Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
81 ವರ್ಷ ವೃದ್ಧೆ ಗರ್ಭದಲ್ಲಿ ಕಲ್ಲಿನ ಮಗು..! ವೈದ್ಯರಿಗೇ ಅಚ್ಚರಿ
ಜಗತ್ತಿನ ಸೃಷ್ಟಿಯಲ್ಲಿ ಎಂತಹ ವಿಸ್ಮಯಗಳು ನಡೆಯುತ್ತವೆ ಅಂದ್ರೆ ನಮಗೆ ಊಹೆ ಮಾಡಿಕೊಳ್ಳಲು ಸಹ ಆಗುವುದಿಲ್ಲ. ಕೆಲವು ವಿಸ್ಮಯಕಾರಿ ಘಟನೆಗಳು ನಡೆದಾಗ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತೆ. ಕೆಲವು ಬಾರಿ ವಿಜ್ಞಾನಕ್ಕೆ ಸವಾಲೊಡ್ಡುವಂತಹ ಘಟನೆಗಳು ಸಹ ನಮ್ಮ ನಡುವೆ ನಡೆಯುತ್ತವೆ. ಇದನ್ನು ಅಚ್ಚರಿ ಎನ್ನಬೇಕೋ, ಪವಾಡ ಎನ್ನಬೇಕು ಎಂಬ ಗೊಂದಲ ಮೂಡುತ್ತದೆ. ಕೆಲವು ಬಾರಿ ನೀವು ಕೇಳುವ ವಿವಾರವನ್ನು ಎದುರು ನಿಮ್ಮ ಕಣ್ಣಿನಲ್ಲಿ ನೋಡುವವರೆಗು ನಂಬಲು ಸಾಧ್ಯವಾಗುವುದಿಲ್ಲ.
ಇದೀಗ ಇಂತಹದ್ದೆ ಘಟನೆಯೊಂದು ನಡೆದಿದೆ. 81 ವರ್ಷದ ಡೇನಿಯಲಾ ವೆರಾ ಎಂಬ ವೃದ್ಧೆಯ ಹೊಟ್ಟೆಯಲ್ಲಿ ಕಲ್ಲಿನ ಮಗುವೊಂದು ಬೆಳೆದಿದೆ. ನಿಮಗೆ ಕೇಳಿದರೆ ಅಚ್ಚರಿಯಾದರು ಈ ಘಟನೆ ನಡೆದಿರುವುದು ಸತ್ಯ. ಕಳೆದ 56 ವರ್ಷಗಳಿಂದ ತನ್ನ ಹೊಟ್ಟೆಯಲ್ಲಿ ಭ್ರೂಣವನ್ನು ಹೊತ್ತಿರುವ ಸಂಗತಿ ಈಗ ಬಯಲಿಗೆ ಬಂದಿದೆ.

ಬ್ರೆಜಿಲ್‌ನ ಮೊರೆರಾದಲ್ಲಿ ನೆಲೆಸಿದ್ದ ಡೇನಿಯಲಾ ಇತ್ತೀಚಿಗೆ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಾಗ ಈ ರೀತಿಯ ಘಟನೆ ಬೆಳಕಿಗೆ ಬಂದಿದೆ. ಆದರೆ, ಭ್ರೂಣವನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ ಬಳಿಕ ಆಕೆ ಸಾವನ್ನಪ್ಪಿದ್ದಾಳೆ.
ಆಕೆಗೆ ಕಲ್ಲಿನ ಭ್ರೂಣ ಇರುವುದು ತಿಳಿದಿದ್ದು ಹೇಗೆ?
ಅಚ್ಚರಿ ಎಂದರೆ ಆಕೆಗೆ ಆಸ್ಪತ್ರೆಯಲ್ಲಿ ವೈದ್ಯರು ಹೇಳುವವರೆಗೂ ಈ ಕುರಿತು ತಿಳಿದಿರಲಿಲ್ಲ. ಮಹಿಳೆ ನೀರು ಕುಡಿದು ಸೋಂಕಿಗೆ ಒಳಗಾದಾಗ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದರು. ಈ ವೇಳೆ ಆಕೆಯನ್ನು ಮತ್ತೊಂದು ಆಸ್ಪತ್ರೆಗೆ 3ಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ತಿಳಿಸಿ ಕಳುಹಿಸಲಾಗಿದೆ. ಈ ವೇಳೆ ಆಕೆಗೆ 3ಡಿ ಸ್ಕ್ಯಾನಿಂಗ್ ನೆರವೇರಿಸಿದ ವೈದ್ಯರು ಶಾಕ್ ಆಗಿದ್ದಾರೆ. ಆಕೆಯ ಗರ್ಭಕೋಶದಲ್ಲಿ ಕಲ್ಲಿನ ಆಕೃತಿಯ ಭ್ರೂಣವಿರುವುದು ಪತ್ತೆಯಾಗಿದೆ.
ಆಕೆ ಚಿಕ್ಕವಳಿದ್ದಾಗ ಅಪಸ್ಥಾನೀಯ ಗರ್ಭಧಾರಣೆ ಅನುಭವಿಸಿದ್ದಳು ಎಂದು ವರದಿಗಳು ಹೇಳಿದವು. ಈ ಸ್ಥಿತಿಯನ್ನು ಲಿಥೋಪಿಡಿಯನ್ ಎಂದು ಕರೆಯಲಾಗುತ್ತದೆ. ಇದು ಆಕೆಯ ಗರ್ಭಕೋಶದಲ್ಲಿದ್ದರು ಅದರಿಂದ ಯಾವ ಹಾನಿಯೂ ಆಗುವುದಿಲ್ಲ. ನೋವು ಸಹ ಕಾಣಿಸುವುದಿಲ್ಲ ಹೀಗಾಗಿ ಆಕೆಯ ಗಮನಕ್ಕೆ ಬಂದಿರಲಿಲ್ಲ. ಅಚ್ಚರಿ ಎಂದರೆ ಆಕೆ 7 ಮಕ್ಕಳಿಗೆ ಜನ್ಮ ನೀಡಿದರೂ ಈ ಬಗ್ಗೆ ಎಂದಿಗೂ ತಿಳಿಯಲೇ ಇಲ್ಲ.
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ ಆಕೆ ಇದೇ ಮಾರ್ಚ್ 10ರಂದು ಶಸ್ತ್ರಚಿಕಿತ್ಸೆ ನೆರವೇರಿಸಿ ಭ್ರೂಣವನ್ನು ತೆಗೆಯಲಾಗಿತ್ತು, ಆದರೆ ಶಸ್ತ್ರ ಚಿಕಿತ್ಸೆಯ ಬಳಿಕ ಆಕೆ ಮೃತಪಟ್ಟಿದ್ದಾಳೆ.
ಈ ಕುರಿತು ವೈದ್ಯರು ಹೇಳೋದೇನು?
ಪೊಂಟಾ ಪೋರಾ ಆಸ್ಪತ್ರೆಯ ಆರೋಗ್ಯ ವಿಭಾಗದ ಮುಖ್ಯಸ್ಥರು, ಗರ್ಭಧಾರಣೆಯಾದಾಗ ಕೋಶಗಳ ವಿಭಾಗ ಮತ್ತು ಫಲೀಕರಣ ಸಂದರ್ಭದಲ್ಲಿ ಈ ರೀತಿಯ ಪರಿಸ್ಥಿತಿ ಉಂಟಾಗಬಹುದು. ಕೆಲವು ಬಾರಿ ಇದು ಗರ್ಭಶಯದೊಳಗೆ ಉಳಿದುಬಿಡುತ್ತದೆ. ಈ ಭ್ರೂಣ ದೊಡ್ಡದಾಗುತ್ತಾ ಕಲ್ಲಿನಂತೆ ರೂಪುಗೊಳ್ಳುತ್ತದೆ. ರೋಗಿಗೆ ಈ ಬಗ್ಗೆ ತಿಳಿಯುವುದಿಲ್ಲ ಎಂದಿದ್ದಾರೆ.
ಲಿಥೊಪೆಡಿಯನ್ ಎಂದರೇನು?
ಶರೀರಕ್ಕೆ ದೊಡ್ಡ ಗಾತ್ರದ ಮೃತ ಭ್ರೂಣವನ್ನು ಹೊರಹಾಕಲು ಸಾಧ್ಯವಾಗದೇ ಇದ್ದಾಗ ಸ್ವಾಭಾವಿಕವಾಗಿ ಅದರ ಮೃತ ಕೋಶಗಳ ಸುತ್ತ ಕ್ಯಾಲ್ಸಿಯಮ್ ಲೇಪನ ಸೃಷ್ಟಿಯಾಗಲು ಪ್ರಾರಂಭಿಸುತ್ತದೆ. ಕ್ರಮೇಣ ಆ ಮಗು ಕ್ಯಾಲ್ಸಿಫೈಡ್ ಆಗಿ ಕಲ್ಲಾಗಿ ಮಾರ್ಪಡಾಗುತ್ತದೆ. ಈ ವೈದ್ಯಕೀಯ ಸ್ಥಿತಿಯನ್ನು ಲಿಥೊಪೆಡಿಯನ್ ಎಂದು ಕರೆಯಲಾಗುತ್ತದೆ. ಇಲ್ಲಿ ಭ್ರೂಣ ನೀವಂತವಾಗಿರದಿದ್ದರೂ ಅದು ನಿಧಾನವಾಗಿ ಬೆಳೆಯುತ್ತದೆ. ಅದರಲ್ಲಿ ಕ್ಯಾಲ್ಸಿಯಂ ಸುತ್ತಿಕೊಳ್ಳುವ ಕಾರಣ ಗಟ್ಟಿಯಾಗುತ್ತಾ ಹೋಗುತ್ತದೆ. ಇದು ಕೆಲವರಲ್ಲಿ ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಅಲ್ಲದೆ ಅವರಿಗೆ ಹೊಟ್ಟೆಯೊಳಗೆ ನಡೆಯುತ್ತಿರುವ ಈ ಪ್ರಕ್ರಿಯೆ ತಿಳಿಯುತ್ತದೆ. ಆದರೆ ಕೆಲವರಲ್ಲಿ ಇದು ನೋವುಂಟು ಮಾಡದಿರುವುದು ಅವರಿಗೆ ತಿಳಿಯುವುದೇ ಇಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
