Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕ್ರಿಸ್ಮಸ್ ಗೆ ಸಾಂಪ್ರದಾಯಿಕ ಶೈಲಿಯ ಅಲಂಕಾರ
ಕ್ರಿಸ್ಮಸ್ ಎನ್ನುವುದು ದೀಪಗಳು, ಪ್ರೀತಿ ಹಾಗೂ ಸಂಪ್ರದಾಯದ ರಜಾದಿನಗಳ ಹಬ್ಬ. ನಾವೆಲ್ಲರೂ ಜತೆ ಸೇರಿ ಯಾವುದನ್ನೂ ಕಳಕೊಳ್ಳದೆ ಹಬ್ಬವನ್ನು ಆಚರಿಸುತ್ತೇವೆ. ಇದು ಕ್ರಿಸ್ಮಸ್ ಗಿಡ ಅಥವಾ ಮನೆಯನ್ನು ದೀಪಗಳಿಂದ ಅಲಂಕರಿಸುವುದೇ ಆಗಿರಬಹುದು, ನಮ್ಮ ಮನೆ ಸುಂದರವಾಗಿ ಕಾಣಿಸಬೇಕೆಂದು ಬಯಸುತ್ತೇವೆ. ಎಲ್ಲರೂ ಈ ರಜಾ ಸಮಯದ ಹಬ್ಬದ ನಿರೀಕ್ಷೆಯಲ್ಲಿರುತ್ತಾರೆ.
ಸಾಂಪ್ರದಾಯಿಕ ಕ್ರಿಸ್ಮಸ್ ಅಲಂಕಾರಕ್ಕೆ ತನ್ನದೇ ಆದ ಒಂದು ಶೈಲಿಯಿದೆ. ಹಬ್ಬವನ್ನು ತುಂಬಾ ಸಡಗರ ಮತ್ತು ಅದ್ದೂರಿಯಾಗಿ ಆಚರಿಸಲು ಅಲಂಕಾರವನ್ನು ಪ್ರತೀ ವರ್ಷ ಆಧುನೀಕರಣವಾಗುತ್ತದೆ. ಕೆಲವೊಂದು ವಿಷಯಗಳು ಹಬ್ಬದ ದಿನದ ಸಡಗರವನ್ನು ಇಮ್ಮಡಿಗೊಳಿಸಬಹುದು. ಮತ್ತೆ ಕೆಲವು ಮಕ್ಕಳು ಈ ಹಬ್ಬವನ್ನು ತುಂಬಾ ಮೋಜು ಮತ್ತು ಮನರಂಜಕವಾಗಿ ಆಚರಿಸುವಂತೆ ಮಾಡಬಹುದು. ನಿಮ್ಮ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸಲು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವಂತಹ ಕೆಲವೊಂದು ಟಿಪ್ಸ್ ಗಳನ್ನು ಪಾಲಿಸಬೇಕು.

ಕ್ರಿಸ್ಮಸ್ ಅನ್ನು ತುಂಬಾ ಸಾಂಪ್ರದಾಯಿಕವಾಗಿ ಆಚರಿಸಬೇಕೆಂದು ಯೋಚಿಸಿದರೆ ಆಗ ನಮ್ಮ ತಲೆಗೆ ಹೊಳೆಯುವುದು ಕೆಂಪು. ಹೌದು, ಸಾಂತಾ ಕೆಂಪು ಬಣ್ಣದ ಬಟ್ಟೆ ಧರಿಸುತ್ತಾನೆ ಮತ್ತು ಮನೆಯನ್ನು ಅಲಂಕರಿಸುವ ಪ್ರತಿಯೊಂದು ವಸ್ತುವು ಕೆಂಪು ಬಣ್ಣದ್ದಾಗಿರುವಂತೆ ನೋಡಿಕೊಳ್ಳಬೇಕು. ಸಾಂಪ್ರದಾಯಿಕ ಅಲಂಕಾರವು ನಿಮ್ಮ ಮನೆಯನ್ನು ತುಂಬಾ ಸುಂದರವಾಗಿ ಕಾಣಿಸುವಂತೆ ಮಾಡಿ, ಯಾವಾಗಲೂ ನೀವು ಅದರ ಬಗ್ಗೆ ಹೆಮ್ಮೆ ಪಡುವಂತೆ ಮಾಡಬಹುದು. ಈ ಕ್ರಿಸ್ಮಸ್ ಗೆ ನೀವು ಮನೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಅಲಂಕರಿಸಲು ನಿರ್ಧರಿಸಿದ್ದರೆ ಕೆಳಗೆ ಕೊಟ್ಟಿರುವ ಕೆಲವೊಂದು ಐಡಿಯಾಗಳನ್ನು ಪಾಲಿಸಿ.
ಕ್ರಿಸ್ಮಸ್ ಗೆ ಸಾಂಪ್ರದಾಯಿಕ ಅಲಂಕಾರ
ಸರಳವಾದರೂ ಆಕರ್ಷಕವಾಗಿರಲಿ
ಕ್ರಿಸ್ಮಸ್ ಗಿಡ ಹಬ್ಬದ ಪ್ರಮುಖ ಆಕರ್ಷಣೆ. ಇದನ್ನು ತುಂಬಾ ಸರಳವಾಗಿ ಕೋಬಾಲ್ಟ್ ನೀಲಿ ಅಥವಾ ಕೆಂಪು ಬಣ್ಣದಿಂದ ಅಲಂಕರಿಸಿ, ಆಗ ಅದು ಎದ್ದು ಕಾಣುತ್ತದೆ. ರಿಬ್ಬನ್ ಮತ್ತು ಹೊಳೆಯುವ ಬೆಳ್ಳಿಬಣ್ಣದ ದೀಪಗಳೊಂದಿಗೆ ಮೊಂಟೊನೆ ಕಲರ್ ನಿಂದ ಕ್ರಿಸ್ಮಸ್ ಗಿಡವನ್ನು ಅಲಂಕರಿಸಿ.
ಮಂಟೆಲ್ ಪೀಸ್ ನ್ನು ಬೆಳಗಿಸಿ
ಹಬ್ಬದ ಹೂಮಾಲೆಯೊಂದಿಗೆ ಒಡವೆ ಮತ್ತು ಕ್ಯಾಂಡಲ್ ಗಳಿಂದ ನೀವು ಮಂಟೆಲ್ ಪೀಸ್ ಅದ್ಭುತವಾಗಿ ನಿಮ್ಮದೇ ಶೈಲಿಯಲ್ಲಿ ಅಲಂಕರಿಸಬಹುದು. ಇದು ಫರ್ನಿಚರ್ ಗೆ ವಿಶೇಷ ಮೆರಗು ನೀಡಿ ನಿಮ್ಮ ಕೋಣೆಗೆ ಹೊಸ ಕಳೆ ಬರುವಂತೆ ಮಾಡುತ್ತದೆ.
ಟೇಬಲ್ ಅಲಂಕಾರ
ನಿಮ್ಮ ಡೈನಿಂಗ್ ಟೇಬಲ್ ಗೆ ವಿವಿಧ ಬಗೆಯ ಹಣ್ಣುಗಳನ್ನು ತಂದು ಜೋಡಿಸಿ ಸಾಂಪ್ರದಾಯಿಕ ಅಲಂಕಾರ ಶೈಲಿ ಪಾಲಿಸಿ. ಕಿತ್ತಳೆ ಹಣ್ಣನ್ನು ಬಳಸಿ ನೀವು ಹಣ್ಣಿನ ಪಿರಾಮಿಡ್ ಮಾಡಬಹುದು. ಇದು ನಿಮ್ಮಲ್ಲಿ ಸಾಂಪ್ರದಾಯಿಕ ಕ್ರಿಸ್ಮಸ್ ಭಾವನೆ ಮೂಡಿಸಲಿದೆ.
ಕಾಗದದ ಶೃಂಗಾರ
ವಿಕ್ಟೋರಿಯನ್ ಕಾಲದಿಂದ ಕಾಗದದ ಅಲಂಕಾರವನ್ನು ಕ್ರಿಸ್ಮಸ್ ನ ಪ್ರಮುಖ ಅಂಗವೆಂದು ಪರಿಗಣಿಸಲಾಗಿದೆ. ನೀವು ಬಣ್ಣಬಣ್ಣದ ಕಾಗದದಿಂದ ಕೆಲವೊಂದು ಕಲಾಕೃತಿಗಳನ್ನು ಮಾಡಬಹುದು ಮತ್ತು ಅದರಿಂದ ಮನೆಯನ್ನು ಅಲಂಕಾರ ಮಾಡಬಹುದು. ಉಡುಗೊರೆಯನ್ನು ಪ್ಯಾಕ್ ಮಾಡಲು ಇದನ್ನು ಬಳಸಬಹುದು.
ಸಭಾಂಗಣದ ದಾರಿ ಅಲಂಕರಿಸಿ
ಚಳಿಗಾಲದ ಬೆರ್ರಿ ಹಣ್ಣುಗಳಿಂದ ಮಾಡಿದ ಮಾಲೆಗಳಿಂದ ನಿಮ್ಮ ಸಭಾಂಗಣದ ದಾರಿ ಅಲಂಕರಿಸಿ ನಿಮ್ಮ ಅತಿಥಿಗಳನ್ನು ಸ್ವಾಗತಿಸಿ. ಹಾರುವ ರಿಬ್ಬನ್ ಗಳೊಂದಿಗೆ ಹಸಿರು ಹೂಮಾಲೆಗಳಿಂದ ಸಂಭಾಗಣದ ದಾರಿ ಅಲಂಕರಿಸಿದರೆ ಅದು ತುಂಬಾ ಆಕರ್ಷಣೀಯ ಮತ್ತು ಹಳ್ಳಿಗಾಡಿನಂತೆ ಕಾಣುತ್ತದೆ. ಕೆಂಪು ಮತ್ತು ಹಸಿರು ಬಣ್ಣ ತುಂಬಾ ಸಾಂಪ್ರದಾಯಿಕ ಸಂಯೋಜನೆ.
ದ್ವಾರಮಂಟಪದ ಸ್ವಾಗತ
ಮುಂದಿನ ದ್ವಾರಮಂಟಪವು ನಿಮ್ಮ ಕ್ರಿಸ್ಮಸ್ ಅಲಂಕಾರದ ಮೊದಲ ಆಕರ್ಷಣೆಯಾಗಿರುತ್ತದೆ. ಆದ್ದರಿಂದ ಮುಂದಿನ ದ್ವಾರಮಂಟಪಕ್ಕೆ ಅದ್ಭುತವಾಗಿರುವಂತಹ ಮಾಲೆ ಹಾಕಿ. ದ್ವಾರದ ಸುತ್ತ ಕಂದೀಲುಗಳನ್ನು ನೇತಾಡಿಸಿ, ಪೈನ್ ಮರದ ಎಲೆಗಳೊಂದಿಗೆ ಪ್ರಜ್ವಲಿಸುವ ದೀಪಗಳಿಂದ ಅಲಂಕಾರ ಮಾಡಿ.
ಮಿನುಗುವ ಶಾಂಡೆಲಿಯೆರ್
ನಿಮ್ಮ ಮನೆಯಲ್ಲಿ ಮಿನುಗುವ ಶಾಂಡೆಲಿಯೆರ್ ಇದ್ದರೆ ಆಗ ನೀವು ಕೆಲವೊಂದು ಆಭರಣಗಳು ಫಳಫಳ ಹೊಳೆಯುವಂತೆ ಮಾಡುಬಹುದು. ಕೆಲವು ಕಂದೀಲುಗಳು ನೇತಾಡುತ್ತಿದ್ದರೆ ಅದಕ್ಕೆ ಮತ್ತೊಂದಿಷ್ಟು ಸೇರಿಸಿ.
ಲಿವಿಂಗ್ ರೂಮನ್ನು ಅಲಂಕರಿಸಿ
ನಿಮ್ಮ ಲಿವಿಂಗ್ ರೂಮನ್ನು ಸುಂದರವಾದ ಕ್ರಿಸ್ಮಸ್ ಗಿಡ ಮತ್ತು ರಜೆಯ ಕೆಲವೊಂದು ವಸ್ತುಗಳೊಂದಿಗೆ ಶೃಂಗರಿಸಿ. ಫರ್ನಿಚರ್ ಗಳಿಗೆ ಬಣ್ಣಬಣ್ಣದ ತಲೆದಿಂಬು, ಕಿಟಕಿಗಳಿಗೆ ಗಾಢಬಣ್ಣದ ಕರ್ಟೈನ್ ಮತ್ತು ಗೋಡೆಗಳಿಗೆ ಹೂವಿನ ಮಾಲೆಗಳನ್ನು ನೇತಾಡಿಸಿ.
ಈ ಕ್ರಿಸ್ಮಸ್ ಗೆ ನಿಮ್ಮ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸುವ ಐಡಿಯಾಗಳು ಇಲ್ಲಿವೆ. ಕೆಲವೊಂದು ಸಣ್ಣ ವಿಷಯಗಳೊಂದಿಗೆ ನಿಮ್ಮ ಕ್ರಿಸ್ಮಸ್ ಅನ್ನು ತುಂಬಾ ಸಂಭ್ರಮದಿಂದ ಆಚರಿಸಿ ಮತ್ತು ಸಂಪ್ರದಾಯವು ಮುಂದುವರಿಯುವಂತೆ ಮಾಡಿ.



Click it and Unblock the Notifications











