Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಹೃದಯದ ಆರೈಕೆಯಲ್ಲಿ ಮಹಿಳೆಯರು ಸೋಲುತ್ತಿರೋದೇಕೆ.! ಈ ಸೈಲೆಂಟ್ ಲಕ್ಷಣದ ಮೇಲೆ ಇರಲಿ ಗಮನ!
ಇತ್ತೀಚಿನ ವರ್ಷದಲ್ಲಿ ಹೃದಯಾಘಾತ ಎಂಬುದು ವೈರಸ್‌ನಂತೆ ಹರಡುತ್ತಿದೆ. ದೇಶದಲ್ಲಿ ಚಿಕ್ಕ ಮಕ್ಕಳು ಕೂಡ ಹೃದಯಾಘಾತದಂತಹ ಸಮಸ್ಯೆಗೆ ಒಳಗಾಗುವ ಘಟನೆಗಳ ನಾವು ನೋಡುತ್ತಿದ್ದೇವೆ. ವಿಚಿತ್ರ ಎಂದರೆ ಯುವ ಸಮುದಾಯ ಕೂಡ ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದೆ. ಅದರಲ್ಲೂ ಮಹಿಳೆಯರು ಈ ಸಮಸ್ಯೆಯಲ್ಲಿ ಹೆಚ್ಚಾಗಿ ಪರಿತಪಿಸುವಂತಾಗಿದೆ.
ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಏರಿಕೆಯಾಗುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಹಠಾತ್ ಎದೆನೋವು, ಹೃದಯಾಘಾತದ ಪ್ರಕರಣಗಳ ಏರಿಕೆ ದೊಡ್ಡ ಸವಾಲಾಗಿದೆ. ಇಂದಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಸೇರಿದಂತೆ ಹೊಸ ಹೊಸ ಕಾಯಿಲೆಗಳು ಕೂಡ ಇಂತಹ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ ಪ್ರಕಾರ ಭಾರತದಲ್ಲಿ ಮಹಿಳೆಯರ ಸಾವಿಗೆ ಹೃದ್ರೋಗವು ಪ್ರಮುಖ ಕಾರಣವಾಗಿದೆ, ಇದು ಎಲ್ಲಾ ಮಹಿಳಾ ಸಾವುಗಳಲ್ಲಿ ಸುಮಾರು ಶೇ.18 ರಷ್ಟಿದೆ. ಇದು ಬೇರೆಲ್ಲಾ ಸಮಸ್ಯೆಗಳಿಗೆ ಹೋಲಿಸಿದರೆ ಆತಂಕಕಾರಿ ಸಂಖ್ಯೆಯಾಗಿದೆ. ಇದಕ್ಕೆ ಹಲವು ರೀತಿಯ ಕಾರಣ ಸಹ ನೀಡಬಹುದಾಗಿದೆ. ಅದರಲ್ಲೂ ಸಾವಿನ ಪ್ರಮಾಣ ಏರಿಕೆಯಲ್ಲಿ ಈ ಕುರಿತ ಅರಿವಿಲ್ಲದಿರುವುದು ಕೂಡ ದೊಡ್ಡ ಸಮಸ್ಯೆಯೇ.
ಪುರುಷರು ಮತ್ತು ಮಹಿಳೆಯರ ನಡುವಿನ ಹೃದ್ರೋಗ ದರಗಳಲ್ಲಿನ ಅಸಮಾನತೆಗೆ ಹಲವು ಕಾರಣಗಳಿವೆ. ಅದರಲ್ಲೂ ಅಧಿಕ ರಕ್ತದೊತ್ತಡ ಹಾಗೂ ಋತುಬಂಧವಾದ ನಂತರದಲ್ಲಿ ಈ ಅಪಾಯ ಮತ್ತಷ್ಟು ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ. ಆದರೆ ಮಹಿಳೆಯರಲ್ಲಿ ಕೆಲವು ಹೃದಯಾಘಾತದ ಲಕ್ಷಣಗಳು ಗೋಚರ ಆಗದೇ ಇರುವುದು ಕೂಡ ಅಪಾಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ನಾವಿಂದು ಮಹಿಳೆಯರಲ್ಲಿ ಕಾಡುವ ಹೃದಯಾಘಾತದ ಸೈಲೆಂಟ್ ಲಕ್ಷಣಗಳೇನು ಎಂಬುದನ್ನು ತಜ್ಞರ ಮೂಲಕ ತಿಳಿದುಕೊಳ್ಳೋಣ.
ಉಸಿರಾಟದ ಸಮಸ್ಯೆಗಳು
ಉಸಿರಾಟದ ತೊಂದರೆಯು ಹೃದಯಾಘಾತವನ್ನು ಅನುಭವಿಸುತ್ತಿರುವ ಮಹಿಳೆಯರು ವರದಿ ಮಾಡುವ ಸಾಮಾನ್ಯ ಲಕ್ಷಣವಾಗಿದೆ ಎಂದು ಡಾ.ಕಿರಣ್ ಕುಮಾರ್ ವಿವರಿಸುತ್ತಾರೆ. ಉಸಿರಾಟದ ಸಮಸ್ಯೆಯಲ್ಲಿ ಅವರಿಗೆ ಇದು ಹೃದಯಾಘಾತದ ಮುನ್ಸೂಚನೆ ಎಂಬುದು ತಿಳಿಯುವುದಿಲ್ಲ. ಎದೆನೋವು ಕಾಣಿಸಿಕೊಳ್ಳದೆ ಬರೀ ಉಸಿರಾಟದ ಸಮಸ್ಯೆ ಮಾತ್ರ ಕಾಣಿಸಿಕೊಳ್ಳಲಿದೆ. ಇದು ಅವರಲ್ಲಿ ಹೃದಯಾಘಾತದ ಮುನ್ಸೂಚನೆ ಎಂಬುದು ಅರಿವಿಗೆ ಬರುವುದಿಲ್ಲ.
ನಿದ್ರಾಹೀನತೆ ಹಾಗೂ ಆಯಾಸ
ಮಹಿಳೆಯರು ಅಪಸಾಮಾನ್ಯ ನಿದ್ರಾಹೀನತೆ ಹಾಗೂ ಆಯಾಸ ನೋಡುತ್ತಾರೆ. ಕೆಲವರಿಗೆ ಮಲಗಿದ್ದಲ್ಲೇ ಹೃದಯಾಘಾತ ಕೂಡ ಸಂಭವಿಸುವ ಅಪಾಯ ಇರುತ್ತದೆ. ಆದರೆ ಆಗಾಗ ತೀವ್ರ ಆಯಾಸ ಆಗುವುದು ನಿರಂತರವಾಗಿ ನಿದ್ರಾಹೀನತೆಗೆ ಒಳಗಾದರೆ ಹೃದಯ ಸಂಬಂಧಿ ಸಮಸ್ಯೆಯ ಮುನ್ಸೂಚನೆ ಆಗಿರಲಿದೆ.
ಎದೆ ಮೂಳೆ ಹಿಂಭಾಗದಲ್ಲಿ ಬಿಗಿತ
ಸಾಮಾನ್ಯವಾಗಿ ಎದೆನೋವು ಕಾಣಿಸಿಳ್ಳುವ ಸ್ಥಿತಿಯಲ್ಲಿ ಇದೊಂದು ಬಗೆ ಕೂಡ ಇದೆ. ಎದೆ ಮೂಳೆಯ ಹಿಂಭಾಗದಲ್ಲಿ ಬಿಗಿಯಾದ ಅನುಭವ ಇರಲಿದೆ. ಸಾಮಾನ್ಯವಾಗಿ ಇದನ್ನು ಸೆಳೆತ ಎನ್ನಬಹುದು.
ಭುಜ, ತೋಳಿನ ನೋವು
ಹೃದಯಾಘಾತದಂತಹ ಸಮಸ್ಯೆ ಎದುರಾಗುವ ಮುನ್ನ ತೀವ್ರ ರೀತಿಯ ಭುಜ, ತೋಳು ನೋವು ಕಾಣಿಸಿಕೊಳ್ಳುವುದು ನೋಡಬಹುದು. ಹಾಗೆ ಇದು ದೇಹದ ಇತರೆ ಭಾಗಕ್ಕೂ ಹರಡಬಹುದು. ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ನೋಡಬಹುದು.
ಬೆವರುವುದು ಇಲ್ಲವೆ ತಲೆತಿರುಗುವುದು
ಹೃದಯಾಘಾತದಂತಹ ಸಮಸ್ಯೆಗೆ ಒಳಗಾಗುವ ಮುನ್ನ ಮಹಿಳೆಯರಲ್ಲಿ ಈ ರೀತಿ ಲಕ್ಷಣ ಹೆಚ್ಚಾಗಿ ನೋಡಬಹುದು. ಅವರು ಬಹಬೇಗ ಬೆವರುವುದು, ತಲೆತಿರುಗುವಿಕೆಗೆ ಒಳಗಾಗಬಹುದು. ಆದರೆ ಎಲ್ಲಾ ಸಮಯದಲ್ಲೂ ಇದು ಹೃದಯಾಘಾತದ ಲಕ್ಷಣ ಎನ್ನಲಾಗಲ್ಲ. ಬದಲಿಗೆ ಎಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications