Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೊಮ್ಯಾಟೊ ಮಧ್ಯಾಹ್ನದ ಹೊತ್ತು ಅಷ್ಟು ಅಗ್ಯತವಿದ್ದರೆ ಮಾತ್ರ ಫುಡ್ ಆರ್ಡರ್ ಮಾಡಿ ಎಂದಿದ್ದೇಕೆ? ಲಾಭಕ್ಕಿಂತ ಮನುಷ್ಯನಿಗೆ ಬೆಲೆಕ
ಜೊಮ್ಯಾಟೊ ಯಾರಿಗೆ ತಾನೆ ಗೊತ್ತಿಲ್ಲ, ಈ ಟೊಮ್ಯಾಟೊ ಗ್ರಾಹಕರಿಗೆ ಆಹಾರ ಒಗಿಸುವಲ್ಲಿ ದೈತ್ಯ ಪಾತ್ರವಹಿಸುತ್ತದೆ. ಬೆಳಗ್ಗೆ ತಡ ರಾತ್ರಿಯವರೆಗೆ ಇದು ತನ್ನ ಸೇವೆಯನ್ನು ಮಾಡುತ್ತಿದೆ, ಆದರೆ pls avoid ordering during peak afternoon unless absolutely necessary 🙏 ಎಂಬ ಪೋಸ್ಟ್ ಇದೀಗ ತುಂಬಾನೇ ಸದ್ದು ಮಾಡುತ್ತದೆ.

ಹೌದು ಜೊಮ್ಯಾಟೊ ಮಧ್ಯಾಹ್ನದ ಹೊತ್ತಿನಲ್ಲಿ ಆಹಾರ ಆರ್ಡರ್ ಮಾಡುವುದು ತಪ್ಪಿಸಿ, ಅಗ್ಯತವಿದ್ದರೆ ಮಾತ್ರ ಆರ್ಡರ್ ಮಾಡಿ ಎಂದು ಬರೆದಿರುವುದು ಎರಡು ರೀತಿಯ ಚರ್ಚೆ ಹುಟ್ಟು ಹಾಕಿದೆ. ಕೆಲವರು ಜ್ಯೊಮೆಟೊದ ಈ ನಿರ್ಧಾರ ಮೆಚ್ಚಿಕೊಂಡರೆ ಇನ್ನು ಕೆಲವರು ಹೀಗೆ ಪೋಸ್ಟ್ ಮಾಡುವ ಬದಲಿಗೆ 12-4 ಗಂಟೆಯವರೆಗೆ ಸರ್ವೀಸ್ ಇರಲ್ಲ ಅಂತ ಹಾಕಬಹುದಿತ್ತು ಎಂದು ಹೇಳುತ್ತಿದ್ದಾರೆ.
ಜೊಮ್ಯಾಟೋ ಆ ರೀತಿ ಹೇಳಿದ್ದೇಕೆ?
ಜೊಮ್ಯಾಟೋ ತನ್ನ ಡೆಲಿವರಿ ಬಾಯ್ಸ್ನ ಆರೋಗ್ಯವನ್ನು ಪರಿಗಣಿಸಿ ಈ ಪೋಸ್ಟ್ ಮಾಡಿದೆ. ಹೌದು ದೇಶದ ಹಲವು ಕಡೆ ಹೀಟ್‌ವೇವ್, ಗ್ರಾಹಕರು ತಮಗೆ ಆಹಾರ ತಿನ್ನಬೇಕೆಂದು ಅನಿಸಿದಾಗ ಫುಡ್ ಆರ್ಡರ್ ಮಾಡುತ್ತಾರೆ, ಆದರೆ ಬಿಸಿಲಿನಲ್ಲಿ ಫುಡ್ಸ್ ತರುವ ಡೆಲಿವರಿ ಬಾಯ್ ಕಷ್ಟ ಯಾರೂ ನೋಡಲ್ಲ, ಅವರು ಒಂದು ನಿಮಿಷ ತಡವಾದರೆ ಫುಡ್ ಬೇಡ ರಿಟರ್ನ್ ಮಾಡುವವರಿಗೇನೂ ಕಡಿಮೆ ಇಲ್ಲ. ಜೊಮ್ಯಾಟೊ ತಮ್ಮ ಡೆಲಿವರಿ ಬಾಯ್ಸ್ ಮಧ್ಯಾಹ್ನದ ಹೊತ್ತು ಬಿಸಿಲಿನಲ್ಲಿ ಹೋದಾಗ ಅನಾಹುತ ಉಂಟಾಗುವುದು ಬೇಡವೆಂದು ಈ ಸಮಯದಲ್ಲಿ ಫುಡ್ಸ್ ಆರ್ಡರ್ ಅಷ್ಟು ಅಗ್ಯತವಿದ್ದರೆ ಮಾತ್ರ ಮಾಡಿ ಎಂದು ಹೇಳಿದೆ. ಹೀಗೆ ಹೇಳುವ ಮೂಲಕ ಆಹಾರ ತುಂಬಾ ಅಗ್ಯತವಿರುವವರ ಅಗ್ಯತವನ್ನೂ ನಿರಾಕರಿಸಿಲ್ಲ ಜೊತೆಗೆ ಫುಡ್ ಡೆಲಿವರಿ ಬಾಯ್ಸ್ ಕಡೆ ಕೂಡ ಕಾಳಜಿವಹಿಸಿದೆ.
pls avoid ordering during peak afternoon unless absolutely necessary 🙏
— zomato (@zomato) June 2, 2024
ಜೊಮ್ಯಾಟೊ ಹಣ ಗಳಿಕೆ ಬದಿಗಿಟ್ಟು ಈ ರೀತಿ ಯೋಚನೆ ಮಾಡಿರುವುದು ದೊಡ್ಡ ವಿಷಯವೇ
ಹೌದು, ಯಾವುದೇ ಕಂಪನಿಯಾಗಲಿ ಪ್ರತಿದಿನ ಗಳಿಕೆ ಹೆಚ್ಚಾಗಬೇಕು ಎಂದು ಬಯಸುತ್ತದೆ, ಇರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತದೆ, ಈ ಸ್ವಿಗ್ಗಿ, ಜಿಮ್ಯಾಟೋ ಅಂತ ಕಂಪನಿಗಳು ಜನರ ಸೋಮಾರಿತನವನ್ನೇ ಬಂಡವಾಳ ಮಾಡಿಕೊಂಡರು. ಅಡುಗೆ ಮಾಡಲು ಸೋಮಾರಿತನ, ಹೋಟೆಲ್‌ಗೂ ಹೋಗಲೂ ಇಷ್ಟವಿಲ್ಲ ಎಂಬವವರಿಗೆ ನಿಮಗಿಷ್ಟವಾದ ಹೋಟೆಲ್ ಊಟ ನಾವು ನೀವು ಇರುವ ಸ್ಥಳಕ್ಕೆ ತರುತ್ತೇವೆ ಎಂದು ಬಂದವರು, ಇಂದು ಈ ಕಂಪನಿಗಳು ದೈತ್ಯಾಕಾರವಾಗಿ ಬೆಳೆದು ನಿಂತಿದೆ. ಸ್ವಿಗ್ಗಿಯಾಗಲಿ, ಜೊಮೆಟೊ ಆಗಲಿ ಗ್ರಾಹಕರಿಗೆ ಆದಷ್ಟು ಬೇಗ ಆಹಾರ ಒದಗಿಸುವ ಗುರಿ ಹೊಂದಿದೆ.
ಜನರ ಪ್ರಾಣಕ್ಕೆ ಕುತ್ತು ತರುತ್ತಿದೆ ಹೀಟ್‌ವೇವ್
ದೆಹಲಿ ಮುಂತಾದ ಕಡೆ ಬಿಸಿಲಿನ ತಾಪ ತಡೆಯಲಾರದೆ ಜನ ಕುಸಿದು ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ, ಕೆಲವರಿಗೆ ಹೀಟ್ ಸ್ಟ್ರೋಕ್ ಕೂಡ ಉಂಟಾಗುತ್ತಿದೆ, ಹಾಗಾಗಿ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ಸ್ ಬಿಸಿಲು ಅಧಿಕವಿರುವಾಗ ಬಿಸಿಲಿನಲ್ಲಿ ಆಹಾರ ತೆಗೆದುಕೊಂಡು ಹೋಗುವುದು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಿದೆ.
ಬಿಸಿಲು ಹೆಚ್ಚಿರುವಾಗ ಓಡಾಡಿದರೆ ಹೀಟ್‌ಸ್ಟ್ರೋಕ್ ಅಪಾಯವಿದೆ
ಶಾರೂಖ್ ಖಾನ್‌ಗೂ ಹೀಟ್‌ಸ್ಟ್ರೋಕ್ ಆಗಿ ಆಸ್ಪತ್ರೆ ಸೇರಿದ್ದರು, ಈಗ ತಾಪಮಾನ ತುಂಬಾ ಹೆಚ್ಚಾಗಿರುವುದರಿಂದ ಬಿಸಿಲಿನಲ್ಲಿ ಹೆಚ್ಚು ಓಡಾಡಿದರೆ ಹೀಟ್‌ಸ್ಟ್ರೋಕ್ ಅಪಾಯವಿದೆ.
ಹೀಟ್‌ಸ್ಟ್ರೋಕ್ ಲಕ್ಷಣಗಳು:
ವಿಪರೀತ ತಲೆನೋವು, ತಲೆಸುತ್ತುವುದು
ವಾಂತಿ
ತುಂಬಾನೇ ಬಾಯಾರಿಕೆಯಾಗುವುದು
ನಾಲಗೆ ದಪ್ಪವಾಗುವುದು
ಮಾತನಾಡಲು ಕಷ್ಟವಾಗುವುದು
ತೀವ್ರ ಎದೆಬಡಿತ
ಉಸಿರಾಟ ಕಷ್ಟವಾಗುವುದು
ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೆ ಅಪಾಯ, ಆದ್ದರಿಂದ ಮಧ್ಯಾಹ್ನ ಹೊತ್ತು ಹೊರಗಡೆ ಓಡಾಡಬೇಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications