Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಲಂಕಾರಕ್ಕೆ 7 ಬಗೆಯ ಕ್ರಿಸ್ ಮಸ್ ಟ್ರೀಗಳು
ಕ್ರಿಸ್ ಮಸ್ ಗೆ ಕ್ರಿಸ್ ಮಸ್ ಟ್ರೀ ಒಂದು ಪ್ರಮುಖ ಆಕರ್ಷಣೆಯಾಗಿರುತ್ತದೆ. ಕ್ರಿಸ್ ಮಸ್ ಆಚರಿಸುವ ಪ್ರತಿಯೊಬ್ಬರ ಮನೆಯಲ್ಲಿ ಈ ಗಿಡ ಇದ್ದೇ ಇರುತ್ತದೆ. ಪ್ಲಾಸ್ಟಿಕ್ ಕ್ರಿಸ್ ಮಸ್ ಟ್ರೀ ಬಳಸಿ ನಂತರ ಬಿಸಾಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ.
ನೈಸರ್ಗಿಕವಾದ ಕ್ರಿಸ್ ಮಸ್ ಟ್ರೀ ಬೆಳೆಸುವುದು ಪ್ರಕೃತಿಗೆ ನಾವು ಕೊಡುವ ಕೊಡುಗೆಯಾಗಿದೆ. ಒಮ್ಮೆ ಗಿಡ ನೆಟ್ಟರೆ ಸಾಕು ಅನೇಕ ವರ್ಷಗಳವರೆಗೆ ಇರುತ್ತದೆ. ಈ ಭಾರಿಯ ಕ್ರಿಸ್ ಮಸ್ ಹಬ್ಬಕ್ಕೆ ನಿಮ್ಮ ನ ಮನೆಯಲ್ಲಿ ನೈಸರ್ಗಿಕವಾದ ಗಿಡ ಇಲ್ಲದಿದ್ದರೆ ಇಂದೇ ಈ ಗಿಡವನ್ನು ತಂದು ನೆಡಿ. ಆ ಗಿಡ ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷಕ್ಕೆ ಚೆನ್ನಾಗಿ ಬೆಳೆದಿರುತ್ತದೆ. ಆಗ ಆ ಗಿಡಕ್ಕೆ ಅಲಂಕಾರ ಮಾಡಬಹುದು. ಅಲ್ಲದೆ ಈ ಗಿಡ ಮನೆಯ ಸೊಬಗನ್ನು ಹೆಚ್ಚಿಸುತ್ತದೆ.
ಇಲ್ಲಿ ನಾವು ಕ್ರಿಸ್ ಮಸ್ ಹಬ್ಬದಲ್ಲಿ ಅಲಂಕಾರ ಮಾಡುವ 7 ಕ್ರಿಸ್ ಮಸ್ ಟ್ರೀಗಳ ಬಗ್ಗೆ ಹೇಳಿದ್ದೇವೆ ನೋಡಿ

ರೆಡ್ ಪೈನೆ
ಈ ಗಿಡ ಉತ್ತರ ಅಮೇರಿಕ ಮತ್ತು ಕೆನಡಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಕ್ರಿಸ್ ಮಸ್ ಟ್ರೀ ತುಂಬಾ ಉದ್ದವಾಗಿ, ತುಂಬಾ ರೆಂಬೆಗಳಿಂದ ಕೂಡಿರುತ್ತದೆ.

ವೈಟ್ ಪೈನೆ
ಈ ಗಿಡ ಸಾಮಾನ್ಯವಾಗಿ ಯು ಎಸ್ ನಲ್ಲಿ ಕಂಡು ಬರುತ್ತದೆ. ತುಂಬಾ ಗೊಂಚಲು ಗೊಂಚಲಾಗಿರುವ ಈ ಗಿಡವನ್ನು ಕ್ರಿಸ್ ಮಸ್ ಗೆ ಅಲಂಕಾರ ಮಾಡಿದರೆ ತುಂಬಾ ಆಕರ್ಷಕವಾಗಿ ಕಾಣುವುದು.

ಆಸ್ಟ್ರೀಲಿಯಾದ ಪೈನೆ
ಈ ಗಿಡ ಕೆಳ ಭಾಗದಿಂದಲೇ ತುಂಬಾ ಕೊಂಬೆಗಳನ್ನು ಹೊಂದಿದ್ದು ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತದೆ.

ಬಾಲ್ಸಾಮ್ ಫೈರ್
ಈ ಕ್ರಿಸ್ ಮಸ್ ಟ್ರೀ ತುಂಬಾ ಸುವಾಸನೆಯನ್ನು ಹೊಂದಿರುತ್ತದೆ. ಈ ಗಿಡ ನೈಸರ್ಗಿಕವಾಗಿ ಅಲಂಕಾರ ಮಾಡದಷ್ಟು ಆಕರ್ಷಕವಾಗಿ ಕಾಣುತ್ತದೆ.

ಫ್ರಾಸರ್ ಫೈರ್
ಈ ನೀಲಿ ಹಸಿರು ಬಣ್ಣದ ಗಿಡ ನೋಡಲು ತುಂಬಾ ಆಕರ್ಷಕವಾಗಿದ್ದು ಇದರ ಎಲೆಗಳನ್ನು ಇತರ ಕ್ರಿಸ್ ಮಸ್ ಟ್ರೀಗೆ ಹೋಲಿಸಿದರೆ ದಪ್ಪವಾಗಿ ಅಗಲವಾಗಿ ಇರುತ್ತದೆ.

ವೈಟ್ ಸ್ಪ್ರೋಸ್
ಈ ಕ್ರಿಸ್ ಮಸ್ ಟ್ರೀ ನೋಡಲು ಆಕರ್ಷಕವಾಗಿದ್ದು ಇದನ್ನು ಅಲಂಕಾರಕ್ಕೆ ಬಳಸುತ್ತಾರೆ. ಈ ಗಿಡದ ಆಯಸ್ಸು ಇತರ ಕ್ರಿಸ್ ಮಸ್ ಗಿಡಗಳಿಗಿಂತ ಕಡಿಮೆ.

ಕೊಲೊರಾಡೊಬ್ಲೂ ಸ್ಪ್ರೋಸ್
ಈ ಕ್ರಿಸ್ ಮಸ್ ಟ್ರೀ ಕೂಡ ಅಲಂಕಾರಕ್ಕೆ ಸೂಕ್ತವಾಗಿದ್ದು ಇದರ ಸ್ವಲ್ಪ ನೀಲಿ ಬಣ್ಣ ಈ ಗಿಡದ ಪ್ರಮುಖ ಆಕರ್ಷಣೆಯಾಗಿದೆ.



Click it and Unblock the Notifications
