Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಮೊಟ್ಟೆಯ ಸಿಪ್ಪೆಯಿಂದ ಇಷ್ಟೆಲ್ಲಾ ಪ್ರಯೋಜನವಿರುವಾಗ ಏಕೆ ಬಿಸಾಡಬೇಕು ಅಲ್ವಾ?
ಮೊಟ್ಟೆಯ ಸಿಪ್ಪೆಯನ್ನು ಬಿಸಾಡುತ್ತೇವೆ, ಆದರೆ ಈ ಮೊಟ್ಟೆಯ ಸಿಪ್ಪೆಯಿಂದ ಹಲವು ಪ್ರಯೋಜನವನ್ನು ಪಡೆಯಬಹುದು ಹಾಗಾಗಿ ಇನ್ಮುಂದೆ ಮೊಟ್ಟೆಯ ಸಿಪ್ಪೆಯಿಂದ ಬಿಸಾಡಲೇಬೇಡಿ. ಕಸದಿಂದ ರಸ ಮಾಡುವ ಕೆಲ ಟಿಪ್ಸ್ ನೀಡಲಾಗಿದೆ ನೋಡಿ:

ತೋಟಗಾರಿಕೆಗೆ ಬಳಸಬಹುದು: ಕೈ ತೋಟಕ್ಕೆ ಮೊಟ್ಟೆಯ ಸಿಪ್ಪೆ ಒಳ್ಳೆಯ ಗೊಬ್ಬರ. ಇದರಲ್ಲಿ ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ ಇವೆಲ್ಲಾ ಇರುವುದರಿಂದ ಗಿಡದ ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದನ್ನು ಮಣ್ಣಿಗೆ ಹಾಕಿ, ಸ್ವಲ್ಪ ಮಣ್ಣು, ತರಕಾರಿ ಸಿಪ್ಪೆಯೆಲ್ಲಾ ಹಾಕಿ ಗೊಬ್ಬರ ಮಾಡಿ ಗಿಡಗಳ ಬುಡಕ್ಕೆ ಹಾಕಿ, ಗಿಡ ತುಂಬಾ ಚೆನ್ನಾಗಿ ಬೆಳೆಯುತ್ತದೆ.
ಬೀಜಗಳನ್ನು ನೆಡಲು
ನೀವು ಬೀಜಗಳನ್ನು ಹಾಕಿದಾಗ ಅದರ ಮೇಲೆ ಮೊಟ್ಟೆಯನ್ನು ಪುಡಿ ಮಾಡಿ ಹಾಕಿ. ಬೀಜಗಳಿಗೆ ಚೆನ್ನಾಗಿ ಮೊಳಕೆ ಹೊಡೆದು ಬರಲು ಸಹಾಯ ಮಾಡುತ್ತದೆ. ಬೀಜಗಳನ್ನು ಹಾಕಿದಾಗ ಅದನ್ನು ಇತರ ಕೀಟಗಳು ತಿನ್ನದಂತೆ ರಕ್ಷಣೆ ಮಾಡುತ್ತದೆ. ಅಲ್ಲದೆ ಮೊಟ್ಟೆಯ ಸಿಪ್ಪೆಯನ್ನು ತೋಟಕ್ಕೆ ಹಾಕಿದರೆ ಬೆಕ್ಕು ಬರುವುದನ್ನು ತಡೆಗಟ್ಟಬಹುದು.
ಪಕ್ಷಿಗಳಿಗೆ ಆಹಾರ ಹಾಕುವಾಗ
ನೀವು ಬೇಯಿಸಿದ ಮೊಟ್ಟೆಯ ಸಿಪ್ಪೆಯನ್ನು ಪಕ್ಷಿಯ ಆಹಾರಕ್ಕೆ ಮಿಕ್ಸ್ ಮಾಡಿ ಹಾಕಬಹುದು. ಮೊಟ್ಟೆ ಹಾಕುವ ಪಕ್ಷಿಗಳಿದ್ದರೆ ಅವುಗಳಿಗೆ ಕ್ಯಾಲ್ಸಿಯಂ ಅಗ್ಯತವಿರುತ್ತದೆ, ಅಂಥ ಪಕ್ಷಿಗಳಿಗೆ ಇಂಥ ಆಹಾರ ಹಾಕಬೇಕು.
ಮೊಟ್ಟೆಯಿಂದ ಟೂತ್‌ಪೇಸ್ಟ್ ಮಾಡುವುದು ಹೇಗೆ?
1/4 ಕಪ್ ಮೊಟ್ಟೆ, 2 ಚಮಚ ತೆಂಗಿನೆಣ್ಣೆ, 1 ಚಮಚ ಅಡುಗೆ ಸೋಡಾ, ಸ್ವಲ್ಪ ಪೆಪ್ಪರ್‌ಮಿಂಟ್ ಎಣ್ಣೆ ಇವುಗಳನ್ನು ಮಿಕ್ಸ್ ಮಾಡಿ ಇದರಿಂದ ಹಲ್ಲುಜ್ಜಿದರೆ ಹಲ್ಲಿನಲ್ಲಿರುವ ಕಪ್ಪು ಕಲೆ ದೂರಾಗುವುದು.
ಪಾತ್ರೆಯ ಕೊಳೆ ಹೋಗಿಸಲು ಸಹಕಾರಿ
ನೀವು ಮೊಟ್ಟೆಯನ್ನು ಪುಡಿ ಮಾಡಿ, ಸೋಪ್ ಲಿಕ್ವಿಡ್ ಜೊತೆ ಹಾಕಿ ಪಾತ್ರೆಯನ್ನು ತಿಕ್ಕಿದರೆ ಪಾತ್ರೆ ಫಳ-ಫಳ ಹೊಳೆಯುತ್ತದೆ. ಆದ್ದರಿಂದ ಪಾತ್ರೆಯನ್ನು ಸ್ವಚ್ಛಗೊಳಿಸಲು ತುಂಬಾನೇ ಸಹಕಾರಿ.
ಕಾಫಿಯ ಕಟು ವಾಸನೆ ತೆಗೆಯಲು ಸಹಕಾರಿ
ಮೊಟ್ಟೆಯ ಸಿಪ್ಪೆ ಸೇರಿಸಿದರೆ ಕಾಫಿಯ ಕಟು ವಾಸನೆ ಕಡಿಮೆಯಾಗುವುದು. ನೀವು ಮೊಟ್ಟೆಯ ಬಿಳಿಯನ್ನು ಕಾಫಿ ಜೊತೆ ಹಾಕಿ ಕುದಿಸಿ ನಂತರ ಸೋಸಿದರೆ ಕಾಫಿಯ ಕಹಿ ಕಡಿಮೆಯಾಗುವುದು
ತ್ವಚೆ ಅಲರ್ಜಿ
ಮೊಟ್ಟೆ ಸಿಪ್ಪೆಯನ್ನು ಪುಡಿ ಪುಡಿ ಮಾಡಿ ಇದನ್ನು ಆಪಲ್ ಸೈಡರ್ ವಿನೆಗರ್ ಜೊತೆ ಹಾಕಿ ಮಿಕ್ಸ್ ಮಾಡಿ, ಇದನ್ನು ಮೈಗೆ ಹಚ್ಚುವುದರಿಂದ
ತ್ವಚೆ ತುರಿಕೆ ಇದ್ದರೆ ಅದು ಕಡಿಮೆಯಾಗುವುದು. ಇದನ್ನು ಟ್ರೈ ಮಾಡುವ ಮುನ್ನ ನೀವು ಚರ್ಮ ರೋಗ ತಜ್ಞರ ಸಲಹೆ ಪಡೆಯಿರಿ.
ಸಿಂಕ್ ಕ್ಲೀನ್ ಮಾಡುತ್ತೆ: ಇದನ್ನು ಸಿಂಕ್‌ನಲ್ಲಿ ಹಾಕಿಟ್ಟರೆ ಇದರಿಂದ ಸಿಂಕ್ ಬ್ಲಾಕ್ ಆಗುವುದನ್ನು ತಡೆಗಟ್ಟಬಹುದು.
ಕೋಳೆ ಮೊಟ್ಟೆ ನೀಡುತ್ತೆ, ಈ ಮೊಟ್ಟೆಯ ಬಿಳಿ ಕೋಳಿಗೆ ನೀಡಬಹುದು
ನಾವು ಕೋಳಿ ಮೊಟ್ಟೆ ನೀಡುತ್ತೆ ಅದನ್ನು ಮತ್ತೆ ಕೋಳಿಗೆ ನೀಡುವುದಾ ಅಂತ ಯೋಚಿಸುತ್ತೆ. ಬೇಯಿಸಿದ ಮೊಟ್ಟೆಯ ಸಿಪ್ಪೆಯನ್ನು ಕೋಳಿಯ ಆಹಾರದ ಜೊತೆ ಮಿಕ್ಸ್ ಮಾಡಿ ನೀಡಿ ಇದರಿಂದ ಕೋಳಿಗೆ ಕ್ಯಾಲ್ಸಿಯಂ ದೊರೆಯುತ್ತದೆ, ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications
