Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ವ್ಯಾಲಂಟೇನ್ ದಿನ: ನಿಮ್ಮ ಬೆಡ್‌ರೂಮ್ ಹೀಗೆ ಸಜ್ಜುಗೊಳ್ಳಲಿ
ವ್ಯಾಲಂಟೇನ್ ದಿನ ತನ್ನ ಸುಗಂಧವನ್ನು ಎಲ್ಲೆಡೆ ಪಸರಿಸುತ್ತಿದೆ. ತಮ್ಮವರ ನಡುವಿನ ಪ್ರೀತಿಯ ಮಹತ್ವವನ್ನು ಅರ್ಥಮಾಡಿಸುವ ಸಮಯ ಇದಾಗಿದೆ. ವಿಶ್ವದೆಲ್ಲೆಡೆ ವ್ಯಾಲಂಟೇನ್ ದಿನ ಪ್ರತಿಯೊಬ್ಬ ಸಂಗಾತಿಗೂ ಪ್ರೇಮದ ಪರಾಕಾಷ್ಠೆಯ ದಿನ. ಗಿಫ್ಟ್, ಶುಭಾಶಯ ಪತ್ರಗಳ ವಿನಿಮಯ ಹೀಗೆ ಪ್ರೀತಿಯ ಅರುಹುವಿಕೆ ನವ ನವೀನವಾಗಿರುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೀವು ಪ್ರೇಮ ದಿನವನ್ನು ಈ ರೀತಿಯಾಗಿ ಆಚರಿಸಿ!
ಪ್ರೀತಿಯನ್ನು ತಮ್ಮದೇ ವಿಧಾನದಲ್ಲಿ ಆಚರಿಸಲು ಪ್ರೇಮಿಗಳು ವಿಶೇಷ ದಿನವನ್ನು ಆರಿಸಿಕೊಳ್ಳುತ್ತಾರೆ. ಈ ದಿನ ಏಕಾಂತಮಯ ಮತ್ತು ರೊಮ್ಯಾಂಟಿಕ್ ಆಗಿರಬೇಕೆಂಬ ಭಾವನೆ ಅವರದಾಗಿರುತ್ತದೆ. ಬಲಿದಾನ, ಪರಿಶ್ರಮ, ತ್ಯಾಗ ಹೀಗೆ ಪ್ರೀತಿಗಾಗಿ ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಆದರೂ ಪ್ರೀತಿಯನ್ನು ಪಡೆದ ನಂತರ ಅದಕ್ಕಾಗಿ ಪಟ್ಟ ಪರಿಶ್ರಮ ನೋವು ಎಂದೆನಿಸುವುದೇ ಇಲ್ಲ.
ಒಂದು ರೀತಿಯ ಪ್ರಸನ್ನತೆ ನಮ್ಮನ್ನು ಆವರಿಸುತ್ತದೆ. ನಿಮ್ಮ ಈ ವ್ಯಾಲಂಟೇನ್ ದಿನವನ್ನು ಇನ್ನಷ್ಟು ವಿಶೇಷಗೊಳಿಸಲು ನೀವು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುತ್ತೀರಿ. ನಿಮ್ಮ ಸಂಗಾತಿಯನ್ನು ಆಶ್ವರ್ಯಗೊಳಿಸಲು, ಸಂಪ್ರೀತಿಗೊಳಿಸಲು ಹಲವಾರು ವಿಧಾನಗಳಿವೆ. ತಮಗಾಗಿ ಏನು ಮಾಡಲು ಸಿದ್ಧ ಎಂಬ ಭಾವನೆ ಗೌರವ ಅವರಲ್ಲಿ ಮೂಡಬೇಕು.
ನಿಮ್ಮ ಈ ವಿಶೇಷ ದಿನಕ್ಕಾಗಿ ನಿಮ್ಮ ಮನೆಯ ಕೋಣೆಯನ್ನು ಅಣಿಗೊಳಿಸಿ. ನಿಮ್ಮ ಮನದನ್ನೆಯೊಂದಿಗೆ ಮನಬಿಚ್ಚಿ ಏಕಾಂತವಾಗಿ ಹರಟಲು ಇದಕ್ಕಿಂತ ಬೇರೆ ಸನ್ನಿವೇಶ ನಿಮಗೆ ಸಿಗಲಿಕ್ಕಿಲ್ಲ. ಹಾಗಿದ್ದರೆ ನಿಮ್ಮ ಕೋಣೆಯನ್ನು ಆ ವಿಶೇಷ ದಿನಕ್ಕಾಗಿ ಸಜ್ಜುಗೊಳಿಸಲು ಇಂದು ನಾವು ಕೆಲವೊಂದು ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರೇಮಿಗಳಿಗಾಗಿ 7 ವಿಶೇಷ ದಿನಗಳ ವಿಶೇಷತೆ

ಬಾಲ್ಕನಿ:
ನಿಮ್ಮ ಬೆಡ್‌ರೂಮ್ ಬಾಲ್ಕನಿಯನ್ನು ಹೊಂದಿದ್ದರೆ ಅದನ್ನು ವಿಶೇಷವಾಗಿ ಸಜ್ಜುಗೊಳಿಸಿ. ಏಕಾಂತಮಯ ಸನ್ನಿವೇಶವನ್ನು ನಿಮ್ಮ ಬಾಲ್ಕನಿಗೂ ದಯಪಾಲಿಸಿ. ನಗರದ ಗಿಜಿಗುಡುವಿಕೆ ನಿಮ್ಮ ಪ್ರಶಾಂತತೆಯನ್ನು ಹಾಳುಗೆಡವಬಹುದು ಆದ್ದರಿಂದ ಬಾಲ್ಕನಿಯ ಸುಂದರತೆ ನಿಮ್ಮ ಕೊಠಡಿಗೂ ಒಂದು ವಿಶೇಷತೆಯನ್ನು ದಯಪಾಲಿಸುತ್ತದೆ.

ವೈನ್:
ನಿಮ್ಮ ಸಂಗಾತಿಯೊಡನೆ ಮಾತನಾಡುತ್ತಿರುವಾಗ ಸ್ವಲ್ಪ ವೈನ್ ಗುಟುಕೇರಿಸುವುದು ನಿಮ್ಮ ರೊಮ್ಯಾಂಟಿಕ್ ಭಾವನೆಯನ್ನು ಮುದಗೊಳಿಸುತ್ತದೆ. ಕ್ಯಾಂಡಲ್‌ನ ಸುತ್ತಲೂ ವೈನ್ ಬಾಟಲಿಯನ್ನು ಇಟ್ಟುಕೊಂಡು ನಿಮ್ಮ ಸಂಗಾತಿಯೊಂದಿಗೆ ಈ ರಸನಿಮಿಷವನ್ನು ನಿಮ್ಮದಾಗಿಸಿಕೊಳ್ಳಿ.

ಸಂಗೀತ:
ಲಘು ಸಂಗೀತ ನಿಮ್ಮ ಪ್ರೀತಿಯ ದ್ಯೋತಕದಂತೆ. ನಿಮ್ಮ ಪ್ರೇಯಸಿ ಅಥವಾ ಪ್ರಿಯಕರನಿಗೆ ಇಷ್ಟವಾಗುವ ಸಂಗೀತ ನಿಮ್ಮ ಕೋಣೆಯಲ್ಲಿರಲಿ. ರೊಮ್ಯಾಂಟಿಕ್ ಅಥವಾ ಸುಂದರವಾದ ಪ್ರೀತಿಯ ಹಾಡು ಹಿನ್ನಲೆಯಾಗಿರಲಿ.

ಕ್ಯಾನೊಪಿ:
ವ್ಯಾಲಂಟೇನ್ ದಿನದ ವಿಶೇಷತೆಗಾಗಿ ನಿಮ್ಮ ಬೆಡ್ ಕ್ಯಾನೋಪಿ ಅದ್ಭುತವಾಗಿರಲಿ.

ಬಣ್ಣ:
ನಿಮ್ಮ ಮನದ ಕನ್ಯೆಯಲ್ಲಿ ರೊಮ್ಯಾಂಟಿಕ್ ಮೂಡ್ ಅನ್ನು ಉದ್ರೇಕಿಸುವಂತಹ ಬಣ್ಣ ನಿಮ್ಮ ಕೋಣೆಯದಾಗಿರಲಿ. ಕೆಂಪು ಅಥವಾ ನೀಲಿ ತೆಳು ಗೋಲ್ಡನ್ ಬಣ್ಣ ಅಥವಾ ಕ್ರೀಂ ಕಲರ್ ನಿಮ್ಮ ಕೋಣೆಯ ಬಣ್ಣವಾಗಿರಲಿ.

ಬೆಡ್ಡಿಂಗ್:
ವ್ಯಾಲಂಟೇನ್ ದಿನಕ್ಕಾಗಿ ನೀವು ವಿಶೇಷವಾಗಿ ಸಜ್ಜುಗೊಳಿಸಬೇಕಾಗಿರುವುದರಿಂದ ಸಿಲ್ಕ್ ಅಥವಾ ಸ್ಯಾಟೀನ್ ಬೆಡ್ ಅನ್ನು ಆರಿಸಿಕೊಳ್ಳಿ.

ಕರ್ಟನ್ಸ್:
ಕರ್ಟನ್‌ಗಳು ಲೈಟ್ ಕಲರ್‌ನಲ್ಲಿರಲಿ ಮತ್ತು ವಿನ್ಯಾಸದಿಂದ ಕೂಡಿರಲಿ. ಮಂದವಾದ ಗಾಳಿಗೆ ಹಾರುತ್ತಿರುವ ನೆಲತಾಕುವ ಕರ್ಟನ್‌ಗಳು ನಿಮ್ಮ ಕೋಣೆಯನ್ನು ಅಲಂಕರಿಸಲಿ.

ಹೂವುಗಳು:
ವ್ಯಾಲಂಟೇನ್ ದಿನದ ಮಹತ್ವವನ್ನು ಸಾರಲು ನಿಮ್ಮ ಕೋಣೆಯ ಅಲಂಕಾರದೊಂದಿಗೆ ಹೂವುಗಳು ಇರಲೇಬೇಕು. ಕೆಂಪು ಗುಲಾಬಿ ಪ್ರೀತಿಯ ದ್ಯೋತಕದಂತೆ. ನಿಮ್ಮ ಹಾಸಿಗೆಯ ಮೇಲೆ ಗುಲಾಬಿ ಎಸಳುಗಳನ್ನು ಚೆಲ್ಲಿ ಅಥವಾ ನಿಮ್ಮ ಮನದ ಕನ್ಯೆಯ ಇಷ್ಟದ ಹೂವನ್ನು ಇದಕ್ಕಾಗಿ ಆರಿಸಿ.

ಕ್ಯಾಂಡಲ್‌ಗಳು:
ವ್ಯಾಲಂಟೇನ್ ದಿನಕ್ಕಾಗಿ ನಿಮ್ಮ ಕೋಣೆಯ ಅಲಂಕಾರದೊಂದಿಗೆ ಕ್ಯಾಂಡಲ್‌ಗೂ ಪ್ರಾಧಾನ್ಯತೆ ಇರಲಿ. ಸರಿಯಾದ ಸ್ಥಳದಲ್ಲಿ ಅವುಗಳನ್ನು ಇರಿಸಿ.

ಲೈಟಿಂಗ್:
ಕೋಣೆಯನ್ನು ಲೈಟಿಂಗ್‌ನಿಂದ ಝಗಮಗಿಸುವುದು ಕೂಡ ನಿಮ್ಮ ಕೋಣೆಯ ಅಂದವನ್ನು ಪ್ರಕಟಪಡಿಸುತ್ತದೆ. ಡಿಮ್ ಲೈಟಿಂಗ್ ನಿಮ್ಮ ಕೋಣೆಯಲ್ಲಿರಲಿ ಮತ್ತು ಕಣ್ಣಿಗೆ ರಾಚುವಂತಹ ಬೆಳಕು ಬೇಡ.



Click it and Unblock the Notifications