Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಪಾರ್ಕಿನ್ಸನ್ ದಿನ: ಪಾರ್ಕಿನ್ಸನ್ ಲಕ್ಷಣ 2 ವರ್ಷಕ್ಕೂ ಮೊದಲೇ ತಿಳಿಯುತ್ತೆ..! ಆದ್ರೆ ಚಿಕಿತ್ಸೆ ಬಹಳ ಕಷ್ಟ!
ನೀವು ಪಾರ್ಕಿನ್ಸನ್ ಕಾಯಿಲೆ ಬಗ್ಗೆ ಕೇಳಿರಬಹುದು. ಅಂದರೆ ನಿಮ್ಮ ದೇಹದ ಅಂಗದ ಮೇಲೆ ನಿಮ್ಮ ಹಿಡಿತ ಇಲ್ಲದೆ ಇರುವ ಅಸಾಮಾನ್ಯ ಸ್ಥಿತಿ ಇದು ಎನ್ನಬಹುದು. ಸ್ನಾಯು ಬಿಗಿತ ಉಂಟಾಗುವುದು, ವಿಪರೀತ ನಡುಕದ ಸ್ಥಿತಿ. ಪಾರ್ಕಿನ್ಸನ್ ಕಾಯಿಲೆಯು ಮೆದುಳಿನ ಅಸ್ವಸ್ಥತೆಯಾಗಿದ್ದು, ಇದು ನಡುಕ, ಬಿಗಿತ ಮತ್ತು ಸಮತೋಲನ ಸಮಸ್ಯೆಗಳನ್ನು ಒಳಗೊಂಡಂತೆ ಚಲನೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಮಾನಸಿಕ ಸಮಸ್ಯೆಗೆ ಸಂಬಂಧಿಸಿದ ಕಾಯಿಲೆ ಆಗಿದೆ.
ಪಾರ್ಕಿನ್ಸನ್ ಕಾಯಿಲೆಯು ಪ್ರಪಂಚದಾದ್ಯಂತ ನರರೋಗಕ್ಕೆ ಸಂಬಂಧಿಸಿದಂತೆ ಎರಡನೇ ಅತ್ಯಂತ ಹೆಚ್ಚು ಮಂದಿ ಒಳಗಾಗುತ್ತಿರುವ ಸಮಸ್ಯೆಯಾಗಿದೆ. ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 15ರಿಂದ 43ರಷ್ಟು ಮಂದಿ ಈ ಸಮಸ್ಯೆಗೆ ಒಳಗಾಗುವ ಸಂಭವವಿದೆ ಎಂದು ತಿಳಿದುಬಂದಿದೆ. ಪಾರ್ಕಿನ್ಸನ್ ಸಮಸ್ಯೆ ಉಂಟಾಗಲು ನಿಖರ ಕಾರಣವೇನು ಎಂಬುದನ್ನು ಇಂದಿಗೂ ಪತ್ತೆಮಾಡಲಾಗಿಲ್ಲ ಎಂಬುದು ಈ ಸಮಸ್ಯೆಯ ಅಪಾಯ ಹಾಗೂ ಆತಂಕ ಹೆಚ್ಚಾಗುವಂತೆ ಮಾಡುತ್ತದೆ.

ಇಂದಿಗೂ ಪಾರ್ಕಿನ್ಸನ್ ಕಾಯಿಲೆಗೆ ಇದೊಂದು ನಿಖರ ಚಿಕಿತ್ಸೆ ಎಂಬುದಿಲ್ಲ. ಆದರೆ ರೋಗವನ್ನು ಸುಧಾರಿಸಲು ಹಾಗೂ ಗುಣಮುಖರಾಗುವತ್ತ ಕೊಂಡೊಯ್ಯಲು ಹಲವು ಮಾರ್ಗೋಪಾಯಗಳಿವೆ. ಪಾರ್ಕಿನ್ಸನ್ ಸಮಸ್ಯೆಗೆ ಒಳಗಾದರೆ ಶಸ್ತ್ರಚಿಕಿತ್ಸೆ ಕೂಡ ಒಂದು ಚಿಕಿತ್ಸಾ ವಿಧಾನವಾಗಿದೆ. ಆದ್ರೆ ಅದು ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕಾರಿ ಚಿಕಿತ್ಸಾ ವಿಧಾನವವೂ ಹೌದು. ಹೀಗಾಗಿ ಈ ಸಮಸ್ಯೆಯ ಕುರಿತ ಜಾಗೃತಿಗಾಗಿ ಏಪ್ರಿಲ್ 11 ರಂದು ವಿಶ್ವ ಪಾರ್ಕಿನ್ಸನ್ ದಿನವಾಗಿ ಆಚರಿಸಲಾಗುತ್ತೆ. ಈ ರೋಗವನ್ನು ಮೊದಲು ಗುರುತಿಸಿದ್ದ ಜೇಮ್ಸ್ ಪಾರ್ಕಿನ್ಸನ್ ಅವರ ಮರಣದ ನಂತರದಲ್ಲಿ ಅವರ ಹೆಸರನ್ನೇ ಈ ರೋಗಕ್ಕೆ ಇಡಲಾಗಿದೆ.
ಪಾರ್ಕಿನ್ಸನ್ ಕಾಯಿಲೆಗೆ ಒಳಗಾಗಿದ್ದರೆ ಅದರ ಲಕ್ಷಣ ತಿಳಿಯುವುದು ಬಹಳ ಕಷ್ಟವಾಗಿರುತ್ತದೆ. ಜನರಿಗೆ ನರ ರೋಗ ಎಂಬ ತಪ್ಪು ಕಲ್ಪನೆಯೊಳಗೆ ಈ ಪಾರ್ಕಿನ್ಸನ್ ಸಮಸ್ಯೆ ಗುಪ್ತವಾಗಿರುತ್ತದೆ. ಹಾಗಾದ್ರೆ ನಾವಿಂದು ಈ ಪಾರ್ಕಿನ್ಸನ್ ಸಮಸ್ಯೆಯ ಲಕ್ಷಣಗಳೇನು? ಇದರ ಆರಂಭಿಕ ಹಂತದಲ್ಲಿ ಯಾವ ರೀತಿ ಸಮಸ್ಯೆ ಹೊಂದಿರುತ್ತೇವೆ ಎನ್ನುವುದನ್ನು ತಿಳಿದುಕೊಳ್ಳೋಣ.
ಪಾರ್ಕಿನ್ಸನ್ ಕಾಯಿಲೆಯು ಮೋಟಾರ್ ಮತ್ತು ಮೋಟಾರ್ ಅಲ್ಲದ ಲಕ್ಷಣಗಳನ್ನು ಹೊಂದಿದೆ. ವಿಶ್ರಾಂತಿಯ ಸಮಯದಲ್ಲಿ ನಡುಕ, ಅಸಮಾನ್ಯ ಚಟುವಟಿಕೆ, ಸ್ನಾಯು ನಿಧಾನಗತಿಯ ಚಲನೆ, ಬಿಗಿತ, ಮಾತು ತೊದಲುವುದು ನೋಡಬಹುದು. ಹಾಗೆ ಮಲಬದ್ಧತೆ, ವಾಸನೆ ಇಲ್ಲದಿರುವುದು, ಮೂತ್ರ ವಿಸರ್ಜನೆ ಸಮಸ್ಯೆ, ಮರೆವು ಹೀಗೆ ಒಂದಿಷ್ಟು ಲಕ್ಷಣಗಳ ನೋಡಬಹುದು.
ಆರಂಭದಲ್ಲಿ ಈ ಪಾರ್ಕಿನ್ಸನ್ ಸಮಸ್ಯೆಯ ಲಕ್ಷಣಗಳನ್ನು ಗುರುತಿಸುವುದು ಬಹಳ ಕಷ್ಟವಾಗಲಿದೆ. ಹಲವರು ಇದೊಂದು ಸಾಮಾನ್ಯ ನೋವು, ನಡುಕ ಎಂದುಕೊಳ್ಳುತ್ತಾರೆ. ಆದ್ರೆ ನಂತರದ ಸಮಯದಲ್ಲಿ ಹಿಡಿತ ತಪ್ಪಬಹುದು. ಅಚ್ಚರಿ ವಿಚಾರ ಏನೆಂದರೆ ಪಾರ್ಕಿನ್ಸನ್ ಸಮಸ್ಯೆ ಉಂಟಾಗುವ ಎರಡು ವರ್ಷಕ್ಕೂ ಮೊದಲೇ ಅದರ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ.
ಹಾಗಾದ್ರೆ ಪಾರ್ಕಿನ್ಸನ್ ಸಮಸ್ಯೆಯ ಆರಂಭಿಕ ಲಕ್ಷಣವೇನು?
ಬರೆಯುವಾಗ ಅಡೆತಡೆ: ಆತಂಭಿಕ ಹಂತದಲ್ಲಿ ನೀವು ಪೆನ್ನು, ಪೆನ್ಸಿಲ್ ಹಿಡಿದು ಬರೆಯಲು ಮುಂದಾದಾಗ ಅಡೆತಡೆ ಎದುರಿಬೇಬಹುದು, ಅಕ್ಷರಗಳು ಸ್ಪಷ್ಟವಾಗಿ ಬರೆಯಲು ಆಗದೆ ಇರಬಹುದು.
ವಾಸನೆಯ ನಷ್ಟ: ಇದನ್ನು ಅನೋಸ್ಮಿಯಾ ಎನ್ನಲಾಗುತ್ತದೆ. ಇದು ಪಾರ್ಕಿನ್ಸನ್ ಸಮಸ್ಯೆ ಕಾಣಿಸುವ ವರ್ಷಗಳ ಮೊದಲು ಆರಂಭವಾಗುತ್ತದೆ. ನಿಮಗೆ ವಾಸನೆ ಗ್ರಹಿಸಲು ಕಷ್ಟವಾಗುವುದು ಅಥವಾ ಸಂಪೂರ್ಣ ವಾಸನೆ ಗ್ರಹಿಕೆ ಇಲ್ಲವಾಗುತ್ತದೆ.
ನಿದ್ರೆ ಭಂಗ: ನಿದ್ರೆ ಮಾಡುವಾಗ ಥಟ್ ಎಂದು ಎಚ್ಚರವಾಗುವುದು, ಅದರಲ್ಲೂ ಆರ್‌ಇಎಂ (ಸ್ಲೀಪ್ ಬಿಹೇವಿಯರ್ ಡಿಸಾರ್ಡರ್) ನೀವು ನಿದ್ರೆಯಲ್ಲಿ ಕೂಗಿ ಎಚ್ಚರವಾಗುವುದು, ಹಾಸಿಗೆ ಒದ್ದೆ ಮಾಡುವ ಲಕ್ಷಣಗಳಿರಬಹುದು.
ಮುಖ ಲಕ್ಷಣ ಬದಲಾಗುವುದು: ನಿಮ್ಮ ಮುಖ ಭಾವಗಳು ಬದಲಾಗಲು ಆರಂಭಿಸುವುದು, ಚಪ್ಪಟ್ಟೆಯಾಗುವುದು, ಕಣ್ಣಿನ ಚಲನೆ, ಮಾತನಾಡುವಾಗ ತೊದಲಲು ಆರಂಭವಾಗುವುದು, ಸ್ನಾಯು ಬಿಗಿತ ಕಂಡುಬರುವುದು.
ನಿರಂತರ ಮಲಬದ್ಧತೆ: ಆಹಾರ ಬದಲಾವಣೆಗಳಿಗೆ ಪ್ರತಿಕ್ರಿಯಿಸದ ಹಾಗೆ ವಿವರಿಸಲಾಗದ ಮಲಬದ್ಧತೆ ಉಂಟಾಗುವುದು.
(ಆರೋಗ್ಯ ಮತ್ತು ಫಿಟ್ನೆಸ್ ಸಲಹೆಯನ್ನು ಒಳಗೊಂಡಂತೆ ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿ ಈ ಲೇಖನವನ್ನು ಪರಿಗಣಿಸಬೇಡಿ. ನಿರ್ದಿಷ್ಟ ಆರೋಗ್ಯ ರೋಗನಿರ್ಣಯಕ್ಕಾಗಿ ಯಾವಾಗಲೂ ತಜ್ಞರನ್ನು ಸಂಪರ್ಕಿಸಿ)
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


