Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕ್ರಿಸ್ಮಸ್: ಕ್ರಿಸ್ಮಸ್ ಟ್ರೀ ಡೆಕೋರೇಟ್ ಮಾಡಲು ಕ್ರಿಯೇಟಿವ್ ಐಡಿಯಾಗಳು
ಕ್ರಿಸ್ಮಸ್‌ಗೆ ಮುಖ್ಯವಾಗಿ ಮಾಡುವುದೇ ಕ್ರಿಸ್ಮಸ್ ಟ್ರೀಗೆ ಅಲಂಕಾರ.... ಕ್ರಿಸ್ಮಸ್ ಟ್ರೀ ಅಲಂಕಾರ ಮಾಡುವ ಸಂಪ್ರದಾಯ ಕ್ರಿಸ್ಮಸ್ ಆಚರಣೆಯಲ್ಲಿದೆ, ಈ ಹಬ್ಬದಂದು ಗಿಡಕ್ಕೆ ವಿವಿಧ ಬಗೆಯ ಅಲಂಕಾರ ಮಾಡಲಾಗುವುದು. ಮನೆಗಳಲ್ಲಿ ಮಾತ್ರವಲ್ಲ ಮಾಲ್‌ಗಳಲ್ಲಿ, ಆಫೀಸ್‌ಗಳಲ್ಲಿ ಅಲಂಕಾರ ಮಾಡಲಾಗುವುದು. ಸುಮ್ಮನೆ ಲೈಟಿಂಗ್ಸ್ ಬಳಸಿ ಅಲಂಕಾರ ಮಾಡುವುದಕ್ಕಿಂತ ಅದಕ್ಕೆ ಸ್ವಲ್ಪ ಕ್ರಿಯೇಟಿವಿಟಿ ಸೇರಿಸಿದರೆ ಕ್ರಿಸ್ಮಸ್ ಟ್ರೀ ಅಲಂಕಾರ ಮತ್ತಷ್ಟು ಆಕರ್ಷಕವಾಗುವುದು. ಮನೆಗೆ ಬಂದವರೆಲ್ಲಾ ನಿಮ್ಮನ್ನು ಹೊಗಳುವಂಥ ಕೆಲವೊಂದು ಡೆಕೋರೇಷನ್ ಐಡಿಯಾಗಳನ್ನು ಆಯ್ಕೆ ಮಾಡಿ ನಿಮಗಾಗಿ ನೀಡಿದ್ದೇವೆ ನೋಡಿ:

ಫ್ಲವರ್ ಅಂಡ್ ಗಿಫ್ಟ್ಸ್ ಡೆಕೋರೇಷನ್
ಕ್ರಿಸ್‌ಮಸ್ ಟ್ರೀಯನ್ನುಕೆಂಪು ಫ್ಲವರ್ಸ್ ಹಾಗೂ ಕಲರ್ ಬಾಲ್ಸ್, ಗಿಫ್ಟ್ಸ್ ಬಾಕ್ಸ್‌ಗಳ ಮೂಲಕ ಅಲಂಕಾರ ಮಾಡಬಹುದು.

ಕ್ಯಾಂಡಿ ಕ್ರಿಸ್ಮಸ್ ಟ್ರೀ
ಕೆಂಪು ಹಾಗೂ ಬಿಳಿ ಬಲೂನುಗಳು ಅದರ ಜೊತೆಗೆ ಕ್ಯಾಂಡಿಗಳನ್ನು ಬಳಸಿ ಕ್ರಿಸ್ಮಸ್ ಟ್ರೀ ಡೆಕೋರೇಷನ್ ಮಾಡಿರುವುದು ಆಕರ್ಷಕವಾಗಿದೆ ಅಲ್ವಾ?

ರೆಡ್ ರಿಬ್ಬನ್ ಬಳಸಿ ಕ್ರಿಸ್ನ್ ಟ್ರೀ ಅಲಂಕಾರ
ಇಲ್ಲಿ ನೋಡಿ ರೆಡ್ ರಿಬ್ಬನ್ ಬಳಸಿ ಕ್ರಿಸ್ಮಸ್ ಟ್ರೀ ಅಲಂಕಾರವನ್ನು ಎಷ್ಟು ಸೊಗಸಾಗಿ ಮಾಡಿದ್ದಾರೆ. ಅದರ ಜೊತೆ ಸಾಂತ ಕ್ಲಾಸ್(ಸಂಟಾ ಕ್ಲಾಸ್), ಮೇರಿ ಮಾತೆಯನ್ನು ಇರಿಸಿ ಅಲಂಕರಿಸಲಾಗಿದೆ.

ಸಿಂಪಲ್ ಅಂಡ್ ಬ್ಯೂಟಿಫುಲ್
ನೀವು ಕ್ರಿಸ್ಮಸ್ ಟ್ರೀಗೆ ಸಿಂಪಲ್ ಆಗಿ ಅಲಂಕಾರ ಮಾಡಬೇಕೆಂದು ಬಯಸುವುದಾದರೆ ಇದೇ ರೀತಿಯ ಐಡಿಯಾ ಬಳಸುವುದು. ಈ ರೀತಿ ಅಲಂಕಾರ ಮಾಡಲು ಹೆಚ್ಚಿನ ಸಮಯ ಬೇಕಾಗಿಲ್ಲ, ನೋಡಲು ತುಂಬಾ ಆಕರ್ಷಕವಾಗಿ ಕಾಣುವುದು.

ಕ್ರಿಸ್ಮಸ್ ಟ್ರೀಗೆ ಸ್ಟಾರ್ ಶೈನ್
ಈ ಕ್ರಿಸ್ಮಸ್‌ಗೆ ನೀವು ಕ್ರಿಸ್ಮಸ್ ಟ್ರೀಗೆ ಸ್ಟಾರ್ ಶೈನ್ ಲುಕ್ ನೀಡಬಯಸುವುದಾದರೆ ಈ ರೀತಿ ಅಲಂಕಾರ ಮಾಡಬಹುದು. ಸ್ವಲ್ಪ ಎಫರ್ಟ್ ಹೆಚ್ಚು ಹಾಕಬೇಕು, ಆದರೆ ಎಫರ್ಟ್‌ಗೆ ತಕ್ಕಂತೆ ನೋಡಲು ತುಂಬಾನೇ ಆಕರ್ಷಕವಾಗಿರುತ್ತದೆ.

ಕ್ರಿಸ್ಮಸ್ ಟ್ರೀಗೆ ರೆಡ್ ಅಂಡ್ ಗ್ರೀನ್ ಕಲರ್ ಡೆಕೋರೇಷನ್
ಕೆಳಗಡೆ ಕೆಂಪು ಬಟ್ಟೆಯನ್ನು ಹಾಸಿ ಅದರ ಮೇಲೆ ಕ್ರಿಸ್ಮಸ್ ಟ್ರೀ ಇಟ್ಟು ಅದಕ್ಕೆ ವಿವಿಧ ಬಣ್ಣದ ಅಲಂಕಾರಿಕಗಳಿಂದ ಅಲಂಕರಿಸಿದ್ದು ನೋಡಲು ಆಕರ್ಷಕವಾಗಿದೆ ಅಲ್ವಾ?

ಫ್ಲವರ್ ಬ್ಲೂಮಿಂಗ್ ಕ್ರಿಸ್ಮಸ್ ಟ್ರೀ
ಮಾಲ್‌ಗಳಲ್ಲಿ, ಆಫೀಸ್‌ಗಳಲ್ಲಿ ಕ್ರಿಸ್ಮಸ್ ಟ್ರೀ ಅಲಂಕಾರ ಮಾಡುವುದಾದರೆ ಸ್ವಲ್ಪ ದೊಡ್ಡ ಟ್ರೀ ಇಡಲಾಗುವುದು. ಅದಕ್ಕೆ ಸಿಂಪಲ್ ಡೆಕೋರೇಷನ್ ನೋಡಲು ಅತ್ಯಾಕರ್ಷಕವಾಗಿರಬೇಕೆಂದರೆ ಈ ರೀತಿ ಮಾಡಬಹುದು ನೋಡಿ..

ಗ್ರೀನ್ ಅಂಡ್ ರೆಡ್‌ವೈನ್ ಕಾಂಬಿನೇಷನ್
ಇಲ್ಲಿ ಕ್ರಿಸ್ಮಸ್ ಟ್ರೀಯನ್ನು ಹೈಲೈಟ್ಸ್ ಮಾಡಿರುವುದು ಸುತ್ತಲೂ ಆಕರ್ಷಕವಾಗಿ ಜೋಡಿಸಿರುವ ವೈನ್ ಕಲರ್ ಬಲೂನುಗಳು , ದಡ್ಡ ಸ್ಪ್ರೈರಲ್ ರಿಂಗ್ ಇದ್ದರೆ ಈ ರೀತಿ ವಿನ್ಯಾಸಗೊಳಿಸುವುದು ಸುಲಭ. ಮೋಸ್ಟ್ ಕ್ರಿಯೇಟಿವ್ ಅಲ್ವಾ?



Click it and Unblock the Notifications
