Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಳಿಗಾಲಕ್ಕೆ ಮನೆಗೆ ಒಪ್ಪುವ ಕರ್ಟನ್ ಬಣ್ಣಗಳು
ಚಳಿಗಾಲದಲ್ಲಿ ನಿಮ್ಮ ಮನೆಗೆ ಒಪ್ಪುವ ಕರ್ಟನ್ ಬಣ್ಣಗಳು
ಮನೆಯನ್ನು ಹೊಂದಿದರೆ ಮಾತ್ರ ಮುಗಿದು ಹೋಗುವುದಿಲ್ಲ, ಅದರ ಅಂದ,ಚಂದ ಮತ್ತು ವ್ಯವಸ್ಥೆಗಳನ್ನು ನೋಡಿಕೊಂಡರೆ ತಾನೇ ಅದರ ಸೊಬಗು ಇಮ್ಮಡಿಸುವುದು. ನೀವು ವಾಸಿಸುವ ಮನೆಯಲ್ಲಿ ನಿಮ್ಮ ರುಚಿ ಮತ್ತು ಅಭಿರುಚಿಗಳು ಕಣಕಣದಲ್ಲಿ ಅಡಗಿ, ಆಹ್ಲಾದಕತೆ ಮತ್ತು ಪ್ರಶಾಂತತೆಯನ್ನು ಹೊಮ್ಮಿಸುತ್ತಿರಬೇಕು. ಹೀಗೆ ಮನೆಯ ಸೌಂದರ್ಯ ಮತ್ತು ಸೊಬಗು ಮಾಲೀಕನ ಅಭಿರುಚಿಯನ್ನು ಒಟ್ಟಾರೆಯಾಗಿ ಬಿಂಬಿಸುತ್ತಿರಬೇಕು. ಮನೆಯ ಒಳಾಂಗಣವು ಮನೆಯಲ್ಲಿರುವ ವಾಸಕ್ಕೆ ಹೇಳಿ ಮಾಡಿಸಿದಂತಿರಬೇಕು. ಮನೆಯ ಕಿಟಕಿ ಮತ್ತು ಬಾಗಿಲುಗಳಿಗೆ ಹಾಕುವ ಕರ್ಟನ್‍ಗಳು ( ಪರದೆಗಳು) ನಿಮ್ಮ ಖಾಸಗಿ ಸ್ಥಳಗಳನ್ನು ವಿಭಾಗಿಸುತ್ತವೆ. ಅಷ್ಟೇ ಎಂದು ಅವುಗಳ ಬಗ್ಗೆ ಅಸಡ್ಡೆಯನ್ನು ತೋರದಿರಿ. ಅವುಗಳು ನಿಮ್ಮ ಮನೆಯ ಮೆರಗನ್ನು ಹೆಚ್ಚಿಸುವ ಪೋಷಕ ಅಂಗಗಳು ಎಂದು ಮರೆಯಬೇಡಿ.
ಪ್ರತಿಯೊಬ್ಬರ ಮನೆಯಲ್ಲಿರುವ ಕರ್ಟನ್‍ಗಳು ಆ ಮನೆಯ ನೈಜ ಸೌಂದರ್ಯವನ್ನು ವಿವರಿಸುತ್ತವೆ. ನಿಜವಾಗಿ ಹೇಳಬೇಕೆಂದರೆ ಮನೆಯ ಸೌಂದರ್ಯವು ಅಭಿವ್ಯಕ್ತಗೊಳ್ಳುವುದೇ ಈ ಕರ್ಟನ್‍ಗಳಲ್ಲಿ. ಕಿಟಕಿ ಮತ್ತು ಬಾಗಿಲಿಗೆ ನೇತು ಹಾಕಲ್ಪಡುವ ಈ ಕಲಾತ್ಮಕ ಬಟ್ಟೆಗಳು ಮನೆಯ ಅಂದವನ್ನು ದ್ವಿಗುಣಗೊಳಿಸುತ್ತವೆ. ಹಾಗೆಂದು ಇವು ಬರೀ ಅಂದಕ್ಕೆ ಮಾತ್ರ ಪ್ರಯೋಜನಕ್ಕೆ ಬರುವ ಬಟ್ಟೆಗಳು ಎಂದು ಭಾವಿಸಬೇಡಿ. ಚಳಿಗಾಲದ ನಡುಗಿಸುವ ಚಳಿಯ ದಿನಗಳಲ್ಲಿ ಮನೆಯನ್ನು ಬೆಚ್ಚಗಿಡುವ ಕೆಲಸವನ್ನು ಈ ಕರ್ಟನ್‍ಗಳು ಮಾಡುತ್ತವೆ. ಅದಕ್ಕಾಗಿ ಚಳಿಗಾಲಕ್ಕೆ ಒಪ್ಪುವ ಫ್ಯಾಬ್ರಿಕ್ ಕರ್ಟನ್‍ಗಳನ್ನು ಕೊಳ್ಳುವುದು ಉತ್ತಮ. ಹಾಗೆಂದು ಯಾವುದೆಂದರೆ ಆ ಬಣ್ಣದ ಕರ್ಟನ್‍ಗಳನ್ನು ಕೊಳ್ಳುವ ಮೊದಲು ಸ್ವಲ್ಪ ಯೋಚಿಸಿ, ಬಣ್ಣಗಳು ಕೇವಲ ಅಂದಕ್ಕೆ ಅಷ್ಟೇ ಅಲ್ಲ, ಅವುಗಳು ಶಕ್ತಿಯನ್ನು ಹೀರಿಕೊಳ್ಳುವ ಗುಣ್ಗಳನ್ನು ಹೊಂದಿರುತ್ತವೆ. ಇಲ್ಲಿ ನಾವು ನಿಮಗಾಗಿ ಚಳಿಗಾಲದಲ್ಲಿ ನಿಮ್ಮ ಮನೆಗೆ ಒಪ್ಪುವ ಕೆಲವು ಕರ್ಟನ್ ಬಣ್ಣಗಳನ್ನು ಸೂಚಿಸಿದ್ದೇವೆ, ಇಷ್ಟವಾದರೆ ತಡ ಮಾಡಬೇಡಿ! ಚಳಿಯಾಗುತ್ತಿದೆ ಹೋಗಿ ಬೇಗ ತನ್ನಿ.

1. ಮಣ್ಣಿನ ಬಣ್ಣಗಳಿಗೆ ಒತ್ತು ನೀಡಿ.
ಕೆಲವು ಬಣ್ಣಗಳು ಭೂಮಿಯ ಬಣ್ಣವನ್ನು ಹೋಲುತ್ತವೆ, ಈ ಬಣ್ಣಗಳು ನಮ್ಮ ಕೋಣೆಗಳ ಸೊಬಗನ್ನು ಹೆಚ್ಚು ಮಾಡುತ್ತವೆ. ಒಂದು ವೇಳೆ ನಿಮ್ಮ ಗೋಡೆಗಳ ಬಣ್ಣವೇನಾದರು ತೆಳ್ಳಗೆ ಇದ್ದಲ್ಲಿ ಈ ಬಣ್ಣಗಳು ನಿಸ್ಸಂಶಯವಾಗಿ ನಿಮ್ಮ ಕೋಣೆಗಳಿಗೆ ಒಪ್ಪುತ್ತದೆ. ಅದರಲ್ಲೂ ನೀವು ಪ್ಲೇನ್ ಆಗಿರುವ ಬಣ್ಣಗಳ ಬದಲು ಪ್ಯಾಟ್ರನ್ ಇರುವ ಬಣ್ಣಗಳನ್ನು ಬಳಸುವುದು ಉತ್ತಮ. ಮನೆಯನ್ನು ಸಿಂಗರಿಸುವಲ್ಲಿ ಕರ್ಟನ್‍ಗಳು ವಿಶೇಷವಾದ ಪಾತ್ರವನ್ನು ನಿರ್ವಹಿಸುತ್ತವೆ. ಅದರಲ್ಲು ಚಳಿಗಾಲದಲ್ಲಿ ಇವುಗಳ ಪಾತ್ರವು ಅತ್ಯಾವಶ್ಯಕ.
2. ಕೆಂಪು ಬಣ್ಣಕ್ಕೆ ಆಧ್ಯತೆ ನೀಡಿ.
ಕೆಂಪು ಬಣ್ಣದ ಕರ್ಟನ್‍ಗಳು ಯಾವಾಗಲು ಉತ್ತಮವಾದ ಮೆರಗನ್ನು ನೀಡುತ್ತಿರುತ್ತವೆ. ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದ ಬಣ್ಣವಾಗಿದ್ದು, ನಿಮಗೆ ಅಗತ್ಯವಾಗಿರುವ ಸೌಂದರ್ಯವನ್ನು ನೀಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ಕೋಣೆಗಳನ್ನು ಬೆಚ್ಚಗಿಡುವಂತಹ ಕೆಂಪು ಬಣ್ಣದ ಪರದೆಗಳನ್ನು ಖರೀದಿಸಿ.
3. ಹಳದಿ
ಹಳದಿ ಬಣ್ಣದ ಕರ್ಟನ್‍ಗಳು ನಿಮ್ಮ ಮನೆಗ ಮನೋಹರವಾದ ಸೊಬಗನ್ನು ದಯಪಾಲಿಸುತ್ತವೆ. ಈ ಕರ್ಟನ್ ಬಣ್ಣಗಳು ನಿಮ್ಮ ಗೋಡೆಗೆ ಮೆರಗನ್ನು ನೀಡುವುದರ ಜೊತೆಗೆ, ನಿಮ್ಮ ಮನಸ್ಸಿಗೆ ಮುದವನ್ನು ಸಹ ನೀಡುತ್ತವೆ. ಇದರ ಜೊತೆಗೆ ಹಳದಿ ಬಣ್ಣವು ನಿಮ್ಮ ಕೋಣೆಗೆ ಅಗತ್ಯವಾಗಿರುವ ಬೆಳಕನ್ನು ಸಹ ನೀಡುತ್ತವೆ. ಹಾಗಾಗಿ ನಿಮ್ಮ ಮನೆಯ ಬಣ್ಣ ಮತ್ತು ಫ್ಲೋರಿಂಗ್‍ಗೆ ಒಪ್ಪುವಂತಿದ್ದರೆ ಹಳದಿ ಬಣ್ಣದ ಕರ್ಟನ್‍ಗಳನ್ನು ಖರೀದಿಸಿ.
4. ಕಿತ್ತಳೆ
ಇದು ಚಳಿಗಾಲಕ್ಕೆಂದು ಹೇಳಿ ಮಾಡಿಸಿದ ಬಣ್ಣವಾಗಿದೆ. ಇದರಿಂದ ನಿಮ್ಮ ಮನೆಗೆ ಒಂದು ಬಗೆಯ ಟ್ರೇಂಡಿ ಲುಕ್ ನೀಡಿದಂತಾಗುತ್ತದೆ. ಕಿತ್ತಳೆ ಬಣ್ಣವು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಕಿತ್ತಳೆ ಬಣ್ಣಗಳು ಉಷ್ಣವನ್ನು ಹಿಡಿದಿಡುವ ಗುಣಗಳನ್ನು ಹೊಂದಿವೆ.
5. ಬೋಲ್ಡ್ ಬಣ್ಣದ ಕರ್ಟನ್‍ಗಳು
ನಿಮ್ಮ ಗೋಡೆಯ ಬಣ್ಣಗಳು ಮಂಕಾಗಿದ್ದರೆ, ಬೋಲ್ಡ್ ಲುಕ್ ನೀಡುವ ಕರ್ಟನ್‍ಗಳನ್ನು ಖರೀದಿಸುವುದು ಉತ್ತಮ. ಇವು ನಿಮ್ಮ ಗೋಡೆಗಳಿಗೆ ಅಗತ್ಯವಾಗಿರುವ ಕಾಂಟ್ರಸ್ಟ್ ಅನ್ನು ನೀಡಿ ಅದರ ಸೊಬಗನ್ನು ಹೆಚ್ಚಿಸುತ್ತವೆ. ಈ ಬಣ್ಣಗಳು ಸಹ ನಿಮ್ಮ ಕೋಣೆಯನ್ನು ಬೆಚ್ಚಗಿಡಲು ಸಹಕರಿಸುತ್ತವೆ.
6. ಮರೂನ್ ಬಣ್ಣದ ಮೆರಗನ್ನು ನೀಡಿ
ಮರೂನ್ ( ಕುಂಕುಮ ಬಣ್ಣ) ಬಣ್ಣವು ನಿಮ್ಮ ಮನೆಯ ಪೀಠೋಪಕರಣಗಳಿಗೆ ನಿಸ್ಸಂಶಯವಾಗಿ ಹೊಂದಿಕೊಳ್ಳುವ ಬಣ್ಣವಾಗಿರುತ್ತದೆ. ನಿಮ್ಮ ಮನೆಯಲ್ಲಿನ ದೀಪಗಳು ಮತ್ತು ಕರ್ಟನ್‍ಗಳು ಸಹ ಹೊಂದಿಕೊಂಡು ನಿಮ್ಮ ಕೋಣೆಗಳ ಸೊಬಗನ್ನು ಹೆಚ್ಚಿಸುತ್ತವೆ. ಈ ಬಣ್ಣವು ಬೆಳಕನ್ನು ಹೀರಿಕೊಂಡು ಉಷ್ಣವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದ ಬಣ್ಣವಾಗಿರುತ್ತದೆ.
7. ಚಳಿಗಾಲದ ನೀಲಿ ( ವಿಂಟರ್ ಬ್ಲೂ)
ನೀಲಿ ಬಣ್ಣವು ಎಲ್ಲಾ ಮನೆಗಳಿಗು ಮತ್ತು ಎಲ್ಲಾ ಬಣ್ಣದ ಗೋಡೆಗಳಿಗು ಒಪ್ಪುವ ಗುಣವನ್ನು ತನ್ನಲ್ಲಿ ಹೊಂದಿದೆ. ಅದರಲ್ಲು ಗಿಡ, ಹೂ ಮತ್ತು ಬಣ್ಣಗಳಿಂದ ಸಮ್ಮಿಲಿತವಾದ ಕರ್ಟನ್‍ಗಳು ನಿಮ್ಮ ಮನೆಯ ಮೆರಗನ್ನು ಹೆಚ್ಚಿಸುತ್ತವೆ. ನಿಮ್ಮ ಮನೆಗೆ ಒಪ್ಪುವಂತಹ ಕರ್ಟನ್‍ಗಳನ್ನು ಖರೀದಿಸುವುದರಿಂದ ನಿಮ್ಮ ಮನೆಯ ಸೊಬಗು ಹೆಚ್ಚುತ್ತದೆ. ಅದು ಮನೆಯ ಯಾವುದೇ ಭಾಗವಾಗಿರಲಿ ಆ ಭಾಗಕ್ಕೆ ಒಪ್ಪುವ ಕರ್ಟನ್ ಖರೀದಿಸುವುದನ್ನು ಮರೆಯಬೇಡಿ.



Click it and Unblock the Notifications
