Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಕ್ಕಳ ಕೋಣೆ ಅಲಂಕಾರ ಹೀಗಿದ್ದರೆ ಚೆಂದ

ಮಕ್ಕಳ ಕೋಣೆಯನ್ನು ಕಲಾತ್ಮಕವಾಗಿ ಮಾಡುವ ಕೆಲವೊಂದು ಟಿಪ್ಸ್:
1. ಅಂಗೈ ಗುರುತು: ಮಕ್ಕಳ ಕೋಣೆ ಕ್ರಿಯೇಟಿವ್ ಆಗಿ ಕಾಣಬೇಕೆಂದರೆ ಅಂಗೈ ಗುರುತನ್ನು ಗೋಡೆಗಳ ಮೇಲೆ ಅಚ್ಚಿಳಿಸಬೇಕು. ನಿಮಗೆ ಇಚ್ಚೆ ಬಂದ ಬಣ್ಣವನ್ನು ಆರಿಸಿಕೊಳ್ಳಬಹುದು. ಮೊದಲು ಕೋಣೆಯ ಪೂರಾ ಗೋಡೆಗೆ ಗಾಢ ಬಣ್ಣ ಬಳಿದು ಅದಕ್ಕೆ ವಿರುದ್ಧವಾದ ಬಣ್ಣಗಳನ್ನು ಅಂಗೈ ಗುರುತಿಗೆ ಆರಿಸಿದರೆ ಚೆಂದ. ನಿಮ್ಮದು, ನಿಮ್ಮ ಮಕ್ಕಳದು ಎಲ್ಲರ ಅಂಗೈ ಗುರುತುಗಳೂ ಗೋಡೆಯ ಮೇಲಿರಲಿ, ಇವು ಕೇವಲ ಬಣ್ಣವಾಗಿ ಮಾತ್ರ ಉಳಿಯದೆ ಸುಮಧುರ ನೆನಪಿನಂತಿರುತ್ತದೆ.
2. ಸ್ಪಾಂಜ್ ಕಲರಿಂಗ್: ಗೋಡೆಗಳಿಗೆ ವೈವಿಧ್ಯವಾಗಿ ಬಣ್ಣ ಹಚ್ಚಲು ಸ್ಪಾಂಜ್ ಕೂಡ ಬಳಕೆಯಾಗುತ್ತದೆ. ಕೋಣೆಯನ್ನು ಗಾಢ ಬಣ್ಣಗಳಾದ ನೀಲಿ, ಕೆಂಪು ಅಥವಾ ಹಳದಿ ಬಣ್ಣದಿಂದ ಪೇಂಟ್ ಮಾಡಿ ನಂತರ ನಿಮಗೆ ಬೇಕಾದ ಆಕಾರದಲ್ಲಿ ಸ್ಪಾಂಜ್ ಅಳತೆ ಆಯ್ಕೆ ಮಾಡಿಕೊಂಡು ತಿಳಿಬಣ್ಣದಿಂದ ಗೋಡೆಯ ಮೇಲೆ ಚಿತ್ತಾರ ಮೂಡಿಸಬಹುದು. ಇದನ್ನು ಸುರಳಿಯಾಕಾರದಂತೆ ಬಣ್ಣ ಮಾಡಿದರೆ ಚೆಂದ. ಪೂರ್ಣಗೊಳ್ಳದ ಬಣ್ಣವೇ ಕಲಾತ್ಮಕತೆಯಾಗಿ ಹೊರಹೊಮ್ಮುತ್ತದೆ.
3. ಗೋಡೆಯ ಮೇಲೆ ಚಿತ್ತಾರ: ಇದು ತುಂಬಾ ಸುಲಭ ಮತ್ತು ಸಾಮಾನ್ಯವಾದ ಪೇಂಟ್ ವಿಧಾನ. ಮೊದಮೊದಲು ಮಕ್ಕಳು ಬಿಡಿಸುವ ಸಾಮಾನ್ಯ ಚಿತ್ತಾರಗಳಾದ ಹೂವು, ಕಾಮನ ಬಿಲ್ಲು, ಚಂದ್ರ, ತಾರೆ, ಮೋಡ ಇಂತಹವುಗಳನ್ನು ಹಾಸಿಗೆಯ ಎದುರಿಗಾಗುವಂತೆ ಬಿಡಿಸಿ. ಇದು ಕೋಣೆಗೆ ಕ್ರಿಯೇಟಿವ್ ಲುಕ್ ಕೊಡುತ್ತೆ.
4. ರೇಡಿಯಂ ಸ್ಟಿಕ್ಕರ್: ಬುಕ್ ಶಾಪ್ ಗಳಲ್ಲಿ ಸಿಗುವ ರೇಡಿಯಂ ಸ್ಟಿಕ್ಕರ್ ಗಳನ್ನು ಗೋಡೆಯ ಮೇಲ್ಛಾವಣಿಗೆ ಅಂಟಿಸಿದರೆ ರಾತ್ರಿ ಹೊತ್ತು ಚಿಕ್ಕ ಖಗೋಳ ನೋಡಿದಂತೆ ಕಾಣುತ್ತದೆ. ಇದು ಮಕ್ಕಳಿಗೆ ಸಂತೋಷ ನೀಡುತ್ತದೆ.
5. ಸ್ಟ್ರೇ ಪೇಂಟಿಂಗ್: ಏನೂ ಮಾಡದೆಯೇ ಕಲರ್ ಅನ್ನು ಗೋಡೆಯ ಮೇಲೆ ಸ್ಪ್ರೇ ಮಾಡಿದರೆ ಆಯಿತು, ಅದೇ ಒಂದು ಚಿತ್ತಾರವಾಗಿ ಮೂಡುತ್ತದೆ. ತಮಗೆ ಇಷ್ಟ ಬಂದಂತೆ ಸ್ಪ್ರೇ ಮಾಡಿದರೆ ಅದೇ ಡಿಫರೆಂಟ್ ಲುಕ್ ಕೊಡುತ್ತೆ.
6. ಗಾಚ್ ಪಾಚ್ ಪೇಂಟ್: ಇದು ತುಂಬಾ ಸರಳ ವಿಧಾನ. ಮಕ್ಕಳ ಕೈಯ್ಯಲ್ಲಿ ಏನಾದರೂ ಚಿತ್ರ ಬರೆಯಲು ಬಿಟ್ಟರೆ ಅದೇ ಗೋಡೆಗೆ ಚೆಂದ ಕಾಣುತ್ತೆ. ನೆನಪುಗಳೂ ಕೂಡ ಗೋಡೆಗಳಲ್ಲಿ ಪ್ರತಿಬಿಂಬಿಸುವಂತೆ ಮಾಡುತ್ತೆ. ಮಕ್ಕಳು ಬರೆದು ಮುಗಿದ ಮೇಲೆ ಕೊನೆಗೆ ನೀವು ಅದನ್ನು ಸ್ವಲ್ಪ ಸರಿಪಡಿಸಿ, ಇದರಿಂದ ಮಕ್ಕಳೂ ಫುಲ್ ಖುಷ್.
ಮಕ್ಕಳಿಗೆ ತಮ್ಮ ರೂಮನ್ನು ಚಿತ್ತಾರಗೊಳಿಸಲು ಅವರಿಗೇ ಅವಕಾಶ ನೀಡಿ. ಇದು ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿದಂತೆಯೂ ಆಗುತ್ತದೆ. ಆದರೆ ಪೇಂಟ್ ಮಾಡುವ ಮುನ್ನ ಸೂಕ್ತ ಸಲಹೆಗಳನ್ನು ಪಾಲಿಸಿ. ಕೆಮಿಕಲ್ ಗಳು ತಾಗದಂತೆ ಕೈಗಳಿಗೆ ಗ್ಲೌಸ್ ಹಾಕಿಸಿ ಪೇಂಟ್ ಮಾಡಿದ ನಂತರ ಸೋಪಿನಿಂದ ಚೆನ್ನಾಗಿ ಕೈ ತೊಳೆಸಿಬಿಡಿ.



Click it and Unblock the Notifications
