Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಫ್ಲ್ಯಾಟ್ ಖರೀದಿಸುವಾಗ ಅಥವಾ ಬಾಡಿಗೆಗೆ ಹೋಗುವಾಗ ಗಮನಿಸಬೇಕಾದ 8 ವಾಸ್ತು ಸಂಗತಿಗಳಿವು
Home Garden
oi-Reena TK
By Reena Tk
ನೀವು ಫ್ಲ್ಯಾಟ್ ಖರೀದಿಸಬೇಕೆಂದು ಬಯಸಿದ್ದರೆ ಅಥವಾ ಬಾಡಿಗೆಗೆ ಫ್ಲ್ಯಾಟ್‌ಗೆ ಹೋಗುವುದಾದರು ಸರಿ ನೀವು ವಾಸ್ತು ನೋಡಿ ಹೋದರೆ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಈ ಫ್ಯಾಟ್ ಹೇಗಿದ್ದರೆ ಒಳ್ಳೆಯದು ಎಂದು ನೋಡುವುದಾದರೆ
- ಮನೆಯ ಮುಂಬಾಗಿಲು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿರಬೇಕು. , ಅದೇ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿದ್ದರೆ ಮನೆಗೆ ಒಳ್ಳೆಯದಲ್ಲ: ಈ ಎರಡು ದಿಕ್ಕು ಮನೆಗೆ ಶುಭ ಎಂದು ಹೇಳಲಾಗುವುದು, ಏಕೆಂದರೆ ಈ ದಿಕ್ಕಿನಲ್ಲಿದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
- ಮನೆಯ ಅಡುಗೆ ಕೋಣೆ ವಾಯುವ್ಯ, ಆಗ್ನೇಯ ದಿಕ್ಕಿನಲ್ಲಿರಬೇಕು: ಅಡುಗೆ ಮನೆ ಮನೆಯ ಪ್ರಮುಖ ಶಕ್ತಿ ಕೇಂದ್ರ. ಅಡುಗೆ ಮನೆ ವಾಸ್ತು ಪ್ರಕಾರ ಇದ್ದರೆ ಆ ಮನೆಯಲ್ಲಿಆಹಾರದ ಕೊರತೆ ಉಮಟಾಗುವುದಿಲ್ಲ.
- ಬೆಡ್‌ರೂಂ, ಆಫೀಸ್ ರೂಂ, ಸ್ಟೋರ್‌ರೂಂ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ಭಾಗದಲ್ಲಿರಬೆಕು.
- ಬಾತ್‌ರೂಂನ ಕಿಟಕಿ ಅಥವಾ ಡೋರ್ ಪೂರ್ವದ ಕಡೆಗೆ ಇರಬೇಕು, ಸೂರ್ಯನ ಕಿರಣಗಳು ಬೀಳುವಂತಿರಬೇಕು, ಸೂರ್ಯನ ಕಿರಣಗಳು ಬಾತ್‌ರೂಂಗೆ ಬಿದ್ದಾಗ ಬಾತ್‌ರೂಮ್‌ನಲ್ಲಿರುವ ಸೂಕ್ಷಾಣುಗಳು ನಾಶವಾಗುವುದು, ಅದನ್ನು ಯಾವ ಬಾತ್ ರೂಂ ಕ್ಲೀನರ್ ಹಾಕಿದರೂ ಹೋಗುವುದಿಲ್ಲ, ಸೂರ್ಯನ ಕಿರಣಗಳೇ ಬೀಳಬೇಕು.
- ಮನೆಯ ಲಿವಿಂಗ್ ರೂಂ ಉತ್ತರ ಕಡೆಗೆ ಇರಬೇಕು.: ಲಿವಿಂಗ್ ರೂಂ ಅನ್ನು ಆಕರ್ಷಕವಾಗಿ ಇಟ್ಟುಕೊಳ್ಳಿ, ನೀವು ಲಿವಿಂಗ್ ರೂಂನಲ್ಲಿ ಕುಳಿತಾಗ ನಿಮ್ಮೆಲ್ಲಾ ಚಿಂತೆಗಳು ದೂರಾಗುವುದು.
- ಮನೆಯ ಬಾಲ್ಕನಿ ಉತ್ತರ ಅಥವಾ ಪೂರ್ವದ ಕಡೆಗೆ ಇರಬೇಕು. ಬಾಲ್ಕನಿಯಲ್ಲಿ ಸೂರ್ಯನ ಕಿರಣಗಳು ಚೆನ್ನಾಗಿ ಬೀಳುವಂತಿರಬೇಕು.
- ಅಪಾರ್ಟ್‌ನ ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ದೊಡ್ಡ ಗಿಡಗಳು ಪೂರ್ವ, ಉತ್ತರ ಭಾಗದಲ್ಲಿ ಚಿಕ್ಕ ಗಿಡಗಳು ಇರಬೇಕು, ಇಲ್ಲದಿದ್ದರೆ ಮನೆಗೆ ಸರಿಯಾಗಿ ಸೂರ್ಯನ ಬೆಳಕು ಬೀಳುವುದಿಲ್ಲ.
- ನೀರಿನ ಪಂಪ್, ಟ್ಯಾಂಕ್ ಆಗ್ನೇಯ ದಿಕ್ಕಿನಲ್ಲಿರಬೇಕು.
- ಪೂಜಾ ಕೋಣೆ ಈಶಾನ್ಯ ಮೂಲೆಯಲ್ಲಿರಬೇಕು. ಪೂಜಾ ಕೋಣೆಯನ್ನು ಬಿಳಿ ಅಥವಾ ಗೋಲ್ಡನ್ ಅಥವಾ ತೆಳು ಹಳದಿ ಬಣ್ಣದ ಪೇಯಿಂಟ್‌ಹಚ್ಚಿ ಅಲಂಕರಿಸಿ. ಪೂಜಾ ಕೋಣೆಯಲ್ಲಿ ಕೂತಾಗ ನಿಮ್ಮ ಮನಸ್ಸು ಧ್ಯಾನಸ್ಥ ಸ್ಥಿತಿಯಲ್ಲಿರಲಿ, ಎಲ್ಲಾ ಮಾನಸಿಕ ಒತ್ತಡಗಳು ದೂರಾಗುವುದು.
ಫ್ಲ್ಯಾಟ್‌ನಲ್ಲಿ ವಾಸ್ತು ಸರಿಯಾಗಿದ್ದರೆ ಪ್ರಯೋಜನವೇನು?
ಸೂರ್ಯನ ಕಿರಣಗಳು ಚೆನ್ನಾಗಿ ಬೀಳುತ್ತೆ
ಮನೆಯಲ್ಲಿ ಧನಾತ್ಮಕ ವಾತಾವರಣ ಇರುತ್ತದೆ, ಮನೆ ಮಂದಿಯ ಆರೋಗ್ಯ ಚೆನ್ನಾಗಿರುತ್ತದೆ.
ಮನೆಯ ವಾತಾವರಣ ಶಾಂತವಾಗಿರುತ್ತದೆ, ಖುಷಿಯಿಂದ ಕೂಡಿರುತ್ತದೆ.
ಫ್ಲ್ಯಾಟ್ ಆಗಲಿ, ಮನೆಯಾಗಲಿ ವಾಸ್ತು ನೋಡುವುದು ಒಳ್ಳೆಯದು, ವಾಸ್ತು ಎಂಬುವುದು ಒಂದು ನಂಬಿಕೆಯಲ್ಲ ಅದೊಂದು ವಿಜ್ಞಾನ ಕೂಡ ಹೌದು, ವಾಸ್ತು ನಂಬಿಕೆ ಹಿಂದೆ ಕೆಲ ವೈಜ್ಞಾನಿಕ ದೃಷ್ಟಿಕೋನವಿರುತ್ತದೆ, ಬಾಗಿಲುಗಳು ಪೂರ್ವಕ್ಕೆ ಇರಬೇಕು ಅಂತ ವಾಸ್ತು ಶಾಸ್ತ್ರ ಹೇಳುತ್ತದೆ, ವೈಜ್ಞಾನಿಕವಾಗಿಯೂ ಅದು ಸತ್ಯ, ಆ ಮನೆಯಲ್ಲಿ ಬೆಳಕು ಚೆನ್ನಾಗಿರಬೆಕು, ಅದು ಮನೆಗೂ ಒಳ್ಳೆಯದು, ನಮ್ಮ ಆರೋಗ್ಯಕ್ಕೂ ಒಳ್ಳೆಯದು.
Comments
English summary



Click it and Unblock the Notifications