Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ವಿಶ್ವ ಏಡ್ಸ್ ಜಾಗೃತಿ ದಿನ: ಹೆಚ್‌ಐವಿ ಕುರಿತ ತಪ್ಪು ಕಲ್ಪನೆಗಳೇನು? ರಾಜ್ಯದಲ್ಲಿ ಎಷ್ಟು ಸೋಂಕಿತರಿದ್ದಾರೆ!
ಹ್ಯೂಮನ್ ಇಮ್ಯೂನೊ ಡಿಫಿಷಿಯೆನ್ಸಿ ಅಂದ್ರೆ ಹೆಚ್‌ಐವಿ ಒಂದು ಸಮಯದಲ್ಲಿ ಇಡೀ ವಿಶ್ವವನ್ನು ಅತ್ಯಂತ ಗಂಭೀರವಾಗಿ ಕಾಡಿದ ಒಂದು ಸಮಸ್ಯೆಯಾಗಿತ್ತು. ಈ ವೈರಸ್‌ನಿಂದ ಉಂಟಾಗುವ ಏಡ್ಸ್ ಮಾರಣಾಂತಿಕ ಕಾಯಿಲೆಯಾಗಿದೆ. ಈ ರೋಗದ ಕುರಿತಾದ ಕೀಳರಿಮೆಯ ಕಾರಣದಿಂದಾಗಿಯೇ ಇಂದು ರೋಗಿಗಳನ್ನು ಗುರುತಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.
ಹಾಗೆ ಏಡ್ಸ್ ಕುರಿತು ಜಾಗೃತಿ ಮೂಡಿಸಲು ಸರ್ಕಾರದ ಮಟ್ಟದಲ್ಲಿ ಸಂಸ್ಥೆಗಳ ಮಟ್ಟದಲ್ಲಿ ಹಲವು ರೀತಿ ಯೋಜನೆಗಳ ರೂಪಿಸಿರುವುದು ನೋಡಬಹುದು. ಇನ್ನು ಇದರ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಡಿಸೆಂಬರ್ 1ರಂದು ವಿಶ್ವ ಏಡ್ಸ್ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲಿಗೆ 1988ರಲ್ಲಿ ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗಿತ್ತು.

1981 ರಲ್ಲಿ ಮೊದಲ ಬಾರಿಗೆ ಏಡ್ಸ್ ಪ್ರಕರಣವೊಂದು ವರದಿಯಾದ ಬಳಿಕ ನಂತರದ ವರ್ಷಗಳಲ್ಲಿ ಹಲವಾರು ಜನರು ಈ ಕಾಯಿಲೆಗೆ ತುತ್ತಾಗಿದ್ದರು. ಹಾಗೆ ಇದಕ್ಕೆ ಚಿಕಿತ್ಸೆ ಪಡೆಯದೆ ಪ್ರಾಣ ಕಳೆದುಕೊಂಡಿದ್ದರು. ಹೀಗಾಗಿ ಜನರಿಗೆ ಈ ವೈರಸ್ ಕುರಿತು ಜಾಗೃತೆ ಮೂಡಿಸಬೇಕು ಎಂಬ ಉದ್ದೇಶದಿಂದ ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲು ಮುಂದಾಗಲಾಗಿತ್ತು. ಇದು ವಿಶ್ವ ಆರೋಗ್ಯ ಸಂಸ್ಥೆಯ ಮಟ್ಟದಲ್ಲಿ ಆಚರಿಸುತ್ತಾ ಬರಲಾಗಿದೆ.
2025 ರ ವಿಶ್ವ ಏಡ್ಸ್ ದಿನವು ವಿಶೇಷವಾಗಿ ಮುಖ್ಯವಾಗಿದೆ, ಈ ವರ್ಷದ ಏಡ್ಸ್ ದಿನದ ಧ್ಯೇಯವಾಕ್ಯ: "ಅಡಚಣೆಯನ್ನು ನಿವಾರಿಸುವುದು, ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು." ಎಂಬುದಾಗಿದೆ. ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ, ತಪ್ಪು ಮಾಹಿತಿಯನ್ನು ನಿಭಾಯಿಸುವ ಮತ್ತು ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಅಗತ್ಯತೆಯನ್ನು ಈ ಧ್ಯೇಯ ವಾಖ್ಯ ಒತ್ತಿ ಹೇಳಲಿದೆ.
ಏಡ್ಸ್ ಕುರಿತಾಗಿರುವ ತಪ್ಪು ಕಲ್ಪನೆಗಳು
ಏಡ್ಸ್ ಹಾಗೂ ಹೆಚ್‌ಐವಿ ಎರಡೂ ಒಂದೆಯೇ?- ಬಹುತೇಕರು ಏಡ್ಸ್ ಮತ್ತು ಹೆಚ್‌ಐವಿ ಎರಡೂ ಒಂದೇ ಎಂದು ಭಾವಿಸುತ್ತಾರೆ. ಎಚ್ಐವಿ (ಮಾನವ ಇಮ್ಯುನೊ ಡಿಫಿಷಿಯನ್ಸಿ ವೈರಸ್) ರೋಗನಿರೋಧಕ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಆದ್ರೆ ಏಡ್ಸ್- ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ ಎಂಬುದು HIV ಸೋಂಕಿನ ಮುಂದುವರಿದ ಹಂತವಾಗಿದ್ದು, ದೀರ್ಘಕಾಲದವರೆಗೆ ಚಿಕಿತ್ಸೆ ಪಡೆಯದೇ ಇದ್ದಾಗ ಸಂಭವಿಸುತ್ತದೆ.
ಹೆಚ್‌ಐವಿ ಹರಡುವ ಕುರಿತ ತಪ್ಪು ಕಲ್ಪನೆಗಳು- ಹೆಚ್‌ಐವಿಯು ಹರಡುವಿಕೆಯ ರೋಗ ಆಗಿದ್ದರೂ ಅದರು ಸ್ಪರ್ಶದಿಂದ ಆಗಲಿ ಅಥವಾ ಉಗುಳುವಿಕೆಯ ಮೂಲಕ ಹರಡುವುದಿಲ್ಲ. ಕೈಕುಲುಕುವುದು, ಅಪ್ಪಿಕೊಳ್ಳುವುದು, ಆಹಾರ ಅಥವಾ ಪಾನೀಯ ಹಂಚಿಕೊಳ್ಳುವುದು, ಒಂದೇ ಸ್ನಾನಗೃಹವನ್ ಬಳಸುವುದು ಈ ರೀತಿಯ ಕ್ರಿಯೆಗಳಿಂದ ಹರಡುವುದಿಲ್ಲ. ಸಾಮಾನ್ಯವಾಗಿ ಇದು ಸೋಂಕಿತ ವ್ಯಕ್ತಿಯೊಂದಿಗಿನ ಲೈಂಗಿಕ ಸಂಪರ್ಕ, ರಕ್ತ ಪಡೆಯುವುದು, ಅಥವಾ ಅವರಿಗೆ ಬಳಸಿದ ಚುಚ್ಚು ಮದ್ದಿನ ಸೂಜಿ ಬಳಕೆ ಮಾಡುವುದರಿಂದ ಹರಡುತ್ತದೆ.
ಹೆಚ್‌ಐವಿ ಬಂದರೆ ಸಾವು ಬರಲಿದೆ?- ಹೆಚ್‌ಐವಿ ಸೋಂಕು ಒಮ್ಮೆ ಉಂಟಾದರೆ ಸಾವು ಸಂಭವಿಸಲಿದೆ ಎಂದು ನಂಬಲಾಗಿದೆ. ಆದರೆ ಈ ವೈರಸ್ ಗುಣಪಡಿಸುವ ಕಾಯಿಲೆಯಾಗಿದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಈ ವೈರಸ್‌ನಿಂದ ಪಾರಾಗಬಹುದು.
ಕರ್ನಾಟಕದಲ್ಲಿದ್ದಾರೆ ಸಾವಿರಾರು ಮಂದಿ ಸೋಂಕಿತರು
ಕರ್ನಾಟಕದಲ್ಲಿ ಸಾವಿರಾರು ಮಂದಿ ಹೆಚ್‌ಐವಿ ಸೋಂಕಿತರಿದ್ದಾರೆ. ಹಾಗೆ ಕಳೆದ 10 ವರ್ಷಗಳಿಂದ ಈ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆಯಾಗುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದೆ. ಹಾಗೆ ರಾಜ್ಯದಲ್ಲಿ ಬಾಗಲಕೋಟೆ ಅತೀ ಹೆಚ್ಚು ಹೆಚ್‌ಐವಿ ಸೋಂಕಿತರ ಹೊಂದಿರುವ ಜಿಲ್ಲೆಯಾಗಿದೆ. 2024ರಲ್ಲಿ 23,15,909 ಸಾಮಾನ್ಯ ಕ್ಲೈಂಟ್‌ಗಳಿಗೆ ಸಮಾಲೋಚನೆ ನಡೆಸಿ ಪರೀಕ್ಷಿಸಲಾಗಿದ್ದು, 7,720 ಜನರಿಗೆ ಸೋಂಕು ದೃಢಪಟ್ಟಿದೆ. ಪ್ರಸವಪೂರ್ವ ಆರೈಕೆ (ANC) ಪಡೆಯುವ ಮಹಿಳೆಯರಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಶೇ.0.6 ರಿಂದ ಶೇ.0.3 ಕ್ಕೆ ಇಳಿದಿದೆ.



Click it and Unblock the Notifications