Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಡ್‌ರೂಂನಲ್ಲಿ ಕೃಷ್ಣ-ರಾಧೆಯ ಫೋಟೋ ಇಡಬಹುದೇ? ವಾಸ್ತು ಶಾಸ್ತ್ರ, ಧಾರ್ಮಿಕ ನಂಬಿಕೆ ಹೇಳುವುದೇನು?
ಬಹುತೇಕ ಹಿಂದೂಗಳ ಮನೆಯಲ್ಲಿ ರಾಧಾ ಕೃಷ್ಣರ ಫೋಟೋವನ್ನು ಬೆಡ್‌ರೂಂನಲ್ಲಿ ಇಟ್ಟಿರುತ್ತಾರೆ. ರಾಧಾಕೃಷ್ಣ ಫೋಟೋವನ್ನು ಬೆಡ್‌ರೂಂನಲ್ಲಿ ಇಡಬಹುದೇ, ಇದಕ್ಕೆ ವಾಸ್ತುಶಾಸ್ತ್ರ ಏನು ಹೇಳುತ್ತದೆ, ಧಾರ್ಮಿಕ ನಂಬಿಕೆ ಪ್ರಕಾರ ರಾಧಾ-ಕೃಷ್ಣರ ಫೋಟೋ ಬೀರುವ ಪ್ರಭಾವವೇನು ಎಂದು ನೋಡೋಣ ಬನ್ನಿ:

ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ವಾಸ್ತು ನಂಬಿಕೆ ಪ್ರಕಾರ ರಾಧಾ ಕೃಷ್ಣರ ಫೋಟೋವನ್ನು ಬೆಡ್‌ರೂಂನಲ್ಲಿ ನೇತು ಹಾಕಿದರೆ ಒಳ್ಳೆಯದು, ಅದರಲ್ಲಿಯೂ ಈಶಾನ್ಯ ದಿಕ್ಕಿನಲ್ಲಿ ನೇತು ಹಾಕಿದರೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗಿದೆ. ರಾಧಾಕೃಷ್ಣರ ಪ್ರಣಯ ಫೋಟೋಗಳನ್ನು ಬೆಡ್‌ರೂಂನಲ್ಲಿ ನೇತು ಹಾಕಬಹುದು, ಬಾಲ ಕೃಷ್ಣನ ಫೋಟೋಗಳನ್ನು ನೇತು ಹಾಕಬಹುದು, ಆದರೆ ಮಹಾಭಾರತ ಕತೆಗೆ ಸಂಬಂಧಿಸಿದ ಶ್ರೀ ಕೃಷ್ಣ ಫೋಟೋಗಳನ್ನು ನೇತು ಹಾಕಬೇಡಿ.
ಬೆಡ್‌ರೂಂನಲ್ಲಿ ರಾಧಾಕೃಷ್ಣಯ ಫೋಟೋ ನೇತು ಹಾಕುವುದರ ಹಿಂದಿನ ಧಾರ್ಮಿಕ ನಂಬಿಕೆ
ಬೆಡ್‌ರೂಂನಲ್ಲಿ ರಾಧಾ ಕೃಷ್ಣರ ಫೋಟೋವನ್ನು ನೇತು ಹಾಕುವುದರಿಂದ ಗಂಡ-ಹೆಂಡತಿಯ ದಾಂಪತ್ಯ ಜೀವನ ಕೃಷ್ಣ-ರಾಧೆಯಂತೆ ಪ್ರಣಯಮಯವಾಗಿರುತ್ತದೆ, ಈ ಫೋಟೋ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದು ಹೇಳಲಾಗುವುದು. ಬೆಡ್‌ರೂಂನಲ್ಲಿ ಮಾತ್ರವಲ್ಲ ರಾಧಾಕೃಷ್ಣರ ಫೋಟೋವನ್ನು ಮನೆಯ ಹಾಲ್‌ನಲ್ಲಿಯೂ ನೇತು ಹಾಕಬಹುದು.
ಪರಿಶುದ್ಧ ಪ್ರೀತಿಯ ಪ್ರತೀಕ ಕೃಷ್ಣ-ರಾಧೆ
ಕೃಷ್ಣನ ಪ್ರೇಯಸಿ ರಾಧೆ, ಕೃಷ್ನ-ರಾಧೆಯ ಪ್ರೀತಿಗೆ ಎಲ್ಲೆ ಇಲ್ಲ, ಯಾವುದೇ ನಿರ್ಬಂಧಗಳಿಲ್ಲ, ಸ್ವಾರ್ಥವಿಲ್ಲ ತುಂಬಾನೇ ಪರಿಶುದ್ಧವಾದ ಪ್ರೀತಿ. ಕೃಷ್ಣನನ್ನು ಬಿಟ್ಟು ರಾಧೆ ಇಲ್ಲ, ರಾಧೆಯನ್ನು ಬಿಟ್ಟು ಕೃಷ್ಣ ಇಲ್ಲ. ಗಂಡ -ಹೆಂಡತಿ ಸಂಬಂಧವಾದರೆ ಕೂಡ ಅದೇ ರೀತಿ ಇರಬೇಕು, ಒಬ್ಬರನ್ನಬ್ಬರು ಎಂದಿಗೂ ಬಿಟ್ಟುಕೊಡಬಾರದು, ಅವರಲ್ಲಿನ ಪ್ರೀತಿಗೆ ಕೊನೆಯಿರಬಾರದು ಎಂಬುವುದರ ಸಂಕೇತವಾಗಿ ಕೃಷ್ಣ-ರಾಧೆಯ ಫೋಟೋವನ್ನು ಇಡಲಾಗುವುದು.
ಬೆಡ್‌ರೂಂ ಆಕರ್ಷಕವಾಗಿ ಕಾಣುವುದು ಅಲ್ಲದೆ ನೆಮ್ಮದಿ ಇರುತ್ತದೆ
ಗಂಡ-ಹೆಂಡತಿ ಸಂಬಂಧ ಚೆನ್ನಾಗಿದ್ದರೆ ನೆಮ್ಮದಿ ಇರುತ್ತದೆ. ಇನ್ನು ಬೆಡ್‌ರೂಂಗೆ ಬಂದಾಗ ಆ ರೂಂನಲ್ಲಿ ಶಾಂತತೆ ಇರಬೇಕು, ಅಲ್ಲಿರುವ ವಸ್ತುಗಳು ಮನಸ್ಸಿಗೆ, ಕಣ್ಣಿಗೆ ಖುಷಿ ನೀಡುವಂತೆ ಇರಬೇಕು. ಕೃಷ್ಣ ರಾಧೆಯ ಪೋಟೋ ನೋಡುವಾಗ ಅವರಲ್ಲಿ ಪ್ರೇಮಿಗಳನ್ನು ಕಾಣುತ್ತೇವೆ, ಆ ಪ್ರೇಮದ ಭಾವನೆ ನಮ್ಮಲ್ಲಿಯೂ ಮೂಡುವುದು ಅಲ್ಲದೆ ಈ ಫೋಟೋವಿದ್ದರೆ ಆ ಪರಿಸರ ಧನಾತ್ಮಕ ಶಕ್ತಿಯಿಂದ ಕುಡಿರುತ್ತದೆ, ಹೀಗಾಗಿ ತುಂಬಾ ಒಳ್ಳೆಯದು. ಈ ಫೋಟೋದ ದನಾತ್ಮಕ ಶಕ್ತಿ ಗಂಡ-ಹೆಂಡತಿ ಸಂಬಂಧವನ್ನು ಮಧುರವಾಗಿ ಇಡುತ್ದೆಎ ಎಂದು ನಂಬಲಾಗಿದೆ. ಶ್ರೀಕೃಷ್ಣ ದೈವಿಕ ಶಕ್ತಿ, ಆ ಶಕ್ತಿಯ ಪ್ರಭಾವ ನಮ್ಮ ಮೇಲಿರುತ್ತದೆ.
ಪ್ರೀತಿ ಸಂಬಂಧದ ಮೌಲ್ಯ ತಿಳಿಸುತ್ತದೆ
ಒಂದು ಸಂಬಂಧ ಉಳಿಯುವುದು, ಪ್ರೀತಿ, ಗೌರವ, ನಂಬಿಕೆ ಮೇಲೆ, ಕೃಷ್ಣ-ರಾಧೆಯ ಸಂಬಂಧ ಆ ಮೌಲ್ಯವನ್ನು ತಿಳಿಸುತ್ತದೆ, ಗಂಡ-ಹೆಂಡತಿ ಅನ್ಯೂನ್ಯವಾಗಿ ಇರಬೇಕೆಂದರೆ ಈ ನಂಬಿಕೆಗಳು ತುಂಬಾನೇ ಮುಖ್ಯ. ಎಷ್ಟೇ ಪ್ರೀತಿ ಇದ್ದರೂ ಅಲ್ಲಿ ಗೌರವ ಇಲ್ಲ, ನಂಬಿಕೆ ಇಲ್ಲ ಎಂದರೆ ಆ ಸಂಬಂಧದಲ್ಲಿ ಇರಲು ಯಾರಿಗೂ ಇಷ್ಟವಾಗಲ್ಲ. ಎಲ್ಲಿಯೂ ಗೌರವ ಕಡಿಮೆಯಾಗಬಾರದು, ನಂಬಿಕೆಗೆ ಪೆಟ್ಟಾಗಬಾರದು ಈ ರೀತಿ ಜೀವನ ಮಾಡಿದರೆ ವೈವಾಹಿಕ ಬದುಕು ತುಂಬಾನೇ ಸುಂದರವಾಗಿರುತ್ತದೆ.
ಕೃಷ್ಣ-ರಾಧೆ ಫೋಟೋ ಗಿಫ್ಟ್ ಅಗಿ ದೊರೆಯಬೇಕು
ಯಾವ ಫೋಟೋ ಖರೀದಿಸಬಾರದು, ಉಡುಗೊರೆಯಾಗಿ ಸಿಗಬೇಕು ಎಂಬ ನಂಬಿಕೆಯೂ ಇದೆ. ಸಾಮಾನ್ಯವಾಗಿ ಮದುವೆ, ಗೃಹ ಪ್ರವೇಶದಲ್ಲಿ ಕೃಷ್ಣ-ರಾಧೆ ಫೋಟೋಗಳನ್ನು ಉಡುಗೊರೆಯಾಗಿ ನೀಡುವುದು ಕೂಡ ಇದೇ ಉದ್ದೇಶಕ್ಕೆ. ಉಡುಗೊರೆಯಾಗಿ ಸಿಕ್ಕ ಕೃಷ್ಣ ರಾಧೆ ಫೋಟೋವನ್ನು ನಮ್ಮ ಮನೆಯಲ್ಲಿ ಇಂಥ ಫೋಟೋ ಇದೆ ಎಂದು ಹೇಳಿ ಬೇರೆಯವರಿಗೆ ಕೊಡಬೇಡಿ.



Click it and Unblock the Notifications
