಂದು ಹೇಳಲಾಗುವುದು. ಮನೆಯಲ್ಲಿ ಋಣಾತ್ಮಕ ವಸ್ತುಗಳಿದ್ದರೆ ಅದು ಮನೆಗೆ ಒಳ್ಳೆಯದಲ್ಲ, ಹಾಗಾಗಿ ಅಂಥ ವಸ್ತುಗಳಿದ್ದರೆ ಅವುಗಳನ್ನು ಮನೆಯಿಂದ ಹೊರ ಹಾಕಬೇಕು. ಇನ್ನು ಹೊಸ ವರ್ಷ ಮಾತ್ರವಲ್ಲ ಮಕರ ಸಂಕ್ರಾಂತಿ ಕೂಡ ಬರಲಿದೆ. ಹಾಗಾಗಿ ಹೊಸ ವರ್ಷದಲ್ಲಿ ಈ ವಸ್ತುಗಳನ್ನು ಮನೆಯಲ್ಲಿರಿಸಬೇಡಿ, ಅವುಗಳನ್ನು ಬೇಗನೆ ಕಸಕ್ಕೆ ಹಾಕಿ...
ಒಡೆದ ವಸ್ತುಗಳು
ಒಡೆದ ವಸ್ತು ಯಾವುದೇ ಆಗಿರಲಿ ಅದನ್ನು ಹಾಗೆಯೇ ಇಟ್ಟುಕೊಳ್ಳಬೇಡಿ, ಒಡೆದ ವಸ್ತುಗಳು ಮನೆಗೆ ಒಳ್ಳೆಯದಲ್ಲ, ಇದು ಮನೆಯೊಳಗಡೆ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುವುದು. ಹಾಗಾಗಿ ಒಡೆದ ಪಾತ್ರೆಯಾಗಲಿ, ಅಲಂಕಾರಿಕ ವಸ್ತುವಾಗಲಿ, ಫೋಟೋಗಳಾಗಲಿ ಹೀಗೆ ಯಾವುದೇ ವಸ್ತುಗಳಾಗಲಿ ಅವುಗಳನ್ನು ಮನೆಯಿಂದ ಹೊರಗಡೆ ಬಿಸಾಡಿ. ಕಸದ ಬುಟ್ಟಿಗೆ ಹಾಕುವಾಗ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ. ಗಾಜಿನ ವಸ್ತುಗಳಿದ್ದರೆ ಪ್ರತ್ಯೇಕಿಸಿ ಕಸದ ಗಾಡಿಗೆ ಹಾಕಿ. ಒಡೆದ ದೇವರ ಫೋಟೋಗಳನ್ನು ಯಾವುದಾದರು ಮರದ ಕೆಳಗಡೆ ಇಟ್ಟು ಬರುವುದು ಮಾಡಬೇಡಿ.
ಒಣಗಿದ ಗಿಡವಿದ್ದರೆ ತೆರವು ಮಾಡಿ
ಮನೆ ಮುಂದೆ ಒಣ ಗಿಡವಿದ್ದರೆ ಅದನ್ನು ತೆಗಿಸಿ. ಒಣ ಸಸ್ಯ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಹಸಿರು ಗಿಡ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಹಾಗಾಗಿ ಒಣ ಗಿಡಗಳಿದ್ದರೆ ಅವುಗಳನ್ನು ಮನೆಯಿಂದ ಹೊರಗಡೆ ಬಿಸಾಡಿ.
ಹಾಳಾದ ಗಡಿಯಾರ
ಮನೆಯಲ್ಲಿ ಗಡಿಯಾರ ಹಾಳಾಗಿದ್ದರೆ ಒಂದೋ ಸರಿಪಡಿಸಿ, ಸರಿಪಡಿಸಲು ಸಾಧ್ಯವಾಗದೇ ಇರುವ ಗಡಿಯಾರವನ್ನು ಗುಜರಿಯವರಿಗೆ ನೀಡಿ, ಮನೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಟೈಂ ಸರಿಯಾಗಿ ತೋರಿಸದ ಗಡಿಯಾರ ಮನೆಯಲ್ಲಿದ್ದರೆ ಅದನ್ನು ಮನೆಯೊಳಗಡೆ ಇಡಬೇಡಿ.
ಮುರಿದ ಪೀಠೋಪಕರಣಗಳು
ಕೆಲವೊಂದು ಮುರಿದ ಪೀಠೋಪಕರಣಗಳು ಮನೆಯಲ್ಲಿದ್ದರೆ ಅವುಗಳನ್ನು ಮನೆಯಿಂದ ಹೊರಹಾಕಿ. ಮುರಿದ ವಸ್ತುಗಳು ಮನೆಯಲ್ಲಿದ್ದರೆ ಅದು ಶುಭವಲ್ಲ. ಒಡೆದ ಗ್ಲಾಸ್‌ಗಳು ಮನೆಯಲ್ಲಿದ್ದರೆ ಅವುಗಳನ್ನು ಕೂಡ ಹೊರಹಾಕಿ.
ಹಳೆಯ ಕ್ಯಾಲೆಂಡರ್
ಎಷ್ಟೋ ಜನ ಹಳೆಯ ಕ್ಯಾಲೆಂಡರ್ ಬಿಸಾಡುವ ಮನಸ್ಸು ಮಾಡುವುದಿಲ್ಲ, ಅದು ಹಾಗೆಯೇ ಗೋಡೆಯಲ್ಲಿ ಬಿಡಬೇಡಿ, ಅದನ್ನು ಬಿಸಾಡಿ, ಮನೆಯ ಗೋಡೆಯಲ್ಲಿ ಹೊಸ ಕ್ಯಾಲೆಂಡರ್ ಹಾಕಿ. ಹೊಸ ವರ್ಷವನ್ನು ಪಾಸಿಟಿವ್ ವೈಬ್ಸ್ ಜೊತೆಗೆ ಸ್ವಾಗತಿಸಿ. ಹೊಸ ವರ್ಷ ನಿಮ್ಮೆಲ್ಲಾ ಕನಸು ನನಸಾಗಲಿ.



Click it and Unblock the Notifications
