Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಆರೋಗ್ಯ ದಿನ 2025: ಈ ದಿನ ಆಚರಿಸುವುದೇಕೆ? ಏನಿದರ ಮಹತ್ವ?
ವೇಗವಾಗಿ ಓಡುತ್ತಿರುವ ದಿನಗಳಲ್ಲಿ ಜನರು ಜೀವನ ನಡೆಸಲು ಹಣ ಸಂಪಾದನೆಯ ಹಿಂದೆ ಬಿದ್ದಿದ್ದಾರೆ. ಈ ಜೀವನದ ಓಟದಲ್ಲಿ ಅವರು ಆರೋಗ್ಯದ ಕಡೆಗೆ ಗಮನವಿಡುವುದನ್ನೇ ಮರೆತಂತಿದೆ. ಹೀಗಾಗಿ ಇತ್ತೀಚಿಗೆ ಆರೋಗ್ಯ ಹದಗೆಡುವುದು ಸಾಮಾನ್ಯ ಎನ್ನುವಂತಾಗಿದೆ. ಹಾಗೆ ಹೊಸ ಹೊಸ ರೀತಿಯ ಅನಾರೋಗ್ಯ ಕಾಡುವುದು ಕೂಡ ಸಾಮಾನ್ಯ ಎಂಬಂತೆ ಜನರು ಸ್ವೀಕರಿಸಿದ್ದಾರೆ.
ಆದ್ರೆ ಆರೋಗ್ಯದ ಕುರಿತು ಎಷ್ಟು ಕಾಳಜಿ ಎಷ್ಟು ಜಾಗೃತಿ ವಹಿಸಿದರು ಕಡಿಮೆಯೇ. ಇನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಜಾಗತಿಕ ಮಟ್ಟದಲ್ಲಿ ಆರೋಗ್ಯ ಸುಧಾರಣೆ ಕುರಿತಂತೆ ಹಲವು ರೀತಿಯ ಕಾರ್ಯಕ್ರಮಗಳು, ಯೋಜನೆಗಳ ರೂಪಿಸುವುದು ನೋಡಬಹುದು, ಅದರಲ್ಲಿ ಮುಖ್ಯವಾಗಿ ವಿಶ್ವ ಆರೋಗ್ಯ ದಿನವನ್ನು ಕೂಡ ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರತಿ ವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನ ಎಂಬುದಾಗಿ ಆಚರಿಸಲಾಗುತ್ತಿದೆ. ಈ ವರ್ಷ 'ಆರೋಗ್ಯಕರ ಆರಂಭಗಳು, ಆಶಾದಾಯಕ ಭವಿಷ್ಯಗಳು' ಎಂಬ ಥೀಮ್‌ನಲ್ಲಿ ಈ ದಿನವನ್ನ ಆಚರಿಸಲು ಮುಂದಾಗಲಾಗಿದೆ. ಹಾಗಾದ್ರೆ ಈ ವಿಶ್ವ ಆರೋಗ್ಯ ದಿನದ ಇತಿಹಾಸವೇನು? ಆಚರಿಸುವುದು ಏಕೆ? ಎಂಬ ಕುರಿತ ಕೆಲವು ಅಚ್ಚರಿ ವಿಚಾರಗಳನ್ನು ನಾವಿಂದು ತಿಳಿದುಕೊಳ್ಳೋಣ.
ಈ ಕುರಿತಾಗಿ ಉತ್ತರ ಪಡೆಯಬೇಕಾದರೆ ನಾವು ಎರಡನೇ ಮಹಾಯುದ್ದದ ಸಮಯಕ್ಕೆ ತೆರಳಬೇಕು 1945ರ ಆಸುಪಾಸಿನಲ್ಲಿ ಬ್ರೆಜಿಲ್ ಹಾಗೂ ಚೀನಾ ಆರೋಗ್ಯ ಆಂದೋಲನಕ್ಕೆ ನಾಂದಿ ಹಾಡಿದವು. ರಾಜಕೀಯ ವ್ಯಾಪ್ತಿ ಮೀರಿದ ಆರೋಗ್ಯ ಸಂಸ್ಥೆ ಕಟ್ಟಲು ಮುಂದಾದಾಗ 1948 ಏಪ್ರಿಲ್ 7ರಂದು ವಿಶ್ವ ಆರೋಗ್ಯ ಸಂಸ್ಥೆಯ ಹುಟ್ಟಿಗೆ ಕಾರಣವಾಗಿತ್ತು. ಇದನ್ನೇ ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲು ಮುಂದಾಗಲಾಯಿತು.
1948 ರಲ್ಲಿ ಮೊದಲ ಆರೋಗ್ಯ ಸಭೆಯಲ್ಲಿ ಪ್ರಸ್ತಾಪಿಸಿದ ನಂತರ 1950 ರಿಂದ ಪ್ರತಿ ವರ್ಷ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ದಿನವನ್ನು ಗುರುತಿಸುವ ಮೂಲಕ ವಿಶ್ವದ ಪ್ರಮುಖ ಆರೋಗ್ಯ ಸಮಸ್ಯೆಗಳ ವಿರುದ್ಧ ಒಗ್ಗೂಡಿ ಹೋರಾಡುವ ಉದ್ದೇಶ ಹೊಂದಲಾಯಿತು.
ಪ್ರತಿ ವರ್ಷ ಆರೋಗ್ಯದ ಕುರಿತ ಜಾಗೃತಿ ಮೂಡಿಸುವ ಸಲುವಾಗಿ ಈ ದಿನದಂದು ಒಂದೊಂದು ವಿಚಾರಗಳ ಕುರಿತು ಸಾರ್ವತ್ರಿಕವಾಗಿ ಆಚರಿಸಲಾಗುತ್ತದೆ. ಈ ವರ್ಷದ ಅಭಿಯಾನವು ಸರ್ಕಾರಗಳು ಮತ್ತು ಆರೋಗ್ಯ ಸಂಸ್ಥೆಗಳನ್ನು ತಡೆಗಟ್ಟಬಹುದಾದ ಸಾವುಗಳನ್ನು ಕಡಿಮೆ ಮಾಡುವ ಮತ್ತು ತಾಯಂದಿರು, ನವಜಾತ ಶಿಶುಗಳ ದೀರ್ಘಕಾಲೀನ ಆರೋಗ್ಯ ಸುಧಾರಿಸುವ ಗುರಿಯನ್ನು ಹೊಂದಿರುವ ಯೋಜನೆಗಳಿಗೆ ಅನುದಾನ ನೀಡಲು ಉತ್ತೇಜಿಸಲು ಮುಂದಾಗಲಾಗಿದೆ.
2025ರ ಥೀಮ್‌ನ ಮಹತ್ವವೇನು?
2025 ರ ಅಭಿಯಾನವು ಗರ್ಭಧಾರಣೆ, ಹೆರಿಗೆ ಮತ್ತು ಪ್ರಸವಪೂರ್ವ ಅವಧಿಯಲ್ಲಿ ಸುಧಾರಿತ ಆರೈಕೆಯ ನಿರ್ಣಾಯಕ ಅಗತ್ಯವನ್ನು ಪರಿಹರಿಸುವ ಗುರಿಯನ್ ಹೊಂದಿದೆ. ಇತ್ತಿಚಿಗ ಗರ್ಭಿಣಿ ಹಾಗೂ ಬಾಣಂತಿಯರ ಅನಾರೋಗ್ಯ ಹಾಗೆ ಸಾವಿನ ಪ್ರಮಾಣದಲ್ಲಿ ಏರಿಕೆ ಜಾಗತಿಕವಾಗಿ ಆತಂಕ ಹುಟ್ಟಿಸಿದೆ. ಅನೇಕ ಪ್ರದೇಶಗಳಲ್ಲಿ ತಾಯಂದಿರು ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವು ಆತಂಕಕಾರಿಯಾಗಿ ಹೆಚ್ಚಾಗಿದೆ. ಗರ್ಭಧಾರಣೆ ಅಥವಾ ಹೆರಿಗೆಗೆ ಸಂಬಂಧಿಸಿದ ತೊಡಕುಗಳಿಂದಾಗಿ ವಾರ್ಷಿಕವಾಗಿ ಸುಮಾರು 300,000 ಮಹಿಳೆಯರು ಸಾಯುತ್ತಾರೆ. 2 ಮಿಲಿಯನ್‌ಗಿಂತಲೂ ಹೆಚ್ಚು ಶಿಶುಗಳು ತಮ್ಮ ಜೀವನದ ಮೊದಲ ತಿಂಗಳೊಳಗೆ ಸಾಯುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕಕಾರಿ ಅಂಕಿ ಅಂಶ ತಿಳಿಸಿದೆ.
ಭಾರತದಲ್ಲಿ ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯವು ವಿವಿಧ ಸರ್ಕಾರಿ ಉಪಕ್ರಮಗಳ ಕೇಂದ್ರಬಿಂದುವಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ (NHM) ನಂತಹ ಕಾರ್ಯಕ್ರಮಗಳು ಆರೋಗ್ಯ ಸುಧಾರಣೆಗೆ ಬಹಳಷ್ಟು ಕೊಡುಗೆ ನೀಡಿವೆ. ಇದರ ಹೊರತಾಗಿಯೂ ಸವಾಲುಗಳು ಮುಂದುವರೆದಿದೆ. ಹೆರಿಗೆ ಆಸ್ಪತ್ರೆಗಳ ಸುಧಾರಣೆ, ಮಹಿಳಾ ಆರೋಗ್ಯ ಕುರಿತಾದ ಜಾಗೃತಿ ಮುಂದುವರೆದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











