Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ವಿಶ್ವ ಕ್ಯಾನ್ಸರ್ ದಿನ 2026: ಫೆ.4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸುವುದೇಕೆ? ಇತಿಹಾಸ, ಥೀಮ್ ಮಾಹಿತಿ ಇಲ್ಲಿದೆ!
ಇಡೀ ವಿಶ್ವವನ್ನು ಕಾಡುತ್ತಿರುವ ಬಹುದೊಡ್ಡ ಅನಾರೋಗ್ಯ ಸಮಸ್ಯೆಗಳಲ್ಲಿ ಕ್ಯಾನ್ಸರ್ ದೊಡ್ಡ ಪಿಡುಗಾಗಿ ಕಾಡುತ್ತದೆ. ಭಾರತದ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕ್ಯಾನ್ಸರ್ ಪಿಡುಗು ದೊಡ್ಡದಾಗಿ ಹರಡಿದೆ. ಕ್ಯಾನ್ಸರ್‌ನಲ್ಲಿ ಸರಿ ಸುಮಾರು 200ಕ್ಕೂ ಹೆಚ್ಚು ವಿಭಿನ್ನ ಪ್ರಕಾರಗಳಲ್ಲಿ ಕೂಡಿದೆ. ಆದ್ರೆ ನಾವು ಕೆಲವೇ ಕೆಲವು ಕ್ಯಾನ್ಸರ್ ವಿಧಗಳ ಕುರಿತಾಗಿ ಹಾಗೆ ಅವುಗಳ ಅಪಾಯಗಳ ಕುರಿತು ನಾವು ಅರಿತಿದ್ದೇವೆ.
ಒಂದೊಂದು ಕ್ಯಾನ್ಸರ್ ಲಕ್ಷಣವೂ ಬೇರೆಯಾಗಿದ್ದು, ಬೇರೆ ಬೇರೆ ಚಿಕಿತ್ಸಾ ವಿಧಾನಗಳು ಹಾಗೆ ಕ್ಯಾನ್ಸರ್ ಲಿಂಗದ ಆಧಾರದಲ್ಲೂ ವೈವಿಧ್ಯತೆ ಹೊಂದಿದೆ. ಕ್ಯಾನ್ಸರ್ ಎಂಬ ಹೆಸರು ಗ್ರೀಕ್ ಪದದ ಕಾರ್ಕಿನೋಸ್‌ನಿಂದ ಬಂದಿದೆ. ಅದರ ಅರ್ಥ ಏಡಿಯಂತೆ. ಗ್ರೀಕ್ ವೈದ್ಯ ಹಿಪ್ಪೊಕ್ರೇಟ್ಸ್ ಈ ಪದವನ್ನು ಬಳಸಿದರು. ಕ್ಯಾನ್ಸರ್ ಗೆಡ್ಡೆಯಂತೆ ಊದಿಕೊಂಡು ರಕ್ತನಾಳಗಳು ಏಡಿಗಳ ಕಾಲುಗಳಂತೆ ಆ ಗಡ್ಡೆಯಿಂದ ಹರಡುವಿಕೆಯನ್ನು ಕಂಡು ಇದಕ್ಕೆ ಕ್ಯಾನ್ಸರ್ ಎಂದು ಕರೆದರು.

ಯಾವುದೇ ಅಪಾಯಕಾರಿ ರೋಗಗಳಿದ್ದರೂ ಅದನ್ನು ಹರಡದಂತೆ ತಡೆಯುವ ಹಾಗೆ ಚಿಕಿತ್ಸೆಗೂ ಮುನ್ನ ಅದರ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗುತ್ತದೆ. ಸದ್ಯಕ್ಕೆ ಕ್ಯಾನ್ಸರ್ ಕುರಿತಾಗಿ ಈಗ ಹಲವು ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳ ನೋಡಬಹುದು. ಇದೇ ಉದ್ದೇಶದಿಂದಲೇ ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಉಂಟಾಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು, ಅಂತಾರಾಷ್ಟ್ರೀಯ ಸಮುದಾಯವನ್ನು ಒಟ್ಟುಗೂಡಿಸಲು ಇದು ಒಂದು ಅವಕಾಶವಾಗಿದೆ. ಹೀಗಾಗಿ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ.
ಸದ್ಯ ಇನ್ನು ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗುವ ಪ್ರಮಾಣ ಹೆಚ್ಚಾಗುತ್ತಿದೆ. ಹಾಗೆ ಪ್ರಾಣಿಗಳಲ್ಲು ಕಂಡುಬರುವ ಈ ಅಪಾಯವು ತಿಮಿಂಗಿಲಗಳಲ್ಲಿ ಅತೀ ಹೆಚ್ಚು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಎಲ್ಲಾ ಕ್ಯಾನ್ಸರ್ ಪ್ರಕರಣಗಳಲ್ಲಿ 30% ರಿಂದ 50% ರಷ್ಟು ಜೀವನಶೈಲಿಯ ಬದಲಾವಣೆಗಳ ಮೂಲಕ ತಡೆಗಟ್ಟಬಹುದು.
ಕ್ಯಾನ್ಸರ್ ಅತ್ಯಂತ ಸವಾಲಿನ ಕಾಯಿಲೆಗಳಲ್ಲಿ ಒಂದಾಗಿದೆ, ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ದೇಹವನ್ನು ಮಾತ್ರವಲ್ಲದೆ ಭಾವನಾತ್ಮಕ ಮತ್ತು ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಫೆಬ್ರವರಿ 4, 2026 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸುತ್ತದೆ. ಇದು ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ನೇತೃತ್ವದ ಜಾಗತಿಕ ಉಪಕ್ರಮವಾಗಿದೆ.
ವಿಶ್ವ ಕ್ಯಾನ್ಸರ್ ದಿನ ಆಚರಿಸಲು ಆರಂಭಿಸಿದ್ದು ಯಾವಾಗ?
ವಿಶ್ವ ಕ್ಯಾನ್ಸರ್ ದಿನವನ್ನು ಮೊದಲು ಫೆಬ್ರವರಿ 4 2000 ರಂದು ಪ್ಯಾರಿಸ್‌ನಲ್ಲಿ ನಡೆದ ಕ್ಯಾನ್ಸರ್ ವಿರುದ್ಧದ ವಿಶ್ವ ಶೃಂಗಸಭೆಯಲ್ಲಿ ಆಚರಿಸಲಾಯಿತು. ಕ್ಯಾನ್ಸರ್ ವಿರುದ್ಧದ ಪ್ಯಾರಿಸ್ ಚಾರ್ಟರ್ ಸಂಶೋಧನೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಕುರಿತಾದ ಮಹತ್ವವನ್ನು ಎತ್ತಿ ತೋರಿಸಿತು. ಅನಂತರ ಈ ಕ್ಯಾನ್ಸರ್ ವಿರುದ್ಧದ ಜಾಗೃತಿಯನ್ನು ಆಂದೋಲನವಾಗಿ ಆಚರಿಸಿಕೊಂಡು ಬರಲಾಗಿದೆ.
ಈ ವರ್ಷ 'ಯುನೈಟೆಡ್ ಬೈ ಯುನಿಕ್' ಎಂಬ ಥೀಮ್ ಅಡಿಯಲ್ಲಿ ಈ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದೆ. ಜಾಗತಿಕ ಮಾನವ ಸವಾಲು ಎಂದು ಜನರಿಗೆ ನೆನಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡುವುದು ಹೇಗೆ?
ಈ ಜಾಗೃತಿ ಕಾರ್ಯಕ್ರಮಗಳ ಮೂಲಕ ಕ್ಯಾನ್ಸರ್ ಹೋರಾಟಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಭೂಮಿಯಿಂದ ಈ ಕ್ಯಾನ್ಸರ್ ಅನ್ನು ನಾಶ ಮಾಡುವಂತಹ ಪ್ರತಿಜ್ಞೆ ಮಾಡಲಾಗುತ್ತದೆ. ಅದ್ರಲ್ಲೂ ಕ್ಯಾನ್ಸರ್ ರೋಗ ಲಕ್ಷಣಗಳನ್ನು ಆರಂಭದಲ್ಲೇ ಪತ್ತೆ ಮಾಡುವುದು ಹಾಗೆ ಚಿಕಿತ್ಸೆ ಕುರಿತಾಗಿ ಮಾಹಿತಿ ಒದಗಿಸಿವುದು ಪಿಡುಗಿನ ವಿರುದ್ಧದ ಹೋರಾಟದಲ್ಲಿ ಮೊದಲ ಜಯವಾಗಿರಲಿದೆ.
ದೇಹದ ಯಾವುದಾದರು ಭಾಗದಲ್ಲಿ ಅಸಹಜ ಗಡ್ಡೆ, ಬಾವು, ಮಚ್ಚೆಗಳಂತಹ ರಚನೆ, ದೀರ್ಘವಧಿಯ ಕೆಮ್ಮು, ಸೇರಿದಂತೆ ಅಸಹಜ ರೋಗ ಲಕ್ಷಣಗಳ ಕುರಿತಾಗಿ ಹೆಚ್ಚು ಗಮನವಿಡಿ. ಹಾಗೆ ನಿಯಮಿತ ತಪಾಸಣೆಗಳು ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಎಷ್ಟು ಬೇಗ ಚಿಕಿತ್ಸೆಗೆ ಒಳಗಾಗುತ್ತೇವೆಯೋ ಅಷ್ಟು ಬೇಗ ಸಮಸ್ಯೆಯಿಂದ ದೂರ ಸಾಗಬಹುದು.



Click it and Unblock the Notifications