Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕ್ರಿಸ್ಮಸ್ ಟ್ರೀ ಅಲಂಕರಿಸಲು ಕೆಲ ಟಿಪ್ಸ್
ಮತ್ತೊಮ್ಮೆ ಕ್ರಿಸ್ಮಸ್ ಹತ್ತಿರ ಬಂದೇ ಬಿಟ್ಟಿತು. ಈ ಹಬ್ಬದ ಸಂದರ್ಭದಲ್ಲಿ ನೀವು ನಿಮ್ಮ ಮನೆಯವರೊಂದಿಗೆ ಕೂತು ಕ್ರಿಸ್ಮಸ್ ಗೀತೆಗಳನ್ನು ಹಾಡುತ್ತಾ ಕ್ರಿಸ್ಮಸ್ ಮರವನ್ನು ಅಲಂಕರಿಸುತ್ತೀರಿ. ಕ್ರಿಸ್ಮಸ್ ಮರದ ಅಲಂಕಾರ ದೀಪಗಳು ಮತ್ತು ಆಭರಣಗಳಿಲ್ಲದೆ ಪೂರ್ತಿಯಾಗುವುದಿಲ್ಲ. ಈ ವರ್ಷ ಕ್ರಿಸ್ಮಸ್ ಮರವನ್ನು ಅಲಂಕರಿಸಲು ನಾವು ಮತ್ತೊಂದಿಷ್ಟು ಸಲಹೆಗಳನ್ನು ನೀಡುತ್ತೇವೆ.
ಬೋಲ್ಡ್ ಸ್ಕೈ ನಿಮ್ಮ ಕ್ರಿಸ್ಮಸ್ ಮರವನ್ನು ಅಲಂಕರಿಸಲು ಕೆಲವು ಟಿಪ್ಸ್ ಗಳನ್ನು ಹೊತ್ತು ತಂದಿದೆ. ಕ್ರಿಸ್ಮಸ್ ಮರವನ್ನು ಅಲಂಕರಿಸುವುದು ಹಬ್ಬಕ್ಕೆ ಮತ್ತಷ್ಟು ಮೆರುಗನ್ನು ಮತ್ತು ನಿಮಗೆ ಇನ್ನಷ್ಟು ಸಂತೋಷವನ್ನು ತಂದುಕೊಡಲಿದೆ.

ದೀಪಗಳು
ಕ್ರಿಸ್ಮಸ್ ಮರದ ಅಲಂಕಾರದ ಬಹುಮುಖ್ಯ ಭಾಗ ಈ ದೀಪಗಳು. ಇವಿಲ್ಲದೆ ಅಲಂಕಾರ ಅಪೂರ್ಣವಾಗುತ್ತದೆ. ಫೆರಿ ಟೇಲ್ ಲೈಟ್ಸ್ ಸಾಂಪ್ರದಾಯಿಕ ವಿಧಾನದವು ಆದರೆ ಈ ವರ್ಷ ಅವಕ್ಕೆ ಬದಲಾಗಿ ನಿಯಾನ್ ಲೈಟ್ಸ್ ಬಳಸಿ ಇವು ಮರವನ್ನು ಮತ್ತಷ್ಟು ಅಂದವಾಗಿಸುತ್ತದೆ.
ಆಭರಣಗಳು
ಕ್ರಿಸ್ಮಸ್ ಆಭರಣಗಳನ್ನು ಕ್ರಿಸ್ಮಸ್ ಮರದ ಅಲಂಕಾರದಲ್ಲಿ ಬಳಸಲೇಬೇಕು. ನೀವೇನಾದರೂ ವಿಶೇಷವಾದ ರೀತಿಯದನ್ನು ಹುಡುಕುತ್ತಿರುವಿರಾದರೆ ಮಾರುಕಟ್ಟೆಯಲ್ಲಿ ಆ ಬಗೆಯ ಹಲವು ಆಭರಣಗಳು ಸಿಗುತ್ತವೆ. ಈ ಬಾರಿ ಗಾಜಿನ ಆಭರಣಗಳು ಲೇಟೆಸ್ಟ್ ಫ್ಯಾಷನ್ ಆಗಿ ಮಾರುಕಟ್ಟೆಗೆ ಬಂದಿದೆ. ಆದ್ದರಿಂದ ಇವುಗಳನ್ನು ಬಳಸಿ.
ಹತ್ತಿ
ಹತ್ತಿಯ ಉಂಡೆಗಳನ್ನು ಮಾಡಿ ಹಿಮದುಂಡೆಗಳಂತೆ ಮರದೆಲೆಗಳ ಮೇಲಿರಿಸಬಹುದು. ಇದರೊಂದಿಗೆ ಅಲ್ಲಲ್ಲಿ ಹತ್ತಿಯನ್ನು ಹಾಕಿ ಹಿಮ ಮರದ ಮೇಲೆ ಬಿದ್ದಿರುವಂತೆ ಕಾಣುವ ಹಾಗೆ ಮಾಡಬಹುದು.
ಉಡುಗೊರೆಗಳು
ಮರದ ಮೇಲೆ ಅಥವ ಕೆಳಗೆ ನಿಜವಾದ ಅಥವ ನಕಲಿ ಉಡುಗೊರೆಗಳ ಡಬ್ಬಗಳನ್ನು ಇರಿಸಬಹುದು. ಮಕ್ಕಳನ್ನು ಉಡುಗೊರೆಗಳು ಯಾವಾಗಲೂ ಆಕರ್ಷಿಸುತ್ತವೆ.
ಸಾಂಪ್ರದಾಯಿಕ ರೀತಿ
ಪ್ರತಿ ವರ್ಷ ಕ್ರಿಸ್ಮಸ್ ಮರದ ಮೇಲೆ ಒಂದು ಸಾಂಪ್ರದಾಯಿಕ ಆಭರಣವನ್ನು ಇಡುವುದರಿಂದ ಹಬ್ಬಕ್ಕೆ ಸಾಂಪ್ರದಾಯಿಕ ಕಳೆ ಹೆಚ್ಚುತ್ತದೆ.
ಕರಕುಶಲತೆ
ನಿಮ್ಮ ಮಕ್ಕಳು ಏನಾದರೂ ಕ್ರಾಫ್ಟ್ ತಾವೇ ಮಾಡಿ ಕ್ರಿಸ್ಮಸ್ ಮರವನ್ನು ಅಲಂಕರಿಸುವಂತೆ ಮಾಡಿ. ಇದರಿಂದ ಮರದ ಅಂದ ಹೆಚ್ಚುವುದಲ್ಲದೆ ಮಕ್ಕಳಿಗೆ ತಾವು ಮರವನ್ನು ಅಲಂಕರಿಸಿದ ಖುಷಿಯಿರುತ್ತದೆ.
ಇವು ನಿಮ್ಮ ಕ್ರಿಸ್ಮಸ್ ಮರವನ್ನು ಅಲಂಕರಿಸುವ ಕೆಲವು ಟಿಪ್ಸ್.



Click it and Unblock the Notifications