Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಹೊಸದಾಗಿ ಮನೆ ಖರೀದಿ ಮಾಡುವುದಾದರೆ ಆ ಮನೆ ನಿಮಗೆ ಶುಭವಾಗಿರಲು ಈ ಅಂಶ ಗಮನಿಸಿ
ಒಂದು ಮನೆ ಖರೀದಿ ಮಾಡಬೇಕೆಂದು ಬಹುತೇಕರ ಕನಸಾಗಿರುತ್ತದೆ, ಆದರೆ ಮನೆ ಖರೀದಿ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನಹರಿಸಬೇಕು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ಮನೆಯ ಮುಖ್ಯ ದ್ವಾರ
ಯಾವುದೇ ಮನೆ ಖರೀದಿಸುವ ಮೊದಲು ನೀವು ಆ ಮನೆಯ ಮುಖ್ಯ ದ್ವಾರ ಯಾವ ಕಡೆಗೆ ಇರಬೇಕು ಎಂದು ನೋಡಲೇಬೇಕು.
ಮನೆಯ ಮುಂಭಾಗಲು ಉತ್ತರ ಅತವಾ ಈಶಾನ್ಯ ದಿಕ್ಕಿನಲ್ಲಿ ಇರಬೇಕು.
ಆ ಮನೆಯಲ್ಲಿ ದೇವರ ಕೋಣೆ ಕೂಡ ಈಶಾನ್ಯ ದಿಕ್ಕಿನಲ್ಲಿ ಇರಬೇಕು.

ಅಡುಗೆಕೋಣೆ ಹೇಗಿರಬೇಕು?
ಆ ಮನೆಯಲ್ಲಿ ಅಡುಗೆ ಮನೆ ಅಗ್ನಿ ಮೂಲೆಯಲ್ಲಿ ಇರಬೇಕು. ಮನೆಯಲ್ಲಿ ಅಡುಗೆ ಮಾಡುವ ಸ್ಥಳ ವಾಸ್ತು ಪ್ರಕಾರ ಇದ್ದರೆ ಆ ಮನೆಯಲ್ಲಿ ಸಂಪತ್ತಿಗೆ ಕೊರತೆ ಉಂಟಾಗಲ್ಲ ಎಂದು ಹೇಳಲಾಗುವುದು.
ಇಲ್ಲದಿದ್ದರೆ ಪೂರ್ವ ಭಾಗದಲ್ಲಿ ಅಡುಗೆ ಕೋಣೆ ಇರಬಹುದು, ಆದರೆ ವಾಸ್ತು ಚೆನ್ನಾಗಿರಬೇಕು. ಅಡುಗೆ ಕೋಣೆಗೆ ಕಪ್ಪು, ಬೂದು ಅಥವಾ ನೀಲಿ ಬಣ್ಣದ ಬಣ್ಣ ಬಳಿಯಬಾರದು.
ಕೆಲವೊಮ್ಮೆ ಪ್ಲ್ಯಾಟ್ ಖರೀದಿಸುವಾಗ ನಾವು ಎಣಿಸಿದ ರೀತಿಯಲ್ಲಿ ಅಡುಗೆ ಕೋಣೆ ಅಥವಾ ಮನೆಯ ಮುಂಭಾಗಿಲು ಇಲ್ಲ ಎಂದಾದರೆ ನೀವು ವಾಸ್ತು ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.
ಮನೆಯ ಮುಂಬಾಗಿಲು ಪೂರ್ವದ ಕಡೆ ಇದ್ದ ಮಾತ್ರಕ್ಕೆ ಒಳ್ಳೆಯದು ಎಂದು ಹೇಳಲು ಸಾಧ್ಯವಿಲ್ಲ
ಕೆಲವು ಮನಯ ಮುಂಬಾಗಿಲು ಪೂರ್ವದ ಕಡೆಗೆ ಮುಖ ಮಾಡಿರುತ್ತದೆ ಆದರೆ ಮುಖ್ಯ ಬಾಗಿಲು ಆಗ್ನೇಯ ದಿಕ್ಕಿನಲ್ಲಿ ಇರುತ್ತದೆ, ಈ ರೀತಿಯ ಮನೆ ಒಳ್ಳೆಯದಲ್ಲ.
ನಾವು ಏನು ತಿನ್ನುತ್ತೇವೆ ನಮ್ಮ ದೇಹದ ಮೇಲೆ ಪ್ರಭಾವ ಬೀರುತ್ತದೆ, ಅದರಂತೆ ಮನೆಯ ಮುಂಬಾಗಿಲು ಇಡೀ ಮನೆಯ ಮನೆಯ ಮೇಲೆ ಪ್ರಭಾವ ಬೀರುತ್ತದೆ.
ಇನ್ನು ಮನೆಯಲ್ಲಿ ಸ್ಟಡಿ ರೂಂ, ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ ಆ ಜಾಗ ಹೆಚ್ಚು ಧನಾತ್ಮಕ ಶಕ್ತಿ ಇರುವ ಕಡೆ ಇದ್ದರೆ ಒಳ್ಳೆಯದು, ಅಲ್ಲದೆ ಮನೆಯ ಬೆಡ್‌ರೂಂ ಹಾಗೂ ಆ ಮನೆಯಲ್ಲಿ ಟಾಯ್ಲೆಟ್, ಬಾತ್‌ರೂಂ ಸ್ಥಾನ ಕೂಡ ತುಂಬಾನೇ ಮುಖ್ಯವಾಗಿರುತ್ತದೆ.
ಮನೆ ಈ ರೀತಿಯಿದ್ದರೆ ಇನ್ನೂ ಒಳ್ಳೆಯದು
ನೀವು ವಾಸ್ತು ಪ್ರಕಾರ ಮನೆ ನೋಡಿದಾಗ ಮನೆ ಎಲ್ಲವೂ ಸರಿಯಾಗಿದ್ದು ಮನೆ ಒಕೆಯಾದರೆ ಈ ಅಂಶಗಳನ್ನೂ ಗಮನಿಸಿ, ಏಕೆಂದರೆ ಮನೆ ಈ ರೀತಿ ಇದ್ದರೆ ಮನೆ ಧನಾತ್ಮಕವಾಗಿರಲಿದೆ:
ಮನೆಗೆ ಸೂರ್ಯನ ಕಿರಣಗಳು ಚೆನ್ನಾಗಿ ಬೀಳುವಂತಿರಬೇಕು. ಮನೆಯ ಎಲ್ಲಾ ಭಾಗದಲ್ಲಿ ಸೂರ್ಯನ ಕಿರಣಗಳು ಬೀಳುವಂತೆ ಇದ್ದರೆ ಇನ್ನೂ ಒಳ್ಳೆಯದು.
ಇದರ ಜೊತೆಗೆ ಮನೆ ಮುಂದೆ ಹಸಿರು ಗಿಡಗಳು, ಹೂವು ಕುಂಡಗಳು ಮನೆಯಲ್ಲಿ ಧನಾತ್ಮಕ ಶಕ್ತಿ ನೀಡುತ್ತದೆ.
ವಾಸ್ತು ಶಾಸ್ತ್ರ ನೋಡುವುದು ಏಕೆ?
ಒಂದು ಮನೆ ಎಂದ ಮೇಲೆ ಆ ಮನೆಯಲ್ಲಿ ನೆಮ್ಮದಿಯಾಗಿ, ಖುಷಿಯಾಗಿ ಇರಲು ಬಯಸುತ್ತೇವೆ. ಹಾಗಾಗಿ ನಾವು ಇರುವ ಮನೆ ಧನಾತ್ಮಕವಾಗಿರಬೇಕು. ಒಂದು ಮನೆಗೆ ಹೋದಾಗ ಮನೆಯಲ್ಲಿ ಆ ಧನಾತ್ಮಕ ಅನುಭವ ನಮಗೆ ಉಂಟಾಗಬೇಕು. ಕೆಲಸ ಬಿಟ್ಟು ಮನೆಗೆ ಬಂದಾಗ ಆ ಮನೆಯಲ್ಲಿ ನೆಮ್ಮದಿಯಿಂದ ವಿಶ್ರಾಂತಿ ಪಡೆಯುವಂತಿರಬೇಕು. ಇದೆಲ್ಲಾ ಬೇಕೆಂದರೆ ಮನೆಯ ವಾಸ್ತು ಚೆನ್ನಾಗಿರಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ.
ನಾವು ಯಾವುದೇ ವಸ್ತು ಅದರಲ್ಲಿಯೂ ಮನೆ ಖರೀದಿಸುವಾಗ ತುಂಬಾನೇ ಗಮನಿಸುತ್ತೇವೆ, ಏಕೆಂದರೆ ನಾವು ಬಾಳ ಬಯಸುವ ಮನೆ, ಆ ಮನೆ ನಮಗೆ ಎಲ್ಲಾ ರೀತಿ ಸುಖ, ಸೌಕರ್ಯ ನೀಡುವಂತಿರಬೇಕು, ಹಾಗಾಗಿ ಜನರು ಈ ವಾಸ್ತುವಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.



Click it and Unblock the Notifications
