Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಮನೆಯಲ್ಲಿ ಕರೆಂಟ್ ಬಿಲ್ ಹೆಚ್ಚಿಸಿ ಪಾಕೆಟ್ ಖಾಲಿ ಮಾಡಿಸುವ 5 ಸಾಧನಗಳಿವು
ಮನೆಯಲ್ಲಿ ಯಾವೆಲ್ಲ ವಸ್ತುಗಳನ್ನು ಬಳಸುವುದರಿಂದ ಕರೆಂಟ್ ಬಿಲ್ ಹೆಚ್ಚಾಗುತ್ತೆ ಎಂಬುವುದು ಗೊತ್ತೇ? ನಾವು ನಮ್ಮ ಮನೆಗಳಲ್ಲಿ ದಿನನಿತ್ಯ ಬಳಸುವ ಕೆಲವೊಂದು ವಸ್ತುಗಳಿಗೆ ತುಂಬಾನೇ ಕರೆಂಟ್ ಎಳೆಯುತ್ತೆ, ಫ್ರಿ ಕರೆಂಟ್ ಇದೆ ಅಂತ ಇವುಗಳನ್ನು ಬಳಸುತ್ತಿದ್ದರೆ ತಿಂಗಳಿಗೆ 230-340 kWh ಕರೆಂಟ್ ಬೇಕಾಗುತ್ತೆ, ಅಷ್ಟೊಂದು ಫ್ರೀ ಸಿಗಲ್ಲ, ಜೇಬು ಖಾಲಿಯಾಗುವಂತೆ ಬಿಲ್ಲ್ ಬರುತ್ತದೆ. ಮನೆಯಲ್ಲಿ ಬಳಸುವ ಯಾವೆಲ್ಲಾ ವಸ್ತುಗಳಿಂದ ಹೆಚ್ಚು ಕರೆಂಟ್ ಬಿಲ್ ಬರುವಂತಾಗುತ್ತದೆ ಎಂದು ನೋಡುವುದಾದರೆ:

ಹಾಟ್ ಅಂಡ್ ಕೋಲ್ಡ್ ವಾಟರ್ ಡಿಸ್ಪೆನ್ಸರ್
ಈಗೀನ ಮಾಡರ್ನ್ ಮನೆಗಳಲ್ಲಿ ಇದು ಇರುತ್ತದೆ, ಬಿಸಿ ನೀರು ಬೇಕೆಂದರೆ ಬಿಸಿ ನೀರು, ತಣ್ಣೀರು ಬೇಕೆಂದರೆ ತಣ್ಣೀರು, ನಾರ್ಮಲ್ ವಾಟರ್ ಬೇಕೆಂದರೆ ಅದು ಕೂಡ ದೊರೆಯುತ್ತದೆ. ಆದರೆ ಈ ಹಾಟ್-ಕೋಲ್ಡ್ ಉಷ್ನಾಂಶ ಕಾಪಾಡಲು ತುಂಬಾನೇ ಕರೆಂಟ್ ಬೇಕಾಗುತ್ತದೆ. ನೀವು ದಿನದಲ್ಲಿ 6-8 ಲೀಟರ್ ಹಾಟ್ ಅಥವಾ ಕೋಲ್ಡ್ ವಾಟರ್ ಬಳಸುವುದಾದರೆ ತಿಂಗಳಿಗೆ ಅದಕ್ಕೇ 40-100 kWh ಬೇಕಾಗುತ್ತೆ.
ಕ್ಲೋತ್ ಡ್ರೈಯರ್
ತುಂಬಾ ಚಳಿ ಇರುವ ಕಡೆ ಇದು ಬೇಕಾಗುತ್ತದೆ. ಸೂರ್ಯನ ಕಿರಣಗಳು ಸರಿಯಾಗಿ ಬೀಳದೆ ಇದ್ದಾಗ ಅಥವಾ ಮಳೆಗಾಲದಲ್ಲಿ ಕ್ಲೋತ್ ಡ್ರೈಯರ್ ಬಳಸಬೇಕಾದ ಅನಿವಾರ್ಯತೆ ಇರುತ್ತದೆ. ಇದು ತುಂಬಾ ವಿದ್ಯುತ್ ಹೀರಿಕೊಳ್ಳುತ್ತದೆ. ದಿನಾ 1-2 ಗಂಟೆ ಬಳಸಿದರೆ 75-140 kWh ತಿಂಗಳಿಗೆ ಬೇಕಾಗುತ್ತದೆ. ಕೆಲವೊಂದು ಅಡ್ವಾನ್ಸ್ ಟೆಕ್ನಾಲಾಜಿ ಇರುವ ಡ್ರೈಯರ್ ಸ್ವಲ್ಪ ಕಡಿಮೆ ಕರೆಂಟ್ ಹೀರಿಕೊಳ್ಳುತ್ತದೆ.
ಇಂಡಕ್ಷನ್ ಕುಕ್ಕರ್, ಎಲೆಕ್ಟ್ರಿಕ್ ಕುಕ್ಕರ್
ಇಂಡಕ್ಷನ್ ಕುಕ್ಕರ್ ಬಳಸುವುದಾದರೆ ನಿಮ್ಮ ಮನೆಯ ಕರೆಂಟ್ ಬಿಲ್ ಖಂಡಿತ ಜಾಸ್ತಿ ಬಂದೇ ಬರುತ್ತದೆ. ಗ್ಯಾಸ್‌ಗೆ ಹೋಲಿಸಿದರೆ ಇಂಡೆಕ್ಷನ್ ಕುಕ್ಕರ್ ಬಳಸುವುದರಿಂದ ಕರೆಂಟ್ ಬಿಲ್‌ಗೆ ಗ್ಯಾಸೆಗೆ ಖರ್ಚು ಕಡಿಮೆ ಬೀಳುವುದು. ಆದರೆ ಎಲೆಕ್ಟ್ರಿಕ್ ಕುಕ್ಕರ್ ಗ್ಯಾಸ್ ಸ್ಟೌವ್‌ನಂತೆ ಸಿಡಿಯುವುದಿಲ್ಲ, ಆದ್ದರಿಂದ ಈ ದೃಷ್ಟಿಯಿಂದ ಎಲೆಕ್ಟ್ರಿಕ್ ಕುಕ್ಕರ್ ಬಳಸುವುದು ಸೂಕ್ತ. ಇಂಡೆಕ್ಷನ್ ಕೂಡ ಅಡುಗೆ ಮಾಡುವುದು ಸುಲಭ, ಆದರೆ ಕರೆಂಟ್ ಹೆಚ್ಚು ಖರ್ಚಾಗುವುದು.
ವಾಟರ್ ಹೀಟರ್
ವಾಟರ್ ಹೀಟರ್ ಅಂತೂ ಬಹುತೇಕ ಮನೆಗಳಲ್ಲಿ ಬಳಸುತ್ತಾರೆ. ಈ ವಾಟರ್ ಬಳಸುವುದರಿಂದ ಕೂಡ ಕರೆಂಟ್ ಬಿಲ್ ತುಂಬಾನೇ ಬರುತ್ತದೆ. ದಿನಾ ಮನೆಯಲ್ಲಿ 2-4 ಜನ ವಾಟರ್ ಹೀಟರ್ ಬಳಸಿದರೂ ಕರೆಂಟ್ ಬಿಲ್ ಚೆನ್ನಾಗಿರ ಬರುತ್ತದೆ.
ಹಾಗಾಗಿ ಕರೆಂಟ್ ಬಿಲ್ ಕಡಿಮೆ ಮಾಡಬೇಕು ಎನ್ನುವವರು ಇವುಗಳಿಗೆ ಪರ್ಯಾಯ ಮಾರ್ಗ ಕಂಡು ಹಿಡಿಯಬಹುದು.
ಡೆಸ್ಕ್‌ಟಾಪ್ ಕಂಪ್ಯೂಟರ್
ಈಗ ಲ್ಯಾಪ್‌ಟಾಪ್ ಹೆಚ್ಚಾಗಿ ಬಳಸಲಾಗುವುದು, ಆದರೆ ಡೆಸ್ಕ್‌ಟಾಪ್ ಸಂಪೂರ್ಣ ಕಣ್ಮರೆಯಾಗಿಲ್ಲ, ಬಹುತೇಕ ಆಫೀಸ್‌ಗಳಲ್ಲಿ ಬಳಸಲಾಗುವುದು. ಲ್ಯಾಪ್‌ಟಾಪ್‌ಗೆ ಕರೆಂಟ್ ಬೇಕಾಗಿರುವುದಕ್ಕಿಂತ ಡೆಸ್ಕ್‌ಟಾಪ್‌ಗೆ ಹೆಚ್ಚು ಹಣ ಬೇಕಾಗುತ್ತೆ.



Click it and Unblock the Notifications
