Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಬಾಲ್ಕನಿ ಸುಂದರಿಯರು! ಜೂನ್‌ನಲ್ಲಿ ಈ ಸಸ್ಯ ನೆಡಿ.. ವರ್ಷಪೂರ್ತಿ ಹೂವುಗಳನ್ನು ಕಣ್ತುಂಬಿಕೊಳ್ಳಿ
ಮನೆಯಲ್ಲಿ ಸುಂದರ ಬಾಲ್ಕನಿ, ಅಲ್ಲಿ ಬಗೆಬಗೆಯ ಹೂವುಗಳು.. ಇಷ್ಟು ಸಾಕು ಅಲ್ವಾ? ಮನಸ್ಸಿಗೆ ಏನೋ ಖುಷಿ. ಹೌದು, ಹೂವಿಗೆ ಸೋಲದ ಮನಸಿಲ್ಲ ಬಿಡಿ. ನೀವು ಈ ಸಸ್ಯಗಳನ್ನು ನೆಟ್ಟರೆ, ವರ್ಷಪೂರ್ತಿ ಹೂವು ಬಿಡುತ್ತವೆ. ಮಳೆಗಾಲ ಆರಂಭವಾಗಿದ್ದು, ಈ (ಜೂನ್) ತಿಂಗಳು ಬಿಸಲು ಮತ್ತು ಚಳಿ ಎರಡೂ ಇರುತ್ತದೆ. ಭೂಮಿಯೂ ತೇವಾಂಶದಿಂದ ಕೂಡಿರುತ್ತದೆ. ಇದು ನಿಮ್ಮ ಉದ್ಯಾನ (garden) ಅಥವಾ ಬಾಲ್ಕನಿಯನ್ನು (Balcony) ಸುಂದರವಾದ ಹೂವುಗಳಿಂದ (Flowering plants) ಅಲಂಕರಿಸಲು ಉತ್ತಮ ಸಮಯ. ನಿಮ್ಮ ಬಾಲ್ಕನಿ ವರ್ಷವಿಡೀ ಅರಳುತ್ತಲೇ ಇರಬೇಕೆಂದು ನೀವು ಬಯಸಿದರೆ, ಈ ಸುದ್ದಿ ತಪ್ಪದೇ ಓದಿ.
ಬೇಸಿಗೆಯಲ್ಲಿ ಗಿಡ ನಾಟಿ ಮಾಡುವುದು ಅಥವಾ ತೋಟಗಾರಿಕೆ ಮಾಡುವುದರಿಂದ ಸಮಯ ವ್ಯರ್ಥ ಎಂದು ಹಲವರು ಭಾವಿಸುತ್ತಾರೆ. ಹೀಗೆ ಯೋಚಿಸುತ್ತಾ, ಬಹುತೇಕರು ಉದ್ಯಾನದಲ್ಲಿ ಯಾವುದೇ ಹೊಸ ಸಸ್ಯವನ್ನು ನೆಡುವುದಿಲ್ಲ. ಆದರೆ, ಬೇಸಿಗೆಯಲ್ಲಿ ಸುಲಭವಾಗಿ ಬೆಳೆಯುವುದಲ್ಲದೆ ವರ್ಷವಿಡೀ ಹೂವುಗಳನ್ನು ನೀಡುವ ಅನೇಕ ಸಸ್ಯಗಳಿವೆ. ಈ ಬಗ್ಗೆ ಹಲವರಿಗೆ ತಿಳಿದಿಲ್ಲ. ಈ ಸೊಗಸಾದ ಹೂವುಗಳು ನಿಮ್ಮ ಉದ್ಯಾನಕ್ಕೆ ಸ್ವರ್ಗ ಲುಕ್ ನೀಡುತ್ತವೆ. ಬಹು ದೂರದವರೆಗೆ ಪರಿಮಳವನ್ನು ಹರಡುತ್ತವೆ. ನೀವು ತೋಟದಲ್ಲಿ ಹೊಸ ಸಸ್ಯವನ್ನು ನೆಡಲು ಬಯಸಿದರೆ, ಅದು ಕೂಡ ವರ್ಷವಿಡೀ ಅರಳುತ್ತದೆ. ಈ (ಜೂನ್) ತಿಂಗಳಲ್ಲಿ ಖಂಡಿತವಾಗಿಯೂ ಈ ಸಸ್ಯಗಳನ್ನು ನಾಟಿ ಮಾಡಬೇಕು. ಈ ಗಿಡಗಳು ಮನೆಯ ಬಾಲ್ಕನಿಯನ್ನು ಸುಂದರಗೊಳಿಸುತ್ತವೆ. ಜೊತೆಗೆ, ನೀವು ತುಂಬಾ ಸುಲಭವಾಗಿ ನಿರ್ವಹಿಸಬಹುದು.

ಮಧುಕಾಮಿನಿ ಸಸ್ಯ
ಬಹುತೇಕ ಮನೆಗಳಲ್ಲಿ ಕಂಡುಬರುವ ಮಂಗಳಕರ ಸಸ್ಯ ಮಧುಕಾಮಿನಿ (madhukamini). ಇದನ್ನು ಮಾಕ್ ಆರೆಂಜ್ ಅಥವಾ ಆರೆಂಜ್ ಜೆಸ್ಸಾಮಿನ್ ಅಂತಲೂ ಕರೆಯುತ್ತಾರೆ. ಮಧುಕಾಮಿನಿ (ಮಧುಕಮಣಿ) ಎಂಬುದು ಸಣ್ಣ ಬಿಳಿ ಹೂವುಗಳಿಂದ ತುಂಬಿರುವ ಸಸ್ಯವಾಗಿದೆ. ಇದರ ವಿಶೇಷ ಲಕ್ಷಣ ಎಂದರೆ, ಇದರ ಹೂವುಗಳು ತುಂಬಾ ಪರಿಮಳಯುಕ್ತ. ಈ ಸಸ್ಯವು ನಿಮ್ಮ ಉದ್ಯಾನದ ಸೌಂದರ್ಯವನ್ನು ಹೆಚ್ಚಿಸುವುತ್ತದೆ. ಅಲ್ಲದೆ, ಇದರ ಪರಿಮಳವು ಇಡೀ ಮನೆಯನ್ನು ಆವರಿಸುತ್ತದೆ. ಈ ಗಿಡವನ್ನು ಸೂರ್ಯನ ಬೆಳಕು ಮತ್ತು ತಿಳಿ ನೆರಳಿನಲ್ಲಿ ಸುಲಭವಾಗಿ ಬೆಳೆಸಬಹುದು.
ಬೋಗನ್‌ವಿಲ್ಲಾ ಗಿಡ
ಬೋಗನ್‌ವಿಲ್ಲಾ (Bougainvillea) ಗಿಡವು ಜೂನ್ ತಿಂಗಳಲ್ಲಿ ನೆಡಲು ಸೂಕ್ತ. ನಿಮ್ಮ ಬಾಲ್ಕನಿ ಅಥವಾ ಉದ್ಯಾನವನ್ನು ವರ್ಣಮಯ ಮತ್ತು ಆಕರ್ಷಕವಾಗಿಸಲು ನೀವು ಬಯಸಿದರೆ, ಖಂಡಿತವಾಗಿಯೂ ಬೌಗೆನ್ವಿಲ್ಲಾ ಗಿಡವನ್ನು ನೆಡಬಹುದು. ಇದು 40ಕ್ಕೂ ಹೆಚ್ಚು ಬಣ್ಣಗಳ ಹೂವುಗಳನ್ನು ಹೊಂದಿದೆ. ನಿಮ್ಮ ಮನೆಯ ಬಾಲ್ಕನಿಗೆ ರೋಮಾಂಚಕ ಲುಕ್ ನೀಡುತ್ತದೆ. ಈ ಸಸ್ಯವು ಬೇಸಿಗೆಯಲ್ಲಿಯೂ ಸುಲಭವಾಗಿ ಬೆಳೆಯುತ್ತದೆ. ಇದಲ್ಲದೆ, ನೀವು ಹೆಚ್ಚಿನ ಆರೈಕೆ ಮಾಡುವ ಅಗತ್ಯವಿಲ್ಲ. ನೆನಪಿಡಿ, ಇದನ್ನು ಬಿಸಿಲಿನ ಸ್ಥಳದಲ್ಲಿ ನೆಡಬೇಕು. ಇದರಿಂದ ಅದು ಬೇಗ ಮತ್ತು ಉತ್ತಮವಾಗಿ ಅರಳುತ್ತದೆ.
ಮೊದಲೇ ಹೇಳಿದಂತೆ ಇದು ಹಲವು ಬಣ್ಣಗಳಲ್ಲಿ ಬರುತ್ತದೆ. ಹಾಗಾಗಿ, ಈ ಗಿಡವು ತುಂಬಾ ಸುಂದರವಾಗಿದೆ. ನೀವು ಈ ಗಿಡವನ್ನು ಮನೆಯ ಗೇಟ್ ಬಳಿ ಮತ್ತು ಗೋಡೆಗಳ ಬದಿಗಳಲ್ಲಿ ನೆಡಬಹುದು. ನೀವು ಅದನ್ನು ಕುಂಡದಲ್ಲಿ ನೆಡಲು ಬಯಸಿದರೆ, ದೊಡ್ಡ ಕುಂಡವನ್ನು ಬಳಸಿ. ಇನ್ನು ಗುಲಾಬಿ ಬಣ್ಣದ ಹೂವುಗಳನ್ನು ಬಿಡುವ ಬೋಗನ್‌ವಿಲ್ಲಾ ಗಿಡಗಳನ್ನು ನೆಟ್ಟರೆ ತೋಟವು ಹೆಚ್ಚು ಸುಂದರವಾಗಿ ಕಾಣುತ್ತವೆ.
ಇಕ್ಸೋರಾ ಸಸ್ಯ
ಇಕ್ಸೋರಾ (ixora) ಗಿಡವು ಹಲವು ಬಣ್ಣಗಳ ಹೂವು ಹೊಂದಿದೆ. ಇದು ಕೆಂಪು, ಗುಲಾಬಿ, ಬಿಳಿ, ಹಳದಿ ಮತ್ತು ಚಿನ್ನದ ಬಣ್ಣದ ಹೂವುಗಳನ್ನು ಹೊಂದಿರುವ ಸಸ್ಯ. ಈ ಹೂವುಗಳು ಗೊಂಚಲುಗಳಲ್ಲಿ ಅರಳುತ್ತವೆ. ಮತ್ತು ತುಂಬಾ ಆಕರ್ಷಕವಾಗಿ ಕಾಣುತ್ತವೆ. ಈ ಸಸ್ಯವು ಸೂರ್ಯನ ಬೆಳಕಿನಲ್ಲಿ ಬೇಗ ಬೆಳೆಯುತ್ತದೆ. ಹಾಗೆಯೇ ವರ್ಷವಿಡೀ ಹೂವುಗಳನ್ನು ನೀಡುತ್ತದೆ. ನೀವು ನಿಯಮಿತವಾಗಿ ನೀರು ಹಾಕಬೇಕು. ಜೊತೆಗೆ ಆಗಾಗ್ಗೆ ಕತ್ತರಿಸುವುದು ಸೂಕ್ತ.
ಚಾಂದನಿ ಸಸ್ಯ
ಚಾಂದನಿ (chandni) ಸಸ್ಯವು ತುಂಬಾ ಸುಂದರವಾಗಿದೆ. ಈ ಸಸ್ಯವು ತನ್ನ ಸಣ್ಣ ಬಿಳಿ ಹೂವುಗಳಿಗೆ ಹೆಸರುವಾಸಿಯಾಗಿದೆ. ಇಡೀ ಸಸ್ಯವು ಪುಷ್ಪಗುಚ್ಛದಂತೆ ಕಾಣುತ್ತದೆ. ಇದನ್ನು ಸೂರ್ಯನ ಬೆಳಕು ಮತ್ತು ನೆರಳು ಎರದೂ ಕಡೆಗಳಲ್ಲಿ ಬೆಳೆಸಬಹುದು. ಇದರ ಪೋಷಣೆಗೆ ಹೆಚ್ಚು ಶ್ರಮ ಬೇಕಿಲ್ಲ. ಕಡಿಮೆ ಕಾಳಜಿ ವಹಿಸಿದರೂ ಚಾಂದನಿ ಸಸ್ಯವು ವರ್ಷವಿಡೀ ಹೂವುಗಳನ್ನು ನೀಡುತ್ತದೆ. ಇದರ ಪರಿಮಳ ಮತ್ತು ಸೌಂದರ್ಯ ಉದ್ಯಾನವನ್ನು ಇನ್ನಷ್ಟು ಸೊಗಸಾಗಿಸುತ್ತದೆ.
ಗಾರ್ಡೇನಿಯಾ ಸಸ್ಯ
ಗಾರ್ಡೇನಿಯಾ (Gardenia) ಸಸ್ಯ ಗುಲಾಬಿ ರೀತಿಯ ಬಿಳಿ ಹೂವುಗಳನ್ನು ಹೊಂದಿರುತ್ತದೆ. ಈ ಗಿಡವನ್ನು ಗಂಧರಾಜ್ ಎಂದೂ ಸಹ ಕರೆಯಲಾಗುತ್ತದೆ. ಇದರ ಪರಿಮಳವು ತುಂಬಾ ಸೊಗಸಾಗಿದೆ. ಈ ಸಸ್ಯವು ನಿಮ್ಮ ಉದ್ಯಾನ ಅಥವಾ ತೋಟಕ್ಕೆ ಒಂದು ಹೊಸ ಸ್ಪರ್ಶ ನೀಡುತ್ತದೆ. ನೀವು ಸಾಕಷ್ಟು ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ನೆಡಬಹುದು. ಹಾಗೆಯೇ ಮಣ್ಣು ತೇವವಾಗಿರುವ ಸ್ಥಳದಲ್ಲಿ ಇದನ್ನು ನಾಟಿ ಮಾಡಬಹುದು.
ಅಪರಾಜಿತ ಸಸ್ಯ
ನೀವು ಅಪರಾಜಿತ (Aprajita) ಸಸ್ಯ ನೆಡಬಹುದು. ಇದನ್ನು ನೀಲಿ ಹೂವು, ಅಪರಾಜಿತ ಹೂವು ಅಥವಾ ಶಂಖ ಪುಷ್ಪ ಎಂದು ಕರೆಯಲಾಗುತ್ತದೆ. ದೈನಂದಿನ ಪೂಜಾ ವಿಧಿಗಳಲ್ಲಿ ಈ ಹೂವು ಬಳಸಲಾಗುತ್ತದೆ. ನೀಲಿ ಹೂವುಗಳನ್ನು ಹೊಂದಿರುವ ಈ ಸಸ್ಯವು ನೋಡಲು ತುಂಬಾ ಸುಂದರವಾಗಿದೆ. ನೀವು ಈ ಗಿಡವನ್ನು ಬಾಲ್ಕನಿಯಲ್ಲಿಯೂ ನೆಡಬಹುದು. ಇದರ ಔಷಧೀಯ ಗುಣಗಳು ಈ ಸಸ್ಯವನ್ನು ತುಂಬಾ ವಿಶೇಷವಾಗಿಸಿದೆ.
ಈ ಗಿಡ ನೆಟ್ಟರೆ ಇಷ್ಟಲ್ಲಾ ಪ್ರಯೋಜನಗಳಿವೆಯೇ?
* ಈ ಗಿಡಗಳು ಮನೆಯ ತಾಪಮಾನವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ.
* ನೀವು ಹೆಚ್ಚು ಶ್ರಮ ವಹಿಸಬೇಕಿಲ್ಲ. ಈ ಗಿಡಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಕಡಿಮೆ ಆರೈಕೆ ಮತ್ತು ನಿಯಮಿತವಾಗಿ ಹೂವುಗಳನ್ನು ನೀಡುತ್ತವೆ.
* ಈ ಗಿಡಗಳು ನಿಮ್ಮ ಬಾಲ್ಕನಿ ಅಥವಾ ಉದ್ಯಾನಕ್ಕೆ ವರ್ಣರಂಜಿತ ಮತ್ತು ಆಕರ್ಷಕ ನೋಟವನ್ನು ನೀಡುತ್ತವೆ.
* ಮಧುಕಮಣಿ ಮತ್ತು ಗಾರ್ಡೇನಿಯಾದಂತಹ ಗಿಡಗಳು ಮನೆಯನ್ನು ನೈಸರ್ಗಿಕ ಪರಿಮಳದಿಂದ ತುಂಬುತ್ತವೆ.
ಈ ಗಿಡಗಳನ್ನು ಆರೈಕೆ ಮಾಡುವುದು ಹೇಗೆ?
* ಸಸ್ಯಗಳಿಗೆ ಸರಿಯಾದ ಪ್ರಮಾಣದ ನೀರು ಹಾಕಬೇಕು. ಆದರೆ, ಅತಿಯಾಗಿ ನೀರು ಹಾಕಬಾರದು.
* ಕಾಲಕಾಲಕ್ಕೆ ಗೊಬ್ಬರ ಹಾಕಿದರೆ ಸಸ್ಯಗಳ ಬೆಳವಣಿಗೆ ಚೆನ್ನಾಗಿರುತ್ತದೆ.
* ಸೂರ್ಯನ ಬೆಳಕು ತಾಗುವಂತೆ ಇಡಬೇಕು. ಮತ್ತು ನೆರಳಿನ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಿ.
* ಕಾಲಕಾಲಕ್ಕೆ ಸಸ್ಯಗಳನ್ನು ಕತ್ತರಿಸಿದರೆ ಇವು ಚೆನ್ನಾಗಿ ಅರಳುತ್ತವೆ.
ನಿಮ್ಮ ಮನೆಯ ಬಾಲ್ಕನಿ, ಉದ್ಯಾನ ಅಥವಾ ತೋಟವನ್ನು ಸುಂದರ ಮತ್ತು ನೈಸರ್ಗಿಕವಾಗಿಸಲು ಬಯಸಿದರೆ, ಖಂಡಿತವಾಗಿಯೂ ಈ ಸಸ್ಯಗಳನ್ನು ನೆಡಿ. ಈ (ಜೂನ್) ತಿಂಗಳಲ್ಲಿ ಅವುಗಳನ್ನು ನೆಡುವುದು ಉತ್ತಮ. ಏಕೆಂದರೆ ಈ ಸಮಯದಲ್ಲಿ ಇವು ಬೇಗನೇ ಬೆಳೆಯುತ್ತವೆ. ಹಾಗೆಯೇ ವರ್ಷವಿಡೀ ಹೂವುಗಳನ್ನು ನೀಡುತ್ತವೆ. ಈ ಹೂವುಗಳು ಮತ್ತು ಸಸ್ಯಗಳು ಮನೆಯ ಸೌಂದರ್ಯವನ್ನು ಮಾತ್ರ ಹೆಚ್ಚಿಸುವುದಿಲ್ಲ. ಬದಲಾಗಿ, ನಮ್ಮಲ್ಲಿ ಸಕಾರಾತ್ಮಕ ಭಾವನೆಗಳನ್ನು ಮೂಡಿಸುತ್ತವೆ. ಮನಸ್ಸಿಗೆ ಶಾಂತಿ ನೀಡುತ್ತವೆ. ಇದರ ಜೊತೆಗೆ ನೀವು ಕೆಲವು ಸುಂದರವಾದ ಬಳ್ಳಿ ಗಿಡಗಳನ್ನು ನೆಡಬಹುದು. ಅಂದರೆ, ಕ್ಲೈಂಬರ್ ಸಸ್ಯಗಳನ್ನು ಆಯ್ಕೆ ಮಾಡಬಹುದು. ಕಡಿಮೆ ನೀರು ಬಯಸುವ ಗಿಡಗಳ ಪಾಲನೆ ಬಹಳ ಸುಲಭ. ವಾರಕ್ಕೊಮ್ಮೆ ನೀರು ಹಾಕಿದರೂ ಸಾಕು. ಬರಗಾಲದಲ್ಲೂ ಹಚ್ಚ ಹಸಿರಾಗಿ ಕಂಗೊಳಿಸುತ್ತವೆ.



Click it and Unblock the Notifications











