Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹದಿಹರೆಯದ ಪ್ರಾಯದಿಂದ ಮೆನೋಪಾಸ್ ಹಂತದವರೆಗೆ ಅವಳಿಗೆ ಬೇಕಾಗಿದೆ ಹೀಗೆ ಆರೈಕೆ: ಡಯಟಿಷಿಯನ್ ಟಿಪ್ಸ್
ಸ್ತ್ರೀ ಆರೋಗ್ಯ ಅವಳ ಜೀವನದ ಪ್ರತಿಯೊಂದು ಹಂತದಲ್ಲಿ ಅವಳಿಗೆ ಹೇಗೆ ಆರೈಕೆ ಸಿಗುತ್ತದೆ ಎಂಬುವುದರ ಮೇಲಿರುತ್ತದೆ. ಹೆಣ್ಣು ಮಗುವಾಗಿ ಜನಿಸಿದಲ್ಲಿಂದ ಅವಳು ವಯಸ್ಸಾಗುವವರೆಗೆ ಅವಳ ಶರೀರದಲ್ಲಿ ಹಲವಾರು ಬದಲಾವಣೆಗಳಾಗುತ್ತದೆ.
ಹೆಣ್ಮಗು ಪ್ರೌಢಾವಸ್ಥೆಗೆ ಬಂದಾಗ ಅವಳಲ್ಲಿ ಋತುಚಕ್ರ ಪ್ರಾರಂಭವಾಗುತ್ತದೆ, ನಂತರ ಮದುವೆಯಾದ ಮೇಲೆ ಮಕ್ಕಳಿಗೆ ತಾಯಿಯಾಗುತ್ತಾಳೆ, 40ರ ಪ್ರಾಯದ ನಂತರ ಅವಳಲ್ಲಿ ಋತುಚಕ್ರ ನಿಂತು ಮೆನೋಪಾಸ್ ಹಂತ ಶುರುವಾಗುವುದು, ಈ ಎಲ್ಲಾ ಹಂತದಲ್ಲಿಯೂ ಅವಳ ಶರೀರದಲ್ಲಿ ಹಲವಾರು ಬದಲಾವಣೆಗಳಾಗುತ್ತದೆ, ಹಾರ್ಮೋನನ್‌ಗಳಲ್ಲಿ ವ್ಯತ್ಯಾಸವಾಗುತ್ತದೆ, ಪೋಷಕಾಂಶಗಳ ಕೊರತೆ ಉಂಟಾಗುವುದು ಪ್ರತಿಯೊಂದು ಹಂತದಲ್ಲಿ ಅವಳ ಶರೀರಕ್ಕೆ ಅದರದ್ದೇ ಆದ ರೀತಿಯ ಅವಶ್ಯಕತೆ ಇದೆ ಅಂತಾರೆ ಡಯಟಿಷಿಯನ್ ಶಿಶಿರಾ ಪ್ರೇಮಾನಂದ್ (ಡಯಟಿಷಿಯನ್ ಭಾರತ್ ಕ್ಯಾನ್ಸರ್ ಆಸ್ಪತ್ರೆ, ಮೈಸೂರು).

ಹೆಣ್ಮಗುವಿನಿಂದ ಹಿಡಿದು ಮೆನೋಪಾಸ್ ಹಂತದವರೆಗೆ ಸ್ತ್ರೀಯರ ದೇಹದ ಆರೈಕೆ ಹೇಗಿರಬೇಕು? ಯಾವ ಹಂತದಲ್ಲಿ ಯಾವ ಬಗೆಯ ಆಹಾರಕ್ರಮ ಅನುಸರಿಸಬೇಕು, ವ್ಯಾಯಾಮ ಹೇಗಿರಬೇಕು ಎಂಬುವುದರ ಬಗ್ಗೆ ಡಯಟಿಷಿಯನ್ ನೀಡಿರುವ ಟಿಪ್ಸ್ ಹೀಗಿದೆ:
ಹದಿಹರೆಯದ ಪ್ರಾಯದಲ್ಲಿ ಮಕ್ಕಳ ದೈಹಿಕ ಹಾಗೂ ಮೆದುಳಿನ ಆರೋಗ್ಯ ಸಂಬಂಧಿಸಿದ ಆಹಾರ ನೀಡಬೇಕು
ಚಿಕ್ಕ ಪ್ರಾಯದಲ್ಲಿ ಅವರಿಗೆ ನೀಡುವ ಆಹಾರಕ್ರಮ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ, ಬುದ್ಧಿ ಶಕ್ತಿ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. ಹಾಗಾಗಿ ಪೋಷಕರು ಆರೋಗ್ಯಕರ ಆಹಾರವನ್ನು ಮಕ್ಕಳಿಗೆ ನೀಡಬೇಕು.
ಜಂಕ್ ಫುಡ್ಸ್, ಸಂಸ್ಕರಿಸಿದ ಆಹಾರ, ಕೃತಕ ಸಿಹಿಯ ಆಹಾರ, ಫಾಸ್ಟ್ ಫುಡ್ಸ್ ಇವೆಲ್ಲಾ ಹೆಚ್ಚಾಗಿ ನೀಡಬಾರದು
ಮಕ್ಕಳು ಜಂಕ್‌ಫುಡ್ಸ್ ,ಫಾಸ್ಟ್ ಫುಡ್ ತಿನ್ನಲು ಪಡುತ್ತಾರಿ, ಮಿಠಾಯಿ, ಚಾಕೋಲೆಟ್, ಬೇಕರಿ ತಿಂಡಿಗಳೆಂದರೆ ಇಷ್ಟಪಟ್ಟು ತಿಂತಾರೆ. ಮಕ್ಕಳು ಇಷ್ಟಪಟ್ಟು ತಿಂತಾರೆ ಎಂದು ಪೋಷಕರು ಆ ಬಗೆಯ ಆಹಾರ ಹೆಚ್ಚಾಗಿ ತಂದು ಕೊಡುತ್ತಾರೆ, ಇದು ಮಕ್ಕಳ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುವುದು. ಅದರಲ್ಲಿಯೂ ಹೆಣ್ಮಕ್ಕಳು ಪ್ರೌಢಾವಸ್ಥೆಗೆ ಬರುವಾಗ ಅವರ ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗುವುದು, ಮುಟ್ಟಿನ ಚಕ್ರ ಶುರುವಾಗುವುದು.
ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಅನಿಯಮಿತು ಮುಟ್ಟು, ಒಬೆಸಿಟಿ, ಚಿಕ್ಕ ಪ್ರಾಯದಲ್ಲಿಯೇ ಪಿಸಿಒಡಿ ಈ ಬಗೆಯ ಸಮಸ್ಯೆಗೆ ಕಾರಣವಾಗುತ್ತದೆ ಮುಂದೆ ಅವರು ಮದುವೆಯಾದಾಗ ಅವರಿಗೆ ಗರ್ಭಧಾರಣೆಗೆ ತೊಂದರಯಾಗುವುದು, ಬೇಗನೆ ಮೆನೋಪಾಸ್ ಶುರುವಾಗುವುದು, ಹೀಗೆ ಚಿಕ್ಕ ಪ್ರಾಯದಲ್ಲಿ ಅನಾರೋಗ್ಯಕರ ಆರೋಗ್ಯಕರ ಶೈಲಿ ಅವಳ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು.
ಹಾಗಾಗಿ ಚಿಕ್ಕ ಪ್ರಾಯದಲ್ಲಿಯೇ ಹೆಣ್ಮಕ್ಕಳಿಗೆ ಆರೋಗ್ಯಕರ ಆಹಾರ ಪದ್ಧತಿ ರೂಢಿಸಿ, ಅವರ ಆಹಾರದಲ್ಲಿ ಹಣ್ಣು, ತರಕಾರಿ, ಧಾನ್ಯಗಳು, ಮೊಳಕೆ ಕಾಳು ಹೆಚ್ಚಿರಲಿ, ಈ ಪಿಜ್ಜಾ-ಬರ್ಗರ್ ಇವುಗಳನ್ನು ಆದಷ್ಟು ದೂರವಿರಿ (ಅಪರೂಪಕ್ಕೆ ತಿಂದರೆ ಒಕೆ, ಆದರೆ ವಾರದಲ್ಲಿ ಎರಡು ಮೂರು ಬಾರಿ ಕೊಡಸಲು ಹೋಗಬೇಡಿ).
ಗರ್ಭಿಣಿಯಾದಾಗ ಫಾಲಿಕ್ ಆಮ್ಲ, ಕಬ್ಬಿಣದಂಶದ ಅವಶ್ಯಕತೆ ಹೆಚ್ಚಿರುತ್ತದೆ
ಗರ್ಭಿಣಿಯಾದಾಗ ತಜ್ಞರು ಪ್ರಸೂತಿ ತಜ್ಞರು ಕೆಲವೊಂದು ಸಪ್ಲಿಮೆಂಟ್ ಸೂಚಿಸುತ್ತಾರೆ ಅದನ್ನು ತೆಗೆದುಕೊಳ್ಳಬೇಕು, ಡಯಟಿಷಿಯನ್ ಸಲಹೆ ಪಡೆದರೆ ಅವರು ಗರ್ಭಾವಸ್ಥೆಯಲ್ಲಿ ಆಹಾರಕ್ರಮ ಹೇಗಿರಬೇಕೆಂದ ಚಾರ್ಟ್ ನೀಡುತ್ತಾರೆ, ಅವುಗಳನ್ನು ಪಾಲಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹೆರಿಗೆಯ ಬಳಿಕ ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣದಂಶದ ಆಹಾರ ನೀಡಬೇಕು
ಹೆರಿಗೆಯಾದಾಗ ಅವಳಿಗೆ ಪ್ರೊಟೀನ್ ಆಹಾರ ನೀಡಬೇಕು, ಇದರ ಜೊತೆಗೆ ಕ್ಯಾಲ್ಸಿಯಂ ಹಾಗೂ ಕಬ್ಬಿಣದಂಶದ ಆಹಾರವನ್ನು ನೀಡಬೇಕು. ಆರೋಗ್ಯಕರ ಆಹಾರ ಪದ್ಧತಿ ಎದೆ ಹಾಲಿನ ಉfತಪತ್ತಿ ಹೆಚ್ಚಿಸುತ್ತದೆ, ಹೆರಿಗೆಯ ಬಳಿಕ ಕೆಲವರಿಗೆ ಪೋಸ್ಟ್ ಮಾರ್ಟಂ ಡಿಪ್ರೆಷನ್ ಕಾಡುತ್ತೆ, ಅದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಸಹಜ ಹೆರಿಗೆಯಾಗಲಿ- ಸಿ ಸೆಕ್ಷನ್ ಹೆರಿಗೆಯಾಗಲಿ ಆರೋಗ್ಯಕರ ಆಹಾರ ಪದ್ಧತಿ ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಸಲು ಸಹಾಯ ಮಾಡುತ್ತದೆ.
ಮೆನೋಪಾಸ್ ಹಂತ
ಮಹಿಳೆಯರಲ್ಲಿ ಋತುಚಕ್ರ ನಿಲ್ಲುವ ಹಂತವಿದು, ಈ ಮೆನೋಪಾಸ್ ಹಂತದಲ್ಲಿ ಶರೀರದಲ್ಲಿ ತುಂಬಾನೇ ಬದಲಾವಣೆ ಕಂಡು ಬರುತ್ತದೆ. ಅವಳಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದು, ಈ ಅವಧಿಯಲ್ಲಿ ಕ್ಯಾಲ್ಸಿಯಂ ಸಪ್ಲಿಮೆಂಟ್, ಕ್ಯಾಲ್ಸಿಯಂ ಅಧಿಕವಿರುವ ಆಹಾರಕ್ರಮ, ಪ್ರೊಟೀನ್ ಆಹಾರ ಸೇವನೆ ಇವೆಲ್ಲಾ ಆ ಸಮಯದಲ್ಲಿ ಕಾಡುವ ಸಮಸ್ಯೆ ತಡೆಗಟ್ಟುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications