Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ವಿಶ್ವ ಒಬೆಸಿಟಿ ದಿನ: ಒಬೆಸಿಟಿಗೆ ಕಾರಣಗಳೇನು? ಮೈ ತೂಕ ಕಡಿಮೆ ಮಾಡುವ 4 ಪವರ್‌ಫುಲ್ ಡ್ರಿಂಕ್ಸ್
ಮಾರ್ಚ್ 4ನ್ನು ಒಬೆಸಿಟಿ ದಿನವನ್ನಾಗಿ ಆಚರಿಸಲಾಗುವುದು, ಒಬೆಸಿಟಿ ಬಗ್ಗೆ ಜನರಲ್ಲಿ ಜಾಗ್ರತೆ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಒಬೆಸಿಟಿ ಸಮಸ್ಯೆಯಿದ್ದರೆ ಇದರಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುವುದು, ಒಬೆಸಿಟಿಗೆ ಕಾರಣಗಳೇನು? ತೂಕ ಇಳಿಕೆಗೆ ಯಾವ ಪಾನೀಯ ಒಳ್ಳೆಯದು ಎಂದು ನೋಡೋಣ ಬನ್ನಿ:

ಒಬೆಸಿಟಿಗೆ ಕಾರಣವೇನು?
ತುಂಬಾ ಕ್ಯಾಲೋರಿ ಇರುವ ಆಹಾರ ಸೇವಿಸುವುದು
ಸಂಸ್ಕರಿಸಿದ ಆಹಾರ ಅತಿ ಹೆಚ್ಚಾಗಿ ತಿನ್ನುವುದು
ಮದ್ಯಪಾನ
ಅತಿಯಾಗಿ ತಿನ್ನುವುದು
ಅತಿಯಾಗಿ ಸಿಹಿ ತಿನ್ನುವುದು
ದೈಹಿಕ ವ್ಯಾಯಾಮ ಇಲ್ಲದಿರುವುದು
ಒಂದೇ ಕಡೆ ಕೂತು ಮಾಡುವ ಕೆಲಸ, ದೈಹಿಕ ವ್ಯಾಯಾಮ ಇಲ್ಲದಿರುವುದು ಇವೆಲ್ಲಾ ಮೈ ತೂಕ ಹೆಚ್ಚಾಗಲು ಕಾರಣವಾಗಿದೆ.
ವಂಶವಾಹಿಯಾಗಿ ಬರುವುದು
ಕೆಲವರಿಗೆ ಮೈ ತೂಕ ಹೆಚ್ಚಾಗುವ ಸಮಸ್ಯೆ ವಂಶವಾಹಿಯಾಗಿ ಬರುವುದು. ಕೆಲವೊಂದು ಹಾರ್ಮೋನ್ ಸಂಬಂಧಿತ ಸಮಸ್ಯೆ, ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಇವೆಲ್ಲಾ ಮೈ ತೂಕ ಹೆಚ್ಚು ಮಾಡುತ್ತದೆ.
ಕೆಲವೊಂದು ಔಷಧಗಳು ಕೂಡ ಒಬೆಸಿಟಿ ಸಮಸ್ಯೆ ಹೆಚ್ಚಾಗುತ್ತದೆ
ಮಧುಮೇಹ, ಖಿನ್ನತೆ ಹೀಗೆ ಕೆಲವೊಂದು ಆರೋಗ್ಯ ಸಮಸ್ಯೆಗೆ ಔಷಧಿ ಸೇವಿಸಿದಾಗ ಮೈ ತೂಕ ತುಂಬಾನೇ ಹೆಚ್ಚು ಮಾಡುತ್ತದೆ.
ಒಬೆಸಿಟಿ ಸಮಸ್ಯೆ ಹೆಚ್ಚಾದಾಗ ಈ ಸಮಸ್ಯೆಗಳು ಕಂಡು ಬರುವುದು
ಒಬೆಸಿಟಿ ಸಮಸ್ಯೆ ಹೆಚ್ಚಾದಾಗ ಹೃದಯಾಘಾತ ಅಪಾಯ
ಮಧುಮೇಹದ ಸಮಸ್ಯೆ
ನಿದ್ರಾಹೀನತೆ
ಸಂಧಿವಾತ
ಖಿನ್ನತೆ
ಕೊಲೆಸ್ಟ್ರಾಲ್ ಈ ಬಗೆಯ ಸಮಸ್ಯೆ ಉಂಟಾಗುವುದು.
ಮೈ ತೂಕ ಕಡಿಮೆ ಮಾಡುವಲ್ಲಿ ಈ ಬಗೆಯ ಪಾನೀಯ ಸಹಕಾರಿ
ಬೆಳಗ್ಗೆ ಬಿಸಿ ನೀರಿಗೆ ನಿಂಬೆರಸ-ಜೇನು ಹಾಕಿ ಸೇವಿಸುವುದು
ಬೆಳಗ್ಗೆ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಗೂ ಜೇನು ಹಾಕಿ ಖಾಲಿ ಹೊಟ್ಟೆಗೆ ತೆಗೆದುಕೋಳ್ಳಬೇಕು. ಈ ಪಾನಯ ಮೈ ತೂಕ ನಿಯಂತ್ರಣ ಮಾಡಲು ಸಹಕಾರಿಯಾಗಿದೆ.
ಜೀರಿಗೆ ನೀರು
ನೀವು ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಕುದಿಸಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು, ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯುತ್ತದೆ, ಚಯಪಚಯ ಕ್ರಿಯೆ ಉತ್ತಮವಾಗಿ ನಡೆದರೆ ಮೈ ತೂಕ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿಯಾಗಿದೆ.
ಚಕ್ಕೆ ಟೀ
ನೀವು ಒಂದು ಲೋಟ ನೀರಿಗೆ ಸ್ವಲ್ಪ ಚಕ್ಕೆ ಪುಡಿ ಅಥವಾ ಚಕ್ಕೆ ಹಾಕಿ ಕುದಿಸಿ, ನಂತರ ಅದಕ್ಕೆ ಸ್ವಲ್ಪ ನಿಂಬೆರಸ ಮತ್ತು ಜೇನು ಹಾಕಿ ಕುಡಿದರೆ ಮೈ ಬೊಜ್ಜು ಹೆಚ್ಚಾಗುವುದಿಲ್ಲ.
ಗ್ರೀನ್ ಟೀ
ದಿನದಲ್ಲಿ 2 ಲೋಟ ಗ್ರೀನ್ ಕುಡಿಯುವುದರಿಮದ ಮೈ ಬೊಜ್ಜು ಕಡಿಮೆಯಾಗುವುದು.
ಆರೋಗ್ಯಕರ ಆಹಾರಕ್ರಮದ ಕಡೆಗೆ ಹೆಚ್ಚು ಗಮಹರಿಸಬೇಕು
ನಮ್ಮ ಆರೋಗ್ಯದ ಪ್ರಮುಖ ಗುಟ್ಟೆಂದರೆ ಆರೋಗ್ಯಕರ ಆಹಾರ ಸೇವಿಸಬೇಕು, ಆರೋಗ್ಯಕರ ಆಹಾರ ಅಭ್ಯಾಸ ಮಾಡಿದರೆ ಪ್ರಮುಖ ಸಮಸ್ಯೆ ಕಡಿಮೆಯಾದಂತೆ. ನಿಮ್ಮ ಆಹಾರದಲ್ಲಿ ತರಕಾರಿ, ಹಣ್ಣು ಹೆಚ್ಚಾಗಿ ಸೇರಿಸಿ.
ವ್ಯಾಯಾಮ ಮಾಡಿ
ಪ್ರತಿದಿನ ದೇಹಕ್ಕೆ ದೈಹಿಕ ಚಟುವಟಿಕೆ ಅವಶ್ಯಕ, ದಿನದಲ್ಲಿ ಅರ್ಧ ಗಂಟೆ ವ್ಯಾಯಾಮಕ್ಕೆ ಮೀಸಲಿಡಿ.
ನಿದ್ದೆ ಕೂಡ ಮುಖ್ಯ
ಮೈ ತೂಕ ನಿಯಂತ್ರಣದಲ್ಲಿಡುವಲ್ಲಿ ನಿದ್ದೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ದಿನಾ 8 ಗಂಟೆ ನಿದ್ದೆ ಅವಶ್ಯಕ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವ (10 ಗಂಟೆಯೊಳಗೆ) ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.
ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ
ಮಾನಸಿಕ ಒತ್ತಡ ಕೂಡ ನಮ್ಮ ಮೈ ತೂಕದ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಹಾಕಿ.
ಆರೋಗ್ಯಕರ ಮೈ ತೂಕ ಪಡೆಯಲು ನಮ್ಮ ಜೀವನಶೈಲಿಯಲ್ಲಿ ಒಂದು ಶಿಸ್ತು ರೂಪಿಸಿಕೊಳ್ಳಬೇಕು, ನಿದ್ದೆ, ಆಹಾರ, ವ್ಯಾಯಾಮ ಇವುಗಳ ಕಡೆ ಹೆಚ್ಚಿನ ಒತ್ತು ಕೊಡಬೇಕು, ಇನ್ನು ಒಬೆಸಿಟಿಗೆ ವೈದ್ಯಕೀಯ ಕಾರಣಗಳಿದ್ದರೆ ವೈದ್ಯರ ಸಲಹೆ ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications